Bailahongala News: ನರೇಂದ್ರ ಮೋದಿಜಿ ಹುಟ್ಟುಹಬ್ಬದ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ
75 ವಸಂತಕ್ಕೆ ಕಾಲಿಟ್ಟಿರುವ ಹಾಗೂ 11 ವರ್ಷಗಳ ಪ್ರಧಾನಿ ಹುದ್ದೆಯ ಸುದೀರ್ಘ ಆಡಳಿತವನ್ನು ಪೂರೈಸಿ ರಾಜಕೀಯದ ಭೀಷ್ಮನಂತೆ ಜನಸೇವೆ ಮಾಡುವುದರ ಮೂಲಕ ವಿಶ್ವ ಮನ್ನಣೆ ಪಡೆದಿರುವ ನರೇಂದ್ರ ಮೋದಿ ಅವರು ನಮ್ಮೆಲ್ಲರಿಗೂ ಆದರ್ಶ, ಜಾಗತಿಕ ಮಟ್ಟದಲ್ಲಿ ನರೇಂದ್ರ ಮೋದಿ ಅವರು ಭಾರತದ ಹೆಸರನ್ನು ಇಮ್ಮಡಿಗೊಳಿಸಿದ್ದಾರೆ.

-

ಬೈಲಹೊಂಗಲ: ಭಾರತೀಯ ಜನತಾ ಪಾರ್ಟಿ ಬೈಲಹೊಂಗಲ ಮಂಡಲ ವತಿಯಿಂದ ಇಂದು ವಿಶ್ವ ನಾಯಕ ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಮಾಡುವ ಮೂಲಕ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪುರಸಭೆ ಸದಸ್ಯ ಗುರು ಮೆಟಗುಡ್ಡ 75 ವಸಂತಕ್ಕೆ ಕಾಲಿಟ್ಟಿರುವ ಹಾಗೂ 11 ವರ್ಷಗಳ ಪ್ರಧಾನಿ ಹುದ್ದೆಯ ಸುದೀರ್ಘ ಆಡಳಿತವನ್ನು ಪೂರೈಸಿ ರಾಜಕೀಯದ ಭೀಷ್ಮನಂತೆ ಜನಸೇವೆ ಮಾಡುವುದರ ಮೂಲಕ ವಿಶ್ವ ಮನ್ನಣೆ ಪಡೆದಿರುವ ನರೇಂದ್ರ ಮೋದಿ ಅವರು ನಮ್ಮೆಲ್ಲರಿಗೂ ಆದರ್ಶ, ಜಾಗತಿಕ ಮಟ್ಟದಲ್ಲಿ ನರೇಂದ್ರ ಮೋದಿ ಅವರು ಭಾರತದ ಹೆಸರನ್ನು ಇಮ್ಮಡಿಗೊಳಿಸಿದ್ದಾರೆ.
ಇದನ್ನೂ ಓದಿ: Narendra Modi Biopic: ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ಅನೌನ್ಸ್ ! ಮೋದಿ ಪಾತ್ರದಲ್ಲಿ ಮಲಯಾಳಂ ನಟ ಉನ್ನಿ ಮುಕುಂದನ್
ತಾಯಿ ಭಾರತಾಂಬೆ ಅವರಿಗೆ ಆಯುಷ್ಯ ಆರೋಗ್ಯ ಕರುಣಿಸುವ ಸದುದ್ದೇಶದಿಂದ ಇಂದು ಪುಟಾಣಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದರು ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸುಭಾಸ ತುರಮರಿ, ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ,
ಮಂಡಲ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ, ಗ್ರಾಮ ಪಂಚಾಯಿತಿ ಸದಸ್ಯ ನಾಗಪ್ಪ ಸಂಗೊಳ್ಳಿ, ರವಿ ಹೊಸೂರ, ಶ್ರೀಶೈಲ ಕಟ್ಟಿಮನಿ, ಬಸವರಾಜ ಗುರವನ್ನವರ, ಬಸವರಾಜ ಬಡಿಗೇರ, ರಾಜು ಗುಡಮಿ, ಅನೇಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.