Ramadurga News: ಚಂದರಗಿ ಕ್ರೀಡಾ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ, ಪಾಲಕರ ದಿನಾಚರಣೆ
ಮಾಹಿತಿಯನ್ನು ಮಕ್ಕಳ ಮನದಲ್ಲಿ ತುಂಬುವುದು ಶಿಕ್ಷಣದ ಕೆಲಸವಲ್ಲ. ಮಕ್ಕಳಿಗೆ ಜೀವನದ ಅರಿವು ಮೂಡಿಸಿ, ಕ್ರೀಯಾಶೀಲರನ್ನಾಗಿ ಮಾಡುವುದು ನಿಜವಾದ ಶಿಕ್ಷಣ ಎಂದು ಅರಿತುಕೊಳ್ಳಬೇಕು. ಅಭ್ಯಾ ಸದ ಜೊತೆಗೆ ವಿದ್ಯಾರ್ಥಿಗಳು ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಕ್ರೀಡಾಪಟು ವಾಗಬೇಕು. ಶಿಕ್ಷಕ ಹಾಗೂ ಪಾಲಕರು ತಮ್ಮ ಮಕ್ಕಳ ಅಂತರಾಳದ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು
ತಾಲೂಕಿನ ಕೆ.ಚಂದರಗಿಯ ಎಸ್.ಎಂ. ಕಲೂತಿ ಕ್ರೀಡಾ ವಸತಿ ವಿದ್ಯಾಲಯದಲ್ಲಿ ಏರ್ಪಡಿಸಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಾಲಕರ ದಿನಾಚರಣೆ ಕಾರ್ಯಕ್ರಮವನ್ನು ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತ ಫಕೀರೇಶ ಬದಾಮಿ ಉದ್ಘಾಟಿಸಿದರು. -
ರಾಮದುರ್ಗ: ವಿದ್ಯಾರ್ಥಿಗಳು ಪರಿಶ್ರಮವಿಸಿ, ಅಧ್ಯಯನ ಮಾಡಿದಲ್ಲಿ ಮಾತ್ರ ಉನ್ನತ ಸ್ಥಾನ ಪಡೆಯಲು ಸಾಧ್ಯವಿದೆ. ಪಾಲಕರು ತಮ್ಮ ಮಕ್ಕಳ ಕಲಿಕಾ ಪ್ರಗತಿ ಕುರಿತು ಮೇಲ್ವಿಚಾರಣೆ ನಡೆಸುವ ಮೂಲಕ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಶಾಲೆಯೊಂದಿಗೆ ಪಾಲಕರ ಕಾಳಜಿ ಅಲ್ಲಗಳೆಯುವಂತಿಲ್ಲ ಎಂದು ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತ ಫಕೀರೇಶ ಬದಾಮಿ ಹೇಳಿದರು.
ತಾಲೂಕಿನ ಕೆ.ಚಂದರಗಿ ಎಸ್.ಎಂ. ಕಲೂತಿ ಕ್ರೀಡಾ ವಸತಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಾಲಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಹಿತಿಯನ್ನು ಮಕ್ಕಳ ಮನದಲ್ಲಿ ತುಂಬುವುದು ಶಿಕ್ಷಣದ ಕೆಲಸವಲ್ಲ. ಮಕ್ಕಳಿಗೆ ಜೀವನದ ಅರಿವು ಮೂಡಿಸಿ, ಕ್ರೀಯಾಶೀಲರನ್ನಾಗಿ ಮಾಡುವುದು ನಿಜವಾದ ಶಿಕ್ಷಣ ಎಂದು ಅರಿತುಕೊಳ್ಳ ಬೇಕು. ಅಭ್ಯಾಸದ ಜೊತೆಗೆ ವಿದ್ಯಾರ್ಥಿಗಳು ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಕ್ರೀಡಾಪಟುವಾಗಬೇಕು. ಶಿಕ್ಷಕ ಹಾಗೂ ಪಾಲಕರು ತಮ್ಮ ಮಕ್ಕಳ ಅಂತರಾಳದ ಪ್ರತಿಭೆ ಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಇದನ್ನೂ ಓದಿ: Ramadurga News: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಅನಿರ್ದಿಷ್ಠಾವಧಿ ಪ್ರತಿಭಟನೆ
ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರವೀಣ ಜೈನ ಮಾತನಾಡಿ, ಗುರು ಶಿಷ್ಯ ಪರಂಪರೆಯಲ್ಲಿ ಹಿಂದಿನ ಗುರುಕುಲವನ್ನು ಹೋಲುವ ಕ್ರೀಡಾ ಶಾಲೆ ಕ್ರೀಡೆಯ ಜೊತೆಗೆ ಗುಣಾತ್ಮಕ ಶಿಕ್ಷಣ ನೀಡು ವಲ್ಲಿ ಹೆಸರುವಾಸಿಯಾಗಿದೆ. ವಿದ್ಯಾರ್ಥಿಗಳು ಜೀವನ ಬದಲಾಗಲು ಪರಿಶ್ರಮವಹಿಸಿ, ಅಧ್ಯಯನ ಮಾಡಬೇಕು. ನಿಶ್ಚಿತ ಗುರಿಯೊಂದಿಗೆ ಸಾಧನೆ ಮಾರ್ಗವನ್ನು ಕಂಡುಕೊಂಡು ಯಶಸ್ಸು ಸಾಧಿಸ ಬೇಕು ಎಂದರು.
ಇದೇ ಸಂದರ್ಭದಲ್ಲಿ ರಾಷ್ಟçಮಟ್ಟದ ಕ್ರೀಡೆಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ತರಗತಿಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಸಾಧನೆಗೈದ ಖೋ ಖೋತರಬೇತುದಾರ ಎಲ್ ಸಿ ಲಮಾಣಿ ಹಾಗೂ ಹಿಂದಿ ವಿಷಯ ಶಿಕ್ಷಕ ಎಂ ಬಿ ಗಡಾದ, ಸಮಾಜ ವಿಜ್ಞಾನ ಶಿಕ್ಷಕ ಎಸ್ ಎಸ್ ಉಮಚಗಿ, ಕನ್ನಡ ಉಪನ್ಯಾಸಕ ಶಿವಾನಂದ ತೋರಣಗಟ್ಟಿ, ವಿ ಎಚ್ ಕಡಪಟ್ಟಿ, ಎಂ ಕೆ ಕಾಡನ್ನವರ, ವಿ ಎಸ್ ಯರಗಟ್ಟಿ ಅವರನ್ನು ಸತ್ಕರಿಸಲಾಯಿತು.
ಸ್ಪೋಕೋ ಸಂಸ್ಥೆಯ ಅಧ್ಯಕ್ಷೆ ಮೃಣಾಲಿನಿ ಎಂ ಪಟ್ಟಣ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸಂಸ್ಥಾ ಪಕರಾದ ಎಸ್. ಎಂ. ಕಲೂತಿ, ಉಪಾಧ್ಯಕ್ಷ ಮಹೇಶ ಎ ಭಾತೆ, ನಿರ್ದೇಶಕರಾದ ಆರ್.ಎ ಪಾಟೀಲ, ಕೆ. ಎಸ್ ಉಮರಾಣಿ, ಎಸ್. ಆರ್. ನವರಕ್ಕಿ, ಎಸ್. ಜಿ. ದೇಸಾಯಿ, ಎಸ್ ಬಿ ಯರಗಣವಿ, ಬಿ.ಎಸ್ ಕಾಕತಕರ, ಎಸ್.ಆರ್. ಮೇತ್ರಿ, ಸಿ.ಬಿ ಶಿಂತ್ರಿ, ಎಸ್.ಪಿ ಗಾತಾಡೆ, ಆರ್.ಎಸ್ ಕಲೂತಿ, ಎಂ.ಎಚ್ ಹೊನ್ನನಾಯಕನವರ, ಕೆ ಎಸ್ ಪಾಟೀಲ, ಬಿ ಎಂ ಬೆಳಗಲಿ, ಎಸ್ ಎನ್ ಅಡಿಗಿಮನಿ ಸೇರಿದಂತೆ ಇತರರಿದ್ದರು.
ಕಾಲೇಜು ವಿಭಾಗದ ಪ್ರಾಚಾರ್ಯ ಸತೀಶ ಪಾಟೀಲ ಸ್ವಾಗತಿಸಿದರು. ವ್ಯವಸ್ಥಾಪಕ ಜೆ.ಬಿ ಮೇಟಿ ವಾರ್ಷಿಕ ವರದಿ ವಾಚನ ಮಾಡಿದರು, ಕನ್ನಡ ಮಾಧ್ಯಮ ಪ್ರಾಚಾರ್ಯ ಐ.ಎಸ್ ಸೂಳಿಭಾವಿ ಪರಿಚಯಿಸಿದರು. ಶಿವಾನಂದ ತೋರಣಗಟ್ಟಿ ಮತ್ತು ಓಂಕಾರ ಗೌಡರ ನಿರೂಪಿಸಿದರು. ಸಿ.ಬಿ.ಎಸ್ ಪ್ರಾಚಾರ್ಯ ಪಿ ಕೆ ಪಾಟೀಲ ವಂದಿಸಿದರು.