ಬೆಳಗಾವಿ: ಒಂದೆಡೆ ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ (Kannada Rajyotsava) ಆಚರಿಸುತ್ತಿದ್ದರೆ, ಇನ್ನೊಂದೆಡೆ ಬೆಳಗಾವಿಯಯಲ್ಲಿ ಎಮ್‌ಇಎಸ್ ಮತ್ತೆ ತನ್ನ ಪುಂಡಾಟವನ್ನು ಮೆರೆದಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಇಎಸ್ ಅನುಮತಿ ಇಲ್ಲದೆ ಇದ್ದರೂ ಕರಾಳ ದಿನ ಆಚರಣೆಗೆ ಪ್ರಯತ್ನಿಸಿದೆ. ಗಡಿಯಲ್ಲಿ ಪುಂಡಾಡಿಕೆ ಮಾಡಲು ಶಿವಸೇನೆಯ ಪುಂಡರು ಆಗಮಿಸಿದ್ದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೋಂಗನೊಳ್ಳಿ ಗಡಿಯಲ್ಲಿ ರಾಜ್ಯಕ್ಕೆ ಪ್ರವೇಶಿಸಲು ಉದ್ದವ ಠಾಕ್ರೆ ಬಣದ ಕೊಲ್ಲಾಪುರ ಜಿಲ್ಲಾಅಧ್ಯಕ್ಷ ಸಂಜಯ್ ಪವಾರ್ ಹಾಗೂ ವಿಜಯ ದೇವನೆ ಆಗಮಿಸಿದ್ದರು.
ಗಡಿಯಲ್ಲಿ ಪುಂಡಾಡಿಕೆ ಮಾಡಲು ಶಿವಸೇನೆಯ ಪುಂಡರು ಆಗಮಿಸಿದ್ದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೋಂಗನೊಳ್ಳಿ ಗಡಿಯಲ್ಲಿ ರಾಜ್ಯಕ್ಕೆ ಪ್ರವೇಶಿಸಲು ಉದ್ದವ ಠಾಕ್ರೆ ಬಣದ ಕೊಲ್ಲಾಪುರ ಜಿಲ್ಲಾಅಧ್ಯಕ್ಷ ಸಂಜಯ್ ಪವಾರ್ ಹಾಗೂ ವಿಜಯ ದೇವನೆ ಆಗಮಿಸಿದ್ದರು. ಕರಾಳ ದಿನದ ಮೆರವಣಿಗೆ ಬೆಳಗಾವಿ ಸಂಭಾಜೀ ವೃತ್ತದಿಂದ ಆರಂಭವಾಗಿತ್ತು. ನಾಡದ್ರೋಹಿಗಳು ಕಪ್ಪು ಬಟ್ಟೆ ಧರಿಸಿ, ಕಪ್ಪು ಬಾವುಟ ಹಿಡಿದು ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ಬೆಳಗಾವಿ, ನಿಪ್ಪಾಣಿ ಸೇರಿ ಗಡಿಭಾಗಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗಿದರು. ಮಹಾರಾಷ್ಟ್ರದಿಂದ ಬಂದವರನ್ನು ಗಡಿಯಲ್ಲೇ ತಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎಂಇಎಸ್ ಕಾರ್ಯಕರ್ತರು “ಕನ್ನಡ ಸರ್ಕಾರಕ್ಕೆ ಧಿಕ್ಕಾರ. ಕೇಂದ್ರ ಸರ್ಕಾರಕ್ಕೆ ಧಿಕ್ಕಾರ” ಎಂದು ಘೋಷಣೆಗಳನ್ನು ಕೂಗುವ ಮೂಲಕ ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸೇರಿದಂತೆ ಹಲವು ಪ್ರದೇಶಗಳನ್ನು ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ: Namma Metro: ಕನ್ನಡ ರಾಜ್ಯೋತ್ಸವಕ್ಕೆ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಹಳದಿ ಮಾರ್ಗದಲ್ಲಿ ಇನ್ಮುಂದೆ ಪ್ರತಿ 15 ನಿಮಿಷಕ್ಕೊಂದು ರೈಲು
ಬೆಳಗಾವಿಯಲ್ಲಿ ನಿನ್ನೆ ಮಧ್ಯರಾತ್ರಿಯಿಂದಲೇ ಕನ್ನಡ ದಿನಾಚರಣೆ ಆಚರಣೆ ಪ್ರಾರಂಭವಾಗಿದೆ. ಇಡೀ ನಗರವನ್ನು ದೀಪಗಳಿಂದ ಅಲಂಕಾರ ಮಾಡಲಾಗಿದೆ. ಶುಕ್ರವಾರ ರಾತ್ರಿ 10 ಗಂಟೆಯಷ್ಟೊತ್ತಿಗೆ ಬೆಳಗಾವಿ ರಾಣಿ ಚೆನ್ನಮ್ಮ ವೃತ್ತದತ್ತ ಧಾವಿಸಿದ ಸಾವಿರಾರು ಕನ್ನಡಿಗರು ರಾಜ್ಯೋತ್ಸವದ ಆಚರಣೆಯನ್ನು ಪ್ರಾರಂಭಿಸಿದರು. ಇದೇ ಮೊದಲ ಬಾರಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಕನ್ನಡ ಸಂಘಟನೆಗಳ ಕಾರ್ಯಕರ್ತರು ಸಿಡಿ ಮದ್ದಿನ ಪ್ರದರ್ಶನ ಹಮ್ಮಿಕೊಂಡಿದ್ದರು. ಸರಿಯಾಗಿ ರಾತ್ರಿ 12 ಗಂಟೆ ಆಗುತ್ತಿದ್ದಂತೆ ಪ್ರದರ್ಶನ ಪ್ರಾರಂಭವಾಯಿತು. ಚೆನ್ನಮ್ಮ ವೃತ್ತದ ಬಳಿ 10 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದರು.