ರಾಮದುರ್ಗ: ತಾಲೂಕಿನ ಬಟಕುರ್ಕಿ, ಕದಾಂಪೂರ, ಸಾಲಾಪೂರ, ಚಿಪ್ಪಲಕಟ್ಟಿ ಬಿಜಗುಪ್ಪಿ ಗ್ರಾಮದಲ್ಲಿ ಮಳೆ ಕೊರತೆಯಿಂದ ಹಾನಿಗೊಳಗಾದ ಬೆಳೆಗಳನ್ನು ವಿಧಾನಸಭೆ ಮುಖ್ಯ ಸಚೇತಕ ಹಾಗೂ ಶಾಸಕ ಅಶೋಕ ಪಟ್ಟಣ(MLA Ashok Pattana) ವೀಕ್ಷಣೆ ಮಾಡಿದರು.
ತಾಲೂಕಿನಲ್ಲಿ ಮಳೆ ಕೊರತೆಯಿಂದ ಹೆಸರು, ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ಅನೇಕ ಬೆಳೆಗಳು ಹಾನಿಗೊಳಗಾಗಿವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ (CM D K Shivkumar) ಅವರು ರಾಜ್ಯ ದಾದ್ಯಂತ ಬೆಳೆ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿದ್ದಾರೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ನಿಖರ ಸಮೀಕ್ಷೆ ನಡೆಸಿ, ವರದಿ ನೀಡಬೇಕು. ಸಮೀಕ್ಷೆಯಲ್ಲಿ ಲೋಪಗಳು ಕಂಡುಬಂದಲ್ಲಿ ಅಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತರ ಜಮೀನುಗಳಿಗೆ ಶಾಸಕ ಅಶೋಕ ಪಟ್ಟಣ ಭೇಟಿ ನೀಡುತ್ತಿದ್ದಂತೆ ಸ್ಥಳೀಯ ರೈತರು ಸರಿಯಾಗಿ ಮಳೆಯಾಗದೆ ಬೆಳೆಗಳು ಒಣಗಿ ಹಾನಿಯಾಗಿವೆ. ಸರಕಾರದ ಮಟ್ಟದಲ್ಲಿ ತಾಲೂಕಿನ ಪರಸ್ಥಿತಿ ಗಮನಕ್ಕೆ ತರಬೇಕು. ರೈತರು ಬಿತ್ತನೆ ಬೀಜ-ಗೊಬ್ಬರ ಕೃಷಿ ಚಟುವಟಿಕೆಗಳಿಗೆ ಮಾಡಿದ ವೆಚ್ಚವಾ ದರೂ ದೊರೆಯುವಂತೆ ಬೆಳೆಹಾನಿ ದೊರೆಯುವಂತೆ ಸೂಕ್ತ ಬೆಳೆ ಹಾನಿ ದೊರೆಯುವಂತಾಗಲು ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಎಲ್ಲಾ ರೈತರ ಜಮೀನುಗಳಿಗೆ ಭೇಟಿ ನೀಡಿ ನೈಜ ಸಮೀಕ್ಷೆ ನಡೆಸುವಂತೆ ಕ್ರಮ ತಾಕೀತು ಮಾಡಬೇಕು ಎಂದು ಶಾಸಕರನ್ನು ರೈತರು ಒತ್ತಾಯಿಸಿದರು.
ಇದನ್ನೂ ಓದಿ: MLA Ashoka Pattana: ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಸಹಾಯಧನ ಚೆಕ್ ವಿತರಣೆ
ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ ಚಿಮ್ಮಲಗಿ ಮಾತನಾಡಿ, ತಾಲೂಕಿನಲ್ಲಿ ಹೆಸರು 24,851 ಹೆಕ್ಟೆರ್, ಮೆಕ್ಕೆಜೋಳ 14610 ಹೆಕ್ಟೆರ್, ತೊಗರಿ 1932 ಹೆಕ್ಟೆರ್, ಸೂರ್ಯಕಾಂತಿ 655 ಹೆಕ್ಟರ್, ಹತ್ತಿ ೫೪೦ ಹೆಕ್ಟೆರ್ ಬಿತ್ತನೆ ಮಾಡಲಾಗಿದೆ.
ಹೆಸರು 23600 ಹೆಕ್ಟರ್, ಮೆಕ್ಕೆಜೋಳ 9100 ಹೆಕ್ಟರ್, ತೊರಗಿ 950 ಹೆಕ್ಟರ್, ಸೂರ್ಯಕಾಂತಿ 350 ಹೆಕ್ಟರ್, ಹತ್ತಿ 275 ಹೆಕ್ಟರ್ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆಯ ಜಂಟಿ ಸಮೀಕ್ಷೆಯ ನಂತರ ನಿಖರವಾದ ಬೆಳೆಹಾನಿ ತಿಳಿದು ಬರಲಿದೆ ಎಂದು ಹೇಳಿದರು.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಮುಗಳಕೋಡ ಮಾತನಾಡಿ, ಈ ಬಾರಿ ತಾಲೂಕಿನಾಧ್ಯಂತ ಸುಮಾರು 4200 ಹೆಕ್ಟರ್ ಭೂ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಸುಮಾರು 1250 ಹೆಕ್ಟರ್ ಭೂ ಪ್ರದೇಶ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ತಾಲೂಕಿ ನಲ್ಲಿ ತೋಟಗಾರಿಕಾ ಬೆಳೆಗಳ ಸಮೀಕ್ಷೆ ನಡೆಸಿ, ನಿಖರವಾದ ಬೆಳೆಹಾನಿ ಪ್ರದೇಶ ಗುರುತಿಸಲಾಗು ವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿದ್ಲಿಂಗಪ್ಪ ಸಿಂಗಾರಗೊಪ್ಪ, ಬಸನಗೌಡ ಪ್ಯಾಟಿಗೌಡ್ರ, ಕೃಷ್ಣ ಗೌಡ ಪಾಟೀಲ, ಪೀರು ತಳವಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಗ್ರಾಮಗಳ ರೈತರು ಇದ್ದರು.