ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

MLA Ashoka Pattana: ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಸಹಾಯಧನ ಚೆಕ್ ವಿತರಣೆ

ರಾಜ್ಯಾದ್ಯಂತ ಹಲವು ಅಪಘಾತ ಪ್ರಕರಣಗಳು ಇದ್ದು, ನಮ್ಮ ರಾಮದುರ್ಗ ತಾಲೂಕಿನ ಪರಿಶಿಷ್ಠ ಕುಟುಂಬಗಳ ಮೃತರ ಸಂಬಂಧಿಕ ರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ವಿಶೇಷ ಪ್ರಕಣವೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿ, ಪರಿಹಾರ ಹಣ ಮಂಜೂರು ಮಾಡಿಸಿದ್ದೇನೆ. ಪರಿಹಾರ ಪಡೆದ ಕುಟುಂಬಸ್ಥರು ಸರಕಾರದಿಂದ ದೊರೆತ ಪರಿಹಾರದ ಹಣವನ್ನು ದುರುಪಯೋಗ ಮಾಡಿಕೊಳ್ಳಬಾರದು. ಮಕ್ಕಳ ಶಿಕ್ಷಣದ ಜೊತೆಗೆ ಕುಟುಂಬದ ಅಭಿವೃದ್ಧಿಗೆ ವೆಚ್ಚ ಮಾಡಬೇಕು

ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಸಹಾಯಧನ ಚೆಕ್ ವಿತರಣೆ

ತಾಲೂಕಿನ ಹುಲಕುಂದ ಗ್ರಾಮದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ವಾರಸುದಾರರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲಾಗುವ ಪರಿಹಾರದ ಚೆಕ್‌ನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ವಿತರಿಸಿದರು. -

Ashok Nayak
Ashok Nayak Jan 10, 2026 9:17 PM

ರಾಮದುರ್ಗ: ಕಳೆದ 2023ರಲ್ಲಿ ಸವದತ್ತಿ ಯಲ್ಲಮ್ಮದೇವಿ ಜಾತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಉಂಟಾದ ರಸ್ತೆ ಅಪಘಾತದಲ್ಲಿ ತಾಲೂಕಿನ ಹುಲಕುಂದ ಗ್ರಾಮದ ಪರಿಶಿಷ್ಠ ಜಾತಿ ಸೇರಿದಂತೆ ಇತರ ಕುಟುಂಬಗಳ ಸುಮಾರು 6 ಜನ ಮೃತಪಟ್ಟಿದ್ದರು. ಮೃತರ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಸ್ಥರಿಗೆ ತಲಾ ರೂ.5 ಲಕ್ಷ ರೂಗಳ ಚೆಕ್‌ಗಳನ್ನು ವಿಧಾನಸಭೆ ಮುಖ್ಯ ಸಚೇತಕ ಹಾಗೂ ಶಾಸಕ ಅಶೋಕ ಪಟ್ಟಣ(Assembly Chief Whip and MLA Ashoka Pattana) ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಶೋಕ ಪಟ್ಟಣ, ರಾಜ್ಯಾದ್ಯಂತ ಹಲವು ಅಪಘಾತ ಪ್ರಕರಣಗಳು ಇದ್ದು, ನಮ್ಮ ರಾಮದುರ್ಗ ತಾಲೂಕಿನ ಪರಿಶಿಷ್ಠ ಕುಟುಂಬಗಳ ಮೃತರ ಸಂಬಂಧಿಕ ರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ವಿಶೇಷ ಪ್ರಕಣವೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿ, ಪರಿಹಾರ ಹಣ ಮಂಜೂರು ಮಾಡಿಸಿದ್ದೇನೆ. ಪರಿಹಾರ ಪಡೆದ ಕುಟುಂಬಸ್ಥರು ಸರಕಾರದಿಂದ ದೊರೆತ ಪರಿಹಾರದ ಹಣವನ್ನು ದುರುಪಯೋಗ ಮಾಡಿಕೊಳ್ಳಬಾರದು. ಮಕ್ಕಳ ಶಿಕ್ಷಣದ ಜೊತೆಗೆ ಕುಟುಂಬದ ಅಭಿವೃದ್ಧಿಗೆ ವೆಚ್ಚ ಮಾಡಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Assembly Chief Whip Ashoka Pattana: ಜಾಲಿಕಟ್ಟಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ನೂತನ ಕಟ್ಟಡ ಉದ್ಘಾಟನೆ

ಘಟನೆ ವಿವರ: ಕಳೆದ 2023ರಲ್ಲಿ ಹುಲಕುಂದ ಗ್ರಾಮದಿಂದ ಸವದತ್ತಿ ಯಲ್ಲಮ್ಮದೇವಿ ಜಾತ್ರೆಗೆ ಗೂಡ್ಸ್ ವಾಹನದಲ್ಲಿ ಗ್ರಾಮದ ದಲಿತ ಕುಟುಂಬಸ್ಥರು ಹಾಗೂ ಸಂಬಂಧಿಕರು ತೆರಳುತ್ತಿದ್ದರು. ಚುಂಚನೂರ ಗ್ರಾಮದ ಹತ್ತಿರ ಚಾಲಕನ ನಿಯಂತ್ರಣ ತಪ್ಪಿದ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಹುಲಕುಂದ ಗ್ರಾಮದ ಸವಿತಾ ಲಕ್ಷ್ಮಣ ಮುಂಡಾಸ್, ಹಣಮವ್ವ ಶ್ರಾವಣ ಮ್ಯಾಗಾಡಿ, ದೀಪಾ ಶಂಕರ ಹರಿಜನ, ಇಂದ್ರವ್ವ ಫಕೀರಪ್ಪ ಸಿದ್ದಮೇತ್ರಿ, ಸುಪ್ರಿಯಾ ಶಂಕರ ಹರಿಜನ, ಸುನ್ನಾಳ ಗ್ರಾಮದ ಮಾರುತಿ ಯಲ್ಲಪ್ಪ ಬನ್ನೂರ ಮೃತ ಪಟ್ಟಿದ್ದು, ಸುಮಾರು 16 ಜನ ಗಂಭೀರ ಗಾಯಗೊಂಡು ಗೋಕಾಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಶುಕ್ರವಾರ ಹುಲಕುಂದ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಅಶೋಕ ಪಟ್ಟಣ, ಮೃತರ ಮನೆ ಮನೆಗೆ ತೆರಳಿ ತಲಾ ರೂ. 5 ಲಕ್ಷ ಪರಿಹಾರ ಧನ ಹಾಗೂ ಗೋಕಾಕ ಆಸ್ಪತ್ರೆಯಲ್ಲಿ ಚಿಕತ್ಸೆಯಿಂದ ಗುಣ ಮುಖರಾದವರ ಆಸ್ಪತ್ರೆಯ ವೆಚ್ಚ ರೂ. 18,60,516 ಮೊತ್ತದ ಚೆಕ್‌ನ್ನು ಆಸ್ಪತ್ರೆಯ ಸಿಬ್ಬಂದಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ರಮೇಶ ಅಣ್ಣಿಗೇರಿ, ಸಿದ್ಲಿಂಗಪ್ಪ ಸಿಂಗಾರಗೊಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ಪೀರು ತಳವಾರ ಸೇರಿದಂತೆ ಗ್ರಾಮದ ಮಖಂಡರು ಮತ್ತಿತರರಿದ್ದರು.