ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಟ ದರ್ಶನ್‌ ಜತೆ ಜೈಲಿನಲ್ಲಿ ಸಿಗರೇಟ್‌ ಸೇದುತ್ತ ವೈರಲ್‌ ಆಗಿದ್ದ ರೌಡಿ ವಿಲ್ಸನ್‌ ಗಾರ್ಡನ್‌ ನಾಗನಿಗೆ ಜಾಮೀನು; ಜೈಲಿನಿಂದ ಬಿಡುಗಡೆ

Belagavi News: ಸಿದ್ದಾಪುರದ ಮಹೇಶ್ ಕೊಲೆ ಪ್ರಕರಣದ ಬಂಧಿತ ಆರೋಪಿ, ನಟೋರಿಯಸ್ ರೌಡಿಶೀಟರ್‌ ವಿಲ್ಸನ್ ಗಾರ್ಡನ್ ನಾಗನಿಗೆ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಸ್ಪತ್ರೆ ಕೈದಿ ವಾರ್ಡನಲ್ಲಿ ಆರೋಗ್ಯ ತಪಾಸಣೆ ನಡೆಸಿ ಬಿಡುಗಡೆ ಮಾಡಲಾಯಿತು.

ರೌಡಿಶೀಟರ್‌ ವಿಲ್ಸನ್ ಗಾರ್ಡನ್ ನಾಗ

ಬೆಳಗಾವಿ, ಮೇ 21: ಸಿದ್ದಾಪುರದ ಮಹೇಶ್ ಕೊಲೆ ಪ್ರಕರಣದ ಬಂಧಿತ ಆರೋಪಿ, ನಟೋರಿಯಸ್ ರೌಡಿಶೀಟರ್‌ ವಿಲ್ಸನ್ ಗಾರ್ಡನ್ ನಾಗನಿಗೆ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಗುರುವಾರ (ಮೇ 21) ಬೆಳಗಾವಿ ಜಿಲ್ಲಾಸ್ಪತ್ರೆ ಕೈದಿ ವಾರ್ಡನಲ್ಲಿ ಆರೋಗ್ಯ ತಪಾಸಣೆ ನಡೆಸಿ ಬಿಡುಗಡೆ ಮಾಡಲಾಯಿತು (Belagavi News). ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ವೇಳೆ ವೈರಲ್ ಆಗಿದ್ದ ಫೋಟೊಗಳಿಂದ ವಿಲ್ಸನ್ ಗಾರ್ಡನ್ ನಾಗ ಕೂಡ ಸಾಕಷ್ಟು ಸುದ್ದಿಯಾಗಿದ್ದ. ಬಳಿಕ ಆತನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.

ಸಿದ್ದಾಪುರದ ಮಹೇಶ್ ಕೊಲೆ ಪ್ರಕರಣದ ಸಂಬಂಧ ಬೆಳಗಾವಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ವಿಲ್ಸನ್ ಗಾರ್ಡನ್ ನಾಗನಿಗೆ ಎರಡು ದಿನಗಳ ಹಿಂದಷ್ಟೇ ನಗರದ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಸುಮಾರು 10 ಮಂದಿ ಸಹಚರರು ಹಿಂಡಲಗಾ ಜೈಲಿನ ಬಳಿ ಹಾರ-ತುರಾಯಿ ಸಮೇತ ಆಗಮಿಸಿದ್ದರು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಬುಧವಾರ ಆತನ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ.

ಜೈಲಿನ ಬಳಿ ಗುಂಪು ಸೇರಿರುವ ಮಾಹಿತಿ ಮೇರೆಗೆ ಸಿಸಿಬಿ ಡಿಸಿಪಿ ಹರಿಬಾಬು ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ನಾಗನ ಐವರು ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.

ಇದೀಗ ಜಾಮೀನು ಆದೇಶದ ಪ್ರತಿಯು ಹಿಂಡಲಗಾ ಕಾರಾಗೃಹ ಅಧಿಕಾರಿಗಳಿಗೆ ತಲುಪಿದ ಬಳಿಕ, ವಿಲ್ಸನ್ ಗಾರ್ಡನ್ ನಾಗನನ್ನು ಜಿಲ್ಲಾಸ್ಪತ್ರೆಯ ಕೈದಿ ವಾರ್ಡಗೆ ಕರೆತಂದು ವೈದ್ಯಕೀಯ ತಪಾಸಣೆ ನಡೆಸಿ ಬಿಡುಗಡೆ ಮಾಡಲಾಯಿತು.

ಮದ್ದೂರಿನಲ್ಲಿ ರೌಡಿ ಶೀಟರ್‌ನನ್ನು ಕೊಚ್ಚಿ ಕೊಲೆ

ವೈರಲ್‌ ಆಗಿದ್ದ ಫೋಟೊ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ನೊಂದಿಗೆ ವಿಲ್ಸನ್‌ ಗಾರ್ಡನ್‌ ನಾಗ ಕುರ್ಚಿ ಮೇಲೆ ಕುಳಿತು ಸಿಗರೇಟ್‌ ಸೇದುತ್ತ, ಚಹಾ ಕುಡಿಯುತ್ತಿದ್ದ ಫೋಟೊ ಕೆಲವು ಸಮಯದ ಹಿಂದೆ ವೈರಲ್‌ ಆಗಿತ್ತು. ಈ ಕಾರಣಕ್ಕೆ ಆತನನ್ನು ಬೆಳಗಾವಿ ಜೈಲಿಗೆ ಕಳುಹಿಸಲಾಗಿತ್ತು.

ಏನಿದು ಪ್ರಕರಣ?

2023ರಲ್ಲಿ ಜೈಲಿನಿಂದ ಹೊರ ಬಂದ ಕಲವೇ ಗಂಟೆಗಳಲ್ಲಿ ಮಹೇಶ್​ನನ್ನು ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಗ್ಯಾಂಗ್ ಹತ್ಯೆ ಮಾಡಿತ್ತು. ಈ ಸಂಬಂಧ ರೌಡಿಶೀಟರ್​​​ ವಿಲ್ಸನ್​​ ಗಾರ್ಡನ್​​​ ನಾಗ ಸೇರಿ ಹಲವರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್​​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಗ್ಯಾಂಗ್​ ವಾರ್​​, ಹಳೆ ದ್ವೇಷದ ಹಿನ್ನೆಲೆಯಲ್ಲಿ ಮಹೇಶ್​ನನ್ನು ಕೊಲೆ ಮಾಡಲಾಗಿತ್ತು. ಮುಖ್ಯವಾಗಿ ವಿಲ್ಸನ್​ ಗಾರ್ಡನ್​​​ ನಾಗನ ಕೊಲೆಗೆ ಮಹೇಶ್ ಸಂಚು ರೂಪಿಸಿದ್ದ. ಇದೇ ಕಾರಣಕ್ಕೆ ರೌಡಿಶೀಟರ್​ ಸಿದ್ದಾಪುರ ಮಹೇಶ್ ನಾಗನ ವಿರೋಧಿಗಳನ್ನು ಒಗ್ಗೂಡಿಸಿದ್ದ​. ಸುಮಾರು 30 ರೌಡಿಗಳ ಗ್ಯಾಂಗ್​ ಕಟ್ಟಿಕೊಂಡು ನಾಗನ ಹತ್ಯೆಗೆ ಸಂಚು ರೂಪಿಸಿದ್ದ. ಈ ಸಂಚಿನ ಬಗ್ಗೆ ತಿಳಿದ ನಾಗನ ಗ್ಯಾಂಗ್, ಮಹೇಶ್‌ನನ್ನೇ ಹತ್ಯೆ ಮಾಡಿತ್ತು. ಈ ಪ್ರಕರಣ ಭಾರಿ ಸುದ್ದಿಯಾಗಿತ್ತು.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author