ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದರ್ಶನ್‌ಗೆ ಪರಪ್ಪನ ಅಗ್ರಹಾರದಲ್ಲಿ ಸಹ ಕೈದಿಗಳಿಂದ ನಿಂದನೆ, ಬೆದರಿಕೆ! ಜಾಮೀನು ಅರ್ಜಿಯಲ್ಲಿ ನೋವು ತೋಡಿಕೊಂಡ ದಾಸ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮಗೆ ಸಹ ಕೈದಿಗಳಿಂದ ನಿಂದನೆ ಮತ್ತು ಜೀವ ಬೆದರಿಕೆ ಉಂಟಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ನೋವು ತೋಡಿಕೊಂಡಿದ್ದಾರೆ. ಮೂಲಭೂತ ಸೌಕರ್ಯಗಳಲ್ಲಿ ತಾರತಮ್ಯ ಹಾಗೂ ಆರೋಗ್ಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅವರು ಜಾಮೀನು ಕೋರಿದ್ದಾರೆ.

ದರ್ಶನ್‌ಗೆ ಸಹ ಕೈದಿಗಳಿಂದ ನಿಂದನೆ; ಜಾಮೀನು ಅರ್ಜಿಯಲ್ಲಿ ದಾಸನ ಅಳಲು

-

Avinash GR
Avinash GR May 3, 2026 8:13 PM

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ, ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮಗೆ ಜೀವ ಬೆದರಿಕೆ, ನಿಂದನೆ ಆಗುತ್ತಿದೆ. ನನಗೆ ತಾರತಮ್ಯ ಮಾಡಲಾಗುತ್ತಿದೆ ಇದೆ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಳೆದ ವರ್ಷ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ರದ್ದಾಗಿತ್ತು. ಇದೀಗ ಸಾಕ್ಷಿಗಳ ವಿಚಾರಣೆಯಲ್ಲಿನ ವಿಳಂಬ ಮತ್ತು ಜೈಲಿನಲ್ಲಿನ ಅಮಾನವೀಯ ಸ್ಥಿತಿಯನ್ನು ಮುಂದಿಟ್ಟುಕೊಂಡು ದರ್ಶನ್ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ನಾಳೆ (ಮೇ 4) ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.

ನನಗೆ ತಾರತಮ್ಯ ಮಾಡುತ್ತಿದ್ದಾರೆ

ತಮ್ಮ ಅರ್ಜಿಯಲ್ಲಿ ಜೈಲಿನಲ್ಲಿನ ಕರಾಳ ದಿನಗಳನ್ನು ಬಿಚ್ಚಿಟ್ಟಿರುವ ದರ್ಶನ್, "ನನ್ನನ್ನು ನಿಯಮ ಮೀರಿ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಸಹ ಕೈದಿಗಳು ನನ್ನನ್ನು ನಿಂದಿಸುತ್ತಿರುವುದಲ್ಲದೆ, ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಮೂಲಭೂತ ಸೌಕರ್ಯಗಳಾದ ಸರಿಯಾದ ಆಹಾರ, ಬಟ್ಟೆ ಮತ್ತು ಹಾಸಿಗೆಯನ್ನು ಪಡೆಯಲು ತಾರತಮ್ಯ ಮಾಡಲಾಗುತ್ತಿದೆ. ನನ್ನ ಕುಟುಂಬ ಸದಸ್ಯರನ್ನು ಕೂಡ ಭೇಟಿ ಮಾಡಲು ಸಮಾನ ಅವಕಾಶ ನೀಡುತ್ತಿಲ್ಲ. ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದರೂ ಕೇವಲ 2-3 ಬಾರಿ ಮಾತ್ರ ಫಿಸಿಯೋಥೆರಪಿ ನೀಡಲಾಗಿದೆ" ಎಂಬ ಅರ್ಜಿಯಲ್ಲಿ ನೋವು ತೋಡಿಕೊಂಡಿದ್ದಾರೆ ನಟ ದರ್ಶನ್.

Actor Darshan: ಸವಲತ್ತು ಕೋರಿದ ದರ್ಶನ್‌ ಅರ್ಜಿ 9ಕ್ಕೆ ಮುಂದೂಡಿಕೆ, ʼಉಮೇಶ್‌ ರೆಡ್ಡಿಗೆ ಕೊಟ್ಟ ಸೌಲಭ್ಯ ದರ್ಶನ್‌ಗೆ ಏಕಿಲ್ಲ?ʼ ಎಂದ ವಕೀಲರು

ವೃತ್ತಿಜೀವನಕ್ಕೆ ಮರಣಗಂಟೆ!

ದರ್ಶನ್ ಅವರ ಸುದೀರ್ಘ ಜೈಲುವಾಸವು ವೃತ್ತಿ ಬದುಕಿನ ಮೇಲೂ ದೊಡ್ಡ ಪರಿಣಾಮ ಬೀರಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮೀಡಿಯಾ ಹೌಸ್ ಸ್ಟುಡಿಯೋಸ್ ಅಂತಹ ಪ್ರತಿಷ್ಠಿತ ಸಂಸ್ಥೆಗಳ ಜೊತೆ ಸಿನಿಮಾ ಮಾಡಲು ಸಹಿ ಮಾಡಿದ್ದು, ಈಗಾಗಲೇ ನಿರ್ಮಾಪಕರು ಸುಮಾರು 6 ಕೋಟಿ ರೂಪಾಯಿಗಳ ಬಂಡವಾಳವನ್ನು ಅವರ ಮೇಲೆ ಹೂಡಿದ್ದಾರೆ. "ನಾನು ಪ್ರತಿ ವರ್ಷ 2-3 ಸಿನಿಮಾಗಳನ್ನು ಮಾಡುತ್ತಿದ್ದೆ. ಈಗ ಜೈಲಿನಲ್ಲಿ ಇರುವುದರಿಂದ ಆ ಪ್ರಾಜೆಕ್ಟ್‌ಗಳು ನಿಂತು ಹೋಗಿವೆ. ಇದು ನನ್ನ ಜೀವನೋಪಾಯಕ್ಕೆ ಮತ್ತು ವೃತ್ತಿಜೀವನಕ್ಕೆ ದೊಡ್ಡ ನಷ್ಟ ಉಂಟುಮಾಡುತ್ತಿದ್ದು, ಈ ಜೈಲುವಾಸವೇ ನನ್ನ ಕೆರಿಯರ್‌ಗೆ ಮರಣಗಂಟೆಯಾಗಲಿದೆ" ಎಂದು ಅರ್ಜಿಯಲ್ಲಿ ನಟ ದರ್ಶನ್‌ ತಿಳಿಸಿದ್ದಾರೆ.

ದರ್ಶನ್‌ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಸುಳ್ಳು ಹೇಳಿದ್ರಾ? ತೂಗುದೀಪ ಮಾಜಿ ಅಕೌಂಟೆಂಟ್ ದೀಪಕ್ ಗಂಗಾಧರ್‌ ಬಿಚ್ಚಿಟ್ಟ ರಹಸ್ಯವೇನು?

ಸಾಕ್ಷಿಗಳ ವಿಚಾರಣೆ ವಿಳಂಬ

"ಈ ಪ್ರಕರಣದಲ್ಲಿ ಒಟ್ಟು 273 ಸಾಕ್ಷಿಗಳಿದ್ದು, ಕಳೆದ 8 ತಿಂಗಳಿನಿಂದ ಕೇವಲ 15 ಸಾಕ್ಷಿಗಳ ವಿಚಾರಣೆ ಮಾತ್ರ ಪೂರ್ಣಗೊಂಡಿದೆ. ಇನ್ನುಳಿದ 250ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ಮುಗಿಯಲು ವರ್ಷಗಳೇ ಬೇಕಾಗಬಹುದು. ಇಷ್ಟು ದೀರ್ಘಕಾಲದವರೆಗೆ ಜೈಲಿನಲ್ಲಿರುವುದು ನ್ಯಾಯವಲ್ಲ. ತಮಗೆ ತಕ್ಷಣವೇ ಜಾಮೀನು ನೀಡಿ" ಎಂದು ದರ್ಶನ್ ಮನವಿ ಮಾಡಿದ್ದಾರೆ. ನಾಳೆ (ಮೇ 4) ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದ್ದು, 'ಡಿ-ಬಾಸ್'ಗೆ ರಿಲೀಫ್ ಸಿಗಲಿದೆಯೇ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.