Bengaluru News: "ವಿಶ್ವ ದಾಖಲೆ" ಪ್ರಶಸ್ತಿ ಪತ್ರಗಳ ವಿತರಣಾ ಸಮಾರಂಭ
ಹಿರೋಶಿಮಾ ಮತ್ತು ನಾಗಸಾಕಿ ಬಾಮ್ ದಾಳಿಯ ಪರಿಣಾಮದ ಕುರಿತಾದ "ಸಡಾಕೊ" ಕಿರು ನಾಟಕ, ಪರಿಸರದಲ್ಲಿ ನಶಿಸುತ್ತಿರುವ ಹುಲಿ ಮತ್ತು ಹಂಸಗಳ ನೃತ್ಯ ರೂಪಕ ಪ್ರದರ್ಶನದ ನಿರ್ದೇಶಕರಾದ ಹೆಸರಾಂತ ಕಲಾವಿದ ಜಾನ್ ದೇವರಾಜ್ ಕಾರ್ಯಕ್ರಮದ ರೂವಾರಿಯಾಗಿದ್ದರು.
ಬೆಂಗಳೂರು: "ಹೈ ರೆಂಜ್ ಬುಕ್ ವಲ್ಡ್ ರೆಕಾರ್ಡ್" ನಿಂದ ಬೆಂಗಳೂರಿನ ವಸಂತಪುರ ಸರ್ಕಾರಿ ಶಾಲಾ ಮಕ್ಕಳಿಗೆ ಟ್ರಸ್ಟ್ ಕ್ಲಬ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಬೆಂಗಳೂರಿನ" ಆರ್ಟಿಕಲ್ ಅಂಡ್ ಎಜುಕೇಶನ್" ಸಂಸ್ಥೆ ವತಿಯಿಂದ "ವಿಶ್ವ ನೃತ್ಯ ದಿನಾಚರಣೆ" ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಸಂತಪುರದ ಸರ್ಕಾರಿ ಶಾಲಾ ಮಕ್ಕಳು ಉತ್ತಮ ಪ್ರದರ್ಶನ ನೀಡಿದ ಪ್ರಯುಕ್ತ ಸಂಸ್ಥೆಯ ಸಂಸ್ಥಾಪಕಿ ಡಾಕ್ಟರ್ ಅಂಬಿಕಾ ಸಿ ರವರು ಈ ಪ್ರಶಸ್ತಿ ಪತ್ರ ನೀಡಿ ಮಕ್ಕಳನ್ನು ಗೌರವಿಸಿದರು.
ಇದನ್ನೂ ಓದಿ: U19 Women's T20 World Cup: ತ್ರಿಷಾ ಅಮೋಘ ಶತಕ; ಭಾರತಕ್ಕೆ 150 ರನ್ ಗೆಲುವು
ಹಿರೋಶಿಮಾ ಮತ್ತು ನಾಗಸಾಕಿ ಬಾಮ್ ದಾಳಿಯ ಪರಿಣಾಮದ ಕುರಿತಾದ "ಸಡಾಕೊ" ಕಿರು ನಾಟಕ, ಪರಿಸರದಲ್ಲಿ ನಶಿಸುತ್ತಿರುವ ಹುಲಿ ಮತ್ತು ಹಂಸಗಳ ನೃತ್ಯ ರೂಪಕ ಪ್ರದರ್ಶನದ ನಿರ್ದೇ ಶಕರಾದ ಹೆಸರಾಂತ ಕಲಾವಿದ ಜಾನ್ ದೇವರಾಜ್ ಕಾರ್ಯಕ್ರಮದ ರೂವಾರಿಯಾಗಿದ್ದರು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಜೆ ಪತ್ರಿಕೆಯ ಸಂಪಾದಕರಾದ ಡಾ. ಜಿ. ವೈ. ಪದ್ಮನಾಗರಾಜ್ ಮಾತನಾಡಿ ಸರ್ಕಾರಿ ಶಾಲೆಯ ಮಕ್ಕಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸಮಾ ಜದ ಆದರ್ಶ ವ್ಯಕ್ತಿಗಳ ಸಂದೇಶಗಳನ್ನು ಮಕ್ಕಳು ಪಾಲಿಸಬೇಕೆಂದರು.
ಅತಿಥಿಗಳಾಗಿ ಭಾಗವಹಿಸಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಅಧ್ಯಕ್ಷರಾದ ಮಾವಳ್ಳಿ ಶಂಕರ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹಾಗೂ ಬುದ್ಧನ ಸಂದೇಶಗಳನ್ನು ಮೈಗೂಡಿಸಿ ಕೊಂಡು ಸಮಾಜದ ಉತ್ತಮ ವ್ಯಕ್ತಿಗಳಾಗಿ ಬೆಳೆಯಬೇಕೆಂದು ತಿಳಿಸಿದರು. ಬೆಂಗಳೂರು ವಿಶ್ವವಿದ್ಯಾ ಲಯದ ಪ್ರೊಫೆಸರ್ ಸಮತಾ ಬಿ ದೇಶ ಮಾನೆ ರವರು ತಾವು ಕಡು ಬಡತನದಲ್ಲಿ ಏಳು ಜನ ಅಕ್ಕ ತಂಗಿಯರು ಉನ್ನತ ಪದವಿ ಕಳಿಸಿ ಮಾಡಿದ ಸಾಧನೆ ಕುರಿತು ತಿಳಿಸಿ ತನ್ನ ಸಹೋದರಿ ಡಾಕ್ಟರ್ ವಿಜಯಲಕ್ಷ್ಮಿ ದೇಶಮಾನೆ ಇವರ ಸೇವೆ ತ್ಯಾಗ ಬಲಿದಾನಕ್ಕೆ ಪ್ರತೀಕವಾಗಿ ಇಂದು ಪದ್ಮಶ್ರೀ ಪ್ರಶಸ್ತಿ ಒಲಿದಿರುವುದಾಗಿ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದ ಕಡೆಗೆ ಗಮನ ನೀಡ ಬೇಕೆಂದು ಕರೆ ನೀಡಿದರು.
ದಿವಂಗತ ಹೆಸರಾಂತ ಕವಿಗಳಾದ ಡಾಕ್ಟರ್ ಸಿದ್ದಲಿಂಗಯ್ಯನವರ ಪತ್ನಿ ರಮಾಕುಮಾರಿ ಅವರು ಮಾತನಾಡಿ ಮಕ್ಕಳ ಸಾಧನೆಗೆ ಮೆಚ್ಚಿಗೆ ವ್ಯಕ್ತಪಡಿಸಿ ಉತ್ತಮ ನಾಯಕರಾಗಿ ಈ ಮಕ್ಕಳು ಬೆಳೆಯ ಬೇಕೆಂದು ಕರೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ವೇದಿಕೆಯ ರಾಜ್ಯಾಧ್ಯಕ್ಷ ರಾದ ಕೆ. ಶಾಂತಕುಮಾರಿ ಅವರು ಮಾತನಾಡಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪೋಷಕರು ಮತ್ತು ಸಮಾಜವು ಪ್ರೋತ್ಸಾಹ ನೀಡ ಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಜಗದೀಶ್, ವಿಕ್ರಂ ಮಕ್ಕಳ ಪ್ರತಿಭೆ ಯನ್ನು ಕೊಂಡಾಡಿದರು. ಈ ಸಂದರ್ಭದಲ್ಲಿ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.