ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನ 5 ರಲ್ಲಿ 4 ವೃತ್ತಿಪರರು ಎಐ ಎಷ್ಟೇ ಮುಂದುವರಿದರೂ ಮಾನವನ ಜ್ಞಾನಕ್ಕೆ ಅದು ಸಂವಾದಿಯಲ್ಲ ಎಂದು ನಂಬುತ್ತಾರೆ: ಲಿಂಕ್ಡ್‌ ಇನ್

ಶೇ.82ರಷ್ಟು ವೃತ್ತಿಪರರು ಎಐ ತಮ್ಮ ದೈನಂದಿನ ವೃತ್ತಿ ಜೀವನವನ್ನು ಸುಧಾರಿಸಬಹುದು ಎಂದು ನಂಬಿದ್ದಾರೆ. ಶೇ.77ರಷ್ಟು ಬೆಂಗಳೂರು ವೃತ್ತಿಪರರು ಎಐಯನ್ನು ಬರವಣಿಗೆ ಮತ್ತು ಕರಡು ತಯಾರಿಕೆಗೆ ಉಪಯುಕ್ತವೇ ಹೊರು ನಿರ್ಧಾರ ತೆಗೆದುಕೊಳ್ಳಲು ಅಲ್ಲ ಎನ್ನುತ್ತಾರೆ. ಶೇ.72ರಷ್ಟು ಜನರು ಕೆಲಸದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಎಐಗಿಂತ ತಮ್ಮ ತೀರ್ಮಾನದ ಮೇಲೆ ಹೆಚ್ಚು ನಂಬಿಕೆ ಹೊಂದಿದ್ದಾರೆ

ಎಐ ಎಷ್ಟೇ ಮುಂದುವರಿದರೂ ಮಾನವನ ಜ್ಞಾನಕ್ಕೆ ಅದು ಸಂವಾದಿಯಲ್ಲ

Ashok Nayak Ashok Nayak Aug 26, 2025 11:53 AM

ಬೆಂಗಳೂರು: ಎಐ ಉಪಕರಣಗಳು ಹೆಚ್ಚು ಸುಧಾರಿತವಾಗಿ ಕೆಲಸದಲ್ಲಿ ವ್ಯಾಪಕವಾಗಿ ಬಳಸ ಲ್ಪಡುತ್ತಿದ್ದರೂ ಭಾರತೀಯ ವೃತ್ತಿಪರರು ದೊಡ್ಡ ನಿರ್ಧಾರ ತೆಗೆದುಕೊಳ್ಳುವ ವಿಚಾರ ಬಂದಾಗ ಮಾನವನ ಜ್ಞಾನಕ್ಕೆ ಯಾವುದೇ ಎಐ ಸಾಟಿಯಾಗಲಾರದು ಎಂದು ನಂಬಿದ್ದಾರೆ. ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್‌ ಇನ್‌ ನ ಹೊಸ ಸಂಶೋಧನೆಯ ಪ್ರಕಾರ, ಭಾರತದ ಶೇ.83 ಮತ್ತು ಬೆಂಗಳೂರಿನ ಶೇ.84ರಷ್ಟು ವೃತ್ತಿಪರರು ನಿರ್ಧಾರ ತೆಗೆದುಕೊಳ್ಳುವಾಗ ಅರಿವು ಹೊಂದಿರುವ ಮತ್ತು ವಿಶ್ವಾಸಾರ್ಹ ಸಹೋದ್ಯೋಗಿಗಳೇ ಎಐಗಿಂತ ಮೇಲು ಎಂದು ನಂಬುತ್ತಾರೆ. ಬೆಂಗಳೂರಿನ ಶೇ.77ರಷ್ಟು ಜನರು ಕೆಲಸದಲ್ಲಿ ನಿರ್ಧಾರ ತೆಗೆದುಕೊಳ್ಳುವ ವೇಗವು ಜಾಸ್ತಿಯಾಗಿದೆ ಎಂದು ಹೇಳಿದ್ದಾರೆ ಮತ್ತು ಶೇ.75ರಷ್ಟು ಜನರು ತಮ್ಮ ಮುಂದಿನ ವೃತ್ತಿ ಪಯಣಕ್ಕೆ ಎಐಯಲ್ಲಿ ಪರಿಣತಿಯನ್ನು ಪಡೆಯುವುದು ಅತ್ಯಗತ್ಯ ಎಂದು ಭಾವಿಸುತ್ತಾರೆ.

ಬೆಂಗಳೂರಿನ 4 ರಲ್ಲಿ 3 ವೃತ್ತಿಪರರು ಎಐಯಲ್ಲಿ ಪರಿಣತಿಯನ್ನು ಹೊಂದುವುದು ಎರಡನೇ ಉದ್ಯೋಗದಂತೆ ಎಂದು ಭಾವಿಸುತ್ತಾರೆ, ಆದರೆ ಎಐ ಕುರಿತು ಆಶಾವಾದಿಗಳಾಗಿದ್ದಾರೆ

ನಿರೀಕ್ಷೆಗಳು ಹೆಚ್ಚುತ್ತಿರುವುದು ಸ್ಪಷ್ಟವಾಗಿವೆ. ಶೇ.70ರಷ್ಟು ಜನರು ಎಐಯನ್ನು ತಕ್ಷಣವೇ ತಿಳಿದುಕೊಳ್ಳಬೇಕೆಂಬ ಒತ್ತಡದಿಂದ ತೊಂದರೆಗೊಳಗಾಗಿರುವುದಾಗಿ ಹೇಳಿದ್ದಾರೆ ಮತ್ತು ಶೇ.57ರಷ್ಟು ಜನರು ತಾವು ಎಐಯನ್ನು ಅದರ ಸಂಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಶೇ.78ರಷ್ಟು ಕಂಪನಿಗಳು ಉದ್ಯೋಗಿಗಳು ಎಐಯನ್ನು ಬಳಸಬೇಕೆಂದು ನಿರೀಕ್ಷಿಸುತ್ತವೆ ಮತ್ತು ಭಾರತದ ಶೇ.64ರಷ್ಟು ಕಾರ್ಯನಿರ್ವಾಹಕರು ಎಐ ಪರಿಣತಿಯನ್ನು ಕಾರ್ಯಕ್ಷಮತೆಯ ವಿಮರ್ಶೆ ಅಥವಾ ನೇಮಕಾತಿಯಲ್ಲಿ ಪರಿಗಣಿಸಲು ಯೋಜಿಸಿದ್ದಾರೆ. ಇದರಿಂದಾಗಿ, ಹೊಸ ಎಐ ಕೌಶಲ್ಯಗಳನ್ನು ಕಲಿಯುವುದು ಬೆಂಗಳೂರಿನ ಶೇ.76ರಷ್ಟು ವೃತ್ತಿಪರರಿಗೆ ಎರಡನೇ ಉದ್ಯೋಗದಂತೆ ಭಾಸವಾಗುತ್ತದೆ. ಆದರೂ, ಶೇ.82ರಷ್ಟು ಜನರು ಎಐ ತಮ್ಮ ದೈನಂದಿನ ಕೆಲಸದ ಜೀವನವನ್ನು ಸುಧಾರಿಸುತ್ತದೆ ಎಂಬ ಆಶಾವಾದವನ್ನು ಹೊಂದಿದ್ದಾರೆ.

ಇದನ್ನೂ ಓದಿ: Tata Motors: ಪಂತ್‌ ನಗರದ ಘಟಕದಲ್ಲಿ ಉದ್ಯೋಗಿ ಗಳ ಸಾರಿಗೆ ವ್ಯವಸ್ಥೆಗಾಗಿ ಸಿದ್ಧಪಡಿಸಿದ ಎಲೆಕ್ಟ್ರಿಕ್ ಬಸ್‌ ಗಳನ್ನು ಅನಾವರಣಗೊಳಿಸಿದ ಟಾಟಾ ಮೋಟಾರ್ಸ್

ಪ್ರಮುಖ ನಿರ್ಧಾರಗಳಲ್ಲಿ ಮಾನವನ ಅರಿವು ಎಐ ಅಲ್ಗಾರಿದಮ್‌ ಗಿಂತ ಮೇಲುಗೈ ಸಾಧಿಸಿದೆ ಭಾರತೀಯ ವೃತ್ತಿಪರರು, ಬೆಂಗಳೂರಿನವರು ಸೇರಿದಂತೆ, ದೈನಂದಿನ ಕಾರ್ಯಗಳನ್ನು ತ್ವರಿತಗೊಳಿ ಸಲು ಎಐಯನ್ನು ಬಳಸುತ್ತಿದ್ದಾರೆಯೇ ಹೊರತು ತೀರ್ಮಾನವನ್ನು ತೆಗೆದುಕೊಳ್ಳಲು ಅಲ್ಲ. ಲಿಂಕ್ಡ್‌ ಇನ್ ಸಂಶೋಧನೆಯ ಪ್ರಕಾರ, ಬೆಂಗಳೂರಿನ ಶೇ.77ರಷ್ಟು ವೃತ್ತಿಪರರು ಎಐಯನ್ನು ಬರವಣಿಗೆ ಮತ್ತು ಕರಡು ತಯಾರಿಕೆಗೆ ಉಪಯುಕ್ತವೆಂದು ಕಾಣುತ್ತಾರೆ, ಆದರೆ ನಿರ್ಧಾರ ತೆಗೆದುಕೊಳ್ಳಲು ಎಐ ಬಳಸುವುದಿಲ್ಲ. ನಿರ್ಧಾರ ತೆಗೆದುಕೊಳ್ಳುವುದು ಸಂಕೀರ್ಣವಾದಾಗ, ಶೇ.81ರಷ್ಟು ಜನರು ತಮ್ಮ ಸಹೋದ್ಯೋಗಿಗಳು ಮತ್ತು ವ್ಯವಸ್ಥಾಪಕರು ತೀರ್ಮಾನವನ್ನು ತ್ವರಿತವಾಗಿ ಮತ್ತು ಆತ್ಮವಿಶ್ವಾಸ ದಿಂದ ತೆಗೆದುಕೊಳ್ಳಲು ಸಹಾಯ ಮಾಡುತ್ತಾರೆ ಎಂದು ಹೇಳಿದ್ದಾರೆ ಮತ್ತು ಭಾರತದಾದ್ಯಂತ ಶೇ.83ರಷ್ಟು ಕಾರ್ಯನಿರ್ವಾಹಕರು ಒಳ್ಳೆಯ ವ್ಯಾಪಾರ ನಿರ್ಧಾರಗಳು ಇನ್ನೂ ಮಾನವರ ತೀರ್ಮಾನದ ಮೇಲೆ ಅವಲಂಬಿತವಾಗಿವೆ ಎಂದು ಒಪ್ಪಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಈ ಆರ್ಥಿಕ ವರ್ಷದಲ್ಲಿ ಲಿಂಕ್ಡ್‌ ಇನ್‌ ನಲ್ಲಿ ಕಾಮೆಂಟ್‌ಗಳು ಶೇ.30ಕ್ಕಿಂತ ಜಾಸ್ತಿಯಾಗಿದೆ, ಏಕೆಂದರೆ ಜನರು ವಿವಿಧ ದೃಷ್ಟಿಕೋನಗಳನ್ನು ತಿಳಿಯಲು ಸಹೋದ್ಯೋಗಿಗಳ ಮೇಲೆ ಅವಲಂಬನೆ ತೋರಿದ್ದಾರೆ.

ಲಿಂಕ್ಡ್‌ ಇನ್ ಕರಿಯರ್ ಎಕ್ಸ್ ಪರ್ಟ್ ಮತ್ತು ಭಾರತದ ಹಿರಿಯ ವ್ಯವಸ್ಥಾಪಕ ಸಂಪಾದಕರಾದ ನಿರಾಜಿತಾ ಬ್ಯಾನರ್ಜೀ ಅವರು, “ಎಐ ಒಂದು ಉತ್ತಮ ಸಹಾಯಕನಾಗಿದೆ, ಆದರೆ ಅದು ಎಲ್ಲಕ್ಕೂ ಆಧಾರವಲ್ಲ. ಎಐ ಕರಡು ತಯಾರಿಸಬಹುದು, ವಿಂಗಡಿಸಬಹುದು ಮತ್ತು ಆಯ್ಕೆಗಳನ್ನು ತ್ವರಿತವಾಗಿ ಒದಗಿಸಬಹುದು, ಆದರೆ ನಿಮ್ಮ ವೃತ್ತಿಜೀವನವು ಇನ್ನೂ ನಿಮ್ಮ ತೀರ್ಮಾನ, ಸಂಬಂಧಗಳು ಮತ್ತು ನಿಮ್ಮ ಶಕ್ತಿಯ ಮೇಲೆ ಅವಲಂಬಿತವಾಗಿದೆ. ಪ್ರಮುಖ ಸಂದರ್ಭಗಳಲ್ಲಿ, ಜನರು ಉಪಕರಣಕ್ಕೆ ಮೊರೆ ಹೋಗುವುದಿಲ್ಲ, ಬದಲಿಗೆ ಅವರು ವಿಶ್ವಾಸಾರ್ಹ ವ್ಯಕ್ತಿಯನ್ನು ಕೇಳುತ್ತಾರೆ. ಆದ್ದರಿಂದ ಅರ್ಥಪೂರ್ಣ ಸಂಬಂಧಗಳನ್ನು ಹೊಂದಿರಿ. ಎಐಯನ್ನು ಬಳಸಿಕೊಂಡು ನೀವು ಮಾತ್ರ ಮಾಡಬಹುದಾದ ಕೆಲಸಕ್ಕೆ ಹೆಚ್ಚು ಸಮಯವನ್ನು ಗಳಿಸಿ. ಎಲ್ಲಾ ಕೆಲಸವನ್ನೂ ನೀವೇ ಮಾಡಲಾಗದಿದ್ದಾಗ, ನಿಮ್ಮ ವಿಶ್ವಾಸಾರ್ಹ ಜನರನ್ನು ಕೇಳಿಕೊಳ್ಳಿ” ಎಂದು ಹೇಳಿದರು.

ಭಾರತೀಯರು ಆನಂದ, ಅಭಿವೃದ್ಧಿ ಮತ್ತು ಭವಿಷ್ಯಕ್ಕಾಗಿ ಎಐಯನ್ನು ಸ್ವಯಂ ಕಲಿಯುತ್ತಿದ್ದಾರೆ

ಹೆಚ್ಚುತ್ತಿರುವ ಒತ್ತಡ ಮತ್ತು ನಿರೀಕ್ಷೆಗಳ ಹೊರತಾಗಿಯೂ, ಬೆಂಗಳೂರಿನ ಶೇ.79ರಷ್ಟು ವೃತ್ತಿಪರರು ಎಐಯೊಂದಿಗೆ ಪ್ರಯೋಗ ಮಾಡುವುದು ಆನಂದದಾಯಕ ಎಂದು ಹೇಳಿದ್ದಾರೆ ಮತ್ತು ಇದನ್ನು ಪ್ರತಿದಿನ ಹೊಸದನ್ನು ಪರೀಕ್ಷಿಸಿ ಕಲಿಯುವ ಒಳ್ಳೆಯ ಅವಕಾಶವೆಂದು ಹೇಳುತ್ತಾರೆ. ಸುಮಾರು ಶೇ.80ರಷ್ಟು ಜನರು ಉಚಿತ ಸಂಪನ್ಮೂಲಗಳೊಂದಿಗೆ ಸ್ವಯಂ ಕಲಿಯುತ್ತಿದ್ದಾರೆ. ಶೇ.69ರಷ್ಟು ಜನರು ಕೋರ್ಸ್‌ ಗಳಿಗೆ ತಮ್ಮ ಜೇಬಿನಿಂದ ಹಣವನ್ನು ಖರ್ಚು ಮಾಡುತ್ತಿದ್ದಾರೆ ಮತ್ತು ಶೇ.82ರಷ್ಟು ಜನರು ಉತ್ತಮ ಉಪಕರಣಗಳು ಮತ್ತು ಕಲಿಕೆಯ ವಿಷಯವನ್ನು ಸಕ್ರಿಯವಾಗಿ ಹುಡುಕುತ್ತಿದ್ದಾರೆ.

ನಿಮ್ಮ ಜಾಲದ ಮೂಲಕ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಲಿಂಕ್ಡ್‌ ಇನ್ ವೃತ್ತಿ ತಜ್ಞರು ನೀಡಿರುವ ಸಲಹೆಗಳು:

ನಿಮಗೆ ತಿಳಿದಿಲ್ಲದ್ದನ್ನು ಮುಕ್ತವಾಗಿ ಒಪ್ಪಿಕೊಳ್ಳಿ

ಎಲ್ಲಾ ಉತ್ತರಗಳನ್ನು ಗೊತ್ತಿಲ್ಲದಿರುವುದು ತಪ್ಪೇನಲ್ಲ. ವಿಶ್ವಾಸಾರ್ಹ ಸಹೋದ್ಯೋಗಿಗಳು ಅಥವಾ ಮಾರ್ಗದರ್ಶಕರನ್ನು ಸಂಪರ್ಕಿಸಿ ಮತ್ತು “ನೀವು ಎಐ ಉಪಕರಣಗಳನ್ನು ಕೆಲಸದಲ್ಲಿ ಸುಲಭವಾಗಿ ಬಳಸಲು ಹೇಗೆ ಒಗ್ಗಿಕೊಂಡಿರಿ?” ಅಥವಾ “ಯಾವ ಸಂಪನ್ಮೂಲಗಳು ನಿಮಗೆ ಹೆಚ್ಚು ಕಲಿಯಲು ಸಹಾಯ ಮಾಡಿದವು?” ಎಂಬಂತಹ ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಿ. ನೀವು ಇನ್ನೂ ಕಲಿಯಲು ಆಸಕ್ತಿ ತೋರುವುದು, ಆ ಬಗ್ಗೆ ಪ್ರಾಮಾಣಿಕವಾಗಿರುವುದರಿಂದ ಹೆಚ್ಚು ನೆರವು ಮತ್ತು ಪ್ರಾಯೋಗಿಕ ಸಲಹೆಗಳು ದೊರೆಯುತ್ತದೆ.

ನಿಮ್ಮ ಕ್ಲೋಸ್ ಸರ್ಕಲ್ ಆಚೆಗಿನ ತಜ್ಞರನ್ನು ಅನುಸರಿಸಿ ಮತ್ತು ಅವರಿಂದ ಕಲಿಯಿರಿ

ಲಿಂಕ್ಡ್‌ ಇನ್ ಮತ್ತು ಅದರಾಚೆಗೆ ನೀವು ಫಾಲೋ ಮಾಡುವವರ ಸಂಖ್ಯೆಯನ್ನು ಹೆಚ್ಚಿಸಿ. ಎಐ ಮತ್ತು ವೃತ್ತಿ ಬೆಳವಣಿಗೆಯ ಕುರಿತು ಸಲಹೆಗಳು ಮತ್ತು ಒಳನೋಟಗಳನ್ನು ಹಂಚಿಕೊಳ್ಳುವ ಕ್ರಿಯೇಟರ್ ಗಳು, ಉದ್ಯಮದ ಮುಖಂಡರು ಮತ್ತು ಸಹೋದ್ಯೋಗಿಗಳನ್ನು ಫಾಲೋ ಮಾಡಿ. ಅರ್ಪಿತ್ ಭಯಾನಿ ಮತ್ತು ಅಂಕುರ್ ವಾರಿಕೂರಂತಹ ಟಾಪ್ ತಜ್ಞರನ್ನು ಅನುಸರಿಸಿ ಅಥವಾ ಎಐ ಹಾಗೂ ನಾಯಕತ್ವದಂತಹ ವಿಷಯಗಳ ಕುರಿತು ಹೆಚ್ಚು ಕಲಿಯಲು ಸ್ಟೀವನ್ ಬಾರ್ಟ್‌ಲೆಟ್ ಮತ್ತು ಗೈ ರಾಜ್‌ರಂತಹ ತಜ್ಞರು ನಡೆಸಿಕೊಡುವ ಲಿಂಕ್ಡ್‌ ಇನ್‌ ನಲ್ಲಿ ಇತ್ತೀಚೆಗೆ ಆರಂಭವಾದ ‘ಶೋಸ್ ಬೈ ಲಿಂಕ್ಡ್‌ ಇನ್’ ಅನ್ನು ವೀಕ್ಷಿಸಿ.

ನಿಮ್ಮ ಕೌಶಲ್ಯವೃದ್ಧಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಿ

ಎಐ ಕೌಶಲ್ಯಗಳನ್ನು ಹೊಂದುವುದು ಒಂಟಿ ಪಯಣವಾಗಿರಬೇಕಿಲ್ಲ, ಆದರೆ ಎಐ ಕಲಿಯುವು ದರಿಂದ ನಿಮ್ಮ ಸ್ವಂತ ಬೆಳವಣಿಗೆಯಲ್ಲಿ ನೀವೇ ಚಾಲಕನ ಸ್ಥಾನದಲ್ಲಿ ಕೂರಬಹುದು. ಬಿಲ್ಡಿಂಗ್ ಕೆರಿಯರ್ ಎಜಿಲಿಟಿ ಆಂಡ್ ರೆಸಿಲಿಯನ್ಸ್ ಇನ್ ದಿ ಏಜ್ ಆಫ್ ಎಐ ಮತ್ತು ಲ್ಯಾಂಡಿಂಗ್ ಎ ಜಾಬ್ ಆಸ್ ಎ ಸ್ಕಿಲ್ಸ್-ಫರ್ಸ್ಟ್ ಕ್ಯಾಂಡಿಡೇಟ್ ನಂತಹ ಉಚಿತ ಲಿಂಕ್ಡ್‌ ಇನ್ ಲರ್ನಿಂಗ್ ಕೋರ್ಸ್‌ ಗಳ ಮೂಲಕ ನಿಮ್ಮ ಬೆಳವಣಿಗೆಯನ್ನು ಗಳಿಸಿ ಮತ್ತು ನಿಮ್ಮ ಸ್ವಂತ ವೇಗದಲ್ಲಿ ಕಲಿಯಿರಿ. ಮತ್ತು ಸೆಪ್ಟೆಂಬರ್ 30 ರಂದು ಲಿಂಕ್ಡ್‌ ಇನ್‌ ನ ಮೊದಲ ಕಾರ್ಯಕ್ರಮವಾದ ಎಐ ಇನ್ ವರ್ಕ್ ಡೇ ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಈ ಕಾರ್ಯಕ್ರಮವು ದೈನಂದಿನ ಕೆಲಸದಲ್ಲಿ ಎಐಯನ್ನು ಬಳಸಲು ಪ್ರಾಯೋಗಿಕ ಸಲಹೆಗಳು ಮತ್ತು ಉಪಕರಣಗಳ ಮಾಹಿತಿ ನೀಡಲಿರುವ ಲೈವ್ ಕಾರ್ಯಕ್ರಮವಾಗಿದೆ. ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.