ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಯುವ ಸಮೂಹಕ್ಕೆ ಬೇಕಾಗಿರುವುದು ನಿಜವಾದ ದಿಕ್ಕು: ದೊಡ್ಡ ಕನಸು ಕಾಣುವ ಧೈರ್ಯ: ಭಾವಿಕಾ ವಾಧ್ವಾನಿ

ದೇಶದ ಉದಯೋನ್ಮುಖ 40 ಉದ್ಯಮಿಗಳಲ್ಲಿ ಒಬ್ಬರಾಗಿರುವ ಅವರು, ಹಲವು ಯಶಸ್ವಿ ಸಂಸ್ಥೆ ಗಳನ್ನು ನಿರ್ಮಿಸಿದ್ದಾರೆ. ಕ್ರಿಸ್ತು ಜಯಂತಿ ಕಾಲೇಜಿನ ಸಭಾಂಗಣದಲ್ಲಿ ನೂರಾರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಉದ್ಯಮಶೀಲ ಪ್ರಯಾಣದಲ್ಲಿ ಏಳು ಬೀಳು ಸಹಜ. ಹೊಸತನ, ಸಹನೆ ಹಾಗೂ ಸೃಜನಶೀಲತೆಯನ್ನು ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ

ಯುವ ಸಮೂಹಕ್ಕೆ ಬೇಕಾಗಿರುವುದು ನಿಜವಾದ ದಿಕ್ಕು

Ashok Nayak Ashok Nayak Aug 26, 2025 10:51 AM

ಬೆಂಗಳೂರು: ದೇಶದ ಯುವ ಸಮೂಹ ನೈಜ ಪರಿವರ್ತನೆಕಾರರು. ಅವರಿಗೆ ಬೇಕಾಗಿರುವುದು ಸರಿಯಾದ ದಿಕ್ಕು, ಅವಕಾಶಗಳು ಮತ್ತು ದೊಡ್ಡ ಕನಸು ಕಾಣುವ ಧೈರ್ಯ. ಇಂದೇ ನಾವು ವಿದ್ಯಾರ್ಥಿಗಳನ್ನು ಸಶಕ್ತಗೊಳಿಸಿದರೆ ನಾಳೆಯೇ ಉದ್ಯಮ ಸ್ಥಾಪಿಸಬಹುದು ಎಂದು ಬಿ.ಎ.ಎಲ್ ಕಾರ್ಪೋರೇಟ್ ಸರ್ವೀಸ್ ಲಿಮಿಟೆಡ್ ನ ಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಭಾವಿಕಾ ವಾಧ್ವಾನಿ ಹೇಳಿದ್ದಾರೆ.

ದೇಶದ ಉದಯೋನ್ಮುಖ 40 ಉದ್ಯಮಿಗಳಲ್ಲಿ ಒಬ್ಬರಾಗಿರುವ ಅವರು, ಹಲವು ಯಶಸ್ವಿ ಸಂಸ್ಥೆ ಗಳನ್ನು ನಿರ್ಮಿಸಿದ್ದಾರೆ. ಕ್ರಿಸ್ತು ಜಯಂತಿ ಕಾಲೇಜಿನ ಸಭಾಂಗಣದಲ್ಲಿ ನೂರಾರು ವಿದ್ಯಾರ್ಥಿ ಗಳನ್ನುದ್ದೇಶಿಸಿ ಮಾತನಾಡಿದ ಅವರು, ಉದ್ಯಮಶೀಲ ಪ್ರಯಾಣದಲ್ಲಿ ಏಳು ಬೀಳು ಸಹಜ. ಹೊಸತನ, ಸಹನೆ ಹಾಗೂ ಸೃಜನಶೀಲತೆಯನ್ನು ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

vadh

ತಮ್ಮ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. “ಭಾವಿಕಾ ವಾಧ್ವಾನಿ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ಸ್” ಮೂಲಕ ವಿದ್ಯಾರ್ಥಿಗಳಿಂದ ಬಂದ ಅತ್ಯುತ್ತಮ ವ್ಯವಹಾರ ಆಲೋಚನೆಗಳನ್ನು ಗುರುತಿಸಿ ಗೌರವಿಸಲಾಗುವುದು. ವಿಜೇತರಿಗೆ ತಮ್ಮ ವ್ಯವಹಾರ ಆರಂಭಿಸಲು ಮಾರ್ಗದರ್ಶನ ಹಾಗೂ ಸಾಧ್ಯವಿರುವ ಹೂಡಿಕೆ ಪಡೆಯಲು ನೆರವಾಗುತ್ತೇನೆ. ಜೊತೆಗೆ ವಿಶೇಷ ಪ್ರೋತ್ಸಾಹ ಸೂಚಕವಾಗಿ, 200 ವಿದ್ಯಾರ್ಥಿಗಳಿಗೆ ಒಂದು ವರ್ಷದ ಉಚಿತ ವ್ಯವಹಾರ ಸಲಹೆ ನೀಡುವುದಾಗಿ ಪ್ರಕಟಿಸಿದರು.

ಈ ಯೋಜನೆ ಹೊಸ ಆಲೋಚನೆಗಳನ್ನು ಬೆಳೆಸಲು ವಿದ್ಯಾರ್ಥಿಗಳು ತಮ್ಮ ಕಲ್ಪನೆಗಳನ್ನು ಶಾಶ್ವತ ಉದ್ಯಮಗಳಾಗಿ ಪರಿವರ್ತಿಸಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ತಮ್ಮ ಸಲಹಾ ಯೋಜನೆಗಳನ್ನು ನೇರವಾಗಿ ತಮ್ಮ ಜಾಲತಾಣದಲ್ಲಿ ನೋಂದಣಿ ಮಾಡಬಹುದು: www.bhavikawadhwani.com ಎಂದರು.