ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಿಧಿ ಆಸೆಗಾಗಿ ದತ್ತು ಮಗು ಬಲಿ ಕೊಡಲು ಸಿದ್ಧರಾಗಿದ್ರಾ ಮುಸ್ಲಿಂ ದಂಪತಿ? 8 ತಿಂಗಳ ಕಂದಮ್ಮನ ರಕ್ಷಣೆ

ನಿಧಿ ಆಸೆಗಾಗಿ ಮಗುವನ್ನು ಪೋಷಕರು ಮಗುವನ್ನೇ ಬಲಿ ಕೊಡಲು ಹೋಗಿರುವ ಘಟನೆ ನಡೆದ ಆರೋಪ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಜನತಾ ಕಾಲೋನಿಯಲ್ಲಿ ಕೇಳಿ ಬಂದಿದೆ. ಸೂಲಿಬೆಲೆ ಗ್ರಾಮದ ಜನತಾ ಕಾಲೋನಿಯಲ್ಲಿರುವ ಸೈಯದ್ ಇಮ್ರಾನ್ ಎಂಬುವವರ ಮನೆಯಲ್ಲಿ ಈ ಭಯಾನಕ ಕೃತ್ಯ ನಡೆಯುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.

ನಿಧಿ ಆಸೆಗಾಗಿ ದತ್ತು ಮಗು ಬಲಿ ಕೊಡಲು ಸಿದ್ಧರಾಗಿದ್ರಾ ಮುಸ್ಲಿಂ ದಂಪತಿ?

ನಿಧಿ ಆಸೆಗೆ ಮಗು ಬಲಿ ಕೊಡಲು ನಡೆಸಿದ ಸಿದ್ಧತೆ -

Vishakha Bhat
Vishakha Bhat Jan 4, 2026 10:59 AM

ಹೊಸಕೋಟೆ: ನಿಧಿ ಆಸೆಗಾಗಿ ಮಗುವನ್ನು ಪೋಷಕರು ಮಗುವನ್ನೇ ಬಲಿ ಕೊಡಲು ಹೋಗಿರುವ ಘಟನೆ ನಡೆದ ಆರೋಪ ಬೆಂಗಳೂರು ಗ್ರಾಮಾಂತರ ಜಿಲ್ಲೆಯ (Treasure Sacrifice) ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಜನತಾ ಕಾಲೋನಿಯಲ್ಲಿ ಕೇಳಿ ಬಂದಿದೆ. ನಿಧಿ ಸಿಗುತ್ತದೆ ಎನ್ನುವ ಅಂಧ ನಂಬಿಕೆಯಲ್ಲಿ ದತ್ತು ಪಡೆದ 8 ತಿಂಗಳ ಗಂಡು ಮಗುವನ್ನು ಬಲಿ ಕೊಡುವ ತಯಾರಿ ನಡೆಸಲಾಗಿತ್ತು ಎಂದು ತಿಳಿದು ಬಂದಿದೆ. ನಿಖರ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ರಕ್ಷಿಸಿದ್ದಾರೆ.

ಸೂಲಿಬೆಲೆ ಗ್ರಾಮದ ಜನತಾ ಕಾಲೋನಿಯಲ್ಲಿರುವ ಸೈಯದ್ ಇಮ್ರಾನ್ ಎಂಬುವವರ ಮನೆಯಲ್ಲಿ ಈ ಭಯಾನಕ ಕೃತ್ಯ ನಡೆಯುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಮನೆ ಒಳಗೆ ಗುಂಡಿ ತೆಗೆದು, ಪೂಜಾ ಸಾಮಗ್ರಿಗಳನ್ನು ಇಟ್ಟು, ಬಲಿ ಪೂಜೆಗೆ ಸಿದ್ಧತೆ ನಡೆಸಲಾಗಿತ್ತು. ಹುಣ್ಣಿಮೆಗೆ ಮಗುವನ್ನು ಬಲಿಕೊಡುತ್ತಾರೆ ಎನ್ನವ ಅಪರಿಚರ ಕರೆಯ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಮನೆ ಪರಿಶೀಲನೆ ಮಾಡಿದ್ದಾರೆ. ಈ ಮೇಳೆ ಮನೆಯ ಕೋಣೆಯೊಂದರಲ್ಲಿ ಗುಂಡಿ ತೆಗೆದು ಪೂಜೆ ನಡೆಸುತ್ತಿರೋದು ಬೆಳಕಿಗೆ ಬಂದಿದೆ. ದೂರು ಸಂಬಂಧಿತ ಮನೆಯೊಳಗೆ ಪರಿಶೀಲನೆ ನಡೆಸಿದಾಗ, ಒಂದು ಕೋಣೆಯಲ್ಲಿ ಗುಂಡಿ ತೆಗೆದು ಪೂಜೆ ಮಾಡಿರುವುದು ಕಂಡುಬಂದಿದೆ. ಪೂಜಾ ಸಾಮಗ್ರಿಗಳು, ಧೂಪ, ಹೂವುಗಳು ಮತ್ತು ಇತರೆ ವಸ್ತುಗಳು ಪತ್ತೆಯಾಗಿದ್ದು, ಬಲಿ ಪೂಜೆ ನಡೆಸಲು ಸಿದ್ಧತೆ ನಡೆದಿರುವ ಶಂಕೆ ಬಲಪಡಿಸಿದೆ. ಅಧಿಕಾರಿಗಳು 8 ತಿಂಗಳ ಗಂಡು ಮಗುವನ್ನು ರಕ್ಷಿಸಿದ್ದು, ಶಿಶು ಕೇಂದ್ರಕ್ಕೆ ಅದನ್ನು ರವಾನಿಸಲಾಗಿದೆ.

8 ತಿಂಗಳ ಹಿಂದೆ ಕೂಲಿ ಕಾರ್ಮಿಕರಿಂದ ಸೈಯದ್ ಇಮ್ರಾನ್ ಮಗುವನ್ನ ದತ್ತು ಪಡೆದುಕೊಂಡಿದ್ದರು. ದತ್ತು ನಂತರ ತಮ್ಮ ಹೆಸರಿನಲ್ಲೆ ನಕಲಿ ಜನನ ಪ್ರಮಾಣ ಪತ್ರವನ್ನು ಸೈಯದ್ ಇಮ್ರಾನ್ ಮತ್ತು ಆತನ ಪತ್ನಿ ಮಾಡಿಸಿಕೊಂಡಿದ್ದರು. ಮಗು ದತ್ತು ಪಡೆದು ಅಗ್ರಿಮೆಂಟ್ ಸಹ ಮಾಡಿಕೊಂಡಿರುವುದಾಗಿ ದಾಳಿ ವೇಳೆ ದಂಪತಿ ಅಧಿಕಾರಿಗಳಿಗೆ ಪತ್ರ ನೀಡಿದ್ದಾರೆ. ಆದ್ರೆ ಕಾನೂನುಬದ್ದವಾಗಿ ದತ್ತು ಪಡೆದಿಲ್ಲ ಎಂದು ಮಗುವನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಘೋರ ಘಟನೆ; ಶೌಚಾಲಯಕ್ಕೆ ನಡೆದು ಹೋಗುವಾಗಲೇ ಹೆರಿಗೆ; ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಬಲಿ

ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಪ್ರಸ್ತುತ ವೈದ್ಯಕೀಯ ಪರಿಶೀಲನೆಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಅಪಾಯ ಸಂಭವಿಸದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.