ದಸರಾ ಹಬ್ಬದ ಹಿನ್ನೆಲೆಯಲ್ಲಿ ಹತ್ತು ಸಾಮಾನ್ಯ ಡಿಜಿಟಲ್ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸಿ, ಸುರಕ್ಷಿತ ಆನ್ಲೈನ್ ವಹಿವಾಟಿಗೆ ಸಲಹೆ ನೀಡುವ ಅಭಿಯಾನ
ದಸರಾ ಹಬ್ಬದ ಸಂದರ್ಭದಲ್ಲಿ ಆರಂಭವಾಗುವ ಈ ಅಭಿಯಾನವು ರಾವಣನ ಹತ್ತು ತಲೆಗಳಿಂದ ಪ್ರೇರಣೆ ಪಡೆದಿದೆ. ಇದರ ಮೂಲಕ ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ನಡೆಯುವ ಹತ್ತು ಬಗೆಯ ಡಿಜಿಟಲ್ ವಂಚನೆಗಳು ಮತ್ತು ಅವುಗಳಿಂದ ದೂರವಿರಲು ಅನುಸರಿಸಬೇಕಾದ ಮುನ್ನೆಚ್ಚರಿಕೆಗಳನ್ನು ಪರಿಚಯಿಸಲಾಗುತ್ತದೆ. ಸೈಬರ್ ಸುರಕ್ಷತಾ ಜಾಗೃತಿ ಮೂಡಿಸುವ ಅಂಗವಾಗಿ, ನವಿಯ ಸಾಮಾಜಿಕ ಜಾಲತಾಣಗಳಲ್ಲಿ ಕಿರು ವಿಡಿಯೊಗಳ ಮೂಲಕ ಈ ಅಭಿಯಾನ ಜನರನ್ನು ತಲುಪಲಿದೆ.
-
ಬೆಂಗಳೂರು: ಹಬ್ಬದ ಸಂಭ್ರಮದ ನಡುವೆಯೇ ಡಿಜಿಟಲ್ ವಂಚನೆಗಳ ಬಗ್ಗೆ ಜಾಗೃತಿ ಮೂಡಿ ಸುವ ಉದ್ದೇಶದಿಂದ ನವಿ ಸಂಸ್ಥೆಯು ‘ನೋ ‘ಟೆನ್’ಷನ್ ದಿಸ್ ಫೆಸ್ಟಿವ್ ಸೀಸನ್’ ಎಂಬ ಅಭಿಯಾನ ಆರಂಭಿಸಿದೆ. ಹಬ್ಬದ ಸಮಯದಲ್ಲಿ ಆನ್ಲೈನ್ ಖರೀದಿ, ಆಕರ್ಷಕ ಕೊಡುಗೆಗಳು ಮತ್ತು ಡಿಜಿಟಲ್ ಹಣಕಾಸು ವಹಿವಾಟುಗಳು ಹೆಚ್ಚಾಗುವುದರಿಂದ, ವಂಚಕರು ಅನುಸರಿಸುವ ತಂತ್ರಗಳನ್ನು ಗುರುತಿಸಿ ಸುರಕ್ಷಿತವಾಗಿರಲು ಈ ಅಭಿಯಾನ ನೆರವಾಗಲಿದೆ.
ದಸರಾ ಹಬ್ಬದ ಸಂದರ್ಭದಲ್ಲಿ ಆರಂಭವಾಗುವ ಈ ಅಭಿಯಾನವು ರಾವಣನ ಹತ್ತು ತಲೆಗಳಿಂದ ಪ್ರೇರಣೆ ಪಡೆದಿದೆ. ಇದರ ಮೂಲಕ ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ನಡೆಯುವ ಹತ್ತು ಬಗೆಯ ಡಿಜಿಟಲ್ ವಂಚನೆಗಳು ಮತ್ತು ಅವುಗಳಿಂದ ದೂರವಿರಲು ಅನುಸರಿಸಬೇಕಾದ ಮುನ್ನೆಚ್ಚರಿಕೆಗಳನ್ನು ಪರಿಚಯಿಸಲಾಗುತ್ತದೆ. ಸೈಬರ್ ಸುರಕ್ಷತಾ ಜಾಗೃತಿ ಮೂಡಿಸುವ ಅಂಗವಾಗಿ, ನವಿಯ ಸಾಮಾಜಿಕ ಜಾಲತಾಣಗಳಲ್ಲಿ ಕಿರು ವಿಡಿಯೊಗಳ ಮೂಲಕ ಈ ಅಭಿಯಾನ ಜನರನ್ನು ತಲುಪಲಿದೆ.
ಇದನ್ನೂ ಓದಿ: Navi Limited: ನವಿ ಟೆಕ್ನಾಲಜಿಸ್ ಇನ್ಮುಂದೆ ನವಿ ಲಿಮಿಟೆಡ್ !
ನಕಲಿ ಡೆಲಿವರಿ ಸಂದೇಶಗಳು, ಮೋಸದ ಆನ್ಲೈನ್ ಶಾಪಿಂಗ್ ತಾಣಗಳು, ನಕಲಿ ಕ್ಯಾಶ್ಬ್ಯಾಕ್ ಕೊಡುಗೆಗಳು, ಕ್ಯೂಆರ್ ಕೋಡ್ ಮೂಲಕ ವಂಚನೆ, ಇತರರ ಹೆಸರಿನಲ್ಲಿ ಸೋಗು ಹಾಕಿ ವಂಚಿಸುವುದು ಮತ್ತು ನಕಲಿ ನಗದು ಕೊಡುಗೆಗಳಂತಹ ಅಪಾಯಗಳ ಬಗ್ಗೆ ಅಭಿಯಾನದಲ್ಲಿ ವಿವರಿಸಲಾಗುತ್ತದೆ.
ಜತೆಗೆ, ಡಿಜಿಟಲ್ ಸುರಕ್ಷತೆ ಹೆಚ್ಚಿಸಲು ಬಹುಹಂತದ ದೃಢೀಕರಣ ವ್ಯವಸ್ಥೆಯನ್ನು ಸಕ್ರಿಯಗೊಳಿಸು ವುದು, ಹಣಕಾಸು ಆ್ಯಪ್ಗಳನ್ನು ಕಾಲಕಾಲಕ್ಕೆ ನವೀಕರಿಸುವುದು, ಆ್ಯಪ್ಗಳಿಗೆ ನೀಡಿರುವ ಅನುಮತಿಗಳನ್ನು ಪರಿಶೀಲಿಸುವುದು ಮತ್ತು ವಹಿವಾಟಿನ ಸೂಚನೆಗಳನ್ನು ಸಕ್ರಿಯಗೊಳಿಸು ವಂತಹ ಸರಳ ಕ್ರಮಗಳನ್ನು ತಿಳಿಸಲಾಗುತ್ತದೆ.
‘ಸ್ಕ್ಯಾಮ್ ಆರ್ ಸೇಫ್?’ ಎಂಬ ಸರಣಿಯಲ್ಲಿ ತಜ್ಞರು ನಿತ್ಯದ ಜೀವನದಲ್ಲಿ ಎದುರಾಗಬಹುದಾದ ಸಂದರ್ಭಗಳನ್ನು ವಿಶ್ಲೇಷಿಸಿ, ಸಂಭಾವ್ಯ ವಂಚನೆಗಳನ್ನು ಗುರುತಿಸುವುದು ಮತ್ತು ಅವುಗಳಿಂದ ಸುರಕ್ಷಿತವಾಗಿರುವುದರ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಹಬ್ಬದ ಸಂಭ್ರಮದ ನಡುವೆಯೂ ಡಿಜಿಟಲ್ ಸುರಕ್ಷತೆಗೆ ಆದ್ಯತೆ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ. ಹಬ್ಬವನ್ನು ಸಂಭ್ರಮದಿಂದ ಆಚರಿಸಿ, ಹಣ ಪಾವತಿಸುವ ಮುನ್ನ ಪರಿಶೀಲಿಸಿ ಮತ್ತು ಡಿಜಿಟಲ್ ವಂಚನೆಗಳ ಬಗ್ಗೆ ಸದಾ ಎಚ್ಚರದಿಂದಿರಿ ಎಂಬುದು ನವಿಯ ಸಂದೇಶವಾಗಿದೆ.