ಬೆಂಗಳೂರು: ಆಕಾಶಾ ಏರ್ ತನ್ನ ಇನ್-ಫ್ಲೈಟ್ ಡೈನಿಂಗ್ ಸೇವೆ Café Akasa ಅಡಿಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ವಿಶೇಷ ಊಪಹಾರವನ್ನು ಅನ್ನು ಘೋಷಿಸಿದೆ.
ಕಿರಿಯ ಪ್ರಯಾಣಿಕರ ಕಲ್ಪನಾಶಕ್ತಿಯಿಂದ ಪ್ರೇರಿತವಾಗಿ, ಎಲ್ಲ ವಯಸ್ಸಿನ ಪ್ರಯಾಣಿಕ ರನ್ನೂ ಆನಂದಿಸುವಂತೆ ವಿಶೇಷವಾಗಿ ತಯಾರಿಸಲಾದ ಈ ಮೀಲಿನಲ್ಲಿ ವೆಜ್ ಕ್ವೆಸಡಿ ಲ್ಲಾಸ್, ಸಿನಮನ್ ರೋಲ್, ಚಾಕೊಲೇಟ್ ಮಾರ್ಷ್ಮಲ್ಲೋ ಡಿಸರ್ಟ್ ಮತ್ತು ಪ್ರಯಾಣಿಕರ ಆಯ್ಕೆಯ ಪಾನೀಯವನ್ನು ಒಳಗೊಂಡಿದೆ. 2025ರ ನವೆಂಬರ್ 1ರಿಂದ 30ರವರೆಗೆ, ಅಕಾಶಾ ಏರ್‌ನ ಸಂಪೂರ್ಣ ಜಾಲದಲ್ಲಿ ಈ ಮೀಲನ್ನು ಮದೆ ಮುಂಚೆಯೇ www.akasaair.com ಅಥವಾ ಮೊಬೈಲ್ ಆಪ್‌ನಲ್ಲಿ ಪ್ರೀ-ಬುಕ್ ಮಾಡಬಹುದು.
ಇದನ್ನೂ ಓದಿ: Bangalore News: ಪರಿಸರ ಸ್ನೇಹಿ ಕಡಲೆಕಾಯಿ ಪರಿಷೆ ಅಚರಣೆಗೆ ಉಚಿತ 50 ಸಾವಿರ ಕಾಗದ ಕೈಚೀಲ ವಿತರಿಸಿದ ಬಿಎಂಎಸ್ ಕಾಲೇಜು
ರುಚಿ ಮತ್ತು ಮನರಂಜನೆಯ ಸಂಯೋಜನೆಯಾದ Café Akasa ಯ Children’s Day Special Meal, ಬಾಲ್ಯದ ನಿರ್ದೋಷತೆ, ಆನಂದ ಮತ್ತು ಅದ್ಭುತವನ್ನು ಸಂಭ್ರಮಿಸುತ್ತದೆ. ಪ್ರಯಾಣಿಕರಿಗೆ ತಮ್ಮೊಳಗಿನ ಮಗುವನ್ನು ನೆನಪಿಸಿಕೊಂಡು, ಸರಳ ಸಂತೋಷಗಳನ್ನು ರುಚಿಸುವಂತೆ ಪ್ರೇರೇಪಿಸುತ್ತದೆ.
2022ರ ಆಗಸ್ಟ್‌ನಲ್ಲಿ ಸೇವೆ ಪ್ರಾರಂಭಿಸಿದ ನಂತರ, ಅಕಾಶಾ ಏರ್ ಮಕರ ಸಂಕ್ರಾಂತಿ, ವ್ಯಾಲೆಂಟೈನ್ಸ್ ಡೇ, ಹೋಳಿ, ಈದ್, ಮದರ್ಸ್ ಡೇ, ಅಂತಾರಾಷ್ಟ್ರೀಯ ಯೋಗ ದಿನ, ಮಳೆಗಾಲ, ನವರೋಜ್, ಓಣಂ, ಗಣೇಶ ಚತುರ್ಥಿ, ದಸರಾ, ದೀಪಾವಳಿ, ಮಕ್ಕಳ ದಿನ ಮತ್ತು ಕ್ರಿಸ್‌ಮಸ್ ಸೇರಿದಂತೆ ವಿವಿಧ ಹಬ್ಬಗಳಿಗೆ ತಕ್ಕಂತೆ ಪ್ರಾದೇಶಿಕ ವೈಶಿಷ್ಟ್ಯತೆಗಳನ್ನು ಪ್ರತಿಬಿಂಬಿಸುವ ವಿಶೇಷ ಮೀಲ್ಗಳನ್ನು ಪರಿಚಯಿಸುತ್ತ ಬಂದಿದೆ. ವಿಹಾರಿಕರು ಆಕಾಶ ದಲ್ಲೇ ತಮ್ಮ ಪ್ರೀತಿಪಾತ್ರರ ಜನ್ಮದಿನವನ್ನು ಆಚರಿಸಲು, ನಿಯಮಿತ ಮೆನುಗಳಲ್ಲಿ ಕೇಕ್ ಗಳನ್ನೂ ಮುಂಚಿತವಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.
ಪುನರಾವರ್ತನೆಯಾಗುವ Café Akasa ಯ ಮೆನು, ಗೌರ್ಮೆ ಮೀಲ್ಗಳು, ಸ್ನ್ಯಾಕ್ಸ್‌ಗಳು ಮತ್ತು ತಾಜಾ ಪಾನೀಯಗಳನ್ನು ಒಳಗೊಂಡಂತೆ 45ಕ್ಕೂ ಹೆಚ್ಚು ಆಯ್ಕೆಗಳೊಂದಿಗೆ, ವಿಭಿನ್ನ ಆಹಾರ ಮತ್ತು ರುಚಿ ಆಸಕ್ತಿಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಪ್ರಖ್ಯಾತ ಭಾರತೀಯ ಶೆಫ್ಗಳು ತಯಾರಿಸುವ ಫ್ಯೂಷನ್ ಮೀಲ್ಗಳು, ಪ್ರಾದೇಶಿಕ ಸ್ಪರ್ಶದ ಅಪೆಟೈಸರ್‌ಗಳು ಮತ್ತು ರುಚಿಕರ ಡಿಸರ್ಟ್‌ಗಳು ಇದರ ವಿಶೇಷತೆ.