Bangalore News: ಪರಿಸರ ಸ್ನೇಹಿ ಕಡಲೆಕಾಯಿ ಪರಿಷೆ ಅಚರಣೆಗೆ ಉಚಿತ 50 ಸಾವಿರ ಕಾಗದ ಕೈಚೀಲ ವಿತರಿಸಿದ ಬಿಎಂಎಸ್ ಕಾಲೇಜು
ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಬೇಕು ಪರಿಸರ ಉಳಿಸಬೇಕು ಎಂದು ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮರುಬಳಕೆ ಕಾಗದಗಳನ್ನು ಸಂಗ್ರಹ ಮಾಡಿ 50 ಸಾವಿರ ಕಾಗದದ ಕೈ ಚೀಲಗಳನ್ನು ತಯಾರಿಸಿ, ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆಯಲ್ಲಿ ಮಳಿಗೆ ಹಾಕುವವರಿಗೆ ಉಚಿತವಾಗಿ ವಿತರಿಸಲಾಯಿತು.
-
ಬೆಂಗಳೂರು: ಬಸವನಗುಡಿಯಲ್ಲಿ ಪಾರಂಪರಿಕ ಶತಮಾನಗಳ ಇತಿಹಾಸವಿರುವ ಕಡಲೆ ಕಾಯಿ ಪರಿಷೆ ಐದು ದಿನಗಳ ಕಾಲ ಜರುಗಲಿದೆ. ರಾಜ್ಯ ಮತ್ತು ಹೊರ ರಾಜ್ಯಗಳಿಂದ ಆಗಮಿಸುವ ರೈತರು ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರ ಮಾಡುತ್ತಾರೆ ಪ್ಲಾಸ್ಟಿಕ್ ಕೈ ಚೀಲಗಳ ಬಳದಂತೆ ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆ ಮಾಡಲು ಬಿ.ಎಂ.ಎಸ್. ಇಂಜಿನಿಯರಿಂಗ್ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾಲೇಜು ಅವರಣದಲ್ಲಿ ಪೇಪರ್ ಗಳನ್ನು ಸಂಗ್ರಹಸಿ 50 ಸಾವಿರ ಕಾಗದದ ಕೈ ಚೀಲಗಳನ್ನು ತಯಾರಿಸಿ ಮಳಿಗೆ ಹಾಕುವ ರೈತರಿಗೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಾಂಶುಪಾಲರಾದ ಭೀಮ್ ಶಾ ಆರ್ಯ ಪರಿಸರ ಉಳಿದರೆ ಮಾನವ, ಪ್ರಾಣಿ ಸಂಕುಲನ ಉಳಿಯುತ್ತದೆ ಪರಿಸರ ಹಾಳಾದರೆ ಇಡಿ ಪ್ರಪಂಚವೇ ನಾಶವಾಗುತ್ತದೆ.
ಏಕಬಳಕೆ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಳಾಗುತ್ತದೆ ಅದೇ ಬೇಗನೆ ಕರಗುವುದಿಲ್ಲ, ಇದ್ದರಿಂದ ಭೂಮಿ ಫಲವತ್ತತೆ ನಶಿಸಿ ಹೋಗುತ್ತದೆ.
ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಬೇಕು ಪರಿಸರ ಉಳಿಸಬೇಕು ಎಂದು ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮರುಬಳಕೆ ಕಾಗದಗಳನ್ನು ಸಂಗ್ರಹ ಮಾಡಿ 50 ಸಾವಿರ ಕಾಗದದ ಕೈ ಚೀಲಗಳನ್ನು ತಯಾರಿಸಿ, ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆಯಲ್ಲಿ ಮಳಿಗೆ ಹಾಕುವವರಿಗೆ ಉಚಿತವಾಗಿ ವಿತರಿಸಲಾಯಿತು.
ಪರಿಸರ ಸ್ನೇಹಿ ಕಡಲೆಕಾಯಿ ಪರಿಷೆ ಅಚರಣೆ ನಮ್ಮ ಆದ್ಯತೆ. ನಮ್ಮ ಕಾಲೇಜಿನ ಎನ್.ಎಸ್. ಎಸ್. ಮತ್ತು ಬಿ.ಎಂ.ಎಸ್.ಇ.ಸಿ.ಯ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಾವು ಪರಿಸರ ಉಳಿಸಿದರೆ ಮುಂದಿನ ಪೀಳಿಗೆ ಆರೋಗ್ಯವಂತರಾಗಿ ಬಾಳಬಹುದು. ಎಲ್ಲರು ಒಟ್ಟಾಗಿ ಪರಿಸರ ಉಳಿಸೋಣ ಎಂದು ಹೇಳಿದರು.