ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ABB India: ಇಂಗಾಲದ ಹೊರಸೂಸುವಿಕೆ ಕಡಿತಗೊಳಿಸಲು ಎಬಿಬಿ ಇಂಡಿಯಾ ತನ್ನ ನಗರದೊಳಗಿನ ವಾಣಿಜ್ಯ ಲಾಜಿಸ್ಟಿಕ್ಸ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ನಿಯೋಜಿಸಿದೆ

ಸರಕು ಸಾಗಾಣಿಕಾ ಕಾರ್ಯಾಚರಣೆಗಳಲ್ಲಿ ಇವಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಎಬಿಬಿ ಇಂಡಿಯಾ ಸಂಸ್ಥೆಯು ಸ್ಕೋಪ್-3 ಇಂಗಾಲ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಈ ಬದಲಾವಣೆಯು ಕಡಿಮೆ ಇಂಗಾಲದ, ಸುಸ್ಥಿರ ಸಮಾಜ ಸೃಷ್ಟಿಸುವ ಕಂಪನಿಯ ವಿಶಾಲ ಉದ್ದೇಶಕ್ಕೆ ಪೂರಕವಾಗಿ ಮೂಡಿ ಬಂದಿದೆ ಮತ್ತು ಪರಿಸರ ಸಂರಕ್ಷಣೆಗೆ ಎಬಿಬಿ ಸಂಸ್ಥೆಯ ನಿರಂತರ ಬದ್ಧತೆಯನ್ನು ಸಾರಿದೆ

ಇಂಗಾಲದ ಹೊರಸೂಸುವಿಕೆ ಕಡಿತ: ಎಲೆಕ್ಟ್ರಿಕ್ ವಾಹನಗಳ ನಿಯೋಜನೆ

Profile Ashok Nayak Apr 26, 2025 2:32 PM

ನೆಲಮಂಗಲ: ತನ್ನ ಜಾಗತಿಕ ಇಂಗಾಲ ತಟಸ್ಥ ಉದ್ದೇಶದ ಭಾಗವಾಗಿ ಎಬಿಬಿ ಇಂಡಿಯಾ ಸಂಸ್ಥೆ ಯು ಸುಸ್ಥಿರತೆ ಸಾಧಿಸಲು ಹಲವಾರು ಗಮನಾರ್ಹ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಅದರ ಭಾಗವಾಗಿಯೇ ನಗರದೊಳಗಿನ ವಾಣಿಜ್ಯ ಸರಕು ಸಾಗಾಣಿಕಾ ವಿಭಾಗಕ್ಕೆ ಎಲೆಕ್ಟ್ರಿಕ್ ವಾಹನಗಳನ್ನು ನಿಯೋಜಿಸಿದೆ. ಸಿದ್ಧಪಡಿಸಿದ ಸರಕುಗಳು ಮತ್ತು ಕಚ್ಚಾ ವಸ್ತುಗಳನ್ನು ಕಾರ್ಖಾನೆ ಮತ್ತು ವಿತರಣಾ ಕೇಂದ್ರದ ಮಧ್ಯೆ ಸಾಗಾಣಿಕೆ ನಡೆಸಲು ಎಲೆಕ್ಟ್ರಿಫಿಕೇಶನ್ (ಇಎಲ್) ಮತ್ತು ಮೋಷನ್ (ಎಂಓ) ವಾಣಿಜ್ಯ ಕಾರ್ಯಾಚರಣೆ ತಂಡಗಳು ಇವಿ ಬಳಕೆ ಮಾಡುತ್ತಿವೆ ಮತ್ತು ಬೆಂಗಳೂರಿನಲ್ಲಿ ಕೊನೆಯ ಹಂತದ ವಿತರಣೆಯಲ್ಲಿ ಇವಿಗಳ ಬಳಕೆ ಆರಂಭಗೊಂಡಿದೆ.

ಇದನ್ನೂ ಓದಿ: Bangalore News: ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಶಿಶುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯರು!

ಈ ಯೋಜನೆಯನ್ನು ನೆಲಮಂಗಲದಲ್ಲಿನ ಸ್ಮಾರ್ಟ್ ಪವರ್ ಕಾರ್ಖಾನೆ ಆವರಣದಲ್ಲಿ ಮತ್ತು ಹಂಚಿಪುರದ ವಿತರಣಾ ಕೇಂದ್ರದಲ್ಲಿ ಅಧಿಕೃತವಾಗಿ ಆರಂಭಿಸಲಾಯಿತು. ಈ ಕಾರ್ಯಕ್ರಮದಲ್ಲಿ ಇಎಲ್ ಕಮರ್ಷಿಯಲ್ ಲೀಡ್ ಕಿರಣ್ ದತ್, ಎಂಯು ಮ್ಯಾನೇಜರ್ ಸಾಜು ಎಸ್ಆರ್, ಕ್ಲಸ್ಟರ್ ಮ್ಯಾನೇಜರ್ ಜೋತಿ ಪ್ರಕಾಶ್, ಇ ಎಲ್ ಎಸ್ ಪಿ ಹಬ್ ಮ್ಯಾನೇಜರ್ ಸೆರ್ಜಿಯೋ ಸಿಲ್ವೆಸ್ಟ್ರಿ, ಕಮರ್ಷಿಯಲ್ ಆಪರೇಷನ್ಸ್ ಮ್ಯಾನೇಜರ್ ಸೆರ್ಜಿಯೋ ಬಟ್ಟಿಚೆ ಮತ್ತು ಕಂದ ಡಿಬಿ ಮುಂತಾದ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಇದೇ ವೇಳೆ, ಪೀಣ್ಯದಲ್ಲಿ ಎಬಿಬಿ ಇಂಡಿಯಾ ಸಂಸ್ಥೆಯು ತನ್ನ ಆಂತರಿಕ ಲಾಜಿಸ್ಟಿಕ್ಸ್‌ ಗಾಗಿ ಮೊದಲ ಎಲೆಕ್ಟ್ರಿಕ್ ಟ್ರಕ್ ಅನ್ನು ಬಳಸಲಾರಂಭಿಸಿದ್ದು, ಒಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. ಇದರ ಉದ್ಘಾಟನಾ ಸಂದರ್ಭದಲ್ಲಿ ಎಬಿಬಿ ಡ್ರೈವ್ ಪ್ರಾಡಕ್ಟ್ಸ್ ನ ಪ್ರೆಸಿಡೆಂಟ್ ಟುಯೊಮೊ ಹೊಯ್ಸ್ನಿ ಯೆಮಿ ಮತ್ತು ಲೋಕಲ್ ಡಿವಿಷನ್ ಮ್ಯಾನೇಜರ್ ಎಆರ್ ಮಧುಸೂದನ್ ಉಪಸ್ಥಿತರಿದ್ದರು.

ಸರಕು ಸಾಗಾಣಿಕಾ ಕಾರ್ಯಾಚರಣೆಗಳಲ್ಲಿ ಇವಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಎಬಿಬಿ ಇಂಡಿಯಾ ಸಂಸ್ಥೆಯು ಸ್ಕೋಪ್-3 ಇಂಗಾಲ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಈ ಬದಲಾವಣೆಯು ಕಡಿಮೆ ಇಂಗಾಲದ, ಸುಸ್ಥಿರ ಸಮಾಜ ಸೃಷ್ಟಿಸುವ ಕಂಪನಿಯ ವಿಶಾಲ ಉದ್ದೇಶಕ್ಕೆ ಪೂರಕವಾಗಿ ಮೂಡಿ ಬಂದಿದೆ ಮತ್ತು ಪರಿಸರ ಸಂರಕ್ಷಣೆಗೆ ಎಬಿಬಿ ಸಂಸ್ಥೆಯ ನಿರಂತರ ಬದ್ಧತೆಯನ್ನು ಸಾರಿದೆ. ಈ ಯೋಜನೆ ಮೂಲಕ ಎಬಿಬಿ ಇಂಡಿಯಾ ಸಂಸ್ಥೆಯು ಸುಸ್ಥಿರ ಕೈಗಾರಿಕಾ ಅಭ್ಯಾಸಗಳಲ್ಲಿ ಮಾದರಿಯಾಗಿ ಮುನ್ನಡೆಯುತ್ತಿದೆ. ಜೊತೆಗೆ ವ್ಯಾಪಾರ ಕಾರ್ಯಾ ಚರಣೆಗಳನ್ನು ಜಾಗತಿಕ ಹವಾಮಾನ ಗುರಿಗಳೊಂದಿಗೆ ಸಂಯೋಜಿಸುವ ಮೂಲಕ ಎಲ್ಲರಿಗೂ ಸ್ವಚ್ಛ, ಹಸಿರು ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಸಾಗುತ್ತಿದೆ.