ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Blackmail case: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್, ಸ್ನೇಹಿತನ ವಿರುದ್ಧ ಕಿಪ್ಪಿ ಕೀರ್ತಿ ದೂರು

Kippi Keerthi: ಕಿಪ್ಪಿ ಕೀರ್ತಿ ಎಂದೇ ಕರೆಸಿಕೊಳ್ಳುವ ಈ ಕೀರ್ತಿ ತನ್ನ ಕಿರಿಕಿರಿ ಮೂಡಿಸುವ ಶೈಲಿಯ ಮಾತುಗಾರಿಕೆಯಿಂದಲೇ ಅಪಾರ ಅಭಿಮಾನಿಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಗಳಿಸಿದ್ದಾಳೆ. ಇದೀಗ ಅವಳ ಗೆಳೆತನ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದೆ. ಗೆಳೆಯ ಆಕೆಯ ಖಾಸಗಿ ಫೋಟೋಗಳನ್ನಿಟ್ಟುಕೊಂಡು ಬ್ಲ್ಯಾಕ್ಮೇಲ್‌ ಮಾಡಿದ್ದಾನೆ ಎಂದು ದೂರಿದ್ದಾಳೆ.

ಬ್ಲ್ಯಾಕ್‌ಮೇಲ್ ಮಾಡಿದ ಸ್ನೇಹಿತನ ವಿರುದ್ಧ ಕಿಪ್ಪಿ ಕೀರ್ತಿ ದೂರು

-

ಹರೀಶ್‌ ಕೇರ ಹರೀಶ್‌ ಕೇರ Sep 26, 2025 9:04 AM

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ (Social media) ತನ್ನ ತಲೆಹರಟೆಯಿಂದ ಜನಪ್ರಿಯಳಾಗಿರುವ ಕಿಪ್ಪಿ ಕೀರ್ತಿ (kippi keerthi) ತನ್ನ ಪ್ರಿಯತಮನ ವಿರುದ್ಧ ದೂರು ದಾಖಲಿಸಿದ್ದಾಳೆ. ತನ್ನ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ (Blackmail case) ಮಾಡಲಾಗುತ್ತಿದೆ ಎಂದು ಆರೋಪಿಸಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಿಯತಮ ಮುತ್ತು ಹಾಗೂ ಆತನ ಸ್ನೇಹಿತ ದಚ್ಚು ಎಂಬಾತನ ವಿರುದ್ಧ ಕಿಪ್ಪಿ ಕೀರ್ತಿ ದೂರು ದಾಖಲಿಸಿದ್ದಾಳೆ.

ಸದ್ಯ ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಕಿಪ್ಪಿ ಕೀರ್ತಿ ಹಾಗೂ ಸ್ನೇಹಿತರನ್ನು ಠಾಣೆಗೆ ಕರೆಸಿದ ಪೊಲೀಸರು ಮತ್ತೆ ಈ ರೀತಿ ಮಾಡಬೇಡಿ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ. ಕಿಪ್ಪಿ ಕೀರ್ತಿ ಎಂದೇ ಕರೆಸಿಕೊಳ್ಳುವ ಈ ಕೀರ್ತಿ ತನ್ನ ಕಿರಿಕಿರಿ ಮೂಡಿಸುವ ಶೈಲಿಯ ಮಾತುಗಾರಿಕೆಯಿಂದಲೇ ಅಪಾರ ಅಭಿಮಾನಿಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಗಳಿಸಿದ್ದಾಳೆ.