ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೈಗಾರಿಕಾ ಯಂತ್ರಗಳಿಗಾಗಿ ರೇರ್ ಅರ್ಥ್ ಫ್ರೀ ಐಇ5 ಮೋಟಾರ್‌ ಗಳ ಬಿಡುಗಡೆ ಮಾಡಿದ ABB India

ಕರ್ನಾಟಕದಲ್ಲಿ ABB Motion ನ ಎಲ್‌ವಿ ಮೋಟಾರ್‌ ಗಳು ರಾಜ್ಯದ ಕೈಗಾರಿಕಾ ವಲಯಕ್ಕೆ ಆಧಾರ ವಾಗಿರುವ ಮತ್ತು ರಫ್ತು ವಿಭಾಗದ ಅವಿಭಾಜ್ಯ ಅಂಗವಾಗಿರುವ ಉಕ್ಕು, ಸಕ್ಕರೆ, ಆಹಾರ ಮತ್ತು ಪಾನೀಯ, ಹಾಗೂ ಜವಳಿ ಉದ್ಯಮಗಳಂತಹ ಪ್ರಮುಖ ಕೈಗಾರಿಕೆಗಳಿಗೆ ಶಕ್ತಿ ನೀಡುತ್ತಿವೆ. ಕರ್ನಾಟಕವು ಭಾರತದ ಅಗ್ರಗಣ್ಯ ಸಕ್ಕರೆ ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿದ್ದು, ಪ್ರಮುಖ ಜವಳಿ ರಫ್ತುದಾರ ರಾಜ್ಯವಾಗಿದೆ ಮತ್ತು ಉಕ್ಕು ಹಾಗೂ ಆಹಾರ ಮತ್ತು ಪಾನೀಯ ಸಂಸ್ಕರಣೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದೆ.

ರೇರ್ ಅರ್ಥ್ ಫ್ರೀ ಐಇ5 ಮೋಟಾರ್‌ ಗಳ ಬಿಡುಗಡೆ ಮಾಡಿದ ABB India

-

Ashok Nayak Ashok Nayak Sep 26, 2025 11:13 AM

ಬೆಂಗಳೂರು: ABB India ಬೆಂಗಳೂರಿನ ಪೀಣ್ಯದಲ್ಲಿರುವ ಮತ್ತು ಫರೀದಾಬಾದ್ ನಲ್ಲಿರುವ ತನ್ನ ಲೋ ವೋಲ್ಟೇಜ್ (ಎಲ್ ವಿ) ಮೋಟಾರ್ಸ್ ಮ್ಯಾನುಫ್ಯಾಕ್ಚರಿಂಗ್ ಕೇಂದ್ರವನ್ನು ವಿಸ್ತರಿಸಲು ಮತ್ತು ಆಧುನೀಕರಿಸಲು ರೂ.140 ಕೋಟಿಗಿಂತಲೂ ಹೆಚ್ಚಿನ ಹೂಡಿಕೆಯನ್ನು ಮಾಡುತ್ತಿರುವುದಾಗಿ ಘೋಷಿಸಿದೆ. ಇದೇ ವೇಳೆ ಕಂಪನಿಯು ಅಲ್ಟ್ರಾ ಪ್ರೀಮಿಯಂ ಎಫಿಶಿಯೆನ್ಸಿ ಮೋಟಾರ್ಸ್ ಅನ್ನೂ ಬಿಡುಗಡೆ ಮಾಡಿದೆ. ಸಂಸ್ಥೆಯ ಈ ದೊಡ್ಡ ಪ್ರಮಾಣದ ಹೂಡಿಕೆಯು ಭಾರತವನ್ನು ಜಾಗತಿಕ ಆವಿಷ್ಕಾರ ಮತ್ತು ತಾಂತ್ರಿಕ ಶ್ರೇಷ್ಠತೆಯ ಕೇಂದ್ರವಾಗಿ ಮತ್ತಷ್ಟು ಗಟ್ಟಿಗೊಳಿಸಲಿದೆ.

ಕರ್ನಾಟಕದಲ್ಲಿ ABB Motion ನ ಎಲ್‌ವಿ ಮೋಟಾರ್‌ ಗಳು ರಾಜ್ಯದ ಕೈಗಾರಿಕಾ ವಲಯಕ್ಕೆ ಆಧಾರವಾಗಿರುವ ಮತ್ತು ರಫ್ತು ವಿಭಾಗದ ಅವಿಭಾಜ್ಯ ಅಂಗವಾಗಿರುವ ಉಕ್ಕು, ಸಕ್ಕರೆ, ಆಹಾರ ಮತ್ತು ಪಾನೀಯ, ಹಾಗೂ ಜವಳಿ ಉದ್ಯಮಗಳಂತಹ ಪ್ರಮುಖ ಕೈಗಾರಿಕೆಗಳಿಗೆ ಶಕ್ತಿ ನೀಡುತ್ತಿವೆ. ಕರ್ನಾಟಕವು ಭಾರತದ ಅಗ್ರಗಣ್ಯ ಸಕ್ಕರೆ ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿದ್ದು, ಪ್ರಮುಖ ಜವಳಿ ರಫ್ತುದಾರ ರಾಜ್ಯವಾಗಿದೆ ಮತ್ತು ಉಕ್ಕು ಹಾಗೂ ಆಹಾರ ಮತ್ತು ಪಾನೀಯ ಸಂಸ್ಕರಣೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದೆ. ರಾಜ್ಯದಲ್ಲಿ ABBಯ ಬಲವಾದ ಉತ್ಪಾದನಾ ವಿಭಾಗದಿಂದ ನಮ್ಮ ಎಲ್‌ವಿ ಮೋಟಾರ್‌ ಗಳು ಸ್ಥಳೀಯ ಕೈಗಾರಿಕಾ ಅಗತ್ಯಗಳಿಗೆ ತಕ್ಕಂತೆ ವಿಶ್ವಾಸಾರ್ಹ, ಗಟ್ಟಿಮುಟ್ಟಾದ ಮತ್ತು ವಿದ್ಯುತ್ ದಕ್ಷ ಕಾರ್ಯಕ್ಷಮತೆಯನ್ನು ಒದಗಿಸುತ್ತವೆ. ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು, ಕಾರ್ಯಾಚರಣೆಯ ಸಮಯವನ್ನು ಸುಧಾರಿಸಲು ಮತ್ತು ಕಾರ್ಯಾಚರಣಾ ವೆಚ್ಚಗಳನ್ನು ಕನಿಷ್ಠಗೊಳಿಸಲು ಸಹಾಯ ಮಾಡುವ ಮೂಲಕ, ABB ಕರ್ನಾಟಕದ ಕೈಗಾರಿಕಾ ಕ್ಷೇತ್ರದ ಸ್ಪರ್ಧಾತ್ಮಕತೆಯನ್ನು ಬಲಪಡಿಸುತ್ತಿದೆ ಮತ್ತು ಸುಸ್ಥಿರತೆ ಹಾಗೂ ಶುದ್ಧವಾದ ಬೆಳವಣಿಗೆ ಸಾಧಿಸಲು ರಾಜ್ಯಕ್ಕೆ ಬೆಂಬಲಿಸುತ್ತಿದೆ.

ಇದನ್ನೂ ಓದಿ: ABB India: ಇಂಗಾಲದ ಹೊರಸೂಸುವಿಕೆ ಕಡಿತಗೊಳಿಸಲು ಎಬಿಬಿ ಇಂಡಿಯಾ ತನ್ನ ನಗರದೊಳಗಿನ ವಾಣಿಜ್ಯ ಲಾಜಿಸ್ಟಿಕ್ಸ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ನಿಯೋಜಿಸಿದೆ

ಈ ಕುರಿತು ಮಾತನಾಡಿರುವ ABBಯ ಐಇಸಿ ಲೋ ವೋಲ್ಟೇಜ್ ಮೋಟಾರ್ಸ್ ಅಧ್ಯಕ್ಷ ಸ್ಟೀಫನ್ ಫ್ಲೋಕ್ ಅವರು, “ನಮ್ಮ ಹೂಡಿಕೆಯು ಕೇವಲ ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆ ಮಾತ್ರ ಗಮನ ಹರಿಸುತ್ತಿಲ್ಲ, ಇದು ಭಾರತವನ್ನು ಪ್ರಮುಖ ಜಾಗತಿಕ ಉತ್ಪಾದನಾ ಕೇಂದ್ರವಾಗಿ ರೂಪಿಸುವ ನಮ್ಮ ದೀರ್ಘಕಾಲೀನ ದೃಷ್ಟಿಕೋನಕ್ಕೆ ಪೂರಕವಾಗಿ ಮೂಡಿ ಬಂದಿದೆ. ವಿದ್ಯುತ್- ದಕ್ಷ ಮೋಟಾರ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಜೊತೆಗೆ ನಾವು ಗ್ರಾಹಕರಿಗೆ ಹೆಚ್ಚು ದಕ್ಷ ಮತ್ತು ಪರಿಸರ ಸ್ನೇಹಿ ಉತ್ಪನ್ನಳನ್ನು ರೂಪಿಸುತ್ತಿದ್ದೇವೆ” ಎಂದು ಹೇಳಿದರು.

ABB ಯ ಐಇ5 ಅಲ್ಟ್ರಾ ಪ್ರೀಮಿಯಂ ಎಫಿಶಿಯೆನ್ಸಿ ಮೋಟಾರ್ಸ್ ಬಿಡುಗಡೆಯು ಕೈಗಾರಿಕಾ ವಿದ್ಯುತ್ ದಕ್ಷತೆ ಮತ್ತು ಸುಸ್ಥಿರತೆ ಪಾಲಿಸುವ ಸಂಸ್ಥೆಯ ಬದ್ಧತೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. 45 ಕೆಡಬ್ಲ್ಯೂ ಯಿಂದ 100 ಕೆಡಬ್ಲ್ಯೂ ವರೆಗಿನ ಎನರ್ಜಿ ರೇಟಿಂಗ್‌ ಗಳೊಂದಿಗೆ, ಇದು ಭಾರತದ ಮೊದಲ ಐಇ5 ಮೋಟಾರ್ ರೇಂಜ್ ಆಗಿದ್ದು, ಸಾಬೀತಾದ ಇಂಡಕ್ಷನ್ ಮೋಟಾರ್ ತಂತ್ರಜ್ಞಾನದ ಮೇಲೆ ನಿರ್ಮಿತವಾಗಿದೆ. ವಿಶೇಷವೆಂದರೆ ರೇರ್ ಅರ್ಥ್ ಮೆಟಲ್ ಗಳಿಂದ ಮುಕ್ತವಾಗಿದೆ ಮತ್ತು ಅತ್ಯಂತ ಒತ್ತಡದ ಕೈಗಾರಿಕಾ ಪರಿಸರಗಳಲ್ಲಿಯೂ ಉನ್ನತ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಭಾರತೀಯ ಕಾರ್ಯಾಚರಣೆಯ ಪರಿಸ್ಥಿತಿಗಳಿಗೆ ಕಸ್ಟಮ್- ಎಂಜಿನಿಯರ್ ಮಾಡಲಾಗಿರುವ ಈ ಮೋಟಾರ್‌ ಗಳು ಡೈರೆಕ್ಟ್-ಆನ್-ಲೈನ್ (ಡಿಓಎಲ್) ಮತ್ತು ವೇರಿಯೇಬಲ್ ಫ್ರೀಕ್ವೆನ್ಸಿ ಡ್ರೈವ್ (ವಿ ಎಫ್ ಡಿ) ಎರಡರಲ್ಲೂ ಸುಗಮವಾಗಿ ಕಾರ್ಯನಿರ್ವಹಿಸುತ್ತವೆ. ಇದು ಲೋಹ, ಸಿಮೆಂಟ್, ಜವಳಿ, ಔಷಧ, ಆಹಾರ ಮತ್ತು ಪಾನೀಯ ಮತ್ತು ಕಾಗದದಂತಹ ಕೈಗಾರಿಕೆಗಳಿಗೆ ಆದರ್ಶವಾಗಿದೆ.

ಐಇ3 ಮೋಟಾರ್‌ ಗಳಿಗೆ ಹೋಲಿಸಿದರೆ ಶೇ.40ವರೆಗೆ ಕಡಿಮೆ ವಿದ್ಯುತ್ ನಷ್ಟದೊಂದಿಗೆ, ಇವು ತ್ವರಿತ ಆರ್ ಓ ಐ, ಕಡಿಮೆ ಮಾಲೀಕತ್ವ ವೆಚ್ಚ ಮತ್ತು ದೀರ್ಘಾವಧಿಯ ಕಾರ್ಯಾಚರಣೆಯನ್ನು ಒದಗಿಸುತ್ತವೆ.

ಈ ಕುರಿತು ABB Indiaದ ಮೋಷನ್ ಬಿಜಿನೆಸ್ ಮತ್ತು ಐಇಸಿ ಲೋ ವೋಲ್ಟೇಜ್ ಮೋಟಾರ್ಸ್ ಪ್ರೆಸಿಡೆಂಟ್ ಸಂಜೀವ್ ಅರೋರಾ ಅವರು, “ಈ ಮೋಟಾರ್‌ ಗಳು ರೇರ್ ಅರ್ಥ್ ಮೆಟಲ್ ಗಳನ್ನು ಅವಲಂಬಿಸದೆ, ಸಾಬೀತಾದ ಇಂಡಕ್ಷನ್ ತಂತ್ರಜ್ಞಾನದ ವಿಶ್ವಾಸಾರ್ಹತೆಯನ್ನು ಅಲ್ಟ್ರಾ-ಪ್ರೀಮಿಯಂ ಎಫಿಶಿಯೆನ್ಸಿ ಜೊತೆಗೆ ಸಂಯೋಜಿಸುತ್ತವೆ. ಈ ಹೆಜ್ಜೆಯು ಭಾರತೀಯ ಕೈಗಾರಿಕೆಗಳಿಗೆ ಸ್ಥಳೀಯ ಪರಿಸ್ಥಿತಿಗಳಿಗೆ ತಕ್ಕಂತೆ ನಿರ್ಮಿತವಾದ ಸುಸ್ಥಿರ, ಉನ್ನತ-ಕಾರ್ಯ ಕ್ಷಮತೆಯ ಉತ್ಪನ್ನಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಮತ್ತು ರಾಷ್ಟ್ರದ ಕೈಗಾರಿಕಾ ಡಿಕಾರ್ಬನೈಸೇಷನ್ ಕಡೆಗಿನ ಗಮನವನ್ನು ತೋರಿಸುತ್ತದೆ” ಎಂದು ಹೇಳಿದರು.

ABB ಯ ಹೊಸ ಉತ್ಪನ್ನ ಬಿಡುಗಡೆ ಮತ್ತು ಹೂಡಿಕೆಯು ಭಾರತದಲ್ಲಿ ಅದರ 75 ವರ್ಷಗಳ ಪರಂಪರೆಯನ್ನು ಮತ್ತಷ್ಟು ಬಲಪಡಿಸುತ್ತದೆ, ವಿದ್ಯುತ್ ದಕ್ಷತೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ ಮತ್ತು ತಾಂತ್ರಿಕ ಶ್ರೇಷ್ಠತೆ ಮತ್ತು ಸುಸ್ಥಿರ ಬೆಳವಣಿಗೆಗೆ ಅದರ ಬದ್ಧತೆಯನ್ನು ಸಾರುತ್ತದೆ.

ಬೆಂಗಳೂರು ಮತ್ತು ಫರಿದಾಬಾದ್‌ ನಲ್ಲಿ ಮೋಟಾರ್‌ ತಯಾರಿಕಾ ಘಟಕ ವಿಸ್ತರಣೆಗೆ ರೂ.140 ಕೋಟಿ ಹೂಡಿಕೆ

  • ABB India ಭಾರತದಲ್ಲಿ ತನ್ನ ಲೋ ವೋಲ್ಟೇಜ್ (LV) ಮೋಟಾರ್ಸ್ ಮ್ಯಾನುಫ್ಯಾಕ್ಚರಿಂಗ್ ಘಟಕವನ್ನು ವಿಸ್ತರಿಸಲು ಮತ್ತು ಆಧುನೀಕರಿಸಲು ರೂ.140 ಕೋಟಿಗಿಂತ ಹೆಚ್ಚಿನ ಹೂಡಿಕೆಯನ್ನು ಮಾಡುತ್ತಿದೆ
  • ಸಾಬೀತಾದ ಇಂಡಕ್ಷನ್ ತಂತ್ರಜ್ಞಾನವನ್ನು ಆಧರಿಸಿದ, ರೇರ್ ಅರ್ಥ್ ಮೆಟಲ್ಸ್ ಅವಲಂಬಿಸದ, ಸ್ಥಳೀಯವಾಗಿ ತಯಾರಿಸಿದ ಭಾರತದ ಮೊದಲ ಅಲ್ಟ್ರಾ ಪ್ರೀಮಿಯಂ ಎಫಿಶಿಯೆನ್ಸಿ ಐಇ5 ಮೋಟಾರ್ ರೇಂಜ್
  • ಐಇ3 ಮೋಟಾರ್‌ ಗಳಿಗೆ ಹೋಲಿಸಿದರೆ ಶೇ.40ರವರೆಗೆ ಕಡಿಮೆ ವಿದ್ಯುತ್ ನಷ್ಟ, ತ್ವರಿತ ಆರ್ ಓ ಐ, ಕಡಿಮೆ ಮಾಲೀಕತ್ವದ ವೆಚ್ಚ ಮತ್ತು ದೀರ್ಘಾವಧಿಯ ಕಾರ್ಯಾಚರಣೆಗೆ ಅನುವು ಮಾಡಿಕೊಡುತ್ತದೆ