ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Adigas Yatra: ಜ.18ಕ್ಕೆ ಅಡಿಗಾಸ್‌ ಯಾತ್ರಾ 32ನೇ ವಾರ್ಷಿಕೋತ್ಸವ; ಹೊಸ ಲಾಂಛನ, ವೆಬ್‌ ಸೈಟ್‌, ಯೂಟ್ಯೂಬ್‌ ಲೋಕಾರ್ಪಣೆ

ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಜ.18ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಅಡಿಗಾಸ್ ಯಾತ್ರಾ ಸಂಸ್ಥೆಯ 32ನೇ ವಾರ್ಷಿಕೋತ್ಸವ ಆಯೋಜಿಸಲಾಗಿದೆ. ಕಳೆದ 31 ವರ್ಷಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರಿಗೆ ದೇಶ-ವಿದೇಶಗಳ ಪ್ರವಾಸಿ ತಾಣಗಳಿಗೆ ಆರಾಮದಾಯಕ, ಸುವ್ಯವಸ್ಥಿತ ಪ್ರವಾಸ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿರುವ ಅಡಿಗಾಸ್‌ ಯಾತ್ರಾಗೆ ಈಗ 32ನೇ ವರ್ಷದ ಸಂಭ್ರಮ.

Adigas Yatra: ಜ.18ಕ್ಕೆ ಅಡಿಗಾಸ್‌ ಯಾತ್ರಾ 32ನೇ ವಾರ್ಷಿಕೋತ್ಸವ

ಅಡಿಗಾಸ್‌ ಯಾತ್ರಾ 32ನೇ ವಾರ್ಷಿಕೋತ್ಸವ -

Prabhakara R
Prabhakara R Jan 16, 2026 7:53 PM

ಬೆಂಗಳೂರು: ಪ್ರವಾಸೋದ್ಯಮ ವಲಯದಲ್ಲಿ ಮುಂಚೂಣಿಯಲ್ಲಿರುವ ಅಡಿಗಾಸ್‌ ಯಾತ್ರಾ ಸಂಸ್ಥೆಯ 32ನೇ ಅದ್ಧೂರಿ ವಾರ್ಷಿಕೋತ್ಸವ (Adigas Yatra's 32nd Anniversary) ಇದೇ ಜನವರಿ 18ಕ್ಕೆ ನಗರದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ನೂತನ ಲಾಂಛನ ಅನಾವರಣ, ಹೊಸ ಅಡಿಗಾಸ್‌ ಯಾತ್ರಾ ನ್ಯೂಸ್‌ ವೆಬ್‌ಸೈಟ್‌ ಮತ್ತು ನೂತನ ಯೂಟ್ಯೂಬ್‌ ಚಾನೆಲ್‌ ಲೋಕಾರ್ಪಣೆಯಾಗಲಿದೆ.

ಬೆಂಗಳೂರಿನ ಕೆಂಪೇಗೌಡ ರಸ್ತೆಯ ಮೈಸೂರು ಬ್ಯಾಂಕ್‌ ಸಮೀಪದ ಎಫ್‌ಕೆಸಿಸಿಐ ಆಡಿಟೋರಿಯಂನಲ್ಲಿ ಬೆಳಗ್ಗೆ 10ರಿಂದ ಅಡಿಗಾಸ್‌ ಯಾತ್ರಾ ವಾರ್ಷಿಕೋತ್ಸವ ಕಾರ್ಯಕ್ರಮ ಆರಂಭವಾಗಲಿದೆ.

ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಹರಿಹರದ ಹರಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿ, ಕರ್ನಾಟಕ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿಶ್ವವಾಣಿ ಮತ್ತು ಪ್ರವಾಸಿ ಪ್ರಪಂಚದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್‌, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದ (ಕೆಎಸ್‌ಟಿಡಿಸಿ) ಅಧ್ಯಕ್ಷ ಎಂ.ಶ್ರೀನಿವಾಸ್‌, ಖ್ಯಾತ ಅಭಿನೇತ್ರಿ ಅದಿತಿ ಪ್ರಭುದೇವ, ಕರ್ನಾಟಕ ರಾಜ್ಯ ಟ್ರಾವೆಲ್‌ ಆಪರೇಟರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಅವರು ಭಾಗವಹಿಸಲಿದ್ದಾರೆ ಎಂದು ಅಡಿಗಾಸ್‌ ಯಾತ್ರಾದ ಸಂಸ್ಥಾಪಕ ಕೆ.ನಾಗರಾಜ ಅಡಿಗ ಹಾಗೂ ನಿರ್ದೇಶಕಿ ಆಶಾ ಎನ್.‌ ಅಡಿಗ ಅವರು ತಿಳಿಸಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಸಂಗೀತ, ಮನರಂಜನೆಯ ಕಾರ್ಯಕ್ರಮಗಳು ನಡೆಯಲಿವೆ.



ಕಳೆದ 31 ವರ್ಷಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರಿಗೆ ದೇಶ-ವಿದೇಶಗಳ ಪ್ರವಾಸಿ ತಾಣಗಳಿಗೆ ಆರಾಮದಾಯಕ, ಸುವ್ಯವಸ್ಥಿತ ಪ್ರವಾಸ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿರುವ ಅಡಿಗಾಸ್‌ ಯಾತ್ರಾಗೆ ಈಗ 32ನೇ ವರ್ಷದ ಸಂಭ್ರಮ. ಹೀಗಾಗಿ ಅದ್ಧೂರಿಯಾಗಿ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ.