ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಕಾಸಾ ಏರ್ ತನ್ನ ನಾಲ್ಕನೇ ವಾರ್ಷಿಕೋತ್ಸವದಂದು 'ಆಕಾಸಾ ಎಲಿವೇಟ್' ಲಾಯಲ್ಟಿ ಪ್ರೋಗ್ರಾಂ ಪ್ರಾರಂಭ

ಗ್ರಾಹಕರಿಗೆ ಅತ್ಯಂತ ಮುಖ್ಯವಾದ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ನಿರ್ಮಿಸಲಾದ 'ಆಕಾಸಾ ಎಲಿವೇಟ್', ಸದಸ್ಯರಿಗೆ ಅರ್ಹ ವಿಮಾನ ಪ್ರಯಾಣಗಳು ಹಾಗೂ ಪೂರಕ ಉತ್ಪನ್ನಗಳು ಮತ್ತು ಸೇವೆಗಳ ಮೇಲೆ 'ಎಲಿವೇಟ್ ಪಾಯಿಂಟ್‌ಗಳನ್ನು' ಗಳಿಸಲು, ವೇಗದ ಮತ್ತು ಸುಲಭವಾದ ಟೈರ್ (ಹಂತ) ಪ್ರಗತಿಯ ಮೂಲಕ ವಿಶೇಷ ಪ್ರಯೋಜನಗಳನ್ನು ಪಡೆಯಲು ಮತ್ತು ಭಾರತದ ಅತ್ಯಂತ ಲಾಭದಾ ಯಕ ವಿಮಾನ ಪ್ರಯಾಣದ ಅನುಭವವನ್ನು ಆನಂದಿಸಲು ಸೌಲಭ್ಯ ನೀಡುತ್ತದೆ.

ಆಕಾಸಾ ಏರ್'ನಿಂದ 'ಆಕಾಸಾ ಎಲಿವೇಟ್' ಲಾಯಲ್ಟಿ ಪ್ರೋಗ್ರಾಂ ಪ್ರಾರಂಭ

-

Profile
Ashok Nayak Aug 12, 2026 5:06 PM

ಬೆಂಗಳೂರು: ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆ 'ಆಕಾಸಾ ಏರ್', ಪ್ರತಿಯೊಂದು ಪ್ರಯಾಣವನ್ನು ಇನ್ನಷ್ಟು ಪ್ರತಿಫಲದಾಯಕವಾಗಿಸಲು ವಿನ್ಯಾಸ ಗೊಳಿಸಲಾದ ತನ್ನ ಲಾಯಲ್ಟಿ ಪ್ರೋಗ್ರಾಂ 'ಆಕಾಸಾ ಎಲಿವೇಟ್' ಅನ್ನು ಪ್ರಾರಂಭಿಸಿದೆ.

ಗ್ರಾಹಕರಿಗೆ ಅತ್ಯಂತ ಮುಖ್ಯವಾದ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ನಿರ್ಮಿಸಲಾದ 'ಆಕಾಸಾ ಎಲಿವೇಟ್', ಸದಸ್ಯರಿಗೆ ಅರ್ಹ ವಿಮಾನ ಪ್ರಯಾಣಗಳು ಹಾಗೂ ಪೂರಕ ಉತ್ಪನ್ನಗಳು ಮತ್ತು ಸೇವೆಗಳ ಮೇಲೆ 'ಎಲಿವೇಟ್ ಪಾಯಿಂಟ್‌ಗಳನ್ನು' ಗಳಿಸಲು, ವೇಗದ ಮತ್ತು ಸುಲಭವಾದ ಟೈರ್ (ಹಂತ) ಪ್ರಗತಿಯ ಮೂಲಕ ವಿಶೇಷ ಪ್ರಯೋಜನಗಳನ್ನು ಪಡೆಯಲು ಮತ್ತು ಭಾರತದ ಅತ್ಯಂತ ಲಾಭದಾಯಕ ವಿಮಾನ ಪ್ರಯಾಣದ ಅನುಭವವನ್ನು ಆನಂದಿಸಲು ಸೌಲಭ್ಯ ನೀಡುತ್ತದೆ.

ಇದನ್ನೂ ಓದಿ: Bengaluru's Second Airport: ಕನಕಪುರದಲ್ಲಿ ಬೇಡ, ತುಮಕೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಿ: ಸಿಎಂ ಡಿಕೆಶಿಗೆ ವಿಜಯೇಂದ್ರ ಆಗ್ರಹ

ಆಗಸ್ಟ್ 2022 ರಲ್ಲಿ ತನ್ನ ಸೇವೆ ಪ್ರಾರಂಭಿಸಿದಾಗಿನಿಂದ, ಆಕಾಸಾ ಏರ್ ಹಲವು ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿದೆ. ಇದು ಸುಮಾರು 3 ಕೋಟಿ (30 ಮಿಲಿಯನ್) ಪ್ರಯಾಣಿಕರಿಗೆ ಸೇವೆ ಸಲ್ಲಿಸಿದ್ದು, ಭಾರತೀಯ ವಿಮಾನಯಾನ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಏರ್‌ಲೈನ್ ಎನಿಸಿಕೊಂಡಿದೆ. ಅಲ್ಲದೆ, ಇಷ್ಟೊಂದು ಕಡಿಮೆ ಅವಧಿಯಲ್ಲಿ 40 ಕ್ಕೂ ಹೆಚ್ಚು ವಿಮಾನಗಳನ್ನು ತನ್ನ ಸೇವೆಗೆ ಸೇರ್ಪಡೆಗೊಳಿಸಿದ ಭಾರತದ ಮೊದಲ ಏರ್‌ಲೈನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಾಧನೆಗಳು ಆಕಾಸಾ ಸಂಸ್ಥೆಯ ಬಿಸಿನೆಸ್ ಮಾಡೆಲ್‌ನ ಸಾಮರ್ಥ್ಯವನ್ನು ಮತ್ತು ಗ್ರಾಹಕ-ಕೇಂದ್ರಿತ ನಾವೀನ್ಯತೆ ಹಾಗೂ ಸುಸ್ಥಿರ ಬೆಳವಣಿಗೆಯ ಮೇಲಿನ ಅದರ ಅಚಲವಾದ ಗಮನವನ್ನು ಎತ್ತಿ ತೋರಿಸುತ್ತವೆ.

ಆಕಾಸಾ ಏರ್‌ನ ಬೆಳವಣಿಗೆಯ ಪ್ರಯಾಣದ ಮೂಲಾಧಾರವೆಂದರೆ ಶೀಘ್ರವಾಗಿ ವಿಸ್ತರಿಸುತ್ತಿರುವ ಅದರ ನಿಷ್ಠಾವಂತ ಮತ್ತು ಮರು-ಪ್ರಯಾಣಿಸುವ ಗ್ರಾಹಕರ ಬಳಗವಾಗಿದೆ. ಅವರ ನಂಬಿಕೆ, ಪ್ರತಿಕ್ರಿಯೆ ಮತ್ತು ಬದಲಾಗುತ್ತಿರುವ ಪ್ರಯಾಣದ ಆದ್ಯತೆಗಳು 'ಆಕಾಸಾ ಅನುಭವ'ವನ್ನು ರೂಪಿಸಲು ನೆರವಾಗಿವೆ.

ಗ್ರಾಹಕರು ಆಕಾಸಾ ಏರ್‌ನಿಂದ ನಿರೀಕ್ಷಿಸುವ ಬೆಚ್ಚಗಿನ ಮತ್ತು ನಂಬಿಕಸ್ಥ ಸೇವೆಯನ್ನು ಕಾಯ್ದು ಕೊಳ್ಳುವುದರ ಜೊತೆಗೆ, ಹೆಚ್ಚಿನ ಮೌಲ್ಯ, ವೈಯಕ್ತಿಕಗೊಳಿಸಿದ ಗುರುತಿಸುವಿಕೆ ಮತ್ತು ಸುಧಾರಿತ ಪ್ರಯಾಣದ ಪ್ರಯೋಜನಗಳೊಂದಿಗೆ ಗ್ರಾಹಕರ ನಿಷ್ಠೆಯನ್ನು ಪುರಸ್ಕರಿಸಲು 'ಆಕಾಸಾ ಎಲಿವೇಟ್' ಅನ್ನು ವಿನ್ಯಾಸಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಆಕಾಸಾ ಏರ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ವಿನಯ್ ದುಬೆ, “ನಾವು ಆಕಾಸಾ ಏರ್‌ನ ನಾಲ್ಕು ವರ್ಷಗಳನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ನಮ್ಮೊಂದಿಗೆ ಹಾರಾಟ ನಡೆಸಲು ಆಯ್ಕೆ ಮಾಡಿದ ಲಕ್ಷಾಂತರ ಗ್ರಾಹಕರಿಗೆ ಅಪಾರ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಅವರ ನಂಬಿಕೆ ಮತ್ತು ನಿಷ್ಠೆಯು ನಮ್ಮ ಪ್ರಯಾಣದ ಪ್ರಮುಖ ಭಾಗವಾಗಿದ್ದು, ಆಕಾಸಾ ಅನುಭವವನ್ನು ನಿರಂತರವಾಗಿ ಸುಧಾರಿಸಲು ನಮಗೆ ಸ್ಫೂರ್ತಿ ನೀಡಿದೆ,” ಎಂದು ಹೇಳಿದರು.