ಅಮೆಜಾನ್ ಇಂಡಿಯಾ ಇಂದು ತನ್ನ ಮೊದಲ ಅಮೆಜಾನ್ ಫ್ಯೂಚರ್ ಎಂಜಿನಿಯರ್(ಎಎಫ್‌ಇ) ವಿದ್ಯಾರ್ಥಿವೇತನ ಕಾರ್ಯಕ್ರಮ ಸಮೂಹದ ಪದವಿ ಪ್ರದಾನವನ್ನು ಆಚರಿಸುತ್ತಿದ್ದು, 2025-2029ರ ಶೈಕ್ಷಣಿಕ ಸಾಲಿಗೆ 500 ಹೊಸ ವಿದ್ಯಾರ್ಥಿವೇತನಗಳನ್ನು ಘೋಷಿಸಿದೆ. ಈ ಕಾರ್ಯಕ್ರಮವು ಕಡಿಮೆ ಆದಾಯ ಹಿನ್ನೆಲೆ ಹೊಂದಿರುವ ಮಹಿಳಾ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಬೆಂಬಲಿ ಸುತ್ತದೆ, ಜತೆಗೆ, ಶಿಕ್ಷಣ ಮತ್ತು ವೃತ್ತಿ ಅಭಿವೃದ್ಧಿಯಲ್ಲಿ ಸಮಾನ ಅವಕಾಶಗಳನ್ನು ಒದಗಿಸುತ್ತದೆ. ಮೊದಲ ತಲೆಮಾರಿನ 200 ಪದವೀಧರರಲ್ಲಿ 80%ಗಿಂತ ಹೆಚ್ಚಿನ ಜನರು ಪ್ರಮುಖ ಫಾರ್ಚೂನ್ 500 ಕಂಪನಿಗಳಲ್ಲಿ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ, ಹಲವರು ಅಮೆಜಾನ್‌ನ ಸ್ವಂತ ಎಂಜಿನಿಯ ರಿಂಗ್ ತಂಡಗಳನ್ನು ಸೇರುತ್ತಿದ್ದಾರೆ.
"ದೇಶದ ಡಿಜಿಟಲ್ ಕ್ರಾಂತಿಯಿಂದ ಹೊರಗುಳಿಯಬಹುದಾದ ಪ್ರತಿಭಾವಂತ ಯುವತಿಯರಿಗೆ ವೃತ್ತಿ ಮಾರ್ಗಗಳನ್ನು ಸೃಷ್ಟಿಸುವ ಮೂಲಕ ಭಾರತದ ತಂತ್ರಜ್ಞಾನ ಕಾರ್ಯ(ನೌಕರ)ಪಡೆಯಲ್ಲಿ ವೈವಿಧ್ಯತೆಯನ್ನು ಬೆಳೆಸಲು ಅಮೆಜಾನ್ ಸಂಪೂರ್ಣ ಬದ್ಧವಾಗಿದೆ" ಎಂದು ಅಮೆಜಾನ್ ಇಂಡಿಯಾದ ಅಮೆಜಾನ್ ಫ್ಯೂಚರ್ ಎಂಜಿನಿಯರ್ ಲೀಡ್ ಪ್ರತೀಕ್ ಅಗರ್ ವಾಲ್ ಹೇಳಿದರು.
ಇದನ್ನೂ ಓದಿ: Amazon: ಅಮೆಜಾನ್ ಗ್ರಾಹಕರಿಗೆ ಬಿಗ್ ಶಾಕ್; 5 ರೂ. ಪ್ಲಾಟ್ ಫಾರ್ಮ್ ಶುಲ್ಕ ವಿಧಿಸಿದ ಕಂಪನಿ
"ಮಹಾರಾಷ್ಟ್ರದ ಲಾತೂರ್ ಮತ್ತು ಜಾರ್ಖಂಡ್‌ನ ಚೈಬಾಸಾದಂತಹ 2ನೇ ಮತ್ತು 3ನೇ ಶ್ರೇಣಿಯ ನಗರಗಳಿಂದ ಬಂದ ಮೊದಲ ತಲೆಮಾರಿನ ಕಾಲೇಜು ಪದವೀಧರರಿಗೆ ಶಿಕ್ಷಣ ಮತ್ತು ವೃತ್ತಿ ಅಭಿವೃದ್ಧಿಯಲ್ಲಿ ಸಮಾನ ಅವಕಾಶಗಳನ್ನು ಒದಗಿಸಿದಾಗ ಆತ್ಮವಿಶ್ವಾಸದ ತಂತ್ರಜ್ಞಾನ ವೃತ್ತಿಪರ ರಾಗಿ ಪರಿವರ್ತನೆಯಾಗುವುದನ್ನು ನೋಡುವ ಪರಿಣಾಮವನ್ನು ತೋರಿಸುತ್ತದೆ. ಸಾಮರ್ಥ್ಯಕ್ಕೆ ತಕ್ಕ ಅವಕಾಶಗಳು ಲಭಿಸಿದಾಗ ಯಶಸ್ಸು ಸಹಜವಾಗಿ ಹಿಂಬಾಲಿಸುತ್ತದೆ, ಪದವೀಧರರ ಹಿನ್ನೆಲೆ ಲೆಕ್ಕಿಸದೆ ಅಸಾಧಾರಣ ಪ್ರತಿಭೆ ಹೊರಹೊಮ್ಮುತ್ತದೆ" ಎಂದರು.
ಪ್ರತಿಯೊಬ್ಬ ಪದವೀಧರರು 4 ವರ್ಷಗಳ ಅವಧಿಯಲ್ಲಿ 2 ಲಕ್ಷ ರೂ. ಆರ್ಥಿಕ ನೆರವು, ಲ್ಯಾಪ್‌ಟಾಪ್, ಅಲ್ಪಾವಧಿಯ ತಂತ್ರಜ್ಞಾನ ಕೌಶಲ್ಯ ತರಬೇತಿ ಕಾರ್ಯಕ್ರಮಗಳ (ತಾಂತ್ರಿಕ ಬೂಟ್‌ಕ್ಯಾಂಪ್) ಮೂಲಕ ಯಾವುದೇ ಕೌಶಲ್ಯ ಕೊರತೆ ನಿವಾರಿಸುವ ವಿಶೇಷ ತರಬೇತಿ, ಪಾವತಿಸಿದ ಅಮೆಜಾನ್ ಇಂಟರ್ನ್‌ಶಿಪ್‌ಗಳು ಮತ್ತು ಅನುಭವಿ ಎಂಜಿನಿಯರ್‌ಗಳಿಂದ ಒಬ್ಬರಿಂದ ಒಬ್ಬರಿಗೆ ವೃತ್ತಿ ಮಾರ್ಗ ದರ್ಶನ ಒಳಗೊಂಡಿರುವ ಸಮಗ್ರ ಪ್ಯಾಕೇಜ್ ಪಡೆಯುತ್ತಾರೆ.
ಇಂಟರ್ನ್‌ಶಿಪ್ ನಂತರ ಅಮೆಜಾನ್‌ನಲ್ಲಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಎಂಜಿನಿಯರ್ ಆಗಿ ಪೂರ್ಣಕಾಲಿಕ ಕೆಲಸಕ್ಕೆ ಸೇರಿದ ಪದವೀಧರೆ ಸಮಲಾ ಕೀರ್ತಿ ಮಾತನಾಡಿ, "ನನ್ನ ತಂದೆ ಮಾಸಿಕ 25,000 ರೂ.ಗಿಂತ ಕಡಿಮೆ ಆದಾಯ ಗಳಿಸುವ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ನಾನು ತೆಲಂಗಾ ಣದ ಒಂದು ಸಣ್ಣ ಪಟ್ಟಣದಿಂದ ಬಂದಿದ್ದೇನೆ, ಆದರೆ ಅಮೆಜಾನ್‌ನಲ್ಲಿ ಕೆಲಸ ಪಡೆಯುವುದು ಅಸಾಧ್ಯವೆಂದು ನನಗೆ ಅನಿಸುತ್ತಿತ್ತು. ಆದರೆ ಅಮೆಜಾನ್ ವಿದ್ಯಾರ್ಥಿವೇತನವು ನನಗೆ ಆರ್ಥಿಕ ಬೆಂಬಲ ನೀಡುವ ಜತೆಗೆ, ಇದು ನನಗೆ ಆತ್ಮವಿಶ್ವಾಸ, ಮಾರ್ಗದರ್ಶನ ಮತ್ತು ನನ್ನ ವೃತ್ತಿಜೀವನ ವನ್ನು ಪರಿವರ್ತಿಸಿದ ನೈಜ-ಪ್ರಪಂಚದ ಅನುಭವವನ್ನು ನೀಡಿದೆ" ಎಂದರು.
ಶೈಕ್ಷಣಿಕ ಅರ್ಹತೆ, ಹಣಕಾಸಿನ ಅಗತ್ಯತೆ ಮತ್ತು ನಾಯಕತ್ವ ಸಾಮರ್ಥ್ಯದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡುವ ಕಠಿಣ ಆಯ್ಕೆ ಪ್ರಕ್ರಿಯೆ ನಡೆಸುವ ಮತ್ತು ಕಡಿಮೆ ಆದಾಯದ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ಸಮರ್ಪಿತವಾಗಿರುವ ಲಾಭರಹಿತ ಸಂಸ್ಥೆ “ಫೌಂಡೇಶನ್ ಫಾರ್ ಎಕ್ಸಲೆನ್ಸ್(ಎಫ್ಇಇ)” ನೊಂದಿಗೆ ಅಮೆಜಾನ್ ಸಹಭಾಗಿತ್ವ ಹೊಂದಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು 2026ರ ಆರಂಭದಲ್ಲಿ ಘೋಷಿಸ ಲಾಗುವುದು.
"ಮುಂದಿನ ಪೀಳಿಗೆಯ ತಂತ್ರಜ್ಞಾನ ನಾಯಕಿಯರನ್ನು ಪೋಷಿಸುವ ಸಮಗ್ರ ವಿಧಾನವೇ ಅಮೆಜಾನ್ ಫ್ಯೂಚರ್ ಎಂಜಿನಿಯರ್ ಕಾರ್ಯಕ್ರಮವಾಗಿದೆ, ಇದು ನಿಜಕ್ಕೂ ಅಸಾಧಾರಣವಾಗಿದೆ" ಎಂದು ವಿದ್ಯಾರ್ಥಿವೇತನ ಕಾರ್ಯಕ್ರಮದ ಅಮೆಜಾನ್‌ನ ಅನುಷ್ಠಾನ ಪಾಲುದಾರ ಫೌಂಡೇಶನ್ ಫಾರ್ ಎಕ್ಸಲೆನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮ್ ಕೊಲವೆನ್ನು ಹೇಳಿದರು.
"ಅಮೆಜಾನ್‌ನಂತಹ ಜಾಗತಿಕ ತಂತ್ರಜ್ಞಾನ ಕಂಪನಿಯಲ್ಲಿ ಆರ್ಥಿಕ ಬೆಂಬಲ, ಮಾರ್ಗದರ್ಶನ, ಕೌಶಲ್ಯ ಅಭಿವೃದ್ಧಿ ಮತ್ತು ನೈಜ-ಪ್ರಪಂಚದ ಅನುಭವ ಸಂಯೋಜಿಸುವ ಮೂಲಕ, ಈ ಕಾರ್ಯಕ್ರಮವು ಕಡಿಮೆ ಆದಾಯದ ಹಿನ್ನೆಲೆಯ ಪ್ರತಿಭಾವಂತ ಯುವತಿಯರಿಗೆ ತಂತ್ರಜ್ಞಾನದಲ್ಲಿ ಪರಿವರ್ತನೀಯ ಅವಕಾಶಗಳನ್ನು ಒದಗಿಸಿ, ಅವರನ್ನು ಸಬಲೀಕರಣಗೊಳಿಸುತ್ತದೆ. ಇದು ಕೇವಲ ಚುರುಕಾದ ಅಥವಾ ಪ್ರತಿಭಾವಂತ ಎಂಜಿನಿಯರ್‌ಗಳನ್ನು ರೂಪಿಸುವುದಷ್ಟೇ ಅಲ್ಲ, ಭವಿಷ್ಯದ ತಂತ್ರಜ್ಞಾನ ನಾಯಕಿಯರನ್ನು ರೂಪಿಸುವುದಾಗಿದೆ" ಎಂದು ತಿಳಿಸಿದರು.
2022ರಲ್ಲಿ ಪ್ರಾರಂಭವಾದಾಗಿನಿಂದ, ಅಮೆಜಾನ್ ಫ್ಯೂಚರ್ ಎಂಜಿನಿಯರ್ ಸ್ಕಾಲರ್‌ಶಿಪ್ ಪ್ರೋಗ್ರಾಂ 4 ಸಮೂಹಗಳಲ್ಲಿ ಯುವತಿಯರಿಗೆ 1,700 ವಿದ್ಯಾರ್ಥಿವೇತನಗಳನ್ನು ನೀಡಿದೆ.
2025-2029ರ ಶೈಕ್ಷಣಿಕ ಸಾಲಿಗೆ ಕಂಪ್ಯೂಟರ್ ವಿಜ್ಞಾನ ಮತ್ತು ಸಂಬಂಧಿತ ಕಾರ್ಯಕ್ರಮಗಳಲ್ಲಿ ದಾಖಲಾದ ಮಹಿಳಾ ಎಂಜಿನಿಯರಿಂಗ್ ವಿದ್ಯಾರ್ಥಿಗಳು 2025 ಆಗಸ್ಟ್ 18 ಮತ್ತು ನವೆಂಬರ್ 30ರ ನಡುವೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಹತಾ ಮಾನದಂಡಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಮತ್ತು ತಮ್ಮ ಅರ್ಜಿ ಸಲ್ಲಿಸಲು www.amazonfutureengineer.in/scholarship ಇಲ್ಲಿಗೆ ಭೇಟಿ ನೀಡಬಹುದು.