ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Akasa Air: ಬೆಂಗಳೂರಿನಿಂದ ಚಂಡೀಗಢಕ್ಕೆ ಮತ್ತೊಂದು ದೈನಂದಿನ ನೇರ ವಿಮಾನ: ಡಿ.1ರಿಂದ ಹಾರಾಟ ಶುರು

ದೇಶಾದ್ಯಂತ ನಮ್ಮ ವಿಮಾನಯಾನ ಜಾಲ ವಿಸ್ತರಿಸುವ ದೀರ್ಘಕಾಲೀನ ಗುರಿಯಲ್ಲಿ ಪಂಜಾಬ್ ಪ್ರವೇಶವು ಮಹತ್ವದ ಮೈಲುಗಲ್ಲಾಗಿದೆ. ಉತ್ತರ ಭಾರತದ ಪ್ರಮುಖ ವಾಣಿಜ್ಯ ಮತ್ತು ಪ್ರವಾಸಿ ಕೇಂದ್ರ ವಾದ ಚಂಡೀಗಢವನ್ನು ಬೆಂಗಳೂರು ಹಾಗೂ ಗೋವಾದಂತಹ ಪ್ರಮುಖ ನಗರಗಳಿಗೆ ಸಂಪರ್ಕಿಸುವು ದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ

ಬೆಂಗಳೂರು: ಬೆಂಗಳೂರಿನಿಂದ ಉತ್ತರ ಭಾರತಕ್ಕೆ ಪ್ರಯಾಣಿಸುವ ಉದ್ಯಮಿಗಳು ಹಾಗೂ ಪ್ರವಾಸಿಗರಿಗೆ ಆಕಾಶ ಏರ್‌(Akasa Air) ಸಿಹಿ ಸುದ್ದಿ ನೀಡಿದೆ. ಡಿಸೆಂಬರ್ 1, 2026ರಿಂದ ಬೆಂಗಳೂರು(Bangalore) ಮತ್ತು ಚಂಡೀಗಢ(Chandigadh) ನಡುವೆ ಪ್ರತಿದಿನ ನೇರ ವಿಮಾನ ಸೇವೆ(Direct Air Servce)ಯನ್ನು ಆರಂಭಿಸಲಿರುವುದಾಗಿ ಸಂಸ್ಥೆ ತಿಳಿಸಿದೆ.

ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆಯು ತನ್ನ 31ನೇ ದೇಶೀಯ ಹಾಗೂ ಒಟ್ಟಾರೆ 38ನೇ ತಾಣವಾಗಿ ಚಂಡೀಗಢವನ್ನು ಸೇರ್ಪಡೆಗೊಳಿಸುವ ಮೂಲಕ ಇದೇ ಮೊದಲ ಬಾರಿಗೆ ಪಂಜಾಬ್‌ಗೆ ಲಗ್ಗೆ ಇಟ್ಟಿದೆ. ಇದರ ಜೊತೆಗೆ ಚಂಡೀಗಢ ಮತ್ತು ಗೋವಾ ನಡುವೆಯೂ ವಾರದಲ್ಲಿ ಆರು ದಿನ ನೇರ ವಿಮಾನ ಹಾರಾಟ ನಡೆಸಲಿದೆ.

ನೂತನ ವೇಳಾಪಟ್ಟಿಯ ಪ್ರಕಾರ, ಬೆಂಗಳೂರಿನಿಂದ ಚಂಡೀಗಢಕ್ಕೆ ಸೋಮವಾರದಿಂದ ಶನಿವಾರ ದವರೆಗೆ ಬೆಳಗ್ಗೆ 7:25ಕ್ಕೆ ವಿಮಾನ ಹೊರಟು 10:25ಕ್ಕೆ ತಲುಪಲಿದೆ. ಭಾನುವಾರ ಮಧ್ಯಾಹ್ನ 2:20ಕ್ಕೆ ಬೆಂಗಳೂರಿನಿಂದ ಹೊರಟು ಸಂಜೆ 5:15ಕ್ಕೆ ಚಂಡೀಗಢ ತಲುಪಲಿದೆ.

ಇದನ್ನೂ ಓದಿ: Akasa Air Flight: ಬೆಂಗಳೂರು-ದೆಹಲಿ ವಿಮಾನದಲ್ಲಿ ನಾಟಕೀಯ ಬೆಳವಣಿಗೆ; ಕಂಠಪೂರ್ತಿ ಕುಡಿದುಬಂದ ಪ್ರಯಾಣಿಕನಿಂದ ಗಲಾಟೆ

ವಾಪಸ್ ಚಂಡೀಗಢದಿಂದ ಪ್ರತಿದಿನ ಸಂಜೆ 5:55ಕ್ಕೆ ಹೊರಡುವ ವಿಮಾನ ರಾತ್ರಿ 9:10ಕ್ಕೆ ಬೆಂಗಳೂರಿ ಗೆ ಆಗಮಿಸಲಿದೆ. ಇನ್ನು ಚಂಡೀಗಢ–ಗೋವಾ ಮಾರ್ಗದಲ್ಲಿ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 11ಕ್ಕೆ ಹೊರಟು ಮಧ್ಯಾಹ್ನ 1:45ಕ್ಕೆ ಗೋವಾ ತಲುಪಲಿದ್ದು, ಮಧ್ಯಾಹ್ನ 2:30ಕ್ಕೆ ಗೋವಾ ದಿಂದ ಹೊರಟು ಸಂಜೆ 5:15ಕ್ಕೆ ಚಂಡೀಗಢ ಸೇರಲಿದೆ.

ಈಗಾಗಲೇ ಆಕಾಶ ಏರ್‌ ವೆಬ್‌ಸೈಟ್, ಆ್ಯಪ್ ಹಾಗೂ ಪ್ರಮುಖ ಆನ್‌ಲೈನ್ ಟ್ರಾವೆಲ್ ಪೋರ್ಟಲ್‌ ಗಳಲ್ಲಿ ಟಿಕೆಟ್ ಬುಕಿಂಗ್ ಆರಂಭವಾಗಿದೆ.

ಈ ಕುರಿತು ವಿವರ ಹಂಚಿಕೊಂಡ ಆಕಾಸ ಏರ್ ಸಹ-ಸಂಸ್ಥಾಪಕ ಹಾಗೂ ಮುಖ್ಯ ವಾಣಿಜ್ಯ ಅಧಿಕಾರಿ ಆನಂದ್ ಶ್ರೀನಿವಾಸನ್, "ದೇಶಾದ್ಯಂತ ನಮ್ಮ ವಿಮಾನಯಾನ ಜಾಲ ವಿಸ್ತರಿಸುವ ದೀರ್ಘಕಾಲೀನ ಗುರಿಯಲ್ಲಿ ಪಂಜಾಬ್ ಪ್ರವೇಶವು ಮಹತ್ವದ ಮೈಲುಗಲ್ಲಾಗಿದೆ. ಉತ್ತರ ಭಾರತದ ಪ್ರಮುಖ ವಾಣಿಜ್ಯ ಮತ್ತು ಪ್ರವಾಸಿ ಕೇಂದ್ರವಾದ ಚಂಡೀಗಢವನ್ನು ಬೆಂಗಳೂರು ಹಾಗೂ ಗೋವಾ ದಂತಹ ಪ್ರಮುಖ ನಗರಗಳಿಗೆ ಸಂಪರ್ಕಿಸುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ವಾಗಲಿದೆ,” ಎಂದು ಅಭಿಪ್ರಾಯಪಟ್ಟರು.

2022ರ ಆಗಸ್ಟ್‌ನಲ್ಲಿ ಕಾರ್ಯಾರಂಭ ಮಾಡಿದ ಆಕಾಸ ಏರ್ ಇದುವರೆಗೆ 3.2 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡಿದ್ದು, ಪ್ರಸ್ತುತ 31 ದೇಶೀಯ ಹಾಗೂ 7 ಅಂತಾರಾಷ್ಟ್ರೀಯ ನಗರಗಳಿಗೆ ಹಾರಾಟ ನಡೆಸುತ್ತಿದೆ. ಒಟ್ಟು 226 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳಿಗೆ ಬೇಡಿಕೆ ಸಲ್ಲಿಸಿರುವ ಸಂಸ್ಥೆಯು ಸದ್ಯ 45 ಇಂಧನ-ದಕ್ಷ ವಿಮಾನಗಳನ್ನು (ಶೇ. 40ರಷ್ಟು ಕಡಿಮೆ ಶಬ್ದದ ಕ್ಯಾಬಿನ್) ಹೊಂದಿದೆ.

ವಿಶಾಲವಾದ ಲೆಗ್‌ರೂಮ್, ಯುಎಸ್‌ಬಿ ಪೋರ್ಟ್‌ಗಳು, ‘ಕೆಫೆ ಆಕಾಸ’ ಆಹಾರ ಸೇವೆ, ಸಾಕುಪ್ರಾಣಿ ಗಳೊಂದಿಗೆ ಪ್ರಯಾಣಿಸುವ ‘ಪೆಟ್ಸ್ ಆನ್ ಆಕಾಸ’ ಸೌಲಭ್ಯ, ದೃಷ್ಟಿಹೀನರಿಗಾಗಿ ಬ್ರೈಲ್ ಲಿಪಿಯ ಸುರಕ್ಷತಾ ಹಾಗೂ ಮೆನು ಕಾರ್ಡ್‌ಗಳು ಮತ್ತು 25ಕ್ಕೂ ಹೆಚ್ಚು ಹೆಚ್ಚುವರಿ ಸೇವೆಗಳನ್ನು ಆಕಾಸ ಏರ್ ಪ್ರಯಾಣಿಕರಿಗೆ ಒದಗಿಸುತ್ತಿದೆ.