ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಪೋಲೊ ಆಯುರ್ವೈದ್ ನಿಂದ 9 ವರ್ಷದ ಬಾಲಕಿಯ ದೀರ್ಘಕಾಲದ ಎಕ್ಸಿಮಾ ಸಮಸ್ಯೆಗೆ ಯಶಸ್ವಿ ಚಿಕಿತ್ಸೆ

ವೈಯಕೀಕರಿಸಿದ ಈ ಚಿಕಿತ್ಸಾ ಯೋಜನೆಯಲ್ಲಿ ಉರಿಯೂತ, ಶುಷ್ಕತೆ ಮತ್ತು ತುರಿಕೆಯನ್ನು ಕಡಿಮೆ ಮಾಡಲು ಆಂತರಿಕ ಔಷಧಿಗಳೊಂದಿಗೆ 'ಲೇಪ' ಮತ್ತು 'ಅಭ್ಯಂಗ'ದಂತಹ ಬಾಹ್ಯ ಲೇಪನ ಗಳನ್ನು ಸಂಯೋಜಿಸಲಾಯಿತು. ಆಂತರಿಕ ಔಷಧಿಗಳು ದೇಹವನ್ನು ಶುದ್ಧೀಕರಿಸಲು, ಶೇಖರಣೆಯಾದ ವಿಷಾಂಶಗಳನ್ನು ಹೊರಹಾಕಲು ಮತ್ತು ಸಮಸ್ಯೆ ಮತ್ತೆ ಸಮತೋಲನಕ್ಕೆ ಬರಲು ಸಹಾಯ ಮಾಡಿದವು.

ಬಾಲಕಿಯ ದೀರ್ಘಕಾಲದ ಎಕ್ಸಿಮಾ ಸಮಸ್ಯೆಗೆ ಯಶಸ್ವಿ ಚಿಕಿತ್ಸೆ

-

Ashok Nayak
Ashok Nayak Jan 21, 2026 7:42 PM

ಬೆಂಗಳೂರು: ಪ್ರತಿಷ್ಠಿತ ಅಪೋಲೊ ಆಯುರ್ವೈದ್ ಸಂಸ್ಥೆಯು ದೀರ್ಘಕಾಲದಿಂದ ಎಕ್ಸಿಮಾ ಸಮಸ್ಯೆಯಿಂದ ಬಳಲುತ್ತಿದ್ದ 9 ವರ್ಷದ ಬಾಲಕಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಸಾಧನೆ ಮಾಡಿದೆ. ಆಸ್ಪತ್ರೆಯು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಎಕ್ಸಿಮಾ ಸಮಸ್ಯೆಯಿಂದ ಬಳಲುತ್ತಿದ್ದ ಆಕೆಗೆ ಮತ್ತೆ ಸಂತೋಷಕರ ಬಾಲ್ಯವನ್ನು ಮರಳಿ ಪಡೆಯಲು ಸಹಾಯ ಮಾಡಿದೆ.

ಈ ಸಮಸ್ಯೆಯು ಪ್ರಮುಖವಾಗಿ ಆಕೆಯ ಪಾದಗಳ ಮೇಲೆ ಪರಿಣಾಮ ಬೀರಿದ್ದು, ನೋವಿನಿಂದ ಕೂಡಿದ ಮತ್ತು ತುರಿಕೆ ಉಂಟುಮಾಡುವ ಹುಣ್ಣುಗಳಿಂದಾಗಿ ಆಗಾಗ್ಗೆ ಉಲ್ಬಣಗೊಳ್ಳುತ್ತಿತ್ತು. ಸಮಸ್ಯೆಯು ಆಕೆಯ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದ್ದುದು ಮಾತ್ರವಲ್ಲದೆ, ಮಾನಸಿಕವಾಗಿಯೂ ಪರಿಣಾಮ ಬೀರಿತ್ತು ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಕುಂದಿಸಿತ್ತು. ದೀರ್ಘಕಾಲದ ಸ್ಟೀರಾಯ್ಡ್ ಆಧಾರಿತ ಚಿಕಿತ್ಸೆಗಳ ಹೊರತಾಗಿಯೂ, ಆಕೆಗೆ ಸಿಕ್ಕ ಪರಿಹಾರ ಸೀಮಿತ ಮತ್ತು ತಾತ್ಕಾಲಿಕವಾಗಿತ್ತು. ಅಂತಿಮವಾಗಿ, ಆಕೆಯ ವ್ಯಕ್ತಿತ್ವದ ಭಾಗವೇ ಆಗಿದ್ದ ಬ್ಯಾಡ್ಮಿಂಟನ್ ಮತ್ತು ಶಾಸ್ತ್ರೀಯ ನೃತ್ಯದಂತಹ ಚಟುವಟಿಕೆಗಳನ್ನು ಆಕೆ ಕೈಬಿಡಬೇಕಾಯಿತು.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಆಧರಿತ ಚಿಕಿತ್ಸೆಯನ್ನು ಹುಡುಕುತ್ತಾ ಆಕೆಯ ಕುಟುಂಬವು ದೊಮ್ಮಲೂರಿನಲ್ಲಿರುವ ಅಪೋಲೊ ಆಯುರ್ವೈದ್ ಅನ್ನು ಸಂಪರ್ಕಿಸಿತು. ಮಗುವಿನ ಆರೋಗ್ಯದ ಸಮಗ್ರ ಮೌಲ್ಯಮಾಪನದ ನಂತರ ಆಕೆಯನ್ನು ಎಕ್ಸಿಮಾ ಸಮಸ್ಯೆಯ ಸಲುವಾಗಿ ಅಪೋಲೊ ಆಯುರ್ವೈದ್ ನ ನಿಯಮಾವಳಿ ಆಧಾರಿತ 'ಪ್ರಿಸಿಶನ್ ಆಯುರ್ವೇದ' ವಿಭಾಗಕ್ಕೆ ದಾಖಲಿಸಲಾಯಿತು.

ಇದನ್ನೂ ಓದಿ: Drumstick Health Benefits: ತೂಕ ಇಳಿಸುವುದಕ್ಕೆ ನುಗ್ಗೆ ನೆರವಾಗುವುದೇ? ಯಾವ ರೀತಿ ಬಳಸಿದರೆ ಉತ್ತಮ?

ವೈಯಕೀಕರಿಸಿದ ಈ ಚಿಕಿತ್ಸಾ ಯೋಜನೆಯಲ್ಲಿ ಉರಿಯೂತ, ಶುಷ್ಕತೆ ಮತ್ತು ತುರಿಕೆಯನ್ನು ಕಡಿಮೆ ಮಾಡಲು ಆಂತರಿಕ ಔಷಧಿಗಳೊಂದಿಗೆ 'ಲೇಪ' ಮತ್ತು 'ಅಭ್ಯಂಗ'ದಂತಹ ಬಾಹ್ಯ ಲೇಪನ ಗಳನ್ನು ಸಂಯೋಜಿಸಲಾಯಿತು. ಆಂತರಿಕ ಔಷಧಿಗಳು ದೇಹವನ್ನು ಶುದ್ಧೀಕರಿಸಲು, ಶೇಖರಣೆ ಯಾದ ವಿಷಾಂಶಗಳನ್ನು ಹೊರಹಾಕಲು ಮತ್ತು ಸಮಸ್ಯೆ ಮತ್ತೆ ಸಮತೋಲನಕ್ಕೆ ಬರಲು ಸಹಾಯ ಮಾಡಿದವು. ಕೇವಲ ಮೂರು ತಿಂಗಳೊಳಗೆ, ಆಕೆಯ ಪಾದಗಳಲ್ಲಿದ್ದ ಎಕ್ಸಿಮಾ ಹುಣ್ಣು ಗಳು ಸಂಪೂರ್ಣವಾಗಿ ವಾಸಿಯಾದವು. ಈಗ ಆಕೆ ಮತ್ತೆ ಕ್ರೀಡೆ ಮತ್ತು ಶಾಸ್ತ್ರೀಯ ನೃತ್ಯ ಚಟುವಟಿಕೆ ಗಳಲ್ಲಿ ಭಾಗವಹಿಸುತ್ತಿರುವುದು ಈ ಚಿಕಿತ್ಸೆಯ ಯಶಸ್ಸಿಗೆ ಸಾಕ್ಷಿಯಾಗಿದೆ.

ಈ ಪ್ರಕರಣದ ಬಗ್ಗೆ ಮಾತನಾಡಿದ ಅಪೋಲೊ ಆಯುರ್ವೈದ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮತ್ತು ಹಿರಿಯ ಕನ್ಸಲ್ಟೆಂಟ್ ಫಿಸಿಷಿಯನ್ ಹಾಗೂ ಇಂಟಿಗ್ರೇಟಿವ್ ಡರ್ಮಟಾಲಜಿ ತಜ್ಞರಾದ ಡಾ. ಶಶಿಧರ ಗೋಪಾಲಕೃಷ್ಣ ಅವರು, "ದೀರ್ಘಕಾಲದ ಉರಿಯೂತದ ಚರ್ಮದ ಕಾಯಿಲೆಗಳಲ್ಲಿ ಕೇವಲ ಲಕ್ಷಣಗಳನ್ನು ಆಧರಿಸಿದ ಚಿಕಿತ್ಸೆಯ ಮಿತಿಗಳನ್ನು ಈ ಪ್ರಕರಣವು ಎತ್ತಿ ತೋರಿಸುತ್ತದೆ. ಪ್ರಿಸಿಶನ್ ಆಯುರ್ವೇದವು ನಮಗೆ ಔಷಧಿಗಳು, ಡಿಟಾಕ್ಸಿಫಿಕೇಷನ್, ಆಹಾರ ಮತ್ತು ಜೀವನಶೈಲಿ ಬದಲಾವಣೆಗಳನ್ನು ಒಳಗೊಂಡ ಸಂಘಟಿತ ಪ್ರಕ್ರಿಯೆಯ ಮೂಲಕ ಕಾಯಿಲೆಯ ಮೂಲ ಕಾರಣವನ್ನು ಗುರುತಿಸಲು ಮತ್ತು ಗುಣಪಡಿಸಲು ಸಹಾಯ ಮಾಡುತ್ತದೆ. ಕೇವಲ ಮೂರು ತಿಂಗಳೊಳಗೆ ಮಗು ಚೇತರಿಸಿಕೊಂಡಿರುವುದು ಈ ಚಿಕಿತ್ಸಾ ವಿಧಾನದ ಸಾಮರ್ಥ್ಯವನ್ನು ತೋರಿಸುತ್ತದೆ" ಎಂದು ಹೇಳಿದರು.

ತಮ್ಮ ಅನುಭವವನ್ನು ಹಂಚಿಕೊಂಡ ಮಗುವಿನ ತಂದೆ ಶ್ರೀ ಪವನ್ ಕುಮಾರ್ ಗಣಪವರಪು ಅವರು, “ಮೂರು ವರ್ಷಗಳ ಕಾಲ ನಮ್ಮ ಮಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಪಡುತ್ತಿದ್ದ ಕಷ್ಟವನ್ನು ನಾವು ನೋಡಿದ್ದೇವೆ. ಸಂಕಟ ಪಟ್ಟಿದ್ದೇವೆ. ಸ್ಟೀರಾಯ್ಡ್‌ ಗಳು ಕೇವಲ ಅಲ್ಪಾವಧಿಯ ಪರಿಹಾರವನ್ನಷ್ಟೇ ನೀಡಿದ್ದವು ಮತ್ತು ಆಕೆ ತನಗೆ ಇಷ್ಟವಾದ ಚಟುವಟಿಕೆಗಳನ್ನು ಬಿಡಬೇಕಾ ಯಿತು. ಅಪೋಲೊ ಆಯುರ್ವೈದ್ ನಮಗೆ ಸಂತೋಷ ಮತ್ತು ವಿಶ್ವಾಸವನ್ನು ಮರಳಿ ನೀಡಿದೆ. ಕೇವಲ ಮೂರು ತಿಂಗಳೊಳಗೆ ಆಕೆ ಮತ್ತೆ ಬ್ಯಾಡ್ಮಿಂಟನ್ ಮತ್ತು ನೃತ್ಯ ಆರಂಭಿಸಿರುವುದನ್ನು ನೋಡುವುದು ನಮ್ಮ ಇಡೀ ಕುಟುಂಬಕ್ಕೆ ಆನಂದ ತಂದಿದೆ ಮತ್ತು ಹೊಸ ಜೀವನ ಸಿಕ್ಕಂತಾಗಿದೆ” ಎಂದು ಹೇಳಿದರು.

ಅಪೋಲೊ ಆಯುರ್ವೈದ್ ನಲ್ಲಿ ಸಮಗ್ರವಾದ, ನಿಯಮಾವಳಿ ಆಧಾರಿತ 'ಪ್ರಿಸಿಶನ್ ಆಯುರ್ವೇದ' ಚೌಕಟ್ಟಿನ ಮೂಲಕ ಎಕ್ಸಿಮಾ ನಿರ್ವಹಣೆ ಮಾಡಲಾಗುತ್ತಿದ್ದು, ಈ ವಿಧಾನವು ಕೇವಲ ತಾತ್ಕಾಲಿಕ ವಾಗಿ ಲಕ್ಷಣಗಳನ್ನು ನಿಯಂತ್ರಿಸುವ ಬದಲು, ವೈಯಕ್ತೀಕರಿಸಿದ ಔಷಧಿಗಳು, ಚಿಕಿತ್ಸೆಗಳು, ಡಿಟಾಕ್ಸಿಫಿಕೇಷನ್ ಮತ್ತು ಜೀವನಶೈಲಿಯ ಬದಲಾವಣೆಯ ಮೂಲಕ ಕಾಯಿಲೆಯ ಮೂಲ ಕಾರಣವನ್ನು ಹುಡುಕಿ, ಗುಣಪಡಿಸಿ ಅತ್ಯುತ್ತಮ ಫಲಿತಾಂಶಗಳನ್ನು ನೀಡಲಿದೆ.-