ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rohan Bopanna: ಬೆಂಗಳೂರಿನಲ್ಲಿ ಎಸಿಕ್ಸ್ ‘ಸೂಪರ್‌ಬ್ಲಾಸ್ಟ್ 3’ ರನ್ನಿಂಗ್ ಶೂ ಬಿಡುಗಡೆ: ಟಿಸಿಎಸ್ ವರ್ಲ್ಡ್ 10ಕೆ ರೇಸ್ ದಿನದ ಅಧಿಕೃತ ದಿರಿಸುಗಳ ಪ್ರದರ್ಶನ

ಟೆನಿಸ್ ದಿಗ್ಗಜ ರೋಹನ್ ಬೋಪಣ್ಣ(Tennis legend Rohan Bopanna) ಮತ್ತು ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ(Squash player Joshna Chinnappa) ಅವರು ಈ ಕಾರ್ಯ ಕ್ರಮದ ಕೇಂದ್ರಬಿಂದುವಾಗಿದ್ದರು. ತರಬೇತಿ ಮತ್ತು ಶಿಸ್ತಿನ ಮಹತ್ವದ ಕುರಿತು ಮಾತನಾಡಿದ ಈ ಖ್ಯಾತ ಕ್ರೀಡಾಪಟುಗಳು, ಎಸಿಕ್ಸ್‌ ನ ‘ಸೌಂಡ್ ಮೈಂಡ್, ಸೌಂಡ್ ಬಾಡಿ’ (ಸ್ವಸ್ಥ ಮನಸ್ಸು, ಸ್ವಸ್ಥ ಶರೀರ) ತತ್ವವನ್ನು ಶ್ಲಾಘಿಸಿದರು.

ಬೆಂಗಳೂರಿನಲ್ಲಿ ಎಸಿಕ್ಸ್ ‘ಸೂಪರ್‌ಬ್ಲಾಸ್ಟ್ 3’ ರನ್ನಿಂಗ್ ಶೂ ಬಿಡುಗಡೆ

-

Ashok Nayak
Ashok Nayak Mar 24, 2026 5:11 PM

ಬೆಂಗಳೂರು: ಜಾಗತಿಕ ಮಟ್ಟದ ಜಪಾನಿ ಕ್ರೀಡಾ ಬ್ರಾಂಡ್ ಹಾಗೂ ‘ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು 2026’ರ ಅಧಿಕೃತ ಕ್ರೀಡಾ ಸಾಮಾಗ್ರಿ ಪಾಲುದಾರ ಸಂಸ್ಥೆಯಾದ ಎಸಿಕ್ಸ್ ಸಂಸ್ಥೆಯು ಬೆಂಗಳೂರು ನಗರದ ಬ್ರಿಗೇಡ್ ರಸ್ತೆಯ ಮಳಿಗೆಯಲ್ಲಿ ಅತ್ಯಾಧುನಿಕ ತಂತ್ರ ಜ್ಞಾನದ ‘ಸೂಪರ್‌ಬ್ಲಾಸ್ಟ್ 3’ ರನ್ನಿಂಗ್ ಶೂಗಳನ್ನು ಬಿಡುಗಡೆ ಮಾಡಿತು.

ಎಲ್ಲಾ ವಯಸ್ಸಿನ ಓಟಗಾರರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಶೂಗಳನ್ನು ವಿನ್ಯಾಸ ಗೊಳಿಸಲಾಗಿದೆ. ಈ ಶೂ ಬಿಡುಗಡೆ ಕಾರ್ಯಕ್ರಮದಲ್ಲಿ ಮುಂಬರುವ ಟಿಸಿಎಸ್ ವರ್ಲ್ಡ್ 10ಕೆ 2026ನ ರೇಸ್ ದಿನದ ಅಧಿಕೃತ ಕ್ರೀಡಾ ಉಡುಪುಗಳನ್ನೂ ಪ್ರದರ್ಶಿಸ ಲಾಯಿತು.

ಟೆನಿಸ್ ದಿಗ್ಗಜ ರೋಹನ್ ಬೋಪಣ್ಣ(Tennis legend Rohan Bopanna) ಮತ್ತು ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ(Squash player Joshna Chinnappa) ಅವರು ಈ ಕಾರ್ಯ ಕ್ರಮದ ಕೇಂದ್ರಬಿಂದುವಾಗಿದ್ದರು. ತರಬೇತಿ ಮತ್ತು ಶಿಸ್ತಿನ ಮಹತ್ವದ ಕುರಿತು ಮಾತನಾಡಿದ ಈ ಕ್ರೀಡಾಪಟುಗಳು, ಎಸಿಕ್ಸ್‌ ನ ‘ಸೌಂಡ್ ಮೈಂಡ್, ಸೌಂಡ್ ಬಾಡಿ’ (ಸ್ವಸ್ಥ ಮನಸ್ಸು, ಸ್ವಸ್ಥ ಶರೀರ) ತತ್ವವನ್ನು ಶ್ಲಾಘಿಸಿದರು.

ಇದನ್ನೂ ಓದಿ: Rohan Bopanna: 'ಅಡ್ವಾಂಟೇಜ್ ಪ್ರೋಗ್ರಾಂ' ಗೆ ರೋಹನ್ ಬೋಪಣ್ಣ ಟೆನಿಸ್ ಅಭಿವೃದ್ಧಿ ಪ್ರತಿಷ್ಠಾನದೊಂದಿಗೆ ಮೋತಿಲಾಲ್ ಓಸ್ವಾಲ್ ಫೌಂಡೇಶನ್ ಸಹಭಾಗಿತ್ವ

ಎಸಿಕ್ಸ್‌ ನ ವಿನೂತನ ಆವಿಷ್ಕಾರಕ್ಕೆ ಸಾಕ್ಷಿಯಾಗಿರುವ ಸೂಪರ್‌ ಬ್ಲಾಸ್ಟ್ 3 ಶೂನಲ್ಲಿ ‘ಎಫ್ಎಫ್ ಲೀಪ್’ ಫೋಮ್ ಅನ್ನು ಬಳಸಲಾಗಿದ್ದು, ಇದು ಓಟಗಾರರಿಗೆ ಅತ್ಯಂತ ಹಗುರವಾದ ಮತ್ತು ಚುರುಕಾದ ಅನುಭವ ಒದಗಿಸುತ್ತದೆ. ಸುದೀರ್ಘ ದೂರದ ಓಟದಲ್ಲಿ ಶಕ್ತಿಯನ್ನು ಉಳಿಸಿಕೊಳ್ಳಲು ಮತ್ತು ಓಡುವ ವೇಗವನ್ನು ಹೆಚ್ಚಿಸಲು ಇದರ ‘ಟ್ರ್ಯಾಂಪೋ ಲಿನ್ ಪಾಡ್’ ಅನ್ನು ಮರುವಿನ್ಯಾಸಗೊಳಿಸಲಾಗಿದೆ.

ಇದು ದ್ವಿಪದರದ ಕುಶನಿಂಗ್ ಹೊಂದಿದ್ದು, ಎಫ್ಎಫ್ ಲೀಪ್ ಮತ್ತು ಎಫ್ಎಫ್ ಬ್ಲಾಸ್ಟ್ ಪ್ಲಸ್ ತಂತ್ರಜ್ಞಾನದ ಸಂಯೋಜನೆಯನ್ನು ಹೊಂದಿದೆ. ಈ ಮೂಲಕ ಪಾದಗಳಿಗೆ ಹೆಚ್ಚು ಆರಾಮ ಮತ್ತು ವೇಗವನ್ನು ಒದಗಿಸುತ್ತದೆ.  ಸುಧಾರಿತ ವಿನ್ಯಾಸವನ್ನು ಹೊಂದಿರುವ ಈ ಶೂಗಳಲ್ಲಿ ಗಾಳಿಯಾಡುವಿಕೆಗಾಗಿ ಮೇಲ್ಭಾಗವನ್ನು ವಿಶೇಷ ನೇಯ್ಗೆಯಿಂದ ರಚಿಸಲಾಗಿದೆ ಮತ್ತು ಪಾದದ ಮಧ್ಯಭಾಗದ ಭದ್ರತೆಗಾಗಿ ಸುಧಾರಿತ ಐಸ್ಟೇ ವಿನ್ಯಾಸವನ್ನು ಅಳವಡಿಸ ಲಾಗಿದೆ.

ಈ ಕಾರ್ಯಕ್ರಮದಲ್ಲಿ ರೇಸ್ ಡೇ ಕಿಟ್ ಅನಾವರಣಗೊಳಿಸಲಾಗಿದ್ದು, ಶೂಗಳ ಜೊತೆಗೆ ಟಿ-ಶರ್ಟ್‌ಗಳು, ಶಾರ್ಟ್ಸ್‌ ಗಳು, ಟೈಟ್ಸ್‌ ಗಳು ಮತ್ತು ಕ್ರೀಡಾ ಸಾಕ್ಸ್‌ ಗಳನ್ನು ಬಿಡುಗಡೆ ಮಾಡಲಾಗಿದೆ. ಇವುಗಳನ್ನು ಆಕ್ಟಿಬ್ರೀಜ್ ತಂತ್ರಜ್ಞಾನದಿಂದ ತಯಾರಿಸಲಾಗಿದ್ದು, ಇವು ಬೆವರನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತವೆ ಮತ್ತು ಮುಕ್ತವಾಗಿ, ಆರಾಮಾವಾಗಿ ಓಡಲು ಸಹಕಾರಿಯಾಗಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಎಸಿಕ್ಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ರಜತ್ ಖುರಾನಾ, "ಬೆಂಗಳೂರಿನಲ್ಲಿ ಓಟ ಎಂಬುದು ಕೇವಲ ಭಾಗವಹಿಸುವಿಕೆಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಓಟ ಈಗ ಉತ್ತಮ ಪ್ರದರ್ಶನ ತೋರುವ ಮತ್ತು ಒಟ್ಟಾರೆ ಯೋಗಕ್ಷೇಮ ಪಾಲಿಸುವ ಬದುಕಿನ ಪ್ರಮುಖ ಭಾಗವಾಗುತ್ತಿದೆ. ಓಟಗಾರರು ತರಬೇತಿಯಲ್ಲಿ ಹೆಚ್ಚು ಶಿಸ್ತಿನ ಕ್ರಮಗಳನ್ನು ಅಳವಡಿಸಿ ಕೊಳ್ಳುತ್ತಿರುವು ದರಿಂದ, ಅವರ ದೈಹಿಕ ಸಹಿಷ್ಣುತೆ ಮತ್ತು ಮಾನಸಿಕ ದೃಢತೆ ಬೆಂಬಲಿಸುವ ಉತ್ಪನ್ನಗಳ ಅಗತ್ಯವಿದೆ.

ನಮ್ಮ 'ಸೌಂಡ್ ಮೈಂಡ್, ಸೌಂಡ್ ಬಾಡಿ' ತತ್ವದಂತೆ, ಓಟಗಾರರು ಹೆಚ್ಚು ಪರಿಣಾಮಕಾರಿ ಯಾಗಿ ಓಡಲು, ನಡೆಯಲು ಮತ್ತು 'ಸೂಪರ್‌ಬ್ಲಾಸ್ಟ್ 3' ನಂತಹ ಹೊಸ ಆವಿಷ್ಕಾರಗಳ ಮೂಲಕ ತಮ್ಮ ಗುರಿಯತ್ತ ಸ್ಥಿರವಾಗಿ ಸಾಗಲು ನೆರವು ಒದಗಿಸುವ ಕಡೆಗೆ ನಾವು ಗಮನ ಹರಿಸಿದ್ದೇವೆ. ಕೇವಲ ರೇಸ್ ದಿನದಂದು ಮಾತ್ರವಲ್ಲದೆ, ಓಟಗಾರರ ಸಂಪೂರ್ಣ ಪ್ರಯಾಣ ದ ಪ್ರತಿಯೊಂದು ಹಂತದಲ್ಲೂ ಅವರನ್ನು ಬೆಂಬಲಿಸುವ ಪರಿಸರ ವ್ಯವಸ್ಥೆ ನಿರ್ಮಿಸುವುದು ನಮ್ಮ ವಿಶಾಲ ಉದ್ದೇಶವಾಗಿದೆ," ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಟೆನಿಸ್ ದಿಗ್ಗಜ ರೋಹನ್ ಬೋಪಣ್ಣ ಅವರು, “ಕ್ರೀಡೆಯಲ್ಲಿ ಸುದೀರ್ಘ ಕಾಲದವರೆಗೆ ಸ್ಥಿರತೆ ಕಾಯ್ದುಕೊಳ್ಳುವುದು ಮತ್ತು ಆತ್ಮವಿಶ್ವಾಸ ವನ್ನು ಹೊಂದಿರುವುದು ಎಷ್ಟು ಮುಖ್ಯ ಎಂಬುದನ್ನು ನಾನು ಹಲವು ವರ್ಷಗಳಲ್ಲಿ ಬಹಳ ಚೆನ್ನಾಗಿ ಅರಿತುಕೊಂಡಿದ್ದೇನೆ. ಒಬ್ಬ ಅಥ್ಲೀಟ್ ಆಗಿ ಬೆಳೆಯುತ್ತಿದ್ದಂತೆ, ದೇಹ ಮತ್ತು ಮನಸ್ಸು ಎರಡರ ಆರೈಕೆ, ತಯಾರಿ ಮತ್ತು ಚೇತರಿಕೆ ಅತ್ಯಂತ ಅವಶ್ಯಕವಾಗುತ್ತದೆ. ಎಸಿಕ್ಸ್ ಸಂಸ್ಥೆಯ ‘ಸೌಂಡ್ ಮೈಂಡ್, ಸೌಂಡ್ ಬಾಡಿ’ ತತ್ವವು ನನ್ನ ಈ ನಂಬಿಕೆಯನ್ನು ತುಂಬಾ ಚೆನ್ನಾಗಿ ಪ್ರತಿಬಿಂಬಿಸುತ್ತದೆ. ಓಟವು ಯಾವಾಗಲೂ ನನ್ನ ತರಬೇತಿಯ ಅವಿಭಾಜ್ಯ ಅಂಗವಾಗಿದೆ. ಟಿಸಿಎಸ್ ವರ್ಲ್ಡ್ 10ಕೆ ಅಂತಹ ಕ್ರೀಡಾಕೂಟಗಳು ಓಟಗಾರರ ಸಮುದಾಯ ವನ್ನು ಒಟ್ಟುಗೂಡಿಸುತ್ತಿರುವುದು ಮತ್ತು ಆ ಮೂಲಕ ಓಟದ ಸಂಸ್ಕೃತಿ ಬೆಳೆಯುತ್ತಿರು ವುದು ನೋಡುವುದಕ್ಕೆ ಬಹಳ ಸಂತಸ ಆಗುತ್ತದೆ” ಎಂದು ಹೇಳಿದರು.

ನಂತರ ಮಾತನಾಡಿದ ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ, “ತರಬೇತಿಯು ನಮಗೆ ಶಿಸ್ತು ಮತ್ತು ಸಿದ್ಧತೆಯ ಮಹತ್ವವನ್ನು ಕಲಿಸುತ್ತದೆ. ಯಾವಾಗಲೂ ಪ್ರಗತಿ ದೊರೆಯುವುದು ಪ್ರತಿದಿನದ ಪರಿಶ್ರಮದಿಂದ. ಸಮಯ ಕಳೆದಂತೆ ಮನಸ್ಸು ಮತ್ತು ದೇಹದ ನಡುವಿನ ಸಮತೋಲನವು ಬಹಳ ಮುಖ್ಯವಾಗುತ್ತದೆ, ಅದಕ್ಕಾಗಿಯೇ ನನಗೆ ಎಸಿಕ್ಸ್‌ ನ ‘ಸೌಂಡ್ ಮೈಂಡ್, ಸೌಂಡ್ ಬಾಡಿ’ ತತ್ವ ಹೆಚ್ಚು ಕನೆಕ್ಟ್ ಆಗುತ್ತದೆ. ಇದೀಗ ಬಿಡುಗಡೆಯಾಗಿರುವ ಸೂಪರ್‌ಬ್ಲಾಸ್ಟ್™ 3 ನಂತಹ ನೂತನ ಆವಿಷ್ಕಾರಕ ಉತ್ಪನ್ನಗಳ ಮೂಲಕ ಎಸಿಕ್ಸ್ ಸಂಸ್ಥೆಯು ಇಂದು ಓಟಗಾರರಿಗೆ ತರಬೇತಿ ಮತ್ತು ರೇಸ್ ದಿನದಂದು ನೆರವಾಗುವ ಅತ್ಯುತ್ತಮ ಕ್ರೀಡಾ ಸಾಮಗ್ರಿಗಳನ್ನು ಒದಗಿಸುತ್ತಿವೆ. ಭಾರತದಲ್ಲಿ ಹೆಚ್ಚಿನ ಜನರು ಓಟವನ್ನು ಹವ್ಯಾಸವಾಗಿ ಅಳವಡಿಸಿಕೊಳ್ಳುತ್ತಿರುವುದು ಮತ್ತು ಟಿಸಿಎಸ್ ವರ್ಲ್ಡ್ 10ಕೆ ಅಂತಹ ಕೂಟಗಳು ಫಿಟ್‌ ನೆಸ್ ಸಂಸ್ಕೃತಿಯನ್ನು ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿ,” ಎಂದು ತಿಳಿಸಿದರು.

ಎಸಿಕ್ಸ್ ಸಂಸ್ಥೆಯು ದೇಶದ ಅತ್ಯಂತ ಪ್ರತಿಷ್ಠಿತ ಕ್ರೀಡಾಕೂಟಗಳ ಹೆಮ್ಮೆಯ ಪಾಲುದಾರ ನಾಗಿ ಭಾರತದ ರನ್ನಿಂಗ್ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳುತ್ತಿದೆ. 'ಸೂಪರ್‌ಬ್ಲಾಸ್ಟ್ 3' ನಂತಹ ಹೊಸ ಆವಿಷ್ಕಾರಗಳ ಜೊತೆಗೆ, ಉನ್ನತ ದರ್ಜೆಯ ಪಾದರಕ್ಷೆ ಗಳು ಮತ್ತು ಕ್ರೀಡಾ ಉಡುಪುಗಳ ಮೂಲಕ ಎಲ್ಲಾ ಹಂತದ ಓಟಗಾರರನ್ನು ಸಬಲೀಕರಣ ಗೊಳಿಸಲು ಎಸಿಕ್ಸ್ ಬದ್ಧವಾಗಿದೆ. ನವೀನ ಉತ್ಪನ್ನಗಳು ಮತ್ತು ಸಮುದಾಯದ ಅಭಿವೃದ್ಧಿ ಗೆ ಪೂರಕವಾದ ಯೋಜನೆಗಳ ಮೂಲಕ, ಬ್ರ್ಯಾಂಡ್ ಈ ವಿಭಾಗವನ್ನು ಮತ್ತಷ್ಟು ಆಕರ್ಷಕಗೊಳಿಸುತ್ತಿವೆ.