ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kantara Mimicry Row: `ಕಾಂತಾರ’ವಿವಾದ; ಚಾಮುಂಡಿ ದೇಗುಲಕ್ಕೆ ಭೇಟಿ ನೀಡಿ ಕ್ಷಮೆ ಕೇಳ್ತಾರಾ ರಣವೀರ್?

Kantara row: ಧುರಂಧರ್ 2 ಯಶಸ್ಸಿನ ಮಧ್ಯೆ , ನಟ ರಣವೀರ್ ಸಿಂಗ್ಏ ಪ್ರಿಲ್ 10, 2026 ರಂದು ಕರ್ನಾಟಕ ಹೈಕೋರ್ಟ್ ಮುಂದೆ ಅಫಿಡವಿಟ್ ಸಲ್ಲಿಸಲಿದ್ದು, ಕಾಂತಾರ ದೈವ ದೃಶ್ಯದ ಅನುಕರಣೆಗೆ ಬೇಷರತ್ತಾಗಿ ಕ್ಷಮೆಯಾಚಿಸಲಿದ್ದಾರೆ. ಫೆಬ್ರವರಿಯಲ್ಲಿ, ರಣವೀರ್ ಸಿಂಗ್ ಅವರು ದೈವದ ಅನುಕರಣೆ ಮಾಡಿದ್ದರು. ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರಿಂದ ಪರಿಹಾರ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

`ಕಾಂತಾರ’ವಿವಾದ; ಚಾಮುಂಡಿ ದೇಗುಲಕ್ಕೆ ಭೇಟಿ ನೀಡಿ ಕ್ಷಮೆ ಕೇಳ್ತಾರಾ ರಣವೀರ್?

ಕಾಂತಾರ ಸಿನಿಮಾ -

Yashaswi Devadiga
Yashaswi Devadiga Mar 24, 2026 6:32 PM

ಧುರಂಧರ್ 2 (Dhurandhar 2) ಯಶಸ್ಸಿನ ಮಧ್ಯೆ , ನಟ ರಣವೀರ್ ಸಿಂಗ್ (Ranveer Singh) ಏಪ್ರಿಲ್ 10, 2026 ರಂದು ಕರ್ನಾಟಕ ಹೈಕೋರ್ಟ್ (High Court) ಮುಂದೆ ಅಫಿಡವಿಟ್ ಸಲ್ಲಿಸಲಿದ್ದು, ಕಾಂತಾರ ದೈವ ದೃಶ್ಯದ ಅನುಕರಣೆಗೆ ಬೇಷರತ್ತಾಗಿ ಕ್ಷಮೆಯಾಚಿಸಲಿದ್ದಾರೆ. ಫೆಬ್ರವರಿಯಲ್ಲಿ, ರಣವೀರ್ ಸಿಂಗ್ ಅವರು ದೈವದ ಅನುಕರಣೆ ಮಾಡಿದ್ದರು. ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದ್ದರಿಂದ ಪರಿಹಾರ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಆ ಸಮಯದಲ್ಲಿ ಕರ್ನಾಟಕ ಹೈಕೋರ್ಟ್,ತಾರೆಯ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಹೈಕೋರ್ಟ್ ಮೆಟ್ಟಿಲೇರಿದ್ದ ನಟ

ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ‘ಕಾಂತಾರ ಚಾಪ್ಟರ್-1’ ಚಿತ್ರದ ಪಾತ್ರವೊಂದರ ಬಗ್ಗೆ ರಣವೀರ್ ಸಿಂಗ್ ನೀಡಿದ್ದ ಹೇಳಿಕೆ ದೈವಾರಾಧನೆ ಮತ್ತು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಪ್ರಶಾಂತ್ ಮೆತಾಲ್ ಎಂಬುವವರು ರಣವೀರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದರು. ಈ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ನಟ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: Sitaare Zameen Par OTT: ಕೊನೆಗೂ ಒಟಿಟಿಗೆ ಬರ್ತಿದೆ ʻಸೀತಾರೆ ಜಮೀನ್ ಪರ್ʼ; ಸ್ಟ್ರೀಮಿಂಗ್‌ ಎಲ್ಲಿ?

ಈ ಸಂಬಂಧ ಪ್ರಶಾಂತ್ ಮೆತಾಲ್ ಎಂಬುವವರು ರಣವೀರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದರು. ರಣವೀರ್ ಸಿಂಗ್ ಕೇವಲ ನ್ಯಾಯಾಲಯಕ್ಕೆ ಪೇಪರ್‌ನಲ್ಲಿ ಕ್ಷಮೆ ಸಲ್ಲಿಸಿದರೆ ಸಾಲದು. ದಕ್ಷಿಣ ಕನ್ನಡ ಅಥವಾ ಉಡುಪಿ ಭಾಗದ ಚಾವುಂಡಿ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ದೈವದ ಮುಂದೆ ಕ್ಷಮೆ ಕೇಳಬೇಕು ಎಂದು ಪ್ರಶಾಂತ್ ಮೆತಾಲ್ ಪರ ವಾದ ಮಂಡಿಸಲಾಯಿತು.



ದೂರುದಾರರ ಈ ಬೇಡಿಕೆಗೆ ಪ್ರತಿಕ್ರಿಯಿಸಿದ ರಣವೀರ್ ಸಿಂಗ್ ಪರ ವಕೀಲರು, ನಟರು ದೇವಸ್ಥಾನಕ್ಕೆ ಭೇಟಿ ನೀಡಲು ಮತ್ತು ಅಲ್ಲಿ ಕ್ಷಮೆ ಕೇಳಲು ಸಿದ್ಧರಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ವಾದವನ್ನು ಆಲಿಸಿದ ಹೈಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಿದೆ. ವಿಚಾರಣೆಯ ಸಮಯದಲ್ಲಿ ರಣವೀರ್ ಸಿಂಗ್ ಅವರ ತಂದೆ ಹಾಜರಿದ್ದರು.

ಏನಿದು ಘಟನೆ?

ನವೆಂಬರ್ 30 ರಂದು ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಸಮಾರೋಪ ಸಮಾರಂಭದಲ್ಲಿ ವೇದಿಕೆಯಲ್ಲಿ, ಚಲನಚಿತ್ರ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಮುಂದೆಯೇ ರಣವೀರ್‌ ಕಾಂತಾರದ ದೈವವನ್ನು ಅನುಕರಣೆ ಮಾಡಿದ್ದರು.ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಸಾಕಷ್ಟು ಟೀಕೆಗೆ ಗುರಿಯಾದರು.

ಅಂತಿಮವಾಗಿ, ರಣವೀರ್ ಸಿಂಗ್ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಟ್ರೋಲಿಂಗ್ ಅನ್ನು ಉದ್ದೇಶಿಸಿ ಕ್ಷಮೆಯಾಚಿಸಿದರು . "ಚಿತ್ರದಲ್ಲಿ ರಿಷಬ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು.

ಇದನ್ನೂ ಓದಿ: Amruthadhaare Serial: ಮಲ್ಲಿ ಮದುವೆಯಲ್ಲಿ ರೋಚಕ ಸತ್ಯದ ಮಹಾ ಸ್ಫೋಟ!

ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ನಾನು ಯಾರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ" ಎಂದು ನಟ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಬರೆದುಕೊಂಡಿದ್ದರು.