Assault case: ಒಳಮೀಸಲಾತಿ ಸಮೀಕ್ಷೆ ವೇಳೆ ನಾಗರಿಕರಿಗೆ ಹಲ್ಲೆ, ಬಿಬಿಎಂಪಿ ಸಿಬ್ಬಂದಿ ಅಮಾನತು
Assault Case: ಕಾಟಾಚಾರಕ್ಕೆ ಸಮೀಕ್ಷೆ ನಡೆಸಿದಂತೆ ನಟಿಸಿದ, ಹಾಗೂ ಸಮೀಕ್ಷೆ ನಡೆಸದೆ ಮನೆಬಾಗಿಲಿಗೆ ಚೀಟಿ ಅಂಟಿಸಿ ನಡೆದ, ಪ್ರಶ್ನಿಸಿದ್ದಕ್ಕೆ ಕಿರಿಕ್ ಮಾಡಿದ ಮೂವರು ಸಿಬ್ಬಂದಿಗಳು ಅಮಾನತುಗೊಂಡಿದ್ದಾರೆ. ವಿವಿಧ ವಾರ್ಡ್ ಗಳ ಮೂವರು ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ.


ಬೆಂಗಳೂರು : ಬೆಂಗಳೂರಿನಲ್ಲಿ (Bengaluru) ಒಳ ಮೀಸಲಾತಿ ಸರ್ವೇ (Caste Survey) ಮಾಡುವ ವೇಳೆ ಸಾರ್ವಜನಿಕರೊಂದಿಗೆ ಕಿರಿಕ್ ಮಾಡಿ ಅಲ್ಲದೆ ಹಲ್ಲೆಗೆ ಮುಂದಾಗಿದ್ದ ಬಿಬಿಎಂಪಿಯ (BBMP staff) ಮೂವರು ಸಿಬ್ಬಂದಿಯನ್ನು ಇದೀಗ ಅಮಾನತುಗೊಳಿಸಿ (Suspend) ಆದೇಶ ಹೊರಡಿಸಲಾಗಿದೆ. ಸರ್ವೆ ಮಾಡದೆ ಮನೆ ಬಾಗಿಲಿಗೆ ಸ್ಟಿಕರ್ ಅಂಟಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮನೆ ಮಾಲೀಕರ ಮೇಲೆ ಸಿಬ್ಬಂದಿಗಳು ಹಲ್ಲೆ (Assault case) ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳನ್ನು ಇದೀಗ ಸಸ್ಪೆಂಡ್ ಮಾಡಲಾಗಿದೆ.
ಕಾಟಾಚಾರಕ್ಕೆ ಸಮೀಕ್ಷೆ ನಡೆಸಿದಂತೆ ನಟಿಸಿದ, ಹಾಗೂ ಸಮೀಕ್ಷೆ ನಡೆಸದೆ ಮನೆಬಾಗಿಲಿಗೆ ಚೀಟಿ ಅಂಟಿಸಿ ನಡೆದ, ಪ್ರಶ್ನಿಸಿದ್ದಕ್ಕೆ ಕಿರಿಕ್ ಮಾಡಿದ ಮೂವರು ಸಿಬ್ಬಂದಿಗಳು ಅಮಾನತುಗೊಂಡಿದ್ದಾರೆ. ವಿವಿಧ ವಾರ್ಡ್ ಗಳ ಮೂವರು ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ. ಸಾರ್ವಜನಿಕರ ಜೊತೆ ಕಿರಿಕ್ ಆರೋಪದ ಬೆನ್ನಲ್ಲೇ ಸಸ್ಪೆಂಡ್ ಮಾಡಲಾಗಿದೆ. 198ನೇ ವಾರ್ಡ್ ಕಂದಾಯ ವಸೂಲಿಗಾರ ಸೆಂದಿಲ್ ಕುಮಾರ್, ಬಿಬಿಎಂಪಿ 24ನೇ ವಾರ್ಡಿನ ಕಂದಾಯ ವಸೂಲಿಕಾರ ಪೆದ್ದರಾಜು ಹಾಗೂ ಬಿಬಿಎಂಪಿ ರೆವೆನ್ಯೂ ಇನ್ಸ್ಪೆಕ್ಟರ್ ರಮೇಶ್ ಕುಮಾರ್ ಇವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಬಿಬಿಎಂಪಿ ಸಿಬ್ಬಂದಿ ಪ್ರಶ್ನಿಸಿದ ನಾಗರಿಕರ ಮೇಲೆ ಹಲ್ಲೆ ನಡೆಸಿದ ಸಿಸಿಟವಿ ದೃಶ್ಯವೊಂದು ಇಂದು ವೈರಲ್ ಆಗಿತ್ತು. ಘಟನೆ ಸಾರ್ವಭೌಮನಗರದಲ್ಲಿ ನಡೆದಿದ್ದು ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿತ್ತು. ಏನನ್ನೂ ವಿಚಾರಿಸದೆ ಸ್ಟಿಕ್ಕರ್ ಅಂಟಿಸುತ್ತಿದ್ದೀರಲ್ಲ ಎಂದು ನಿವಾಸಿಯೊಬ್ಬರು ಪ್ರಶ್ನಿಸಿದಾಗ ಪಾಲಿಕೆ ಸಿಬ್ಬಂದಿ ಅವರ ಮೈಮೇಲೆ ಏರಿಹೋಗಿ ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಬಿಬಿಎಂಪಿಯ ಕೆಲ ಸಿಬ್ಬಂದಿ ಒಳಮೀಸಲಾತಿಯ ಮಹತ್ವ ಅರಿಯದೆ, ಮನೆಗಳಲ್ಲಿ ವಾಸವಾಗಿರುವ ಜನರನ್ನು ಮಾತಾಡಿಸದೆ, ವಿವರಗಳನ್ನು ಪಡೆಯದೆ ಸರ್ವೇ ಆಗಿದೆ ಎಂಬ ಸ್ಟಿಕ್ಕರ್ ಅಂಟಿಸಿ ಹೋಗುತ್ತಿದ್ದಾರೆ ಎಂಬ ದೂರು ಸರ್ವೇಸಾಮಾನ್ಯವಾಗಿದೆ.
ಇದನ್ನೂ ಓದಿ: Karnataka SC survey: ಆನ್‌ಲೈನ್‌ನಲ್ಲೂ ಪರಿಶಿಷ್ಟ ಜಾತಿ ಸಮೀಕ್ಷೆಗೆ ಮಾಹಿತಿ ನೀಡಬಹುದು: ಸಿಎಂ