ಬ್ಲಿಂಕ್‌ಇಟ್‌ನಲ್ಲಿ ಮೊದಲ ಬಾರಿಗೆ ಆರ್ಡರ್ ಮಾಡಿದ ತಾಯಿ; ಮಗುವಿನಂತೆ ಸಂಭ್ರಮಿಸಿದ ವಿಡಿಯೊ ಸೆರೆ ಹಿಡಿದ ಮಗಳು
Viral Video: ದೆಹಲಿಯ ಮಹಿಳೆಯೊಬ್ಬರು ಮೊದಲ ಬಾರಿಗೆ ಬ್ಲಿಂಕ್‌ಇಟ್ ಆ್ಯಪ್ ಬಳಸಿ ಆರ್ಡರ್ ಮಾಡಿದ್ದಾರೆ. ಆದರೆ ಈ ಪರ್ಸೆಲ್ ತಲುಪಿದ ನಂತರ ತಾನು ಬಳಕೆ ಮಾಡಿದ ವಿಧಾನ ಸಕ್ಸಸ್ ಆಗಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಆರ್ಡರ್ ಯಶಸ್ವಿಯಾದ ತಕ್ಷಣ ಆ ತಾಯಿ ಮಗುವಿನಂತೆ ಸಂಭ್ರಮಿಸಿದ್ದಾರೆ.
ಬ್ಲಿಂಕ್‌ಇಟ್‌ನಲ್ಲಿ ಮೊದಲ ಬಾರಿಗೆ ಆರ್ಡರ್ ಮಾಡಿದ ಮಹಿಳೆ -
ನವದೆಹಲಿ, ಫೆ. 4: ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಇದೆ. ಹಾಗಾಗಿ ಅಗತ್ಯ ಹಣ ಬೇಕು ಅಂದಾಗ ಫೋನ್ ಪೇ, ಗೂಗಲ್ ಪೇ ಇತ್ಯಾದಿಯನ್ನು ಹಾಗೆಯೇ ಯಾವುದೇ ದಿನಸಿ ಪದಾರ್ಥ ಬೇಕೆಂದಾಗ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುತ್ತೇವೆ. ಇತ್ತೀಚೆಗೆಲ್ಲ ಇದು ಸಾಮಾನ್ಯವಾದರೂ ತಂತ್ರಜ್ಞಾನದಿಂದ ಸ್ವಲ್ಪ ಹಿಂದೆ ಇದ್ದ ಹಿರಿಯರಿಗೆ, ಪೋಷಕರಿಗೆ ಮೊದಲ ಬಾರಿಗೆ ಇದೆಲ್ಲ ಬಳಕೆ ಮಾಡಿದಾಗ ಬಹಳಷ್ಟು ಖುಷಿ ಪಡುತ್ತಾರೆ. ಅಂತೆಯೇ ಮಹಿಳೆಯೊಬ್ಬರು ಬ್ಲಿಂಕ್‌ಇಟ್‌ನಲ್ಲಿ ಮೊದಲ ಬಾರಿಗೆ ಆರ್ಡರ್ ಮಾಡಿದ್ದು ಮನೆಯಲ್ಲಿ ಒಂದು ಸಣ್ಣ ಆಚರಣೆಯಾಗಿ ಮಾರ್ಪಟ್ಟಿದೆ. ಸದ್ಯ ಈ ವಿಡಿಯೊ ವೈರಲ್ (Viral Video) ಆಗಿದೆ.
ದೆಹಲಿಯ ಮಹಿಳೆಯೊಬ್ಬರು ಮೊದಲ ಬಾರಿಗೆ ಬ್ಲಿಂಕ್‌ಇಟ್ ಆ್ಯಪ್ ಬಳಸಿ ಆರ್ಡರ್ ಮಾಡಿದ್ದಾರೆ. ಆದರೆ ಈ ಪರ್ಸೆಲ್ ತಲುಪಿದ ನಂತರ ತಾನು ಬಳಕೆ ಮಾಡಿದ ವಿಧಾನ ಸಕ್ಸಸ್ ಆಗಿದೆ ಎಂದು ಖುಷಿ ವ್ಯಕ್ತ ಪಡಿಸಿದ್ದಾರೆ. ಆರ್ಡರ್ ಯಶಸ್ವಿಯಾದ ತಕ್ಷಣ ಆ ತಾಯಿ ಮಗುವಿನಂತೆ ಸಂಭ್ರಮಿಸಿದ್ದಾರೆ. ವಿಡಿಯೊದಲ್ಲಿ ಆಕೆ ಮಗಳ ಬಳಿಗೆ ತೆರಳಿ ನಾನು ಬ್ಲಿಂಕ್‌ಇಟ್‌ನಲ್ಲಿ ಆರ್ಡರ್ ಮಾಡಿದೆ ಎಂದು ಹೇಳಿ ಸಂಭ್ರಮಿಸಿದ್ದಾರೆ.
ವಿಡಿಯೊ ನೋಡಿ:
she ordered for the first time in blinkit and see her happiness pic.twitter.com/lndytYWCBZ
— vedika (@vedikabaisa) February 3, 2026
ವೈರಲ್ ಆಗಿರುವ ವಿಡಿಯೊದಲ್ಲಿ ಒಬ್ಬ ಮಹಿಳೆ ತನ್ನ ಮಗಳ ಬಳಿಗೆ ಉತ್ಸಾಹದಿಂದ ಬಂದು "ಮೈನೆ ಬ್ಲಿಂಕ್‌ಇಟ್ ಸೆ ಆರ್ಡರ್ ಕರ್ ದಿಯಾ" ಎಂದು ಹೇಳುತ್ತಾಳೆ. ಅವಳ ಮುಖವು ಸಂತೋಷದಿಂದ ಕೂಡಿದ್ದು ಮಗಳು ಅವಳನ್ನು ಪ್ರೀತಿಯಿಂದ ಅಭಿನಂದಿಸುತ್ತ, ಸಣ್ಣ ಗೆಲುವನ್ನು ಒಪ್ಪಿಕೊಂಡು ಅಭಿನಂದನೆಗಳು ಎಂದು ಹೇಳಿ ಅಪ್ಪಿಕೊಂಡಿದ್ದಾಳೆ. ಅಷ್ಟರಲ್ಲಿ ಮತ್ತೊಬ್ಬ ಮಗಳು, "ನಮ್ಮ ಅಮ್ಮ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಖರೀದಿ ಮಾಡಿದ್ದಾರೆʼʼ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾಳೆ.
ಅಯ್ಯಯ್ಯೋ! ಅಂತ್ಯಕ್ರಿಯೆ ವೇಳೆ ಶವಪೆಟ್ಟಿಗೆಯಿಂದ ಜೀವಂತವಾಗಿ ಎದ್ದು ಬಂದ ಮಹಿಳೆ
ಈ ಬಗ್ಗೆ ನೆಟ್ಟಿಗರು ಕೂಡ ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, ಅಮ್ಮಂದಿರು ಯಾರೇ ಆಗಿರಲಿ, ಅವರು ಏನೇ ಮಾಡಿದರೂ ತುಂಬಾ ಕ್ಯೂಟ್ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಸಂತೋಷ... ಇನ್ನು ಮುಂದೆ ಹೊರಗಿನಿಂದ ಶಾಪಿಂಗ್ ಇಲ್ಲ" ಎಂದು ತಮಾಷೆ ಮಾಡಿದ್ದಾರೆ. ಅನೇಕ ಜನರು ಕೆಲವು ಅನುಭವಗಳನ್ನು ಹಂಚಿಕೊಂಡಿದ್ದಾರೆ. "ನನ್ನ ತಾಯಿ ಕೂಡ ಪಾವತಿಸಲು UPI ಬಳಸಿದಾಗ ಸಂತೋಷ ಪಟ್ಟಿದ್ದರು" ಎಂದು ಒಬ್ಬ ಇನ್ನೊಬ್ಬರು ಬರೆದಿದ್ದಾರೆ. ಆದರೆ ಮತ್ತೊಬ್ಬರು, ʼʼನಾನು ಇತ್ತೀಚೆಗೆ ನನ್ನ ತಾಯಿಗೆ UPI ಅನ್ನು ಪರಿಚಯಿಸಿದೆ. ಅವರು QR ಕೋಡ್ ಅನ್ನು ಮೊದಲ ಬಾರಿಗೆ ಸ್ಕ್ಯಾನ್ ಮಾಡಿದಾಗ ಖುಷಿ ಪಟ್ಟರುʼʼ ಎಂದು ಕಮೆಂಟ್ ಮಾಡಿದ್ದಾರೆ.