ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chicken rice for stray Dogs: ಬೆಂಗಳೂರಲ್ಲಿ ಬೀದಿನಾಯಿಗಳಿಗೆ ಚಿಕನ್‌ ರೈಸ್‌ ಭಾಗ್ಯ; ಆಕ್ಷೇಪ ಬೆನ್ನಲ್ಲೇ ಸ್ಪಷ್ಟನೆ ಕೊಟ್ಟ ಬಿಬಿಎಂಪಿ

Chicken rice for stray Dogs: ಬೀದಿನಾಯಿಗಳಿಗೆ ಚಿಕನ್ ರೈಸ್ ನೀಡುವ ಕುರಿತು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಸ್ಪಷ್ಟನೆ ನೀಡಿದೆ. ಬೀದಿ ನಾಯಿಗಳಿಗೆ ವಿಶೇಷವಾಗಿ ತಯಾರಿಸಿದ ಭಕ್ಷ್ಯ ನೀಡುತ್ತಿಲ್ಲ. ಈ ಆಹಾರವು ಮಾನವ ದರ್ಜೆಯದ್ದಲ್ಲ, ಅದು ನಾಯಿ ದರ್ಜೆಯ ಆಹಾರವಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಬೀದಿನಾಯಿಗಳಿಗೆ ಚಿಕನ್‌ ರೈಸ್‌; ಸ್ಪಷ್ಟನೆ ಕೊಟ್ಟ ಬಿಬಿಎಂಪಿ

Profile Prabhakara R Jul 13, 2025 6:37 PM

ಬೆಂಗಳೂರು: ಬೀದಿ ನಾಯಿಗಳಿಗೆ ವಿಶೇಷವಾಗಿ ತಯಾರಿಸಿದ ಭಕ್ಷ್ಯ ನೀಡುತ್ತಿಲ್ಲ. ಈ ಆಹಾರವು ಮಾನವ ದರ್ಜೆಯದ್ದಲ್ಲ, ಅದು ನಾಯಿ ದರ್ಜೆಯ ಆಹಾರವಾಗಿದ್ದು(Chicken rice for stray Dogs), ಅವುಗಳ ಜೀರ್ಣಾಂಗ ವ್ಯವಸ್ಥೆಗೆ ಸೂಕ್ತವಾದುದು. ಟೆಂಡರ್‌ನಲ್ಲಿ ಊಟದ ಪದಾರ್ಥಗಳನ್ನು ನಮೂದಿಸಿರುವುದು ಬಿಟ್ಟರೆ, ವಿತರಿಸುವ ಆಹಾರಕ್ಕೆ ಹೆಸರಿಟ್ಟಿಲ್ಲ ಎಂದು ಬಿಬಿಎಂಪಿ ಸ್ಪಷ್ಟನೆ ನೀಡಿದೆ.

ಬೀದಿನಾಯಿಗಳಿಗೆ ಚಿಕನ್ ರೈಸ್ ನೀಡುವ ಕುರಿತು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಸ್ಪಷ್ಟನೆ ನೀಡಿದೆ. ನಾಯಿಗಳಿಗೆ ನೀಡುವ ಆಹಾರಕ್ಕೆ ಹೆಸರಿಲ್ಲ. ಮಾನವ ಗುಣಮಟ್ಟದ ಆಹಾರವನ್ನು ಬೀದಿ ನಾಯಿಗಳಿಗೆ ನೀಡುವುದಿಲ್ಲ. ನಾಯಿ ದರ್ಜೆಯ ಆಹಾರ ನೀಡಲಾಗುವುದು. ಟೆಂಡರ್‌ನಲ್ಲಿ ಊಟದ ಪದಾರ್ಥಗಳನ್ನು ನಮೂದಿಸಿದ್ದು ಬಿಟ್ಟರೇ ವಿತರಿಸುವ ಆಹಾರಕ್ಕೆ ಹೆಸರಿಟ್ಟಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.

ಬೀದಿ ನಾಯಿಗಳಿಗೆ ಆಹಾರ ನೀಡುವ ಯೋಜನೆ ಹೊಸ ಕಾರ್ಯಕ್ರಮವಲ್ಲ. ಕೋವಿಡ್ ಸಮಯದಲ್ಲೆ ಪಾಲಿಕೆಯು ಆಹಾರ ನೀಡುವಿಕೆ ಕಾರ್ಯಕ್ರಮ ಕೈಗೆತ್ತಿಕೊಂಡಿತ್ತು. ಕಳೆದ ವರ್ಷವೂ ನಿಗದಿತ ಸಂಖ್ಯೆಯಲ್ಲಿ ನಾಯಿಗಳ ಆಹಾರ ನೀಡಲಾಗಿತ್ತು. ಬಿಬಿಎಂಪಿ ಈಗ ಪ್ರತಿ ವಲಯದಲ್ಲಿ ಆಹಾರ ತಯಾರಕರನ್ನು ಆಯಾ ವಲಯ ಸಹಾಯಕ ನಿರ್ದೇಶಕರು ಗುರುತಿಸಿದ ಮತ್ತು ಮೇಲ್ವಿಚಾರಣೆ ಮಾಡುವ ಆಹಾರ ನೀಡುವ ಸ್ಥಳಗಳಲ್ಲಿ ಪೌಷ್ಟಿಕ ಆಹಾರವನ್ನು ಒದಗಿಸಲು ಟೆಂಡರ್ ಆಹ್ವಾನಿಸಿದೆ.

ಅಂಜುಬುರುಕ ನಾಯಿಗಳನ್ನು ಹಿಡಿಯುವುದು ಒಂದು ದೊಡ್ಡ ಸವಾಲಾಗಿದೆ. ಅಲ್ಲದೆ ಕೆಲವು ಸ್ಥಳಗಳಲ್ಲಿ ಆಹಾರ ಕೊರತೆಯು ನಾಯಿಗಳನ್ನು ಗುಂಪುಗಾರಿಕೆಯ ನಡವಳಿಕೆಯತ್ತ ಸರಿಸುತ್ತಿದೆ. ಇದರಿಂದ ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಆಹಾರ ಯೋಜನೆಯು ನಾಯಿಗಳನ್ನು ಹಿಡಿಯಲು ನೆರವಾಗಲಿದೆ. ಇದರಿಂದಾಗಿ ಜನನ ನಿಯಂತ್ರಣ ಮತ್ತು ರೇಬೀಸ್ ವಿರೋಧಿ ಲಸಿಕಾಕರಣ ಪ್ರಮಾಣ ಹೆಚ್ಚಾಗುತ್ತದೆ.



ಪ್ರತಿ ನಾಯಿಗೆ ದಿನಕ್ಕೆ ಎಷ್ಟು ಖರ್ಚಾಗಲಿದೆ?

2.7 ಲಕ್ಷ ನಾಯಿಗಳಲ್ಲಿ ಕೇವಲ 5000 ನಾಯಿಗಳಿಗೆ ಮಾತ್ರ ಆಹಾರ ನೀಡಿ ಆರೋಗ್ಯವನ್ನು ಸುಧಾರಿಸಲು ಹೇಗೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ವಾರ್ಡ್ ಮಟ್ಟದಲ್ಲಿ ನಿರ್ದಿಷ್ಟ ಸ್ಥಳಗಳನ್ನು ಗುರಿಯಾಗಿಸಿಕೊಂಡಾಗ, ಈ ಕ್ರಿಯೆಯು ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಇನ್ನು ಒಟ್ಟು ಯೋಜನಾ ವೆಚ್ಚವಾದ 2.88 ಕೋಟಿಯಲ್ಲಿ ಪ್ರತಿ ವಲಯಕ್ಕೆ 100 ಆಹಾರ ಸ್ಥಳಗಳು ಒಳಗೊಂಡಿದ್ದು, 365 ದಿನಗಳವರೆಗೆ ಸರಿಸುಮಾರು 440 ನಾಯಿಗಳಿಗೆ ವಿಂಗಡಿಸಿದಾಗ, ತೆರಿಗೆಗಳನ್ನು ಹೊರತುಪಡಿಸಿ ಪ್ರತಿ ನಾಯಿಗೆ ದಿನಕ್ಕೆ ಅಂದಾಜು ವೆಚ್ಚ 19 ರೂ. ಆಗುತ್ತದೆ.

ಈ ಸುದ್ದಿಯನ್ನೂ ಓದಿ | BBMP: ಬೀದಿ ನಾಯಿಗಳಿಗೂ ಬಂತು ಕಾಲ; ಇನ್ಮುಂದೆ ಪ್ರತಿದಿನ ಸಿಗಲಿದೆ ಚಿಕನ್‌ ರೈಸ್‌

ಎಲ್ಲಾ ನಾಯಿಗಳು ಸಸ್ಯಾಹಾರ ತಿನ್ನುತ್ತಿಲ್ಲ

ಅವಲೋಕನಗಳ ಪ್ರಕಾರ ಎಲ್ಲಾ ನಾಯಿಗಳು ಸಸ್ಯಾಹಾರವನ್ನು ತಿನ್ನುತ್ತಿಲ್ಲ. ಕೋಳಿಗಳನ್ನು ಕೊಂದು ಆಹಾರ ನೀಡುತ್ತಿಲ್ಲ. ಅದರೆ, ಕೋಳಿಗಳ ತ್ಯಾಜ್ಯವನ್ನು ಮಾತ್ರ ನೀಡಲಾಗುತ್ತಿದೆ. ಬಿರಿಯಾನಿ ತಿನ್ನಿಸುತ್ತಿಲ್ಲ. ಟೆಂಡರ್‌ನಲ್ಲಿ ಬೇಯಿಸಿದ ಊಟಕ್ಕೆ ಬೇಕಾದ ಪದಾರ್ಥಗಳನ್ನು ನಮೂದಿಸಲಾಗಿದೆ. ಊಟಕ್ಕೆ ಹೆಸರಿಲ್ಲ ಮತ್ತು ಇದು ವಿಶೇಷವಾಗಿ ತಯಾರಿಸಿದ ಭಕ್ಷ್ಯವಲ್ಲ. ಆಹಾರವು ಮಾನವ ದರ್ಜೆಯದ್ದಲ್ಲ, ಅದು ನಾಯಿಯ ದರ್ಜೆಯದ್ದಾಗಿದ್ದು ಅವುಗಳ ಜೀರ್ಣಾಂಗ ವ್ಯವಸ್ಥೆಗೆ ಸೂಕ್ತವಾದದ್ದು. ಬೆಂಗಳೂರಿನಲ್ಲಿ ಪ್ರತಿನಿತ್ಯ ಬೀದಿ ನಾಯಿ ಫೀಡರ್‌ಗಳಿಗೆ ಬೇಯಿಸಿದ ಆಹಾರವನ್ನು ಪೂರೈಸುವ ಆಹಾರ ತಯಾರಕರಿಂದ ಮಾಹಿತಿ ಪಡೆದ ನಂತರ ಊಟದ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.