ಬೆಂಗಳೂರಿನ 5 ಅಪಾರ್ಟ್‌ಮೆಂಟ್‌ಗಳಿಂದ ನಿತ್ಯ 3 ಲಕ್ಷ ಲೀಟರ್ ನೀರು ಮರುಬಳಕೆ: ಜಲ ಸಂರಕ್ಷಣೆಯಲ್ಲಿ ಮಹತ್ವದ ಹೆಜ್ಜೆ
ಪ್ರತಿಯೊಂದು ಅಪಾರ್ಟ್‌ಮೆಂಟ್, ಅತ್ಯಾಧುನಿಕ 11-ಹಂತದ ಶುದ್ಧೀಕರಣ ಪ್ರಕ್ರಿಯೆಯ ಮೂಲಕ ಹೆಚ್ಚುವರಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ನೀರನ್ನು ಉತ್ತಮ ಗುಣಮಟ್ಟದ ಮರುಬಳಕೆ ಯೋಗ್ಯ ನೀರನ್ನಾಗಿ ಪರಿವರ್ತಿಸಿ, ಸುಮಾರು 60,000 ಲೀಟರ್ ಶುದ್ಧ ನೀರನ್ನು ಉತ್ಪಾದಿಸಲಿದೆ.

-

ಬೆಂಗಳೂರು: ಐಟಿ ನಗರಿ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಯೊಂದು ನಡೆದಿದೆ. ನಗರದ ಐದು ಪ್ರಮುಖ ಅಪಾರ್ಟ್‌ಮೆಂಟ್ ಸಮುಚ್ಚಯಗಳು, 'ಬೋಸಾನ್ ವೈಟ್‌ವಾಟರ್' ಎಂಬ ಜಲ ಉಪಯುಕ್ತ ಕಂಪನಿಯೊಂದಿಗೆ ಕೈಜೋಡಿಸಿ, ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ಮೂಲಕ ಪ್ರತಿನಿತ್ಯ ಬರೋಬ್ಬರಿ 3 ಲಕ್ಷ ಲೀಟರ್ ನೀರನ್ನು ಉಳಿತಾಯ ಮಾಡುತ್ತಿವೆ.
ಈ ಯೋಜನೆಯಡಿಯಲ್ಲಿ, ಪ್ರತಿಯೊಂದು ಅಪಾರ್ಟ್‌ಮೆಂಟ್‌ನಲ್ಲಿ ಅತ್ಯಾಧುನಿಕ 11 ಹಂತದ ಶುದ್ಧೀಕರಣ ಪ್ರಕ್ರಿಯೆಯ ಮೂಲಕ ಎಸ್‌ಟಿಪಿ (ತ್ಯಾಜ್ಯ ನೀರು ಸಂಸ್ಕರಣಾ ಘಟಕ) ಯಿಂದ ಸಂಸ್ಕರಿ ಸಲ್ಪಟ್ಟ ಹೆಚ್ಚುವರಿ ನೀರನ್ನು ಉತ್ತಮ ಗುಣಮಟ್ಟದ ಮರುಬಳಕೆ ಯೋಗ್ಯ ನೀರನ್ನಾಗಿ ಪರಿವರ್ತಿಸ ಲಾಗುತ್ತಿದೆ. ಇದರಿಂದ ಪ್ರತಿ ಅಪಾರ್ಟ್‌ಮೆಂಟ್ ದಿನಕ್ಕೆ ಸುಮಾರು 60,000 ಲೀಟರ್ ಶುದ್ಧ ನೀರನ್ನು ಉತ್ಪಾದಿಸಲಿದೆ.
ಈ ನೂತನ ಯೋಜನೆಗೆ ಸೇರ್ಪಡೆಗೊಂಡಿರುವ ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ ಹೊರ ಮಾವಿನಲ್ಲಿರುವ ಡಿಎಸ್‌ಆರ್ ವಾಟರ್‌ಸ್ಕೇಪ್ಸ್, ಸುಂಕದಕಟ್ಟೆಯಲ್ಲಿರುವ ದಿ ಟ್ರೀ ಬೈ ಪ್ರಾವಿಡೆಂಟ್, ವೈಟ್‌ಫೀಲ್ಡ್‌ನಲ್ಲಿರುವ ಎಸ್‌ಜೆಆರ್ ಬ್ರೂಕ್ಲಿನ್, ರಾಯಸಂದ್ರಲ್ಲಿರುವ ಎಂಜೆ ಅಮೇಡಿಯಸ್ ಹಾಗೂ ಜಿಗಣಿಯಲ್ಲಿರುವ ಡಿಎಲ್‌ಎಫ್ ವುಡ್‌ಲ್ಯಾಂಡ್ ಹೈಟ್ಸ್ ಸೇರಿವೆ.
ಇದನ್ನೂ ಓದಿ: Harish Kera Column: ನಮ್ಮ ಮೆದುಳನ್ನು ಆಳುವ ಬಿಂಬಗಳು
ಈಗಾಗಲೇ 18 ಇತರ ವಸತಿ ಸಮುಚ್ಚಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬೋಸಾನ್ ವೈಟ್‌ವಾಟರ್, ಈ ಎಲ್ಲಾ ಅಪಾರ್ಟ್‌ಮೆಂಟ್‌ಗಳಿಂದ ಒಟ್ಟಾಗಿ ಪ್ರತಿದಿನ 10 ಲಕ್ಷ ಲೀಟರ್‌ಗಿಂತಲೂ ಹೆಚ್ಚು ನೀರನ್ನು ಉಳಿತಾಯ ಮಾಡುತ್ತಿದೆ. ಉತ್ಪಾದನೆಯಾದ ಶುದ್ಧ ನೀರನ್ನು ಬೋಸಾನ್ ವೈಟ್ ವಾಟರ್ ತನ್ನ ಟ್ಯಾಂಕರ್ ಜಾಲದ ಮೂಲಕ ಸಮೀಪದ ಕೈಗಾರಿಕೆಗಳಿಗೆ ಪೂರೈಸುತ್ತದೆ.
ಬೋಸಾನ್ ವೈಟ್‌ವಾಟರ್‌ನ ಈ ಮರುಬಳಕೆ ವ್ಯವಸ್ಥೆಯನ್ನು ಅಪಾರ್ಟ್‌ಮೆಂಟ್ ಆವರಣ ದಲ್ಲಿಯೇ ಸ್ಥಾಪಿಸಲಾಗುತ್ತದೆ. ಸಾಮಾನ್ಯವಾಗಿ, ಅಪಾರ್ಟ್‌ಮೆಂಟ್‌ಗಳು ತಮ್ಮ ಎಸ್‌ಟಿಪಿಯಿಂದ ಸಂಸ್ಕರಿಸಿದ ನೀರಿನ ಸ್ವಲ್ಪ ಭಾಗವನ್ನು ತೋಟಗಾರಿಕೆಗೆ ಬಳಸಿ, ಉಳಿದ ನೀರನ್ನು ವಿಲೇವಾರಿ ಮಾಡಲು ಹೆಚ್ಚುವರಿ ಹಣ ಖರ್ಚು ಮಾಡುತ್ತವೆ. ಆದರೆ, ಬೋಸಾನ್ ವ್ಯವಸ್ಥೆಯು ಈ ಹೆಚ್ಚುವರಿ ನೀರನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿ, ಉತ್ತಮ ಗುಣಮಟ್ಟದ ನೀರನ್ನಾಗಿ ಪರಿವರ್ತಿಸುತ್ತದೆ. ಈ ನೀರನ್ನು ಸ್ಥಳದಲ್ಲೇ ಸಂಗ್ರಹಿಸಿ ಕೈಗಾರಿಕೆಗಳಿಗೆ ಸರಬರಾಜು ಮಾಡಲಾಗು ತ್ತದೆ.
ಈ ವ್ಯವಸ್ಥೆಯಿಂದ ಅಪಾರ್ಟ್‌ಮೆಂಟ್‌ಗಳಿಗೆ ಹಲವು ಅನುಕೂಲಗಳಿವೆ. ಮೊದಲನೆಯದಾಗಿ, ನೀರಿನ ಕೊರತೆಯಿರುವ ಸಮಯದಲ್ಲಿ ಇದು ನೀರಿನ ಭರವಸೆ ಒದಗಿಸುತ್ತದೆ. ಎರಡನೆಯದಾಗಿ, ಸಂಸ್ಕರಿಸದ ನೀರಿನ ಅತಿಯಾದ ಬಳಕೆಯಿಂದ ಕಟ್ಟಡಗಳಿಗೆ ಆಗಬಹುದಾದ ಹಾನಿ ತಡೆಯುತ್ತದೆ. ಅಂತಿಮವಾಗಿ, ಅಪಾರ್ಟ್‌ಮೆಂಟ್‌ಗಳು 'ಶೂನ್ಯ ದ್ರವ ತ್ಯಾಜ್ಯ' ಕಟ್ಟಡಗಳಾಗಲು ಸಹಾಯ ಮಾಡು ವುದರ ಜೊತೆಗೆ, ಪರಿಸರ ನಿಯಮಗಳನ್ನು ಪಾಲಿಸಲು ಅನುವು ಮಾಡಿಕೊಡುತ್ತದೆ.
ಈ ಕುರಿತು ಮಾತನಾಡಿದ ಬೋಸಾನ್ ವೈಟ್‌ವಾಟರ್‌ನ ಸಿಇಒ ಮತ್ತು ಸಹ-ಸಂಸ್ಥಾಪಕರಾದ ವಿಕಾಸ್ ಬ್ರಹ್ಮಾವರ್, "ಹೆಚ್ಚುವರಿ ಎಸ್‌ಟಿಪಿ ನೀರು ಅಪಾರ್ಟ್‌ಮೆಂಟ್‌ಗಳಿಗೆ ಒಂದು ಹೊರೆ ಯಾಗಿದೆ ಮತ್ತು ಅದರ ಸರಿಯಾದ ವಿಲೇವಾರಿಗೆ ಪ್ರಸ್ತುತ ಯಾವುದೇ ಮಾರ್ಗಗಳಿಲ್ಲ. ನಾವು ಈ ಹೊಣೆಯನ್ನು ಒಂದು ಸಂಪನ್ಮೂಲವಾಗಿ ಪರಿವರ್ತಿಸುವ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುತ್ತೇವೆ. ನಮ್ಮ ವ್ಯವಸ್ಥೆಯು ಎಸ್‌ಟಿಪಿ ನೀರನ್ನು ಶುದ್ಧೀಕರಿಸಿ, ಆಂತರಿಕ ಬಳಕೆಗೆ ಯೋಗ್ಯ ವಾಗಿಸುತ್ತದೆ. ಉಳಿದ ನೀರನ್ನು 'ಪ್ರತಿ ಲೀಟರ್‌ಗೆ ಪಾವತಿ' ಆಧಾರದ ಮೇಲೆ ಕೈಗಾರಿಕೆಗಳಿಗೆ ಪೂರೈಸಲಾಗುತ್ತದೆ. ಈ ವಿಧಾನದಿಂದ, ಅಪಾರ್ಟ್‌ಮೆಂಟ್ ಸಮುದಾಯಗಳ ಮೇಲೆ ಆರ್ಥಿಕ ಹೊರೆ ಹಾಕದೆ ಜಲ ಮರುಬಳಕೆಯನ್ನು ವಿಸ್ತರಿಸಲು ನಮಗೆ ಸಾಧ್ಯವಾಗುತ್ತಿದೆ," ಎಂದರು.
ಎಸ್‌ಜೆಆರ್ ಬ್ರೂಕ್ಲಿನ್ ಅಪಾರ್ಟ್‌ಮೆಂಟ್‌ನ ಸಂಘದ ಸದಸ್ಯರಾದ ಸೆಲ್ವಪಾಂಡಿ ಅವರು, "ನಮ್ಮಲ್ಲಿನ ಹೆಚ್ಚುವರಿ ಎಸ್‌ಟಿಪಿ ನೀರು ವ್ಯರ್ಥವಾಗದೆ ಸದುಪಯೋಗವಾಗಬೇಕೆಂಬುದು ನಮ್ಮ ಆಶಯವಾಗಿತ್ತು. ಬೋಸಾನ್‌ನ ಈ ದೃಷ್ಟಿಕೋನದ ಭಾಗವಾಗುವುದು ಸುಸ್ಥಿರತೆಯ ಬಗೆಗಿನ ನಮ್ಮ ಬದ್ಧತೆಗೆ ಅನುಗುಣವಾಗಿದೆ. ಇದು ಪರಿಸರ ಸೇರಿದಂತೆ ಇದರಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಮೌಲ್ಯವನ್ನು ಸೃಷ್ಟಿಸುತ್ತದೆ ಎಂದು ನಾವು ಭಾವಿಸುತ್ತೇವೆ," ಎಂದು ಸಂತಸ ವ್ಯಕ್ತಪಡಿಸಿದರು.
ಬೋಸಾನ್ ವೈಟ್‌ವಾಟರ್ ಬಗ್ಗೆ
ಬೋಸಾನ್ ವೈಟ್‌ವಾಟರ್ ಬೆಂಗಳೂರು ಮೂಲದ ಒಂದು ಜಲ ಉಪಯುಕ್ತತಾ ಕಂಪನಿ ಯಾಗಿದ್ದು, ಸಂಸ್ಕರಿಸಿದ ಚರಂಡಿ ನೀರನ್ನು ವಸತಿ ಮತ್ತು ವಾಣಿಜ್ಯ ಬಳಕೆಗೆ ಯೋಗ್ಯವಾದ ಉತ್ತಮ ಗುಣಮಟ್ಟದ ನೀರನ್ನಾಗಿ ಪರಿವರ್ತಿಸಲು ಸಮರ್ಪಿತವಾಗಿದೆ. ಇದರ 11-ಹಂತದ ಶುದ್ಧೀ ಕರಣ ಪ್ರಕ್ರಿಯೆ ಮತ್ತು IoT-ಚಾಲಿತ ಮೇಲ್ವಿಚಾರಣಾ ವ್ಯವಸ್ಥೆಯು ಜಲ ಚಕ್ರವನ್ನು ಉತ್ತೇಜಿಸಿ, ಸಮುದಾಯಗಳು 'ಶೂನ್ಯ ದ್ರವ್ಯ ತ್ಯಾಜ್ಯ' ಗುರಿಯನ್ನು ಸಾಧಿಸಲು ನೆರವಾಗುತ್ತದೆ.