ಮನ ಸ್ಕಂದ ‘ ದಿ ರೈಟ್‌ಲೈಫ್‌ಟೌನ್‌ಶಿಪ್‘ ಯೋಜನೆಗೆ ಐಜಿಬಿಸಿಯ ಪ್ರೀ ಸರ್ಟಿಫೈಡ್‌ಗೋಲ್ಡ್ ರೇಟಿಂಗ್
ಐಜಿಬಿಸಿ ಗ್ರೀನ್ ಹೋಮ್ಸ್ ರೇಟಿಂಗ್ ವ್ಯವಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದ್ದು, ವಾಸಸ್ಥಳ ಯೋಜನೆಗಳು, ಉತ್ತಮ ಪರಿಸರ ನಿರ್ಮಾಣ ಮತ್ತು ಉತ್ತಮ ಸಂಪನ್ಮೂಲಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತದೆ. ಈ ಪ್ರೀ-ಸರ್ಟಿಫೈಡ್ ಗೋಲ್ಡ್ ರೇಟಿಂಗ್, ಯೋಜನೆಯ ವಿನ್ಯಾಸ ಮತ್ತು ಯೋಜನಾ ಹಂತದಲ್ಲಿಯೇ ತೆಗೆದುಕೊಳ್ಳಲಾದ ಅಗತ್ಯವಾದ ಶಾಶ್ವತತೆಯ ಮಾನದಂಡಗಳನ್ನು ಮುಂಚಿತವಾಗಿ ಪೂರೈಸಿದೆ ಎನ್ನುವುದನ್ನು ಸೂಚಿಸುತ್ತದೆ.

ಬೆಂಗಳೂರು: ರಿಯಲ್‌ಎಸ್ಟೇಟ್ ಉದ್ಯಮದ ಮುಂಚೂಣಿ ಸಂಸ್ಥೆ ಮನ ಪ್ರಾಜೆಕ್ಟ್ಸ್ ಮತ್ತು ಸ್ಕಂದ ಸಹಯೋಗದಿಂದ ಸ್ಥಾಪಿತವಾದ ನಿಯೋಬಿಲ್ಡ್ ವೆಂಚರ್ಸ್ ತನ್ನ ಹೆಮ್ಮೆಯ ಟೌನ್‌ಶಿಪ್ ಯೋಜನೆಯಾದ ʻದಿ ರೈಟ್ ಲೈಫ್ʼ ಪ್ರಾಜೆಕ್ಟ್ ಗೆ ಭಾರತೀಯ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (IGBC) ವತಿಯಿಂದ ಪ್ರೀ ಸರ್ಟಿಫೈಡ್ ಗೋಲ್ಡ್ ರೇಟಿಂಗ್ ದೊರೆತಿರುವುದಾಗಿ ಘೋಷಿಸಿದೆ. ಈ ಮಾನ್ಯತೆ ಯು ಆರೋಗ್ಯಕರ ಜೀವನ ಹಾಗೂ ಪರಿಸರ ಹೊಣೆಗಾರಿಕೆಯನ್ನು ಉತ್ತೇಜಿಸುವ, ಶಾಶ್ವತ ಹಾಗೂ ಭವಿಷ್ಯೋನ್ಮುಖ ಸಮುದಾಯಗಳನ್ನು ನಿರ್ಮಿಸುವ ಬದ್ಧತೆಯನ್ನು ಒತ್ತಿ ಹೇಳುತ್ತದೆ.
ಐಜಿಬಿಸಿ ಗ್ರೀನ್ ಹೋಮ್ಸ್ ರೇಟಿಂಗ್ ವ್ಯವಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದ್ದು, ವಾಸಸ್ಥಳ ಯೋಜನೆಗಳು, ಉತ್ತಮ ಪರಿಸರ ನಿರ್ಮಾಣ ಮತ್ತು ಉತ್ತಮ ಸಂಪನ್ಮೂಲಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತದೆ. ಈ ಪ್ರೀ-ಸರ್ಟಿಫೈಡ್ ಗೋಲ್ಡ್ ರೇಟಿಂಗ್, ಯೋಜನೆಯ ವಿನ್ಯಾಸ ಮತ್ತು ಯೋಜನಾ ಹಂತದಲ್ಲಿಯೇ ತೆಗೆದುಕೊಳ್ಳಲಾದ ಅಗತ್ಯವಾದ ಶಾಶ್ವತತೆಯ ಮಾನದಂಡಗಳನ್ನು ಮುಂಚಿತವಾಗಿ ಪೂರೈಸಿದೆ ಎನ್ನುವುದನ್ನು ಸೂಚಿಸುತ್ತದೆ.
ಜನರ ಮೇಲಿನ ಕಾಳಜಿ, ದೂರದೃಷ್ಟಿ ಮತ್ತು ಪರಿಸರ ಸಮತೋಲನವನ್ನು ಕಾಪಾಡುವ ದೃಷ್ಟಿ ಯಿಂದ ʻದಿ ರೈಟ್‌ಲೈಫ್‌ಯೋಜನೆಯನ್ನು ರೂಪಿಸಲಾಗಿದೆ.
ಇದನ್ನೂ ಓದಿ: Vishweshwar Bhat Column: ಕೆಲವೊಮ್ಮೆ ಸೋಲುಗಳು ನಮ್ಮ ಸಾಮರ್ಥ್ಯವನ್ನು ತೋರಿಸುತ್ತವೆ !
ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವ ಸರ್ಜಾಪುರ ವೈಟ್‌ಫೀಲ್ಡ್ ಪ್ರದೇಶಗಳಲ್ಲಿ ಸ್ಥಾಪಿಸ ಲಾದ ದಿ ರೈಟ್‌ಲೈಫ್‌ಯೋಜನೆಯು ಉತ್ತಮ ತಂತ್ರಜ್ಞಾನಗಳನ್ನು ಒಳಗೊಂಡಿದೆ.
ಈ ಪ್ರಾಜೆಕ್ಟ್‌ನ ಕೆಲವು ವೈಶಿಷ್ಟ್ಯಗಳು:
- 84% ಮುಕ್ತ ಹಸಿರು ವಲಯಗಳು ಮತ್ತು ವಾಹನರಹಿತ ಪ್ರದೇಶಗಳು.
- ಕೆರೆಯ ಅಂಚಿನ ಸೂಕ್ಷ್ಮ ವಾತಾವರಣ ಇರುವ ಕಾರಣ ʻದಿ ರೈಟ್‌ಲೈಫ್‌ಪ್ರಾಜೆಕ್ಟ್‌ನ ಸುತ್ತಮುತ್ತಲಿನ ಪ್ರದೇಶ ತಂಪಾಗಿರುತ್ತದೆ.
- ಮಳೆನೀರು ಸಂರಕ್ಷಣೆಗೆ ಆಕ್ವಿಫೈರ್ ನಿರ್ವಹಣಾ ವ್ಯವಸ್ಥೆ
- ಸಾಮಾನ್ಯ ಪ್ರದೇಶಗಳು ಮತ್ತು ಬೀದಿಗಳಿಗೆ ಸೌರಶಕ್ತಿ ಆಧಾರಿತ ಬೆಳಕು
- ಪರಿಸರ ಸ್ನೇಹಿ ವಿಓಸಿ ಬಣ್ಣಗಳಿಂದ ಬೆಳಕಿನ ಸದ್ವಿನಿಯೋಗ, ಉತ್ತಮ ತ್ಯಾಜ್ಯ ವಿಂಗಡಣಾ ವ್ಯವಸ್ಥೆಗಳು
ಐಜಿಬಿಸಿಯ ಪ್ರೀ ಸರ್ಟಿಫೈಡ್‌ಗೋಲ್ಡ್‌ರೇಟಿಂಗ್‌ಸರ್ಟಿಫಿಕೆಟ್, ಸ್ಥಳ ಯೋಜನೆ, ನೀರಿನ ಪರಿಣಾಮಕಾರಿತ್ವ, ಶಕ್ತಿ ಸಂರಕ್ಷಣೆ, ವಸ್ತುಗಳ ಆಯ್ಕೆ, ಒಳಾಂಗಣ ಪರಿಸರದ ಗುಣಮಟ್ಟ ಮತ್ತು ವಿನ್ಯಾಸದ ನವೀನತೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಯೋಜನೆಯ ಶ್ರೇಷ್ಠತೆಯನ್ನು ಗುರುತಿಸು ತ್ತದೆ.
"ಮನ ಪ್ರಾಜೆಕ್ಟ್‌ನಲ್ಲಿ ಸಮರ್ಥನೀಯತೆ ಎಂದರೆ ಕೇವಲ ಹೆಚ್ಚುವರಿಯ ವಿಷಯವಲ್ಲ, ಅದು ನಮ್ಮ ವಿನ್ಯಾಸದ ಮೂಲಭೂತ ಕಾರ್ಯವಾಗಿದೆ. ದಿ ರೈಟ್ ಲೈಫ್‌ಗೆ ದೊರೆತಿರುವ ಐಜಿಬಿಸಿ ಪ್ರಮಾಣಪತ್ರವು, ನಾವು ನಿರ್ಮಿಸುತ್ತಿರುವ ಪರಿಸರ ಸ್ನೇಹಿ ಮನೆಗಳಿಗೆ ತೋರುತ್ತಿರುವ ಬದ್ಧತೆಯ ಪ್ರತೀಕವಾಗಿದೆ. ನೈಸರ್ಗಿಕ ಸಂಪೂನ್ಮೂಲಗಳನ್ನು ಸದುಪಯೋಗ ಪಡಿಸಿಕೊಳ್ಳುವದರ ಜತೆಗೆ ಷಹರಗಳಲ್ಲಿ ವಾಸಿಸುತ್ತಿರುವ ಜನರಿಗೆ ಉತ್ತಮ ಆರೋಗ್ಯ ಮತ್ತು ಜೀವನ ಶೈಲಿಯನ್ನು ನೀಡುವ ಉದ್ದೇಶ ನಮ್ಮದಾಗಿದೆʼ ಎಂದು ಮನ ಪ್ರಾಜೆಕ್ಟ್ಸ್‌ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾದ ಡಿ. ಕಿಶೋರ್ ರೆಡ್ಡಿ ಹೇಳಿದರು.
ಸ್ಕಂದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಂದೀಪ್ ರಾಮನೋಲ್ಲಾ ಮಾತನಾಡಿ, ದಿ ರೈಟ್ ಲೈಫ್ ಪ್ರಾಜೆಕ್ಟ್ ಈಗ ತನ್ನ ಹೊಸ ಹಂತವಾದ ದಿ ಸ್ಪೋರ್ಟ್ಸ್ ಪ್ರಾವಿನ್ಸ್ ಅನ್ನು ಅನಾವರಣಗೊಳಿಸುತ್ತಿದೆ. ಇದು ಕ್ರೀಡಾ ಕೇಂದ್ರಿತ ಪ್ರದೇಶವಾಗಿದ್ದು, ಉನ್ನತ ಮಟ್ಟದ ಕ್ರೀಡಾಂಗಣಗಳು, ತರಬೇತಿ ಅಕಾಡೆಮಿ ಗಳು ಮತ್ತು ಆರೋಗ್ಯ ಮೂಲಸೌಕರ್ಯವನ್ನು ಒಳಗೊಂಡಿದೆ.
ಸ್ಕಂದ ವ್ಯವಸ್ಥಾಪಕ ನಿರ್ದೇಶಕ ಆರ್. ವಿಜಯಕುಮಾರ್ ರೆಡ್ಡಿ ಮಾತನಾಡಿ, `ಪರಿಸರ ಆರೋಗ್ಯ ಎಷ್ಟು ಮುಖ್ಯವೋ, ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ. ಈ ಎಲ್ಲಾ ಅಂಶಗಳನ್ನಿಟ್ಟುಕೊಂಡು ನಿರ್ಮಿಸಲಾದ ದಿ ಸ್ಪೋಟ್ಸ್‌ಪ್ರಾವಿನ್ಸ್ – ಎಲ್ಲಾ ರೀತಿಯ ವಿಶೇಷತೆ ಗಳನ್ನು ಹೊಂದಿರುವದರ ಜೊತೆಗೆ ಪರಿಸರ ಹೊಣೆಗಾರಿಕೆಗೆ ಬದ್ಧವಾಗಿರುವ ಸಮುದಾಯಗಳನ್ನು ನಿರ್ಮಿಸುತ್ತದೆ.
ಈ ಪ್ರಾಜೆಕ್ಟ್ ನಲ್ಲಿ ಹಲವು ವಿಶೇಷತೆಗಳಿದ್ದು, ಪಾದಚಾರಿಗಳಿಗೆ ಆದ್ಯತೆ ಮತ್ತು ಮಕ್ಕಳ ಸುರಕ್ಷತೆ ನಗರ ಅರಣ್ಯಗಳು ಮತ್ತು ಸ್ಥಳೀಯ ಲ್ಯಾಂಡ್ಸ್ಕೇಪ್ ಅಳವಡಿಕೆ ಶಾಖ ತಡೆಗಟ್ಟುವ ಮತ್ತು ಸ್ವಾಭಾವಿಕ ಬೆಳಕಿಗೆ ಅನುಗುಣವಾಗಿ ಕಟ್ಟಡ ವಿನ್ಯಾಸ ಯೋಗಾಸನ ವಲಯಗಳು , ಹೊರಾಂಗಣ ಸ್ಥಳಗಳು ಮತ್ತು ಉತ್ತಮ ಗಾಳಿ ಹರಿವಿನ ಜಾಗಗಳು ಪರಿಸರ ಸ್ನೇಹಿ ಜೀವನಶೈಲಿಗೆ ಉತ್ತೇಜನ, ಎಲ್ಲಾ ಪೀಳಿಗೆಯವರಿಗೂ ಸರಿಹೊಂದುವ ಸ್ಥಳಗಳಿವೆ ಎಂದು ಹೇಳಿದರು.
ನಿಯೋಬಿಲ್ಡ್ ವೆಂಚರ್ಸ್ ಕುರಿತು: ನಿಯೋಬಿಲ್ಡ್ ವೆಂಚರ್ಸ್ ಮನ ಪ್ರಾಜೆಕ್ಟ್ಸ್ ಮತ್ತು ಸ್ಕಂದ ಸಹಭಾಗಿತ್ವದಿಂದ ಸ್ಥಾಪಿತವಾದ ಸಂಸ್ಥೆಯಾಗಿದೆ. ಸಮರ್ಥನೀಯತೆ, ಗುಣಮಟ್ಟ ಮತ್ತು ಗ್ರಾಹಕ ಕೇಂದ್ರಿಕೃತೆಯ ಆಧಾರದ ಮೇಲೆ, ಭಾರತದಲ್ಲಿ ಸಮಗ್ರ ಟೌನ್‌ಶಿಪ್‌ಗಳ ಭವಿಷ್ಯವನ್ನು ಮರು ರೂಪಿಸುತ್ತಿದೆ. ನವೀನತೆ ಮತ್ತು ಪರಿಸರ ಹೊಣೆಗಾರಿಕೆಯನ್ನು ಕೇಂದ್ರವಾಗಿಸಿಕೊಂಡು, ನಿಯೋ ಬಿಲ್ಡ್ ವೆಂಚರ್ಸ್ ಕುಟುಂಬಗಳು ಬೆಳೆಯುವ, ಪ್ರಕೃತಿ ಉಳಿಸುವ ಮತ್ತು ಆಧುನಿಕ ಜೀವನಶೈಲಿ ಯನ್ನು ಉತ್ತೇಜಿತವಾಗುವ ಸಮುದಾಯಗಳನ್ನು ನಿರ್ಮಿಸುತ್ತಿದೆ.