ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ 64ನೇ ಸುಬ್ರೋಟೋ ಕಪ್ (U-15) ಆರಂಭ!

ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) vs ಇಂದಿರಾ ಮೋಡರ್ನ್ ಹೈ ಸ್ಕೂಲ್ (ಹರಿಯಾಣ) ಮೊದಲ ದಿನದ ಪಂದ್ಯದಲ್ಲಿ ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) ಇಂದಿರಾ ಮೋಡರ್ನ್ ಹೈ ಸ್ಕೂಲ್ (ಹರಿ ಯಾಣ) ವಿರುದ್ಧ 2-1 ಅಂತರದಲ್ಲಿ ಜಯ ಸಾಧಿಸಿದೆ. ಗುರುತೇಜ್ ವೀರ್ 32ನೇ ನಿಮಿಷದಲ್ಲಿ ಗೋಲು ಮಾಡಿದರು, ಬಳಿಕ ಕಿಪ್ಜೆನ್ ಇಂಜುರಿ ಟೈಮ್ (50+2’)ನಲ್ಲಿ ಇನ್ನೊಂದು ಗೋಲು ಹೊಡೆದರು. ರಾಹುಲ್ ಪಂದ್ಯ ಆರಂಭದ ಮೊದಲನೇ ನಿಮಿಷದಲ್ಲೇ ಹರಿಯಾಣಕ್ಕೆ ಮುನ್ನಡೆ ನೀಡಿದ್ದರು.

ಬೆಂಗಳೂರಿನಲ್ಲಿ 64ನೇ ಸುಬ್ರೋಟೋ ಕಪ್ (U-15) ಆರಂಭ!

-

Ashok Nayak Ashok Nayak Sep 5, 2025 12:21 AM

ಬೆಂಗಳೂರು: 64ನೇ ಸುಬ್ರೋಟೋ ಕಪ್ ಅಂತರರಾಷ್ಟ್ರೀಯ ಫುಟ್‌ಬಾಲ್ ಟೂರ್ನಮೆಂಟ್‌ನ ಉಪ ಜೂನಿಯರ್ ಬಾಲಕರ (U-15) ವಿಭಾಗ ಇಂದು ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಆರಂಭದ ದಿನವೇ ರೋಮಾಂಚಕ ಪಂದ್ಯಗಳು ಕ್ರೀಡಾಭಿಮಾನಿಗಳನ್ನು ಆಕರ್ಷಿಸಿವೆ.

ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) vs ಇಂದಿರಾ ಮೋಡರ್ನ್ ಹೈ ಸ್ಕೂಲ್ (ಹರಿಯಾಣ) ಮೊದಲ ದಿನದ ಪಂದ್ಯದಲ್ಲಿ ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) ಇಂದಿರಾ ಮೋಡರ್ನ್ ಹೈ ಸ್ಕೂಲ್ (ಹರಿಯಾಣ) ವಿರುದ್ಧ 2-1 ಅಂತರದಲ್ಲಿ ಜಯ ಸಾಧಿಸಿದೆ. ಗುರುತೇಜ್ ವೀರ್ 32ನೇ ನಿಮಿಷದಲ್ಲಿ ಗೋಲು ಮಾಡಿದರು, ಬಳಿಕ ಕಿಪ್ಜೆನ್ ಇಂಜುರಿ ಟೈಮ್ (50+2’)ನಲ್ಲಿ ಇನ್ನೊಂದು ಗೋಲು ಹೊಡೆದರು. ರಾಹುಲ್ ಪಂದ್ಯ ಆರಂಭದ ಮೊದಲನೇ ನಿಮಿಷದಲ್ಲೇ ಹರಿಯಾಣಕ್ಕೆ ಮುನ್ನಡೆ ನೀಡಿದ್ದರು.

ತಾಶಿ ನಮ್ಗ್ಯಾಲ್ ಅಕಾಡೆಮಿ (IPSC) vs ಶ್ರೀ ಲೀಲಾನಂದ ಸೆಕೆಂಡರಿ ಸ್ಕೂಲ್ (ಝಾರ್ಖಂಡ್) ಝಾರ್ಖಂಡ್‌ನ ಶ್ರೀ ಲೀಲಾನಂದ ಸೆಕೆಂಡರಿ ಸ್ಕೂಲ್ ತಾಶಿ ನಮ್ಗ್ಯಾಲ್ ಅಕಾಡೆಮಿ (IPSC) ವಿರುದ್ಧ 5-1 ಅಂತರದ ಭರ್ಜರಿ ಗೆಲುವು ಸಾಧಿಸಿತು. ಸುರಜ್ 20ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿ ದರು. ಬಳಿಕ ಅಭಿ (33’, 35’), ರಿತೇಶ್ (36’), ಇಶಾಂತ್ (48’) ಕ್ರಮವಾಗಿ ಗೋಲು ಗಳಿಸಿದರು. ಎಸ್. ಛೆತ್ರಿ 38ನೇ ನಿಮಿಷದಲ್ಲಿ IPSC ಪರ ಏಕೈಕ ಗೋಲು ದಾಖಲಿಸಿದರು.

ಇದನ್ನೂ ಓದಿ: Gururaj Gantihole Column: ಬೆನ್ನುಮೂಳೆ ಮುರಿದರೂ ಸಮಾಜಕ್ಕೆ ಬೆನ್ನೆಲುಬಾದ ವಿನಾಯಕ ರಾವ್

ಗವರ್ಮೆಂಟ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಚಂಡೀಗಢ) vs ರಿವರ್ ಸೈಡ್ ನ್ಯಾಚುರಲ್ ಸ್ಕೂಲ್ (ಮಧ್ಯಪ್ರದೇಶ) ಮಧ್ಯಪ್ರದೇಶದ ರಿವರ್ ಸೈಡ್ ನ್ಯಾಚುರಲ್ ಸ್ಕೂಲ್ ಉತ್ತಮ ಪ್ರದರ್ಶನ ನೀಡಿ, ಚಂಡೀಗಢದ ಗವರ್‍ಮೆಂಟ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು 3-1 ಅಂತರದಲ್ಲಿ ಸೋಲಿಸಿತು. ಲೋಕೇಶ್ (22’, 50’) ಮತ್ತು ವಿನೀತ್ (20’) ಮಧ್ಯಪ್ರದೇಶ ಪರ ಗೋಲು ಮಾಡಿದರು. ಜಯರಾಜ್ 47ನೇ ನಿಮಿಷದಲ್ಲಿ ಚಂಡೀಗಢ ಪರ ಏಕೈಕ ಗೋಲು ದಾಖಲಿಸಿದರು.

SFS ಹೈಯರ್ ಸೆಕೆಂಡರಿ ಸ್ಕೂಲ್ (ನಾಗಾಲ್ಯಾಂಡ್) vs JNV ಪಾಕುರ್-1 (NVS)

ಸ್ಪರ್ಧಾತ್ಮಕ ಪಂದ್ಯದಲ್ಲಿ SFS ಹೈಯರ್ ಸೆಕೆಂಡರಿ ಸ್ಕೂಲ್ (ನಾಗಾಲ್ಯಾಂಡ್) ಹಾಗೂ JNV ಪಾಕುರ್-1 (NVS) ತಂಡಗಳು ಗೋಲು ರಹಿತ ಸಮಬಲ (0-0) ಸಾಧಿಸಿದ್ದು, ಎರಡೂ ತಂಡಗಳ ಸದಸ್ಯರು ಗೋಲು ಮಾಡುವಲ್ಲಿ ವಿಫಲವಾಗಿದ್ದಾರೆ.

ಆನಂದ ನಿಕೇತನ ಸ್ಕೂಲ್ (ಗುಜರಾತ್) vs ವಿದ್ಯಾಚಲ್ ಇಂಟರ್ನ್ಯಾಷನಲ್ ಸ್ಕೂಲ್ (ಬಿಹಾರ) ಈ ಪಂದ್ಯದಲ್ಲಿ ಆನಂದ ನಿಕೇತನ ಸ್ಕೂಲ್ (ಗುಜರಾತ್) ಹಾಗೂ ವಿದ್ಯಾಚಲ್ ಇಂಟರ್ನ್ಯಾಷನಲ್ ಸ್ಕೂಲ್ (ಬಿಹಾರ) ತಂಡಗಳು 0-0 ಸಮಬಲದಲ್ಲಿ ಪಂದ್ಯವನ್ನು ಅಂತ್ಯಗೊಳಿಸಿವೆ.

ಮುಂದಿನ ದಿನಗಳಲ್ಲಿ ಭಾರತದೆಲ್ಲೆಡೆಯಿಂದ ಬರುವ ತಂಡಗಳು ಪ್ರತಿಷ್ಠಿತ ಸುಬ್ರೋಟೋ ಕಪ್‌ನಲ್ಲಿ ಕೀರ್ತಿಗಾಗಿ ಪೈಪೋಟಿ ನಡೆಸಲಿವೆ. ಈ ಟೂರ್ನಮೆಂಟ್ ಭಾರತೀಯ ಫುಟ್‌ಬಾಲ್‌ನ ಭವಿಷ್ಯದ ನಕ್ಷತ್ರಗಳನ್ನು ಬೆಳೆಸುವ ವೇದಿಕೆಯಾಗಿದೆ ಎಂದು ಪ್ರಸಿದ್ಧಿ ಪಡೆದುಕೊಂಡಿದೆ.