Murder Case: ಬೆಂಗಳೂರಿನಲ್ಲಿ ದರೋಡೆ ಯತ್ನ, ಹಣ ಕೊಡದ ಯುವಕನ ಇರಿದು ಕೊಲೆ
Robbery: ಹಣ ನೀಡಲು ನಿರಾಕರಿಸಿದ ಪ್ರೇಮ್‌ಗೆ ಗ್ಯಾಂಗ್ ಚಾಕುವಿನಿಂದ ಇರಿದಿದೆ. ಚಾಕು ಇರಿತಕ್ಕೆ ಒಳಗಾದ ಪ್ರೇಮ್ ಕುಸಿದು ಬಿದ್ದಿದ್ದಾರೆ. ಆತನನ್ನು ಆಸ್ಪತ್ರೆಗೆ ಸೇರಿಸಲು ಗ್ಯಾಂಗ್ ಯತ್ನಿಸಿದೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಪ್ರೇಮ್ ಮೃತಪಟ್ಟಿದ್ದಾರೆ. ಹೀಗಾಗಿ ಪ್ರೇಮ್ ಶವವನ್ನು ಅಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.


ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸುವಂಥ ಕೃತ್ಯ ನಡೆದಿದೆ. ದರೋಡೆಕೋರರ (robbery) ಗ್ಯಾಂಗೊಂದು ಯುವಕನನ್ನು ಕೊಲೆಗೈದಿದೆ. ದರೋಡೆಗೆ ಯತ್ನಿಸಿದ ಗುಂಪು ಬಳಿಕ ಯುವಕನನ್ನು ಚಾಕುವಿನಿಂದ ಇರಿದು ಕೊಲೆ (Murder case) ಮಾಡಿರುವುದಾಗಿ ತಿಳಿದು ಬಂದಿದ್ದು, ಘಟನೆ ಬ್ಯಾಡರಹಳ್ಳಿ (bengaluru crime news) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಪ್ರೇಮ್ ಎಂಬ ಯುವಕನನ್ನು ಅಡ್ಡಗಟ್ಟಿದ ನಾಲ್ಕಾರು ದರೋಡೆಕೋರರು ಹಣ ನೀಡುವಂತೆ ಬೆದರಿಸಿದ್ದಾರೆ.
ಹಣ ನೀಡಲು ನಿರಾಕರಿಸಿದ ಪ್ರೇಮ್‌ಗೆ ಗ್ಯಾಂಗ್ ಚಾಕುವಿನಿಂದ ಇರಿದಿದೆ. ಚಾಕು ಇರಿತಕ್ಕೆ ಒಳಗಾದ ಪ್ರೇಮ್ ಕುಸಿದು ಬಿದ್ದಿದ್ದಾರೆ. ಆತನನ್ನು ಆಸ್ಪತ್ರೆಗೆ ಸೇರಿಸಲು ಗ್ಯಾಂಗ್ ಯತ್ನಿಸಿದೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಪ್ರೇಮ್ ಮೃತಪಟ್ಟಿದ್ದಾರೆ. ಹೀಗಾಗಿ ಪ್ರೇಮ್ ಶವವನ್ನು ಅಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಬಳಿಯಲ್ಲಿ ಪ್ರೇಮ್ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರೇಮ್ ದರೋಡೆಕೋರರಿಂದ ಚಾಕು ಇರಿತಕ್ಕೆ ಒಳಗಾಗಲು ಪೊಲೀಸರ ನಿರ್ಲಕ್ಷ್ಯವೇ ಕಾರಣ. ದರೋಡೆಕೋರರನ್ನು ಬಂಧಿಸುವಂತೆ ಬ್ಯಾಡರಹಳ್ಳಿ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದೆ.
ದ್ವಿಚಕ್ರ ವಾಹನ ಅಪಘಾತ,ಸ್ಥಳದಲ್ಲೇ ಇಬ್ಬರು ಸಾವು
ಚಿಂತಾಮಣಿ: ದ್ಚಿಚಕ್ರವಾಹನ ರಸ್ತೆಯ ಬದಿಯ ಗುಣಿಗೆ ಬಿದ್ದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ ರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚಾರ್ಹಳ್ಳಿ ಸರ್ಕಾರಿ ಪ್ರೌಢಶಾಲೆ ಬಳಿ ಭಾನುವಾರ ರಾತ್ರಿ ನಡೆದಿದೆ. ದ್ವಿಚಕ್ರ ವಾಹನದಿಂದಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವವರು ಚಿಂತಾಮಣಿ ತಾಲೂಕು ಪಲಿಗಡ್ಡ ಗ್ರಾಮದ ನಿವಾಸಿ ಹಾಗೂ ಹಾಲಿ ಚಿಂತಾಮಣಿ ನಗರದ ವೆಂಕಟಗಿರಿಕೋಟೆಯಲ್ಲಿ ವಾಸವಾಗಿರುವ ಪ್ರಭಾಕರ ಆಚಾರಿ, ಹಾಗೂ ಪಲ್ಲಿಗಡ್ಡ ಗ್ರಾಮದ ವೆಂಕಟರವಣಪ್ಪರವರಾಗಿದ್ದಾರೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ, ಭಾನುವಾರ ರಾತ್ರಿ ಚೇಳೂರು ಕಡೆಯಿಂದ ಚಿಂತಾಮಣಿಗೆ ಬರುತ್ತಿದ್ದ ವೇಳೆ ದ್ವಿಚಕ್ರವಾಹನ ಚಾಲಕನ ಹಿಡಿತ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ತಂದನಂತೆ ರಸ್ತೆಬದಿಯಲ್ಲಿನ ಗುಣಿಗೆ ದ್ವಿಚಕ್ರ ವಾಹನ ಸಮೇತ ಬಿದ್ದು, ಸಾವನ್ನಪ್ಪಿದ್ದಾರೆ ಎಂದು ಬಲಮೂಲಗಳಿಂದ ತಿಳಿದು ಬಂದಿದ್ದು, ಇನ್ನೂ ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಕೆಂಚಾರ್ಲಹಳ್ಳಿ ಪೊಲೀಸರು ಬೇಟಿ ನೀಡಿ ಸ್ಥಳ ಪರಿಶಿಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.