ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bedroom Design: ಸುಖ ನಿದ್ರೆಗೆ ಬೆಡ್‌ರೂಮ್‌ನ ವಿನ್ಯಾಸ ಹೇಗಿರಬೇಕು?

Bedroom Design: ನೀವು ಉತ್ತಮ ನಿದ್ರೆ ಪಡೆಯಲು ಹೋರಾಡುತ್ತಿದ್ದೀರಾ? ಸುಖ ನಿದ್ರೆಗೆ ಬೆಡ್‌ರೂಮ್‌ ಅನ್ನು ಹೇಗೆ ವಿನ್ಯಾಸಗೊಳಿಸಬೇಕು? ಗೋಡೆಯ ಬಣ್ಣಗಳು, ಒಳಾಂಗಣ ಸಸ್ಯಗಳ ಆಯ್ಕೆ, ಲೈಟಿಂಗ್ ಟಿಪ್ಸ್, ಫೆಂಗ್‌ಶುಯಿ ಸೀಕ್ರೆಟ್ಸ್ ಎಲ್ಲವನ್ನೂ ಇಲ್ಲಿ ವಿವರಿಸಲಾಗಿದೆ..

ಸುಖ ನಿದ್ರೆಗೆ ಬೇಕು ಇಂಟೀರಿಯರ್ ಟಚ್!

-

Profile Pushpa Kumari Oct 17, 2025 12:36 PM

ಬೆಂಗಳೂರು: ಸುಖ ನಿದ್ರೆಗೆ ಬೆಡ್‌ರೂಮ್‌ನ ವಿನ್ಯಾಸ (Bedroom design) ಹೇಗಿರಬೇಕು? ಗೋಡೆಯ ಬಣ್ಣಗಳಿಂದ ಹಿಡಿದು, ಒಳಾಂಗಣ ಸಸ್ಯಗಳು, ಲೈಟಿಂಗ್, ಕರ್ಟನ್‌ಗಳು, ಎಲ್ಲವನ್ನೂ ತಿಳಿಯೋಣ. ನೀವು ದಿನನಿತ್ಯದ ಒತ್ತಡವನ್ನು ಮರೆತು ಶಾಂತಿಯುತ ನಿದ್ರೆ ಪಡೆಯಲು ಸಹಾಯಕವಾಗುವ ಸೂಪರ್ ಇಂಟೀರಿಯರ್ ಡಿಸೈನ್‌ ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ.

ಮೊದಲಿಗೆ ಬಣ್ಣಗಳ ಪ್ರಭಾವ

ಗೋಡೆಯ ಬಣ್ಣಗಳು ನಿದ್ರೆಯ ಗುಣಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೃದು ನೀಲಿ, ಲಾವೆಂಡರ್, ವಾರ್ಮ್‌ ವೈಟ್‌ ಅಂತಹ ಬಣ್ಣಗಳು ಶಾಂತಿಯ ಭಾವನೆ ತಂದುಕೊಡುವ ಮೂಲಕ ನಿದ್ರೆಯ ಗುಣಮಟ್ಟ ಹೆಚ್ಚಿಸುತ್ತದೆ. ಹಸಿರು ಶೇಡ್‌ಗಳು ಅಂದರೆ ತಿಳಿ ಹಸಿರು ಮತ್ತು ಆಲಿವ್ ಗ್ರೀನ್ ಪ್ರಕೃತಿಯ ವಾತಾವರಣ ತರುವುದರಿಂದ ಮನಸ್ಸಿಗೆ ನೆಮ್ಮದಿ ಕೊಡುತ್ತದೆ. ಇನ್ನು ಕೆಂಪು, ಕೇಸರಿ, ಹಳದಿ ಅಂತಹ ಎನರ್ಜಿ ಹೆಚ್ಚಿಸುವ ಬಣ್ಣಗಳನ್ನು ತಪ್ಪಿಸಬೇಕು. ಏಕೆಂದರೆ ಇವು ಸುಖ ನಿದ್ರೆಗೆ ಅಡ್ಡಿ ಪಡಿಸುತ್ತವೆ. ಮಾಡ್ರನ್ ಲುಕ್‌ ಬಯಸುವವರು ಬ್ಲಶ್ ಪಿಂಕ್ ಕೂಡ ಬಳಸಬಹುದು. ಇದು ಸೂಕ್ಷ್ಮವಾದ ಸೌಂದರ್ಯ ಮತ್ತು ಶಾಂತಿ ತಂದುಕೊಡುತ್ತದೆ. ಎಲ್ಲದಕ್ಕೂ ಪ್ರಮುಖವಾಗಿ ಮ್ಯಾಟ್ ಫಿನಿಷ್ ಬಣ್ಣ ಬಳಸಿದರೆ ಗ್ಲೇರ್‌ ಕಡಿಮೆಯಾಗಿ ನೆಮ್ಮದಿಯ ನಿದ್ರೆ ನಿಮ್ಮದಾಗುತ್ತದೆ.



ಎರಡನೇ ವಿಚಾರ ಇಂಡೋರ್ ಪ್ಲಾಂಟ್ಸ್

ಸ್ನೇಕ್ ಪ್ಲಾಂಟ್ ಬಳಕೆಯಿಂದ ರೂಮ್‌ನಲ್ಲಿ ರಾತ್ರಿ ವೇಳೆ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಅಲೋವೆರಾ ಪ್ಲಾಂಟ್‌ ಗಾಳಿಯನ್ನು ಶುದ್ಧಗೊಳಿಸುತ್ತದೆ, ಗುಣಮಟ್ಟದ ನಿದ್ರೆಗೆ ಶುದ್ಧ ಗಾಳಿ ಅಗತ್ಯ. ಪೀಸ್ ಲಿಲಿ ಅಂತಹ ಸಸ್ಯಗಳು ರೂಮ್‌ನಲ್ಲಿ ತೇವಾಂಶ ಹೆಚ್ಚಿಸಿ ತಣ್ಣನೆಯ ವಾತಾವರಣ ಇರುವಂತೆ ಮಾಡುತ್ತವೆ. ಸ್ಪೈಡರ್ ಪ್ಲಾಂಟ್, ಇಂಗ್ಲಿಷ್ ಐವಿ, ಬೋಸ್ಟನ್ ಫರ್ನ್ ಅಂತಹ ಇಂಡೋರ್‌ ಸಸ್ಯಗಳು ಕೂಡ ಗಾಳಿಯ ಗುಣಮಟ್ಟ ಸುಧಾರಣೆ ಮಾಡುತ್ತವೆ. ಜಾಸ್ತಿ ಸಸ್ಯಗಳ ಬಳಕೆಯೂ ಬೇಡ, 2-3 ಇದ್ದರೆ ಸಾಕು. ಈ ಸಸ್ಯಗಳನ್ನು ಬೆಡ್‌ಸೈಡ್ ಟೇಬಲ್ ಅಥವಾ ವಿಂಡೋ ಸಿಲ್ ಮೇಲೆ ಇಡುವುದು ಸೂಕ್ತ.

ಇದನ್ನು ಓದಿ:Early Dinners For Health: ರಾತ್ರಿಯ ಊಟ ಬೇಗ ಮಾಡಿದಷ್ಟು ಆರೋಗ್ಯಕ್ಕೆ ಒಳಿತು

ಮೂರನೇ ಅಂಶ ಇಂಟೀರಿಯರ್ ಡಿಸೈನ್‌

ಬೆಡ್‌ರೂಮ್‌ನಲ್ಲಿ ಅಸ್ತವ್ಯಸ್ತತೆ ಕಡಿಮೆ ಮಾಡಿ. ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೆ ಒತ್ತಡ ಹೆಚ್ಚಾಗುತ್ತದೆ. ರೂಮ್‌ನಲ್ಲಿ ಬೆಚ್ಚಗಿನ ಲೈಟಿಂಗ್ ಇರಲಿ. ಇದಕ್ಕಾಗಿ ಡಿಮ್ ಲ್ಯಾಂಪ್ ಮತ್ತು ಬೆಡ್‌ಸೈಡ್ ಲೈಟ್‌ಗಳನ್ನು ಉಪಯೋಗಿಸಿ. ಕಿಟಕಿಗಳಿಗೆ ಡಾರ್ಕ್ ಅಥವಾ ಬ್ಲಾಕ್ಔಟ್ ಕರ್ಟನ್‌ ಗಳನ್ನು ಬಳಸುವುದರಿಂದ ಬೆಳಕನ್ನು ತಡೆಯಬಹುದು. ರಾತ್ರಿ ಮಲಗುವ ಸಮಯದಲ್ಲಿ ಬೆಳಕು ಕಣ್ಣಿಗೆ ಬೀಳದಂತೆ ನೋಡಿಕೊಂಡರೆ ನಿದ್ರೆಯೆ ಗುಣಮಟ್ಟ ಸುಧಾರಿಸುತ್ತದೆ. ಫೆಂಗ್‌ಶುಯಿ ಟಿಪ್ಸ್ – ಬೆಡ್‌ನ ತಲೆಯ ಭಾಗ ಗೋಡೆಗೆ ತಾಗಿರಲಿ ಮತ್ತು ಎರಡೂ ಬದಿಯಲ್ಲಿ ನೈಟ್‌ಸ್ಟ್ಯಾಂಡ್ ಇದ್ದರೆ ಉತ್ತಮ. ಯಾವಾಗಲೂ ಕಾಟನ್ ಬೆಡ್‌ಶೀಟ್‌ಗಳನ್ನು ಬಳಕೆ ಮಾಡಿದರೆ ಹೆಚ್ಚು ಆರಾಮದಾಯಕ. ಅತಿ ಮುಖ್ಯವಾಗಿ ಮಲಗುವ ಮುನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬೆಡ್‌ನಿಂದ ದೂರವಿಡಿ.

ನಾಲ್ಕನೇ ಸಂಗತಿ ಬೆಳಕು, ತಾಪಮಾನ, ಶಬ್ದ ನಿಯಂತ್ರಣ

ಕೊಠಡಿಯ ತಾಪಮಾನ 18-22 ಡಿಗ್ರಿ ಸೆಲ್ಸಿಯಸ್ ಇರಲಿ. ಶಬ್ದ ನಿಯಂತ್ರಣಕ್ಕಾಗಿ ದಪ್ಪ ಕರ್ಟನ್‌, ರಗ್‌, ಅಥವಾ ಅಕೌಸ್ಟಿಕ್‌ ಪ್ಯಾನಲ್‌ಗಳನ್ನು ಬಳಸಿ. ಲೇಯರ್ಡ್ ಲೈಟಿಂಗ್ ಒದಗಿಸಿದರೆ ಕೊಠಡಿಯ ಸೌಂದರ್ಯ ಹೆಚ್ಚಿಸಿ ನಿದ್ರೆಗೆಗೂ ಸಹಾಯಕಾರಿ ಆಗುತ್ತದೆ. ಒಟ್ಟಾರೆ ಸುಖ ನಿದ್ರೆ ಪಡೆಯಲು ಬೆಡ್‌ರೂಮ್‌ ವಿನ್ಯಾಸ ಕೂಡ ಅಷ್ಟೇ ಮುಖ್ಯ. ಬಣ್ಣ, ಸಸ್ಯ, ಇಂಟೀರಿಯರ್ ಎಲ್ಲವು ಒಟ್ಟುಗೂಡಿ ನಿಮಗೆ ಶಾಂತಿ ನೀಡುತ್ತವೆ.