Namma Metro Pass: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ; 1, 3 ಮತ್ತು 5 ದಿನದ ಪಾಸ್ ಪರಿಚಯಿಸಿದ BMRCL
ನಮ್ಮ ಮೆಟ್ರೋದಲ್ಲಿ ಜ.15ರಿಂದ ಮೊಬೈಲ್ ಕ್ಯೂಆರ್ (QR) ಆಧಾರಿತ ಪಾಸ್ ಜಾರಿಯಾಗಲಿದೆ. ಇದುವರೆಗೆ ಅನಿಯಮಿತ ಪ್ರಯಾಣ ಪಾಸ್‌ಗಳು, ಕೇವಲ ಸ್ಮಾರ್ಟ್ ಕಾರ್ಡ್ ಮೂಲಕವೇ ಲಭ್ಯವಾಗುತ್ತಿತ್ತು. ಅದಕ್ಕೆ 50 ರೂ. ಭದ್ರತಾ ಠೇವಣಿ ನೀಡಬೇಕಿತ್ತು. ಇದೀಗ ಮೊಬೈಲ್ QR ಪಾಸ್ ಮೊಬೈಲ್ ಫೋನ್‌ಗಳಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿವೆ. ಇದಕ್ಕೆ ಭದ್ರತಾ ಠೇವಣಿ ಪಾವತಿಸುವ ಅಗತ್ಯವಿರುವುದಿಲ್ಲ.
ನಮ್ಮ ಮೆಟ್ರೋ ರೈಲು -
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸಿಹಿ ಸುದ್ದಿ ನೀಡಿದೆ. ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುವ ಹಾಗೂ ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು (Namma Metro Pass) ಉತ್ತೇಜಿಸುವ ಉದ್ದೇಶದಿಂದ ಮೊಬೈಲ್ ಕ್ಯೂಆರ್ (QR) ಆಧಾರಿತ 1, 3 ಮತ್ತು 5 ದಿನಗಳ ಅನಿಯಮಿತ ಪ್ರಯಾಣದ ಪಾಸ್ ಅನ್ನು ಪರಿಚಯಿಸಿದೆ.
ಜ.15ರಿಂದ ಮೊಬೈಲ್ ಕ್ಯೂಆರ್ (QR) ಆಧಾರಿತ ಪಾಸ್ ಜಾರಿಯಾಗಲಿದೆ. ಇದುವರೆಗೆ ಅನಿಯಮಿತ ಪ್ರಯಾಣ ಪಾಸ್‌ಗಳು, ಕೇವಲ ಕಾಂಟ್ಯಾಕ್ಸ್‌ಲೆಸ್ ಸ್ಮಾರ್ಟ್ ಕಾರ್ಡ್‌ಗಳ (CSC) ಮೂಲಕವೇ ಲಭ್ಯವಾಗುತ್ತಿದ್ದು, ₹50 ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿತ್ತು. ಇದೀಗ ಮೊಬೈಲ್ QR ಪಾಸ್‌ಗಳ ಪರಿಚಯದೊಂದಿಗೆ, QR ಪಾಸ್‌ಗಳು ಮೊಬೈಲ್ ಫೋನ್‌ಗಳಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುವುದರಿಂದ ಪ್ರಯಾಣಿಕರಿಗೆ ಯಾವುದೇ ಭದ್ರತಾ ಠೇವಣಿ ಪಾವತಿಸುವ ಅಗತ್ಯವಿರುವುದಿಲ್ಲ.
ಮೊಬೈಲ್ QR ಪಾಸ್ ವೈಶಿಷ್ಟ್ಯಗಳು
- ಭದ್ರತಾ ಠೇವಣಿ ಅಗತ್ಯವಿಲ್ಲ: ಸ್ಮಾರ್ಟ್ ಕಾರ್ಡ್‌ಗಳಿಗೆ ಅಗತ್ಯವಿದ್ದ ₹50 ಠೇವಣಿ ಡಿಜಿಟಲ್ QR ಪಾಸ್‌ಗಳಿಗೆ ಇರುವುದಿಲ್ಲ.
- ಸರಳ ಖರೀದಿ ವ್ಯವಸ್ಥೆ: ಪಾಸ್‌ಗಳನ್ನು ನಮ್ಮ ಮೆಟ್ರೋ ಅಧಿಕೃತ ಆಪ್ ಮೂಲಕ ಖರೀದಿಸಬಹುದು. ಇತರ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಶೀಘ್ರದಲ್ಲೇ ಪರಿಚಯಿಸಲಾಗುವುದು.
- ಸ್ಪರ್ಶರಹಿತ ಪ್ರವೇಶ ಮತ್ತು ನಿರ್ಗಮನ: ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಪ್ರದರ್ಶಿಸಲಾದ QR ಕೋಡ್ ಅನ್ನು ಸ್ವಯಂಚಾಲಿತ ಸಂಗ್ರಹ (AFC) ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡಿ ಪ್ರವೇಶ ಮತ್ತು ನಿರ್ಗಮನ ಪಡೆಯಬಹುದು.
ದರಗಳ ವಿವರ
ಮೊಬೈಲ್ ಕ್ಯೂಆರ್ ಪಾಸ್ (ಠೇವಣಿ ಇಲ್ಲ)
- 1 ದಿನದ ಪಾಸ್- 250 ರೂ.
- 3 ದಿನದ ಪಾಸ್- 550 ರೂ.
- 5 ದಿನದ ಪಾಸ್-850 ರೂ.
ಸ್ಮಾರ್ಟ್ ಕಾರ್ಡ್ ದರ (₹50 ಠೇವಣಿ ಸೇರಿ)
- 1 ದಿನದ ಪಾಸ್- 300 ರೂ.
- 3 ದಿನದ ಪಾಸ್- 600 ರೂ.
- 5 ದಿನದ ಪಾಸ್- 900 ರೂ.
ದಿನಾಂಕ 15ನೇ ಜನವರಿ 2026 ರಿಂದ ಬಿ.ಎಂ.ಆರ್.ಸಿ.ಎಲ್ ಮೊಬೈಲ್ ಕ್ಯೂಆರ್ (QR) ಆಧಾರಿತ 1, 3 ಮತ್ತು 5 ದಿನಗಳ ಅನಿಯಮಿತ ಪ್ರಯಾಣದ ಪಾಸ್ ಪರಿಚಯ ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ.
— ನಮ್ಮ ಮೆಟ್ರೋ (@OfficialBMRCL) January 13, 2026
BMRCL Launches Mobile QR-based 1-Day, 3-Day & 5-Day Unlimited Travel Passes. pic.twitter.com/76PN4j9u9f
Bengaluru Traffic: ಬೆಂಗಳೂರಲ್ಲಿ ಇನ್ನು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಜೋಕೆ, ಎಫ್‌ಐಆರ್ ಬೀಳಬಹುದು!
ಪ್ರಯಾಣಿಕರ ಕಾರ್ಡ್ ವಿತರಣೆ ಮತ್ತು ಮರುಪಾವತಿಗಾಗಿ ಸರತಿ ಸಾಲುಗಳನ್ನು ತಪ್ಪಿಸಿ, ಸಮಯವನ್ನು ಉಳಿಸಲು ಮತ್ತು ತಡೆರಹಿತ ಪ್ರಯಾಣದ ಅನುಭವವನ್ನು ಹೆಚ್ಚಿಸಲು, ಮೊಬೈಲ್ QR-ಆಧಾರಿತ ಪಾಸ್‌ಗಳಿಗೆ ಬದಲಾಯಿಸಲು ಬಿಎಂಆರ್‌ಸಿಎಲ್ ಪ್ರೋತ್ಸಾಹಿಸುತ್ತದೆ. ಈ ಉಪಕ್ರಮವು ಪೂರ್ಣ ಡಿಜಿಟಲ್ ಮತ್ತು ಪ್ರಯಾಣಿಕ ಸ್ನೇಹಿ ಮೆಟ್ರೋ ವ್ಯವಸ್ಥೆ ರೂಪಿಸುವ ಬಿಎಂಆರ್‌ಸಿಎಲ್‌ನ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.