Child Death: ಬೆಂಗಳೂರಿನಲ್ಲಿ ಘೋರ ದುರಂತ, ಕಾರಿನಡಿಗೆ ಸಿಲುಕಿ ಮಗು ಸಾವು
Bengaluru: ಮನೆಯ ಹೊರಗಡೆ ಮಗು ಮಹಮ್ಮದ್ ಆಟ ಆಡುತ್ತಿದ್ದ. ಮನೆಯ ಮಾಲಿಕ ಕಾರು ರಿವರ್ಸ್ ತೆಗೆದುಕೊಳ್ಳುವಾಗ ಮಗುವಿನ ಮೇಲೆ ಕಾರು ಹರಿದು ಮಗು ಸಾವನ್ನಪ್ಪಿದೆ. ಕಾರಿನಡಿ ಮಗುವಿದ್ದದ್ದು ಮಾಲಿಕನಿಗೆ ಕಂಡುಬರದೆ ಇದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

-

ಬೆಂಗಳೂರು: ಬೆಂಗಳೂರಲ್ಲಿ (Bengaluru) ಘೋರವಾದ ದುರಂತ ಸಂಭವಿಸಿದೆ. ಕಾರು ಹರಿದು ಒಂದುವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ (Child Death) ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ (magadi road) ಬಳಿ ಸಂಭವಿಸಿದೆ. ಮನೆಯ ಮಾಲೀಕ ಸ್ವಾಮಿ ಎಂಬವರು ಬೆಳಿಗ್ಗೆ ಮನೆಯಿಂದ ಕಾರು ಹೊರ ತೆಗೆಯುತ್ತಿದ್ದ ವೇಳೆ, ಮನೆ ಬಾಡಿಗೆಗೆ ಇದ್ದ ಕುಟುಂಬದ ಸಂಬಂಧಿಕರ ಮಗು ಕಾರಿನಡಿಗೆ ಬಂದು ಸಿಲುಕಿ ಸಾವನ್ನಪ್ಪಿದೆ. ಕಾರನ್ನು ರಿವರ್ಸ್ ತೆಗೆಯುವಾಗ ಈ ದುರ್ಘಟನೆ ಸಂಭವಿಸಿದೆ.
ಒಂದುವರೆ ವರ್ಷದ ಮಹಮ್ಮದ್ ಉಮರ್ ಫಾರೂಕ್ ಎನ್ನುವ ಮಗು ಸಾವಿಗೀಡಾಗಿದ್ದು, ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕುಣಿಗಲ್‌ನ ಕುಟುಂಬ ಈ ಮನೆಯಲ್ಲಿ ಬಾಡಿಗೆಗೆ ವಾಸವಾಗಿದೆ. ಬಾಡಿಗೆ ಇದ್ದವರ ಸಂಬಂಧಿಕರು ತಮ್ಮ ಮಗುವಿನ ಸಮೇತ ಬಂಧುಗಳ ಮನೆಗೆ ಬಂದಿದ್ದರು. ಮನೆಯ ಹೊರಗಡೆ ಮಗು ಮಹಮ್ಮದ್ ಆಟ ಆಡುತ್ತಿದ್ದ. ಮನೆಯ ಮಾಲಿಕ ಕಾರು ರಿವರ್ಸ್ ತೆಗೆದುಕೊಳ್ಳುವಾಗ ಮಗುವಿನ ಮೇಲೆ ಕಾರು ಹರಿದು ಮಗು ಸಾವನ್ನಪ್ಪಿದೆ. ಕಾರಿನಡಿ ಮಗುವಿದ್ದದ್ದು ಮಾಲಿಕನಿಗೆ ಕಂಡುಬರದೆ ಇದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: Cyber Crime: ಮದುವೆಯಾಗುವುದಾಗಿ ವಂಚನೆ, 2.3 ಕೋಟಿ ರೂಪಾಯಿ ಕಳೆದುಕೊಂಡ ಶಿಕ್ಷಕಿ
ಮರ ಉರುಳಿ ಬಿದ್ದು ಯುವತಿ ಸಾವು
ಬೆಂಗಳೂರು: ನಗರದಲ್ಲಿ ಬೃಹತ್ ಮರದ ಕೊಂಬೆ ಬಿದ್ದು ಯುವತಿಯೊಬ್ಬಳು ಸ್ಥಳದಲ್ಲೇ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ (Bengaluru News) ನಡೆದಿದೆ. ಬೆಂಗಳೂರಿನ ಉತ್ತರ ತಾಲೂಕಿನ ಸೋಲದೇವನಹಳ್ಳಿ ಠಾಣೆಯ ಬಳಿ ದುರ್ಘಟನೆ ಸಂಭವಿಸಿದೆ. ಬೆಂಗಳೂರಿನ ಆರ್‌ಟಿ ನಗರದ ಕೀರ್ತನಾ (23) ಮೃತ ವಿದ್ಯಾರ್ಥಿ.
ಆಚಾರ್ಯ ಕಾಲೇಜು ಮೈದಾನದಲ್ಲಿ ಸ್ಯಾಂಡಲ್ ವುಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯ ನೋಡಲು ಕೀರ್ತನಾ ತೆರಳಿದ್ದರು. ಸ್ನೇಹಿತೆ ಜತೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಮರ ಉರುಳಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ಮತ್ತೊಬ್ಬ ಬೈಕ್ ಸವಾರ ಭಾಸ್ಕರ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮರ ಬಿದ್ದ ತಕ್ಷಣ ಕೊಂಬೆಗಳನ್ನು ತೆರವು ಮಾಡಿ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಯುವತಿ ಮೃತಪಟ್ಟ ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಪೊಷಕರು ದೌಡಾಯಿಸಿದ್ದಾರೆ. ಈ ವೇಳೆ ಅವರ ಆಕ್ರಂದನ ಮುಗಿಲು ಮುಟ್ಟಿದೆ.