ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ECO Friendly Vehicles: 68 ಪರಿಸರ ಸ್ನೇಹಿ ವಾಹನಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

CM Siddaramaiah: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಒಟ್ಟು 68 ವಾಹನಗಳನ್ನು ಖರೀದಿಸಿದೆ. ಇವುಗಳ ಖರೀದಿಗೆ 7,67,25,498 ರೂ. ವೆಚ್ಚವಾಗಿದೆ. ಈ ವಾಹನಗಳನ್ನು ಮಂಡಳಿಯ ರಾಜ್ಯದ್ಯಾದಂತ ಇರುವ ಪ್ರಾದೇಶಿಕ ಕಚೇರಿ ಮತ್ತು ವಲಯ ಕಚೇರಿಗಳಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ.

68 ಪರಿಸರ ಸ್ನೇಹಿ ವಾಹನಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

-

Prabhakara R Prabhakara R Oct 6, 2025 3:50 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ವಾಹನಗಳಿಗೆ (ECO Friendly Vehicles) ಸೋಮವಾರ ಚಾಲನೆ ನೀಡಿದರು. ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಶಾಸಕ ನರೇಂದ್ರಸ್ವಾಮಿ ಅವರು ಉಪಸ್ಥಿತರಿದ್ದರು.

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 68 ವಾಹನ ಖರೀದಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಒಟ್ಟು 68 ವಾಹನಗಳನ್ನು ಖರೀದಿಸಿದೆ. ಈ ವಾಹನಗಳನ್ನು ಮಂಡಳಿಯ ರಾಜ್ಯದ್ಯಾದಂತ ಇರುವ ಪ್ರಾದೇಶಿಕ ಕಚೇರಿ ಮತ್ತು ವಲಯ ಕಚೇರಿಗಳಿಗೆ ಹಂಚಿಕೆ ಮಾಡಲು ಉದ್ದೇಶಿಸಿದೆ. ಒಟ್ಟು 68 ವಾಹನಗಳ ಖರೀದಿಯ ವೆಚ್ಚವು 7,67,25,498 ರೂ. ಮೊತ್ತಗಳಾಗಿರುತ್ತದೆ. ವಾಹನಗಳ ಹಂಚಿಕೆಯ ವಿವರಗಳು ಈ ಕೆಳಕಂಡಂತೆ ಇರುತ್ತವೆ.

CM Siddaramaiah  (8)

ಮಹೀಂದ್ರಾ ಕಂಪನಿಯ 48 ಬುಲೇರೋ ನಿಯೋ ಎನ್ 4 ಮತ್ತು ಎನ್ 10 ವಾಹನಗಳನ್ನು ಖರೀದಿಸಿದ್ದು, ಸದರಿ ವಾಹನಗಳನ್ನು ರಾಜ್ಯದ್ಯಾದಂತ ಇರುವ ಪ್ರಾದೇಶಿಕ ಕಛೇರಿ ಹಾಗೂ ಬೆಂಗಳೂರು ನಗರ ಹೊರತು ಪಡಿಸಿ ಇರುವ ವಲಯ ಹಿರಿಯ ಪರಿಸರ ಅಧಿಕಾರಿಗಳಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಬೆಂಗಳೂರು ನಗರದಲ್ಲಿ ವಾಹನಗಳಿಂದ ಹೊರಸೂಸುವ ಕಾರ್ಬನ್ ಡೈಆಕ್ಸೆಡ್ ಕಡಿಮೆ ಮಾಡುವ ಉದ್ದೇಶದಿಂದ 16 ವಿದ್ಯುತ್ ಚಾಲಿತ ಮಹೀಂದ್ರ ಎಕ್ಸ್‌ಯುವಿ 400 ವಾಹನಗಳನ್ನು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಡಳಿಯ ವಲಯ ಹಿರಿಯ ಪರಿಸರ ಅಧಿಕಾರಿಗಳಿಗೆ ಮತ್ತು ಕೇಂದ್ರ ಕಚೇರಿಯ ಅಧಿಕಾರಿಗಳ ಕಾರ್ಯಚಟುವಟಿಕೆಗಳಿಗೆ ಹಂಚಿಕೆ ಮಾಡಲು ಉದ್ದೇಶಿಸಿದೆ.

ಮುಂದುವರಿದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಾಯುಗುಣಮಟ್ಟ ಮಾಪನ ಮಾಡುವ ಸಲುವಾಗಿ 4 ಮಹೀಂದ್ರಾ BS IV ಮೊಬೈಲ್ ವ್ಯಾನ್ ವಾಹನಗಳನ್ನು ಖರೀದಿಸಿದ್ದು, ಸದರಿ ವಾಹನಗಳಲ್ಲಿ Air Quality Monitoring Equipment ಗಳನ್ನು ಅಳವಡಿಸಿ ಬೆಂಗಳೂರು ನಗರದ್ಯಾದಂತ ಕಾರ್ಯನಿರ್ವಹಿಸುತ್ತಿರುವ 04 ಹಿರಿಯ ಪರಿಸರ ಅಧಿಕಾರಿಗಳ ಕಚೇರಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ.

ಈ ಸುದ್ದಿಯನ್ನೂ ಓದಿ | DK Shivakumar: ಕೆಂಪೇಗೌಡರ ಸ್ಮಾರಕಗಳ ಅಭಿವೃದ್ಧಿಗೆ 103 ಕೋಟಿ, ನಗರ ವಿನ್ಯಾಸ ಕಾಲೇಜು ಸ್ಥಾಪನೆಗೆ 100 ಕೋಟಿ ಮೀಸಲು: ಡಿ.ಕೆ.ಶಿವಕುಮಾರ್

ಈ 68 ವಾಹನಗಳ ಪೈಕಿ 49 ವಾಹನಗಳ ಖರೀದಿಯ ವೆಚ್ಚ 5,67,04,003 ರೂ. ಮೊತ್ತಗಳಾಗಿದ್ದು, ಇದನ್ನು ಮಂಡಳಿಯ ಆಂತರಿಕ ಸಂಪನ್ಮೂಲದಿಂದ ಬರಿಸಲಾಗಿದೆ ಹಾಗೂ ಇನ್ನೂಳಿದ 19 ವಾಹನಗಳ ಖರೀದಿಯ ವೆಚ್ಚ 1,99,34,998 ರೂ. ಆಗಿದ್ದು, ಇದನ್ನು National Clear Air Quality Programme ಯೋಜನೆಯಡಿಯಲ್ಲಿ ಭರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.