ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ninagagi: ಕಲರ್ಸ್ ಕನ್ನಡದಲ್ಲಿ ದಿಢೀರ್ ಮುಕ್ತಾಯವಾಯಿತು ಮತ್ತೊಂದು ಧಾರಾವಾಹಿ

ಕಳೆದ ವರ್ಷ ಮೇ 27 ರಿಂದ ನಿನಗಾಗಿ ಸೀರಿಯಲ್‌ ಪ್ರಸಾರ ಶುರುವಾಯಿತು. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಹಾಗೂ ರಿತ್ವಿಕ್ ಮಠದ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿ 413 ಸಂಚಿಕೆಗಳನ್ನ ಪೂರ್ಣಗೊಳಿಸಿದೆ. ಒಂದುಕಾಲು ವರ್ಷ ಧಾರಾವಾಹಿ ಪ್ರಸಾರ ಕಂಡಿದ್ದು ಈಗ ಅಂತ್ಯವಾಗಿದೆ.

ಕಲರ್ಸ್ ಕನ್ನಡದಲ್ಲಿ ದಿಢೀರ್ ಮುಕ್ತಾಯವಾಯಿತು ಮತ್ತೊಂದು ಧಾರಾವಾಹಿ

Ninagagi Serial End -

Profile Vinay Bhat Oct 6, 2025 5:31 PM

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ (Bigg Boss Kannada 12) ಆರಂಭವಾಗುವ ಹೊತ್ತಿಗೆ ದೃಷ್ಟಿಬೊಟ್ಟು ಧಾರಾವಾಹಿ ಅಂತ್ಯಕಂಡಿತು. ಇದರ ಜೊತೆಗೆ ಇನ್ನೂ ಕೆಲ ಸೀರಿಯಲ್ ಕೊನೆಯಾಗಲಿದೆ ಎಂಬ ಮಾತು ಕೇಳಿಬಂದಿತ್ತು. ಇದೀಗ ಈ ಸಾಲಿಗೆ ನಿನಗಾಗಿ ಧಾರಾವಾಹಿ ಸೇರಿದೆ. ಸುಮಾರು ಒಂದುಕಾಲು ವರ್ಷ ಪ್ರಸಾರ ಕಂಡ ಈ ಧಾರಾವಾಗಿಗೆ ಈಗ ಶುಭಂ ಬೋರ್ಡ್ ಬಿದ್ದಿದೆ.

ಕಳೆದ ವರ್ಷ ಮೇ 27 ರಿಂದ ನಿನಗಾಗಿ ಸೀರಿಯಲ್‌ ಪ್ರಸಾರ ಶುರುವಾಯಿತು. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಹಾಗೂ ರಿತ್ವಿಕ್ ಮಠದ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿ 413 ಸಂಚಿಕೆಗಳನ್ನ ಪೂರ್ಣಗೊಳಿಸಿದೆ. ಒಂದುಕಾಲು ವರ್ಷ ಧಾರಾವಾಹಿ ಪ್ರಸಾರ ಕಂಡಿದ್ದು ಈಗ ಅಂತ್ಯವಾಗಿದೆ. ಇತ್ತೀಚೆಗಷ್ಟೆ ಧಾರಾವಾಹಿ ತಂಡ ಕ್ಲೈಮ್ಯಾಕ್ಸ್ ಶೂಟಿಂಗ್ ಮುಗಿಸಿ ಕೊನೆಯ ದಿನದ ಚಿತ್ರೀಕರಣದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು.

ನಿನಗಾಗಿ ಧಾರಾವಾಹಿ ಕೊನೆ ಆಗಿದ್ದಕ್ಕೆ ನಟಿ ದಿವ್ಯಾ ಉರುಡುಗ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ‘‘ಸವಿ ನೆನಪುಗಳನ್ನ ಮತ್ತೆ ಮತ್ತೆ ಮೆಲುಕು ಹಾಕುತ್ತಿರುವಾಗ, ಗುಡ್ ಬೈ ಎಂಬುದು ನೋವಿನ ಪದವಲ್ಲ. ನಿನಗಾಗಿ ಒಂದು ಅದ್ಭುವಾದ ಪಯಣ. ಲೇಡಿ ಸೂಪರ್ ಸ್ಟಾರ್ ರಚನಾ ಪಾತ್ರವನ್ನ ಮಾಡಿದ್ದು ನನಗೆ ತುಂಬಾ ಖುಷಿ ಕೊಟ್ಟಿತು. ನಿನಗಾಗಿ ಧಾರಾವಾಹಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು’’ ಎಂದು ದಿವ್ಯಾ ಉರುಡುಗ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಸದ್ಯ ಯಜಮಾನ ಧಾರಾವಾಹಿ ಜೊತೆ ಮಹಾಸಂಗಮದಲ್ಲಿ ಜೊತೆಯಾಗಿರುವ ರಾಮಾಚಾರಿ ಧಾರಾವಾಹಿ ಕೂಡ ಸದ್ಯದಲ್ಲೇ ಕೊನೆಯಾಗಲಿದೆಯಂತೆ. ಖ್ಯಾತ ನಿರ್ದೇಶಕ ನಿರ್ಮಾಪಕ ಕೆ.ಎಸ್​. ರಾಮ್​ಜಿ ಅವರ ಗರಡಿಯಿಂದ ಪ್ರಸಾರವಾಗುತ್ತಿರುವ ಈ ಸೀರಿಯಲ್​ನಲ್ಲಿ ನಾಯಕ ರಿತ್ವಿಕ್​ ಕೃಪಾಕರ್ ಹಾಗೂ ನಾಯಕಿ ಮೌನ ಗುಡ್ಡೆಮನೆಗೆ ಈ ಧಾರಾವಾಹಿ ದೊಡ್ಡ ಬ್ರೇಕ್ ಕೊಟ್ಟಿತ್ತು. ರಿತ್ವಿಕ್​ ಧಾರಾವಾಹಿಗಾಗಿ ಜಿಮ್​ನಲ್ಲಿ ಕಸರತ್ತು ಮಾಡಿ ಬರೋಬ್ಬರಿ 30 ಕೆಜಿ ತೂಕ ಇಳಿಸಿದ್ದರು. ಈ ಧಾರಾವಾಹಿಗೆ ಅದ್ಭುತವಾದ ರೆಸ್ಪಾನ್ಸ್​ ಕೂಡ ಸಿಕ್ಕಿತು.

BBK 12: ಬಿಗ್ ಬಾಸ್ ಮನೆಯಲ್ಲಿ ‘ಗಾಂಚಾಲಿ’ ವಿಷಯ: ಒಂಟಿ-ಜಂಟಿಗಳ ನಡುವೆ ದೊಡ್ಡ ಜಗಳ

ಸಾಕಷ್ಟು ಕಲಾವಿದರಿಗೆ ರಾಮಾಚಾರಿ ಬ್ರೇಕ್​ ನೀಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇದರ ಸ್ಟೋರಿ ಕೊಂಚ ಡಲ್​ ಹೊಡಿತಿದೆ. ರೇಟಿಂಗ್​ ಕೂಡ ಡೌನ್​ ಆಗಿದ್ದು, ಟಾಪ್​ ಸ್ಥಾನದಲ್ಲಿ ಧಾರಾವಾಹಿ ಟಿಆರ್​ಪಿನಲ್ಲಿ ಕೊನೆ ಸ್ಥಾನ ತಲುಪಿದೆ. ಹೀಗಾಗಿ ರಾಮಾಚಾರಿಯನ್ನ ಮುಕ್ತಾಯ ಮಾಡೋ ಪ್ಲ್ಯಾನ್​ನಲ್ಲಿದೆ ತಂಡ ಎನ್ನಲಾಗಿದೆ. ಇವುಗಳ ಮಧ್ಯೆ ಇಂದಿನಿಂದ (ಅಕ್ಟೋಬರ್ 6) ಶ್ರೀ ಗಂಧದ ಗುಡಿ ಸೀರಿಯಲ್‌ ರಾತ್ರಿ 8 ಗಂಟೆಗೆ ಟೆಲಿಕಾಸ್ಟ್ ಆಗಲಿದೆ.