ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನ.22 ರಿಂದ ನ.23ರವರೆಗೆ ಕರೆಂಟ್‌ ಇರಲ್ಲ

BESCOM News: ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11 ಕೆವಿ ಎಲ್.ಆರ್. ಬಂಡೆ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ನ.22 ರಿಂದ ನ.23ರವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಧ್ಯಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರಿನ ಈ ಪ್ರದೇಶಗಳಲ್ಲಿ ನ.22 ರಿಂದ ನ.23ರವರೆಗೆ ಕರೆಂಟ್‌ ಇರಲ್ಲ

ಬೆಂಗಳೂರಿನಲ್ಲಿ ಪವರ್‌ ಕಟ್‌ (ಸಾಂದರ್ಭಿಕ ಚಿತ್ರ) -

Profile
Siddalinga Swamy Nov 20, 2025 4:31 PM

ಬೆಂಗಳೂರು, ನ.19: ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11ಕೆವಿ ಎಲ್.ಆರ್.ಬಂಡೆ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ನ.22 ರಿಂದ ನ.23ರವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಧ್ಯಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ. ಕಾವಲಬೈರಸಂದ್ರ, ಎಲ್.ಆರ್.ಬಂಡೆ ಮುಖ್ಯರಸ್ತೆ, ಗಾಂಧಿನಗರ, ಚಿನ್ನಣ್ಣ ಲೇಔಟ್, ಅಂಬೇಡ್ಕರ್ ಲೇಔಟ್, ಅನ್ವರ್ ಲೇಔಟ್, ಕಾವೇರಿ ನಗರ, ಅಂಬೇಡ್ಕರ್ ವೈದ್ಯಕೀಯ ಕಾಲೇಜು, ಸುಲ್ತಾನ್ ಪಾಳ್ಯ, ರಂಕಾನಗರ, ಕನಕನಗರ, ಕೆ.ಎಚ್.ಬಿ ಮುಖ್ಯರಸ್ತೆ, ಭುವನೇಶ್ವರಿ ನಗರ, ಡಿ.ಜಿ.ಎ ಹಳ್ಳಿ, ಕೆ.ಜೆ.ಹಳ್ಳಿ, ಕೆ.ಜೆ. ಕಾಲೋನಿ, ಆದರ್ಶ ನಗರ, ವಿ. ನಾಗೇನಹಳ್ಳಿ, ಪೆರಿಯಾರ್ ನಗರ, ಪೆರಿಯಾರ್ ಸರ್ಕಲ್, ಶಾಂಪುರ, ಕುಶಾಲ ನಗರ, ಮೋದಿ ರಸ್ತೆ, ಮೋದಿ ಗಾರ್ಡನ್, ದೊಡ್ಡಣ್ಣ ನಗರ, ಮುನಿವೀರಪ್ಪ ಲೇಔಟ್, ಸುಗರ್ ಮಂಡಿ, ಸಾಲ್ಟ್ ಮಂಡಿ, ಮುನೇಶ್ವರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಪ್ರದೇಶಗಳಲ್ಲೂ ಇಂದಿನಿಂದ ನ.23ರವರೆಗೆ ವಿದ್ಯುತ್‌ ವ್ಯತ್ಯಯ

ಸೋಲದೇವನಹಳ್ಳಿ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜಾಲಹಳ್ಳಿ ವಿಭಾಗದ ಎನ್- 9 ಉಪ ವಿಭಾಗದ ಹಲವೆಡೆ ನ.20 ರಿಂದ ನ.23ರವರೆಗೆ ಬೆಳಗ್ಗೆ 10.30 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೆ ಮಧ್ಯಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ.

Women's Entrepreneurs Day: ಮಹಿಳಾ ಉದ್ಯಮಿಗಳಿಗೆ ಗುಡ್‌ ನ್ಯೂಸ್‌; ಸರ್ಕಾರದಿಂದ ತ್ವರಿತ ಸಾಲ ಸೌಲಭ್ಯ

ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು

ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿಬಿ ಕ್ರಾಸ್, ಹೆಸರಘಟ್ಟ, ಬಿಳಿಜಾಜಿ, ದ್ವಾರಕನಗರ, ಚಿಕ್ಕಬಾಣಾವರ, ಮಾರುತಿ ನಗರ, ಗಣಪತಿ ನಗರ, ಶಾಂತಿನಗರ, ಬ್ರದರ್ಸ್ ಕಾಲೋನಿ, ಕೃಷ್ಣಾ ಕಾಲೇಜು ರಸ್ತೆ, ರಾಘವೇಂದ್ರ ಲೇಔಟ್‌, ಸಾಸುವೆಘಟ್ಟ, ಬಜ್ಜಪ್ಪ ಲೇಔಟ್‌, ಶಿವಕುಮಾರ ಸ್ವಾಮೀಜಿ ಲೇಔಟ್‌, ಗುಡ್ಡದಹಳ್ಳಿ, ದಾಸೇನಹಳ್ಳಿ, ತೋಟಗೆರೆ ಬಸವಣ್ಣ ದೇವಸ್ಥಾನ, ಹೊಸಹಳ್ಳಿ ಪಾಳ್ಯ, ಸಿಡಿಪಿಒ, ಡ್ಯಾನಿಶ್ ಫಾರ್ಮ್, ಕೆಎಂಎಫ್, ಪಶುಸಂಗೋಪನೆ, ಗುಣಿ ಅಗ್ರಹರ್, ಸೋಮಶೀತಿಹಳ್ಳಿ, ಗಾಣಿಗರಹಳ್ಳಿ, ಪೈಪ್‌ಲೈನ್‌ ರೋಡ್‌, ಕೆರೆಗುಡ್ಡಹಳ್ಳಿ, ಹುರುಳಿಚಿಕ್ಕನಹಳ್ಳಿ, ಕೆ.ಟಿ.ಪುರ, ಐಐಎಚ್‌ಆರ್, ಐವರಕೊಂಡಪುರ, ಸೀತಕೆಂಪನಹಳ್ಳಿ, ರಾಜ್ಯ ಮೀನುಗಾರಿಕೆ, ಲಿಂಗನಹಳ್ಳಿ, ಮಾದಪ್ಪನಹಳ್ಳಿ, ಕಾಳೇನಹಳ್ಳಿ ಶಿವಕೋಟೆ ಗ್ರಾಮ, ಮಾವಳ್ಳಿಪುರ, ಕೊಂಡಶೆಟ್ಟಿಹಳ್ಳಿ, ಮಧುಗಿರಿವೇಹಳ್ಳಿ, ಹುರುಳಿಚಿಕ್ಕನಹಳ್ಳಿ, ಕುರುಬರಹಳ್ಳಿ, ಕುರುಬರಹಳ್ಳಿ ಪಾಕೇಗೌಡನಪಾಳ್ಯ, ರಾಘವೇಂದ್ರ ಧಾಮ, ಬೈಲಕೆರೆ, ಆಚಾರ್ಯ ಕಾಲೇಜು ಮುಖ್ಯರಸ್ತೆ, ಅಚ್ಯುತ್ ನಗರ, ಸೋಲದೇವನಹಳ್ಳಿ, ಸಾಸುವೆಘಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ನ.21ರಂದು ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಬೆಂಗಳೂರು: 66/11 ಕೆವಿ ರಾಜನಕುಂಟೆ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗದ ಹಲವೆಡೆ ನ.21ರಂದು ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು

ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ, ಅಡ್ದೇವಿಶ್ವನಾಥಪುರ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ಕರ್ಲಾಪುರ, ಕೆಎಂಎಫ್, ಇಟಗಲ್‌ಪುರ, ಅರ್ಕೇರೆ, ಬೈರಾಪುರ, ಬೂದಮನಹಳ್ಳಿ, ದಿಬ್ಬೂರು, ಕಾಕೋಲು, ಸೊನ್ನೇನಹಳ್ಳಿ. ಸೆಂಚುರಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.