BBK 12: ಗಿಲ್ಲಿ ನಟ ಕೆಲ ಸ್ಪರ್ಧಿಗಳ ಮೇಲೆ ಏಕವಚನ ಪದ ಬಳಕೆ ಮಾಡೋದ್ಯಾಕೆ? ಅಸಲಿ ವಿಚಾರ ಹೊರಬಿತ್ತು!
Bigg Boss Kannada 12 Gilli Nata: ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವೆ ಗೌರವದ ವಿಚಾರವಾಗಿ ದೊಡ್ಡ ಜಗಳವಾಗಿದೆ. ತಮಗೆ ಗೌರವ ಕೊಡುತ್ತಿಲ್ಲ ಎಂದು ಅಶ್ವಿನಿ ಗೌಡ ಗರಂ ಆಗಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ತಾವೇಕೆ ಏಕವಚನ ಬಳಸುತ್ತೇನೆ ಎಂದು ಗಿಲ್ಲಿ ನಟ ಕೂಡ ತಿರುಗೇಟು ನೀಡಿದ್ದಾರೆ.
-
ಬಿಗ್ ಬಾಸ್ ಮನೆಯಲ್ಲಿ ಈಗ ಗೌರವದ ಪ್ರಶ್ನೆ ಮೂಡಿದೆ. ಹೌದು, ಅಶ್ವಿನಿ ಗೌಡ ಅವರು ತಮಗೆ ಗೌರವ ಕೊಡ್ತಿಲ್ಲ ಎಂದು ಗರಂ ಆಗಿದ್ದಾರೆ. ಇದೇ ವಿಚಾರಕ್ಕೆ ದೊಡ್ಡ ಜಗಳವಾಗಿ ಊಟವನ್ನು ಕೂಡ ಬಿಟ್ಟಿದ್ದಾರೆ. ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಅದರಲ್ಲೂ ಗಿಲಿ ನಟ ಏನಾದರೂ ಏಕವಚನದಲ್ಲಿ ಮಾತನಾಡಿಬಿಟ್ಟರೇ, ಅಶ್ವಿನಿ ಗೌಡ ಅವರ ಬಿಪಿ ಸರ್ರ್ ಅಂತ ಏರುತ್ತದೆ. ಆದರೆ ಎಲ್ಲರ ಜೊತೆಗೆ ಕಾಮಿಡಿ ಮಾಡಿಕೊಂಡಿರುವ ಗಿಲ್ಲಿ ನಟ ಸಡನ್ ಆಗಿ ಏಕವಚನ ಬಳಸೋದ್ಯಾಕೆ? ಮುಂದೆ ಓದಿ.
ಗಿಲ್ಲಿ ಬಾಯಲ್ಲೇ ಬಂತು ಉತ್ತರ
ಹನಿ ಹನಿ ಡ್ರಮ್ ಕಹಾನಿ ಟಾಸ್ಕ್ ವೇಳೆ ಮಾತಿನ ಚಕಮಕಿ ನಡೆದಿದೆ. ಆಗ ಅಶ್ವಿನಿ ಗೌಡ, "ಹೋಗೋಲೋ.." ಎಂದು ಏಕವಚನ ಬಳಕೆ ಮಾಡಿದ್ದಾರೆ. ಆಗ ತಿರುಗೇಟು ಕೊಟ್ಟ ಗಿಲ್ಲಿ ನಟ, "ನನ್ನ ಬಾಯಲ್ಲೂ ಈ ಮರ್ಯಾದೆ ಬರೋದು ಇದೇ ಕಾರಣಕ್ಕೆ" ಎಂದು ಹೇಳಿದ್ದಾರೆ. ಅಂದರೆ, ಗೌರವ ಕೊಟ್ಟು ಗೌರವ ತೆಗೆದುಕೊಳ್ಳಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಆದರೂ ಇದನ್ನು ಅರ್ಥ ಮಾಡಿಕೊಳ್ಳದ ಜಾಹ್ನವಿ, "ನಿಂಗೆ ಇಷ್ಟು ಮರ್ಯಾದೆ ಕೊಟ್ಟಿರೋದೇ ಹೆಚ್ಚು, ಇದೇ ಗ್ರೇಟ್" ಎಂದು ಖಾರವಾಗಿ ನುಡಿದಿದ್ದಾರೆ. ಆಗ ಮತ್ತೊಮ್ಮೆ ಗಿಲ್ಲಿ ನಟ, "ನನ್ನ ಬಾಯಲ್ಲೂ ಆ ರೀತಿ ಮಾತು ಬರೋದು ಇಂಥದ್ದೇ ಕಾರಣಕ್ಕೆ" ಎಂದು ಹೇಳಿದ್ದಾರೆ.
ಏಕವಚನ ಬಳಕೆ ಮಾಡೋದ್ಯಾಕೆ ಎಂಬುದಕ್ಕೆ ಗಿಲ್ಲಿ ಕೊಟ್ಟ ಉತ್ತರ
“Ashwini Gowda ===>
— Dєviℓ(💓) (@Prince_M_007) November 19, 2025
Being rich outside doesn’t justify drama inside. Using singular or vulgar words while expecting respect from others is unfair. Bigg Boss needs mutual dignity, not rowdy behaviour🤬🤬
First give respect and take respect equally#BBKSeason12 #BBK12 #Gilli pic.twitter.com/ePciUEK0GM
Bigg Boss 12: ಅದೊಂದು ವಿಚಾರಕ್ಕಾಗಿ ಜೈಲಿಗೆ ಹೋಗಿದ್ದ ʻಕಾಕ್ರೋಚ್ʼ ಸುಧಿ! ಈ ಪ್ರಕರಣ ಸುಖಾಂತ್ಯವಾಗಿದ್ದೇಗೆ?
ಅಶ್ವಿನಿ ಗೌಡ ನಡೆಗೆ ವೀಕ್ಷಕರು ಕೆಂಡ
ಈ ನಡುವೆ ಅಶ್ವಿನಿ ಗೌಡ ಅವರು ತಮಗೆ ಗೌರವ ಕೊಡುತ್ತಿಲ್ಲ ಎಂದು ಬೇಸರ ಬೇಸರ ಮಾಡಿಕೊಂಡಿದ್ದಾರೆ. "ನಂಗೆ ತಡೆದುಕೊಳ್ಳಲು ಆಗೋದಿಲ್ಲ, ಬೇಕಿದ್ರೆ ನಾನು ಸತ್ತು ಹೋಗಿಬಿಡ್ತಿನಿ. ಆದರೆ ಮರ್ಯಾದೆ ಬಿಟ್ಟು ಬದುಕಲ್ಲ, ನನಗದು ತುಂಬಾ ಕಷ್ಟ" ಎಂದು ಅಶ್ವಿನಿ ಕಣ್ಣೀರಿಟ್ಟಿದ್ದಾರೆ. ಆದರೆ ಈ ವೀಕ್ಷಕರನ್ನು ಇದನ್ನು ಖಂಡಿಸಿದ್ದಾರೆ. "ಅಶ್ವಿನಿ ಗೌಡ ಯಾರಿಗೂ ಮರ್ಯಾದೆ ಕೊಡೋದಿಲ್ಲ. ಗಿಲ್ಲಿಗೆ ಏಕವಚನದಲ್ಲೇ ಮಾತನಾಡಿಸುತ್ತಾರೆ. ಬಾಯಿಬಿಟ್ಟರೆ, ಯಾವನೋ ನೀನು.. ಹೋಗೋಲೋ.. ಮುಚ್ಕೋಂಡಿರು.. ಎಂದೆಲ್ಲಾ ಮಾತನಾಡುತ್ತಾರೆ. ರಕ್ಷಿತಾಗೆ ಎಸ್ ಕೆಟಗರಿ, ಅಮವಾಸ್ಯೆ ಎಂದೆಲ್ಲಾ ಹೀಯಾಳಿಸುತ್ತಾರೆ. ಆದರೆ ಅವರು ಮಾತ್ರ ಎಲ್ಲರಿಂದ ಗೌರವ ನಿರೀಕ್ಷೆ ಮಾಡ್ತಾರೆ. ಇದು ತಪ್ಪಲ್ಲವೇ" ಎಂದು ಬಿಗ್ ಬಾಸ್ ಆಡಿಯೆನ್ಸ್ ಪ್ರಶ್ನೆ ಮಾಡುತ್ತಿದ್ದಾರೆ.
ರಘು ಕೂಡ ಅಶ್ವಿನಿ ಮೇಲೆ ಕೆಂಡ
ಈ ನಡುವೆ ಗಿಲ್ಲಿ ನಟ ಅವರ ಬೆಂಬಲವಾಗಿ ನಿಂತಿರುವ ಕ್ಯಾಪ್ಟನ್ ರಘು ಕೂಡ ಅಶ್ವಿನಿ ಮೇಲೆ ಕೆಂಡವಾಗಿದ್ದಾರೆ. ಗಿಲ್ಲಿ ಏಕವಚನ ಬಳಕೆ ಬಗ್ಗೆ ಕಾಮೆಂಟ್ ಮಾಡಿರುವ ಅವರು, "ಅಶ್ವಿನಿ ಗೌಡ ಕೂಡ ಎಲ್ಲರಿಗೂ ಮರ್ಯಾದೆ ಕೊಡಬೇಕು, ಆನಂತರ ಅದನ್ನು ನಿರೀಕ್ಷೆ ಮಾಡಬೇಕು" ಎಂದು ಹೇಳಿಕೊಂಡಿದ್ದಾರೆ. ಸದ್ಯ ಗಿಲ್ಲಿ ಜೊತೆಗೆ ರಘು ವಿರುದ್ಧವೂ ಅಶ್ವಿನಿ ಗೌಡ ಕೋಪ ಮಾಡಿಕೊಂಡಿದ್ದಾರೆ. ಕ್ಯಾಪ್ಟನ್ ರಘು ಹೇಳಿದ ಕೆಲಸವನ್ನು ಅಶ್ವಿನಿ ಮಾಡಿಲ್ಲ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೂಗಾಡಿಕೊಂಡಿದ್ದಾರೆ. ಆಗ ಅಶ್ವಿನಿ, "ಬಿಗ್ ಬಾಸ್ ನನ್ನನ್ನ ಈಗಲೇ ಆಚೆ ಕಳಿಸಿ, ನಾನು ಇಲ್ಲಿರಲ್ಲ" ಅಂತ ಕಣ್ಣೀರಿಟ್ಟಿದ್ದಾರೆ. ಜೊತೆಗೆ ಮರ್ಯಾದೆ ಕೊಡ್ತಿಲ್ಲ ಎಂದು ಊಟ ಬಿಟ್ಟಿದ್ದಾರೆ. ಆದರೆ ಅಶ್ವಿನಿ ಈಗ ಸಿಂಪಥಿ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ ಎಂಬ ಮಾತುಗಳನ್ನು ವೀಕ್ಷಕರು ಹೇಳುತ್ತಿದ್ದಾರೆ. ಈ ವಾರಾಂತ್ಯದಲ್ಲಿ ಇದು ಚರ್ಚೆಗೆ ಬರುತ್ತಾ? ಕಾದುನೋಡಬೇಕು.