ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎಪಿಎಸ್‌ ಕಾಲೇಜಿನಲ್ಲಿ ಹಳದಿ -– ಕೆಂಪುಬಣ್ಣದ ವಸ್ತ್ರಗಳೊಂದಿಗೆ ವೈಭವದ ಕನ್ನಡ ರಾಜ್ಯೋತ್ಸವ ಆಚರಣೆ

ಡಾ. ಜಯಶ್ರೀ ಅರವಿಂದ್ ಅವರು ಎಪಿಎಸ್‌ ಸಂಸ್ಥೆಗಳೊಂದಿಗೆ ತಮ್ಮ ಆರು ದಶಕಗಳ ದೀರ್ಘ ಕಾಲದ ನಂಟನ್ನು ಸ್ಮರಿಸಿ, ಶಿಕ್ಷಣ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಸಂಸ್ಥೆಯ ನಿರಂತರ ಕೊಡುಗೆ ಯನ್ನು ಶ್ಲಾಘಿಸಿದರು. ತಮ್ಮ ಗುರುವಾದ, ಕರ್ನಾಟಕದ ಜನಪದ ಸಂಗೀತದ ಪ್ರಖ್ಯಾತ ಕಲಾವಿದ ಸಿ. ಆರ್. ಅಶ್ವತ್ ಅವರನ್ನು ಬೆಳೆಸುವಲ್ಲಿ ಎಪಿಎಸ್‌ ಸಂಸ್ಥೆಗಳ ಪಾತ್ರವನ್ನು ನೆನಪು ಮಾಡಿಕೊಂಡರು.

ಹಳದಿ -– ಕೆಂಪುಬಣ್ಣದ ವಸ್ತ್ರಗಳೊಂದಿಗೆ ವೈಭವದ ಕನ್ನಡ ರಾಜ್ಯೋತ್ಸವ ಆಚರಣೆ

-

Ashok Nayak
Ashok Nayak Nov 20, 2025 5:19 PM

ಬೆಂಗಳೂರು: ನಗರದ ಎನ್.ಆರ್. ಕಾಲೋನಿಯ ಜ್ಞಾನದೇಗುಲ ಕ್ಯಾಂಪಸ್ ನ ಎಪಿಎಸ್‌ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಆಡಳಿತ ವರ್ಗ ಕನ್ನಡದ ಬಾವುಟದ ಪ್ರತೀಕವಾದ ಹಳದಿ ಮತ್ತು ಕೆಂಪು ಬಣ್ಣದ ವಸ್ತ್ರಗಳೊಂದಿಗೆ ಸಂಭ್ರಮಿಸಿದರು.

ಬಣ್ಣಗಳ ಸೊಗಸಾದ ವಸ್ತ್ರಸಂಹಿತೆಯನ್ನು ಅನುಸರಿಸಿ, ಕಾರ್ಯಕ್ರಮಕ್ಕೆ ವಿಶೇಷ ಸೊಬಗು, ಸಮರಸ್ಯ ಮತ್ತು ಬಣ್ಣರಂಜಿತ ವಾತಾವರಣವನ್ನು ತಂದರು. ಎಲ್ಲಾದರೂ ಇರು, ಎಂತಾ ದರೂ ಇರು – ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ನಿಜವಾದ ಕನ್ನಡ ಸ್ಫೂರ್ತಿ ಯನ್ನು ಪ್ರತಿಬಿಂಬಿಸುವಂತಿತ್ತು. ಕರ್ನಾಟಕದ ಸಮೃದ್ಧ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಘನಗಂಭೀರ ಗರ್ವವನ್ನು ವ್ಯಕ್ತಪಡಿಸುವ ಹಬ್ಬದ ಸಂಭ್ರಮದಿಂದ ಕ್ಯಾಂಪಸ್‌ ತುಂಬಿತ್ತು.

ಇದನ್ನೂ ಓದಿ: Bangalore News: ಆರಂಭಿಕ ಪತ್ತೆ ಮತ್ತು ತಡೆಗಟ್ಟುವಿಕೆ ಉತ್ತೇಜಿಸಲು ಕ್ಯಾನ್ಸರ್ ಜಾಗೃತಿ ವಾಕಥಾನ್ ಆಯೋಜಿಸಿದ ನ್ಯೂಬರ್ಗ್ ಆನಂದ್

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಲಾಶ್ರೀ ಡಾ. ಜಯಶ್ರೀ ಅರವಿಂದ್, ಶ್ರೀಸಂತವಾಣಿ ಸುಧಾಕರ್‌ ಹಾಗೂ ತಂಡ ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು. ಕನ್ನಡ ರಾಜ್ಯೋ ತ್ಸವ ಗೀತಗಳನ್ನು ಹಾಡಿ, ಭಕ್ತಿ ಮತ್ತು ದೇಶಭಕ್ತಿಯ ಸ್ಫೂರ್ತಿಯನ್ನು ಹೆಚ್ಚಿಸಿದರು.

ಡಾ. ಜಯಶ್ರೀ ಅರವಿಂದ್ ಅವರು ಎಪಿಎಸ್‌ ಸಂಸ್ಥೆಗಳೊಂದಿಗೆ ತಮ್ಮ ಆರು ದಶಕಗಳ ದೀರ್ಘಕಾಲದ ನಂಟನ್ನು ಸ್ಮರಿಸಿ, ಶಿಕ್ಷಣ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಸಂಸ್ಥೆಯ ನಿರಂತರ ಕೊಡುಗೆಯನ್ನು ಶ್ಲಾಘಿಸಿದರು. ತಮ್ಮ ಗುರುವಾದ, ಕರ್ನಾಟಕದ ಜನಪದ ಸಂಗೀತದ ಪ್ರಖ್ಯಾತ ಕಲಾವಿದ ಸಿ. ಆರ್. ಅಶ್ವತ್ ಅವರನ್ನು ಬೆಳೆಸುವಲ್ಲಿ ಎಪಿಎಸ್‌ ಸಂಸ್ಥೆಗಳ ಪಾತ್ರವನ್ನು ನೆನಪು ಮಾಡಿಕೊಂಡರು.

ಎಪಿಎಸ್‌ ಸಂಸ್ಥೆಗಳ ಅಧ್ಯಕ್ಷರಾದ ಸಿಎ. ಡಾ. ವಿಷ್ಣು ಭರತ್ ಅಲಂಪಲ್ಲಿ ಮಾತನಾಡಿ., ಕನ್ನಡ ನಾಡಿನಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಜನ್ಮವೆತ್ತಿರುವುದು ನಿಜವಾದ ಭಾಗ್ಯ. ಬೆಂಗಳೂರು “ಭೂಲೋಕದಸ್ವರ್ಗ”. ಕರ್ನಾಟಕ ನಿರ್ಮಾಣಕ್ಕೆ ಕಾರಣಕರಾದ ಆಲೂರು ವೆಂಕಟರಾಯರ ಕೊಡುಗೆ ಅಪಾರ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ.ಎ.ಪ್ರಕಾಶ್, ಪ್ರಾಂಶುಪಾಲ ರಾದ ಪರಮೇಶ – ಎಪಿಎಸ್‌ ಕಾಲೇಜ್ ಆಫ್ ಕಾಮರ್ಸ್, ಭಾಗ್ಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.