ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Power Cut: ಆ.16,17ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

Bengaluru Power Cut: ಬೆಂಗಳೂರು ನಗರದ 220/66/11 ಕೆ.ವಿ. ಇ.ಪಿ.ಐ.ಪಿ ಸ್ಟೇಷನ್‌ನಲ್ಲಿ 31.5 ಎಂ.ವಿ.ಎ ಶಕ್ತಿ ಪರಿವರ್ತಕ -3 ರ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಆ.16ರಂದು ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

ಆ.16,17ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

Profile Siddalinga Swamy Aug 15, 2025 4:36 PM

ಬೆಂಗಳೂರು: ಬೆಂಗಳೂರು ನಗರದ 220/66/11 ಕೆ.ವಿ. ಇ.ಪಿ.ಐ.ಪಿ ಸ್ಟೇಷನ್‌ನಲ್ಲಿ 31.5 ಎಂ.ವಿ.ಎ ಶಕ್ತಿ ಪರಿವರ್ತಕ -3 ರ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಆ.16ರಂದು ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು: ಎಲ್ & ಟಿ, ಆರ್‌ಎಂಝಡ್ ನೆಕ್ಸ್ಟ್, ಇಪಿಪಿ ಲೇಔಟ್, ಟಿಸಿಎಸ್ ಸಾಫ್ಟ್‌ವೇರ್, ಎಸ್‌ಜೆಆರ್ ಟೆಕ್ ಪಾರ್ಕ್‌, ಇಪಿಪಿ ಲೇಔಟ್, ಎಂ/ಎಸ್ ವಿಎಸ್ಎನ್ಎಲ್ ಫೀಡರ್, ರಿಲಯನ್ಸ್ (ಬಿಗ್ ಬಜಾರ್), ಒರಿಯೆಂಟಲ್ ಹೋಟೆಲ್, ಇಪಿಪಿ ಲೇಔಟ್, ಬುಶ್ರಾ ಟೆಕ್ ಪಾರ್ಕ್‌, ಸದಾ ಟೆಕ್ ಪಾರ್ಕ್‌, ಕ್ವಾಲ್‌ಕಾಮ್, ಕ್ವಾಲ್ಕಾಮ್ 2, ಜಿ.ಇ.ಬಿ.ಇ ಕಂಪನಿ, ಬಾಗ್ಮನೆ ನಿಯೋನ್ ಬ್ಲಾಕ್, ಇಪಿಪಿ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 220/66/11 kV ಎಸ್.ಆರ್.ಎಸ್. ಪೀಣ್ಯಾ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಆ.17 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು: ಗೃಹಲಕ್ಷ್ಮಿ-ಅಪಾರ್ಟ್‌ಮೆಂಟ್, ಎಸ್‌ಎಂ ರಸ್ತೆ, ಜಾಲಹಳ್ಳಿ ಕ್ರಾಸ್, ಚೊಕ್ಕಸಂದ್ರ, ಮಾರುತಿ ಲೇಔಟ್, ಕೆಂಪಯ್ಯ ಲೇಔಟ್, ಜಿ.ಜಿ ಪಾಳ್ಯ, ಇಸ್ರೋ, ನಾರಾಯಣಪುರ, ಎನ್.ಟಿ.ಟಿ.ಎಫ್ ಸರ್ಕಲ್, ಗಣಪತಿನಗರ ಮುಖ್ಯ ರಸ್ತೆ, ಪೊಲೀಸ್ ಠಾಣೆ ರಸ್ತೆ, ಚಾಮುಂಡಿಪುರ, ರಾಜೇಶ್ವರಿ ನಗರ, ಆಕಾಶ್ ಥಿಯೇಟರ್ ರಸ್ತೆ, ವಿ ಇಗ್ನಾನ ಪಬ್ಲಿಕ್ ರ‍್ಕಲ್ ರಸ್ತೆ, ಭೈರವೇಶ್ವರ ನಗರ, ಬ್ಯಾಂಕ್ ಕಾಲೋನಿ, ಮುನೇಶ್ವರ ಲೇಔಟ್, ಎಫ್ಎಫ್ ಲೇಔಟ್, ಎನ್ಎಸ್ ಬಡವಣೆ, ಕೆಜಿ ಲೇಔಟ್, ರಾಜೀವ್ ಗಾಂಧಿ ನಗರ ಭಾಗಶಃ, ಚೌಡೇಶ್ವರಿ ನಗರ ಭಾಗಶಃ, ಲಗ್ಗೆರೆ ಹಳೆ ಗ್ರಾಮ ಭಾಗಶಃ ಪೀಣ್ಯ 4ನೇ ಹಂತ, 4ನೇ ಮುಖ್ಯ, 8ನೇ ಅಡ್ಡ ಮತ್ತು ಸುತ್ತಮುತ್ತಲಿನ ಪ್ರದೇಶ.

ಈ ಸುದ್ದಿಯನ್ನೂ ಓದಿ | Wedding Nail Art Trend: ಶ್ರಾವಣದ ವೆಡ್ಡಿಂಗ್ ಸೀಸನ್‌ನಲ್ಲಿ ಹೆಚ್ಚಾಯ್ತು ನೇಲ್ ಆರ್ಟ್ ಕ್ರೇಝ್!

66/11 kV ಪ್ಲಾಟಿನಂ ಸಿಟಿ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಆ.17 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು: ರಿಲಯನ್ಸ್ ಇಂಡಸ್ಟ್ರೀಸ್, ಕರ‍್ಲೋನ್, ಸಿಕೆಎ, ಅಲಿಸ್ಡಾ, ಜೈರ‍್ತ್ ಇಂಡಸ್ಟ್ರೀಸ್ ಏರಿಯಾ, ಟಾಟಾ ಅಕೆವಲ್, ಕರ‍್ಲೆ, ಪ್ರೊಫೆಷನಲ್-ಕ್ಲೋಥಿಂಗ್, ರಾಘವೇಂದ್ರ ಲೇಔಟ್, ಆರ್‌ಎನ್‌ಎಸ್ ಮೋಟಾರ್, ಮುನೇಶ್ವರ ನಗರ, ವೈಷ್ಣವಿ ನಕ್ಷತ್ರ ಅಪಾರ್ಟ್‌ಮೆಂಟ್, ಲೆಫ್ಟಿನೆಂಟ್ ಕರ‍್ಲೆ, HMT ರಸ್ತೆ, ಪ್ಲಾಟಿನಂ ಸಿಟಿ ಅಪಾರ್ಟ್‌ಮೆಂಟ್, BFW, NTRO, ಜಲ ಸೌಧ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.