ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru Power Cut: ನಾಳೆ, ನಾಡಿದ್ದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

Bengaluru Power Cut: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11ಕೆ.ವಿ ಪದ್ಮನಾಭನಗರ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಜೂನ್‌ 24ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ನಾಳೆ, ನಾಡಿದ್ದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಸಾಂದರ್ಭಿಕ ಚಿತ್ರ. -

Profile
Siddalinga Swamy Jun 23, 2026 8:56 PM

ಬೆಂಗಳೂರು, ಜೂ.23: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11ಕೆ.ವಿ ಪದ್ಮನಾಭನಗರ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಜೂನ್‌ 24ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಬನಗಿರಿ ನಗರ, ಪಾಪಯ್ಯ ಗಾರ್ಡನ್, ಬಾಲಾಜಿ ಕಲ್ಯಾಣ ಮಂಟಪ ಸುತ್ತಮುತ್ತ, ಸಿದ್ದಮ್ಮ & ಸಿದ್ದಯ್ಯ ರೆಡ್ಡಿ ಏರಿಯಾ, ದಕ್ಷಿಣ 9ನೇ ಉಪ ವಿಭಾಗ ಕಛೇರಿ, ಜಯನಗರ ವಿಭಾಗ ಕಛೇರಿ, 30ನೇ ಮೇನ್, 30ನೇ ಕ್ರಾಸ್, ಬಿ.ಎನ್. ಎಂ. ಕಾಲೇಜ್, ಬಿ.ಡಿ.ಎ. ಕಾಂಪ್ಲೆಕ್ಸ್, ದೇವಗಿರಿ ದೇವಸ್ಥಾನ, ಬಿ.ಎಸ್.ಎನ್.ಎಲ್. ಕಛೇರಿ, ಬನಶಂಕರಿ 2ನೇ ಹಂತ, ಎಸ್.ಎಲ್.ವಿ ಹೋಟೆಲ್ನಿಂದ 24ನೇ ಕ್ರಾಸ್, ಉಪಹಾರ ಹೋಟೆಲ್, 24ನೇ ಕ್ರಾಸ್, ಚನ್ನಮ್ಮನಕೆರೆ ಅಚ್ಚುಕಟ್ಟು, ಮಂಜುನಾಥ ಕಾಲೋನಿ, ಬಿ.ಎಂ.ಟಿ.ಸಿ. ಡಿಪೋ, ರಾಜೀವ್ ನಗರ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಪದ್ಮನಾಭನಗರ, ರಾಘವೇಂದ್ರ ಲೇಔಟ್, 18ನೇ ಮೇನ್ ಟೆಲಿಫೋನ್ ಎಕ್ಸ್ಚೇಂಜ್, ಕಿಡ್ನಿ ಪೌಂಡೇಶನ್, ಮಹಾರಾಜ ಆಸ್ಪತ್ರೆ, ಲಕ್ಷೀಕಾಂತ ಕಲ್ಯಾಣ ಮಂಟಪ, ಪುಟ್ಟಲಿಂಗಯ್ಯ ರಸ್ತೆ, ಪದ್ಮನಾಭನಗರ, ಲಕ್ಷೀಕಾಂತ ಕಲ್ಯಾಣ ಮಂಟಪ, ಶ್ರವಂತಿ ಅಪರ‍್ಟ್ಮೆಂಟ್, ಆರ್.ಕೆ. ಲೇಔಟ್, ಕದಿರೇನಹಳ್ಳಿ, ಯಾರಬ್ ನಗರ, 9ನೇ ಮೇನ್, ಕಾವೇರಿ ನಗರ, ಡಾ. ಅಂಬೇಡ್ಕರ್ ನಗರ, ಎಂ. ಎಂ. ಇಂಡಸ್ಟಿಯಲ್ ಏರಿಯ, ಪೋಸ್ಟ್ ಆಫೀಸ್, ಎಂಎಂಐ, ಇಂಡೋ ಅಮೇರಿಕನ್, ಉಮಾ ಮಹೇಶ್ವರಿ ದೇವಸ್ಥಾನ 15ರಿಂದ 17ನೇ ಡಿ ಕ್ರಾಸ್‌ವರೆಗೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.‌

ಜೂನ್‌ 25ರಂದು ಕರೆಂಟ್‌ ಇರಲ್ಲ

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11 ಕೆ.ವಿ ಯೆಲ್ಲಾರ್ ಬಂಡೆ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಜೂನ್‌ 25ರಂದು ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಎ.ಕೆ. ಆಶ್ರಮ ರಸ್ತೆ, ದೇವೇಗೌಡ ರಸ್ತೆ, ಆರ್.ಟಿ. ನಗರ 1ನೇ ಬ್ಲಾಕ್, ತಿಮ್ಮಯ್ಯ ಗಾರ್ಡನ್, ಮೋದಿ ಗಾರ್ಡನ್, ಸೈನಿಕ ಪ್ರದೇಶ, ವೀರಣ್ಣಪಾಳ್ಯ, ಲುಂಬಿನಿ ಗಾರ್ಡನ್, ಬಿ.ಡಬ್ಲ್ಯು.ಎಸ್.ಎಸ್.ಬಿ ಮಲಿನಜಲ ಶುದ್ಧೀಕರಣ ಘಟಕ, ಮರಿಯಣ್ಣಪಾಳ್ಯ, ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ, ದಾಸರಹಳ್ಳಿ, ಮಾರುತಿ ಲೇಔಟ್, ಭುವನೇಶ್ವರಿ ನಗರ, ಬಿಇಎಲ್ ಕಾರ್ಪೊರೇಟ್ ಆಫೀಸ್, ಚಾಣಕ್ಯ ಲೇಔಟ್, ನಾಗವಾರ, ಎಂ.ಎಸ್. ರಾಮಯ್ಯ ನಾರ್ತ್ ಸಿಟಿ, ತನಿಸಂದ್ರ ಮುಖ್ಯ ರಸ್ತೆ, ಆಶೀರ್ವಾದ್ ನಗರ, ಅಮರಜ್ಯೋತಿ ಲೇಔಟ್, ರಾಚೇನಹಳ್ಳಿ ಮುಖ್ಯ ರಸ್ತೆ, ಮೇಸ್ತ್ರಿ ಪಾಳ್ಯ, ರಾಯಲ್ ಎನ್ಕ್ಲೇವ್, ಶ್ರೀರಾಮಪುರ ಗ್ರಾಮ, ವಿ.ಎಚ್.ಬಿ.ಸಿ.ಎಸ್ ಲೇಔಟ್, ವೀರಣ್ಣಪಾಳ್ಯ, ಜೋಜಪ್ಪ ಲೇಔಟ್, 17ನೇ ಕ್ರಾಸ್, ಗೋವಿಂದಪುರ, ವೀರಣ್ಣಪಾಳ್ಯ ಮುಖ್ಯ ರಸ್ತೆ, ಬೈರಪ್ಪ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಎನ್‌ಜಿಒಗಳಿಗೆ ಬರೋಬ್ಬರಿ 24 ಕೋಟಿ ರೂ. ಅನುದಾನ; ಸರ್ಕಾರೇತರ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದ ಎಚ್‌ಸಿಎಲ್ ಫೌಂಡೇಶನ್

ಜೂನ್‌ 25ರಂದು ನಗರದ ವಿವಿಧೆಡೆ ಕರೆಂಟ್‌ ಇರಲ್ಲ

66/11ಕೆ.ವಿ ರಾಜನಕುಂಟೆ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಜೂನ್‌ 25ರಂದು ಗುರುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ, ಅಡ್ದೇವಿಶ್ವನಾಥಪುರ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ಕರ್ಲಾಪುರ, ಕೆಎಂಎಫ್, ಇಟಗಲ್‌ಪುರ, ಅರ್ಕೇರಿ, ಬೈರಾಪುರ, ಬೂದಮನಹಳ್ಳಿ, ದಿಬ್ಬೂರು, ಕಾಕೋಲು, ಸೊನ್ನೇನಹಳ್ಳಿ, ಸೆಂಚುರ್ ಲೇಔಟ್ ಮತ್ತು ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.