Bengaluru Power Cut: ಅ.30ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
Bengaluru News: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11 ಕೆವಿ ಪಾಟರಿ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಅ.30ರಂದು ಗುರುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11 ಕೆವಿ ಪಾಟರಿ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಅ.30ರಂದು ಗುರುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು
ಹಳೆಯ ಬೈಯಪ್ಪನಹಳ್ಳಿ, ನಾಗೇನ್‌ಪಾಳ್ಯ, ಸತ್ಯನಗರ, ಗಜೇಂದ್ರನಗರ, ಎಸ್. ಕುಮಾರ್ ಲೇಔಟ್, ಆಂಧ್ರ ಬ್ಯಾಂಕ್ ರಸ್ತೆ, ಕುಕ್ಸನ್ ರಸ್ತೆ, ರಿಚರ್ಡ್ಸ್ ಪಾರ್ಕ್ ರಸ್ತೆ, ಆಯಿಲ್ ಮಿಲ್ ರಸ್ತೆ, ಸದಾಶಿವ ದೇವಸ್ಥಾನ ರಸ್ತೆ, ಕಾಮನಹಳ್ಳಿ ಮುಖ್ಯ ರಸ್ತೆ, ಕೆಎಚ್‌ಬಿ ಕಾಲೋನಿ, ಜೈಭಾರತ್ ನಗರ, ಸಿ.ಕೆ. ಗಾರ್ಡನ್, ಡಿ'ಕೋಸ್ಟಾ ಲೇಔಟ್, ಹಚಿನ್ಸ್ ರಸ್ತೆ, ಉತ್ತರ ರಸ್ತೆ, ವೀಲರ್ ರಸ್ತೆ, ಅಶೋಕ ರಸ್ತೆ, ಬಾಣಸವಾಡಿ ರೈಲ್ವೆ ನಿಲ್ದಾಣ ರಸ್ತೆ, ಮರಿಯಮ್ಮ ದೇವಸ್ಥಾನ ಬೀದಿ, ಲಾಜರ್ ಲೇಔಟ್, ವಿವೇಕಾನಂದ ನಗರ, ಕ್ಲೈನ್ ರಸ್ತೆ, ಟೆಲಿಫೋನ್ ಎಕ್ಸ್‌ಚೇಂಜ್ ರಸ್ತೆ, ಗ್ಯಾಂಗ್‌ಮೆನ್ ಕ್ವಾರ್ಟರ್ಸ್, ಹಚಿನ್ಸ್ ರಸ್ತೆ ಪಾರ್ಕ್ ರಸ್ತೆ, ದೇಶೀಯನಗರ ಸ್ಲಮ್, 5 ನೇ ಮತ್ತು 6 ನೇ ಕ್ರಾಸ್ ಹಚಿನ್ಸ್ ರಸ್ತೆ, ದೈಹಿಕ ಅಂಗವಿಕಲ (ಎಪಿಡಿ) ಸಂಸ್ಥೆ, ಲಿಂಗರಾಜಪುರ, ಕರಿಯನಪಾಳ್ಯ, ರಾಮಚಂದ್ರಪ್ಪ ಲೇಔಟ್, ಕರಮಚಂದ್ ಲೇಔಟ್, ಸಿಎಂಆರ್ ಲೇಔಟ್, ಶ್ರೀನಿವಾಸ ಲೇಔಟ್, ಸ್ಪೆಕ್ಟ್ರಾ ಅಪಾರ್ಟ್‌ಮೆಂಟ್‌ಗಳು, ಮಿಲ್ಟನ್ ಸ್ಟ್ರೀಟ್, ಪುರವಂಕರ ಅಪಾರ್ಟ್ಮೆಂಟ್, ಐಟಿಸಿ ಮುಖ್ಯ ರಸ್ತೆ, ಜೀವನಹಳ್ಳಿ, ಫೇರ್ಮಾಂಟ್ ಟವರ್ಸ್ (ಐಟಿಸಿ), ಲೂಯಿಸ್ ರಸ್ತೆ, ಕೃಷ್ಣಪ್ಪ ಗಾರ್ಡನ್, ರಾಘವಪ್ಪ ಗಾರ್ಡನ್, ಬಿಬಿಎಂಪಿ ಸರ್ಕಾರಿ ಆಸ್ಪತ್ರೆ, ಶ್ರೀ ಧರಿಯಂ ಕಣ್ಣಿನ ಆಸ್ಪತ್ರೆ, ಹೀರಾಚಂದ್ ಲೇಔಟ್, HT-87 ಓರಿಯನ್ ಮಾಲ್, ಬಾಣಸವಾಡಿ ಮುಖ್ಯ ರಸ್ತೆ, ತ್ಯಾಗರಾಜ ಲೇಔಟ್ (ಪ್ರೇಮ ಕರಿಯಪ್ಪ), ಮುದಪ್ಪ ರಸ್ತೆ, ಕೆಂಪಣ್ಣ ರಸ್ತೆ, ರಾಘವಪ್ಪ ರಸ್ತೆ, ಮುಕುಂದ ಥಿಯೇಟರ್, ಪವನ್ ನರ್ಸಿಂಗ್ ಹೋಂ, ಪೋಸ್ಟ್ ಆಫೀಸ್ ರಸ್ತೆ, ವೆಂಕಟರಮಣ ಲೇಔಟ್, MSO ಕಾಲೋನಿ, MEG ಆಫೀಸರ್ಸ್ ಕಾಲೋನಿ, ಪ್ರಣವ್ ಡಯಾಗ್ನೋಸ್ಟಿಕ್ಸ್, ಸೇಂಟ್ ಜಾನ್ಸ್ ರಸ್ತೆ, ರುಕ್ಮಿಣಿ ಕಾಲೋನಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಅದೇ ರೀತಿ ಮಾಮುಂಡಿ ಪಿಳ್ಳೈ ಬೀದಿ, ಡೇವಿಸ್ ರಸ್ತೆ, ಹಾಲ್ ರಸ್ತೆ, ರೋಜರ್ ರಸ್ತೆ, ಪಿಳ್ಳನ್ನ ಗಾರ್ಡನ್ 1ನೇ ಹಂತ, ಹೊಸ ಬಾಗಲೂರು ಲೇಔಟ್, ಚಿನಪ್ಪ ಉದ್ಯಾನ, SK ಉದ್ಯಾನ, ಹ್ಯಾರಿಸ್ ರಸ್ತೆ, ಬೋರ್ ಬ್ಯಾಂಕ್ ರಸ್ತೆ, ಮುದಮ್ಮ ಉದ್ಯಾನ, ವೀಲರ್ಸ್ ರಸ್ತೆ, ದೊಡ್ಡಿಗುಂಟ, ಸುಂದರಮೂರ್ತಿ ರಸ್ತೆ, ತಂಬುಚಟ್ಟಿ ರಸ್ತೆ, ಸಿಂಧಿ ಕಾಲೋನಿ, ಆಸ್ಸಿ ರಸ್ತೆ, ಸಿಸಿ ರಸ್ತೆ, ಆರ್‌ಕೆ ರಸ್ತೆ, ಆಸ್ಸಿ ರಸ್ತೆ, ಟ್ಯಾಂಕ್ ರಸ್ತೆ, ನ್ಯೂ ಅವೆನ್ಯೂ ರಸ್ತೆ, ಪಿಎಸ್ಕೆ ನಾಯ್ಡು ರಸ್ತೆ, ಎಂಎಂ ರಸ್ತೆ, ಕೆಂಚಪ್ಪ ರಸ್ತೆ, ಲಾಜರ್ ರಸ್ತೆ, ಸ್ಟೆಫೆನ್ಸ್ ರಸ್ತೆ, ಮಸೀದಿ ರಸ್ತೆ, ರತ್ನಸಿಂಗ್ ರಸ್ತೆ, ಮೂರ್ ರಸ್ತೆ, ದೊಡ್ಡಿ, ಎನ್‌ಸಿ ಕಾಲೋನಿ, ಗಿಡ್ಡಪ್ಪ ಬ್ಲಾಕ್, ಎಕೆ ಕಾಲೋನಿ, ಹೊಸ ಬಾಗಲೂರು ಎಲ್/ಒ, ಹಳೆಯ ಬಾಗಲೂರು ಎಲ್/ಒ, ಭಾರತಮಠ ಎಲ್/ಒ, ಪಿಳ್ಳನ್ನ ಗಾರ್ಡನ್ 3ನೇ ಹಂತ, ರೈಲ್ವೆ ಎಲ್/ಒ, ಮಾರುತಿ ಸೇವಾನಗರ, ಜೈ ಭಾರತ್ ನಗರ, ಫ್ರೇಜರ್ ಟೌನ್, ಕಾಕ್ಸ್ ಟೌನ್, ಬೆನ್ಸನ್ ಟೌನ್, ರಿಚರ್ಡ್ಸ್ ಟೌನ್, ಮಸೀದಿ ರಸ್ತೆ, ಬಿಯಪ್ಪನ ಹಳ್ಳಿ, ಹಲ್ಸೂರು, ಆರ್ ಕೆ ರಸ್ತೆ, ಕೋಲ್ಸ್ ರಸ್ತೆ, ಟ್ಯಾನರಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Bescom Helpline: ವಿದ್ಯುತ್ ಸಮಸ್ಯೆಗಳಿಗೆ 1912 ಅಥವಾ ʼವಾಟ್ಸ್ ಆ್ಯಪ್ʼ ಸಹಾಯವಾಣಿಗೆ ದೂರು ದಾಖಲಿಸಿ: ಬೆಸ್ಕಾಂ
Electricity Meter: ಕೈಗೆಟಕುವ ಸ್ಥಳದಲ್ಲಿ ವಿದ್ಯುತ್ ಮೀಟರ್ ಅಳವಡಿಸಲು ಬೆಸ್ಕಾಂ ಮನವಿ
ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ (BESCOM) ಆಪ್ಟಿಕಲ್ ಪೋರ್ಟ್ ಪ್ರೋಬ್ ತಂತ್ರಜ್ಞಾನ ಬಳಸಿ ಗ್ರಾಹಕರಿಗೆ ವಿದ್ಯುತ್ ಬಿಲ್ ನೀಡಲಾಗುತ್ತಿದ್ದು, ಮಾಪಕ ಓದುಗರು ಮೀಟರ್ ರೀಡಿಂಗ್ ಮಾಡಲು ಅನುಕೂಲವಾಗುವಂತೆ ಗ್ರಾಹಕರು ತಮ್ಮ ಸ್ಥಾವರಗಳ ವಿದ್ಯುತ್ ಮೀಟರ್‌ಗಳನ್ನು ಕೈಗೆಟಕುವ ಸ್ಥಳಗಳಲ್ಲಿ ಅಳವಡಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.
ಈ ಸುದ್ದಿಯನ್ನೂ ಓದಿ | Wedding Fashion 2025: ವೆಡ್ಡಿಂಗ್ ಸಮಾರಂಭಗಳಲ್ಲಿ ರಾಯಲ್ ಲುಕ್‌ಗೆ ಸೈ ಎಂದ ಫ್ಯಾಷನ್ ಪ್ರಿಯರು
ಬೆಸ್ಕಾಂ ವ್ಯಾಪ್ತಿಯಲ್ಲಿ ಕೆಲವು ವಿದ್ಯುತ್ ಸ್ಥಾವರಗಳ ಮೀಟರ್‌ಗಳನ್ನು ಎತ್ತರದ ಪ್ರದೇಶದಲ್ಲಿ ಅಳವಡಿಸಿರುವುದರಿಂದ ಅಪ್ಟಿಕಲ್ ಪೋರ್ಟ್ ಪ್ರೋಬ್ ಮೂಲಕ ಮೀಟರ್ ರೀಡಿಂಗ್ ಮಾಡಲು ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಮೀಟರ್‌ಗಳನ್ನು ನೆಲಮಟ್ಟದಿಂದ 5.0 ರಿಂದ 5.5 ಅಡಿ ಎತ್ತರದಲ್ಲಿ ಅಳವಡಿಸಿಕೊಳ್ಳುವಂತೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.