ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranji Trophy: ಗುಜರಾತ್‌ ವಿರುದ್ಧ 8 ವಿಕೆಟ್‌ ಕಿತ್ತ ಬಳಿಕ ದೊಡ್ಡ ಹೇಳಿಕೆ ನೀಡಿದ ಮೊಹಮ್ಮದ್‌ ಶಮಿ!

2025-26ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಅಸಾಧಾರಣ ಪ್ರದರ್ಶನ ನೀಡುತ್ತಿದ್ದಾರೆ. ಅವರು ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಎಂಟು ವಿಕೆಟ್‌ಗಳನ್ನು ಪಡೆಯುವ ಮೂಲಕ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿದ್ದಾರೆ. ಇದೀಗ ಭಾರತ ತಂಡಕ್ಕೆ ಮರಳುವ ಬಗ್ಗೆ ಶಮಿ ಮಹತ್ವದ ಹೇಳಿಕೆ ನೀಡಿದ್ದಾರೆ.

ಭಾರತ ತಂಡಕ್ಕೆ ಆಡಲು ನಾನು ರೆಡಿ ಎಂದ ಮೊಹಮ್ಮದ್‌ ಶಮಿ!

ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ಬಗ್ಗೆ ಮೊಹಮ್ಮದ್‌ ಶಮಿ ಮಹತ್ವದ ಹೇಳಿಕೆ. -

Profile Ramesh Kote Oct 28, 2025 10:40 PM

ನವದೆಹಲಿ: ಹಿರಿಯ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ಮಂಗಳವಾರ ತಾವು ಫಿಟ್ ಆಗಿರುವುದಾಗಿ ಮತ್ತು ಭಾರತ ತಂಡಕ್ಕೆ (India) ಮರಳಲು ಸಿದ್ಧರಿರುವುದಾಗಿ ಹೇಳಿದ್ದಾರೆ. ಈ ಋತುವಿನ ಮೊದಲ ಎರಡು ರಣಜಿ ಟ್ರೋಫಿ (Ranji Trophy 2025-26) ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅವರು ಮತ್ತೆ ತಂಡಕ್ಕೆ ಮರಳುವ ಭರವಸೆ ವ್ಯಕ್ತಪಡಿಸಿದ್ದಾರೆ. ಬಂಗಾಳದ ವೇಗದ ಬೌಲರ್ ಮಂಗಳವಾರ ಗುಜರಾತ್ ವಿರುದ್ಧ ಎಂಟು ವಿಕೆಟ್‌ಗಳನ್ನು ಕಬಳಿಸಿ, ಈಡನ್ ಗಾರ್ಡನ್ಸ್‌ನಲ್ಲಿ ತಮ್ಮ ತಂಡದ 141 ರನ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಗುಜರಾತ್‌ ವಿರುದ್ದ ದ್ವಿತೀಯ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ ಬಳಿಕ ಮಾತನಾಡಿದ ಮೊಹಮ್ಮದ್‌ ಶಮಿ, "ನಾನು ತುಂಬಾ ಶ್ರಮಿಸಿದ್ದೇನೆ ಮತ್ತು ಅದೃಷ್ಟವೂ ಒಂದು ಪಾತ್ರವನ್ನು ವಹಿಸುತ್ತದೆ ಎಂದು ನಾನು ನಂಬುತ್ತೇನೆ. ಎಲ್ಲರೂ ದೇಶಕ್ಕಾಗಿ ಆಡಲು ಬಯಸುತ್ತಾರೆ. ಆದ್ದರಿಂದ, ನಾನು ಮತ್ತೆ ಭಾರತ ತಂಡಕ್ಕೆ ಆಡಲು ಸಿದ್ಧನಿದ್ದೇನೆ," ಎಂದು ಹೇಳಿದ ಅವರು "ನನ್ನ ಪ್ರೇರಣೆ ಫಿಟ್ ಆಗಿರುವುದು ಮತ್ತು ಭಾರತೀಯ ತಂಡಕ್ಕೆ ಎಲ್ಲಾ ಸಮಯದಲ್ಲೂ ಲಭ್ಯವಿರುವುದು. ನಾನು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ಮುಂದುವರಿಸುತ್ತೇನೆ ಮತ್ತು ಇನ್ನುಳಿದ ಸಂಗತಿಗಳು ಆಯ್ಕೆದಾರರ ಮೇಲೆ ಅವಲಂಬಿತವಾಗಿರುತ್ತದೆ," ಎಂದು ಅವರು ತಿಳಿಸಿದ್ದಾರೆ.

Ranji Trophy: 2 ಪಂದ್ಯಗಳಿಂದ 15 ವಿಕೆಟ್‌ ಕಿತ್ತು ಬಿಸಿಸಿಐಗೆ ಸಂದೇಶ ರವಾನಿಸಿದ ಮೊಹಮ್ಮದ್‌ ಶಮಿ!

ತಾನು ಫಾರ್ಮ್‌ಗೆ ಮರಳಲುತ್ತಿದ್ದೇನೆ ಎಂಬ ಭಾವನೆ ನಡೆಯುತ್ತಿದೆ ಎಂದು ಹೇಳಿದ ಮೊಹಮ್ಮದ್‌ ಶಮಿ, ರಾಷ್ಟ್ರೀಯ ತಂಡದ ಪರ ಇನ್ನಷ್ಟು ದಿನಗಳ ಕಾಲ ಆಡಬೇಕೆಂದು ಬಯಸುತ್ತಿದ್ದೇನೆ ಎಂದಿದ್ದಾರೆ. "ಇದು ಸಮಾಧಾನಕರ ಸಂಗತಿ. ಮಾನಸಿಕವಾಗಿ, ದೈಹಿಕವಾಗಿ, ನೀವು ಅಂತಹ ಕಠಿಣ ಸಮಯದಿಂದ (ಗಾಯ) ಹಿಂತಿರುಗಿ ಬಂದು ನಂತರ ನೀವು ಮೈದಾನಕ್ಕೆ ಮರಳುತ್ತಿರುವುದರಿಂದ ಇದು ತುಂಬಾ ಸಂತೋಷವಾಗಿದೆ," ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ಪ್ರವಾಸಕ್ಕಾಗಿ ಮೊಹಮ್ಮದ್‌ ಶಮಿ ಅವರನ್ನು ಭಾರತ ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ, ಇದು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಹಿರಿಯ ಕ್ರಿಕೆಟಿಗ ನಡುವೆ ಮಾತಿನ ಸಮರಕ್ಕೆ ಕಾರಣವಾಗಿತ್ತು. ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ ತಾನು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ ಮತ್ತು ಆಟದ ಎಲ್ಲಾ ಸ್ವರೂಪಗಳಿಗೆ ಲಭ್ಯವಿದ್ದೇನೆಂದು ವೇಗದ ಬೌಲರ್ ಹೇಳಿಕೊಂಡಿದ್ದರು.

KAR vs GOA: ಗೋವಾ ವಿರುದ್ಧದ ಪಂದ್ಯ ಡ್ರಾನಲ್ಲಿ ಅಂತ್ಯವಾದರೂ ಕರ್ನಾಟಕ ಖಾತೆಗೆ 3 ಅಂಕ!

ಮಂಗಳವಾರ ಭಾರತ ತಂಡಕ್ಕೆ ಮರಳುವ ಬಗ್ಗೆ ಕೇಳಿದಾಗ, ಅವರು ವಿವಾದಗಳಿಂದ ದೂರವಿರಲು ಆದ್ಯತೆ ನೀಡಿದರು. ಅವರು, "ನಾನು ಯಾವಾಗಲೂ ಒಂದಲ್ಲ ಒಂದು ವಿವಾದದಲ್ಲಿ ಸಿಲುಕಿಕೊಳ್ಳುತ್ತೇನೆ. ನಿಮ್ಮ ಕಾರಣದಿಂದಾಗಿ (ನಗುವಿನೊಂದಿಗೆ). ಇದು ತಪ್ಪು ತಿಳುವಳಿಕೆ," ಎಂದು ತಿಳಿಸಿದರು.

"ರಣಜಿ ಟ್ರೋಫಿ, ದೇಶಿ ಕ್ರಿಕೆಟ್‌ ಸೀಸನ್‌, ವೈಟ್‌ಬಾಲ್‌ ಕ್ರಿಕೆಟ್‌, ಇಂಡಿಯನ್‌ ಪ್ರೀಮಿಯರ್‌ ಲೀಗ್‌, ಚಾಂಪಿಯನ್ಸ್‌ ಟ್ರೋಫಿ, ದುಲೀಪ್‌ ಟ್ರೋಫಿ ಹಾಗೂ ಇದೀಗ ರಣಜಿ ಪಂದ್ಯಗಳು. ನಾನು ಲಯಕ್ಕೆ ಮರಳುತ್ತಿದ್ದೇನೆ. ಇನ್ನೂ ನನ್ನ ಕಡೆಯಿಂದ ಸಾಕಷ್ಟು ಕ್ರಿಕೆಟ್‌ ಆಡುವುದು ಬಾಕಿ ಇದೆ," ಎಂದು ಮೊಹಮ್ಮದ್‌ ಶಮಿ ಹೇಳಿದ್ದಾರೆ.