ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bengaluru Power Cut: ಬೆಂಗಳೂರಿಗರೇ ವೀಕೆಂಡ್‌ ಪ್ಲ್ಯಾನ್‌ ಮಾಡುವ ಮುನ್ನ ಗಮನಿಸಿ; ಈ ಏರಿಯಾಗಳಲ್ಲಿ ಫೆಬ್ರವರಿ 7, 8ರಂದು ಕರೆಂಟ್‌ ಇರಲ್ಲ

BESCOM News: ಕೆಪಿಟಿಸಿಎಲ್ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಚಂದಾಪುರ ವಿಭಾಗದ 66/11 ಕೆ.ವಿ ಸೂರ್ಯಘರ್, 66/11 ಕೆವಿ ಸಮುದ್ರ, 66/11 ಕೆವಿ ಆನೆಕಲ್, 66/11 ಕೆವಿ ಹುಳಿಮಾವು ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಫೆ. 7ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಜತೆಗೆ ಫೆ. 8ರಂದು ಪೀಣ್ಯ ವಿಭಾಗ ಸೇರಿದಂತೆ ಕೆಲವಡೆ ಪವರ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಬೆಂಗಳೂರಿನ ಈ ಏರಿಯಾಗಳಲ್ಲಿ ಫೆಬ್ರವರಿ 7,8ರಂದು ಕರೆಂಟ್‌ ಇರಲ್ಲ

ಸಾಂದರ್ಭಿಕ ಚಿತ್ರ. -

Profile
Siddalinga Swamy Feb 6, 2026 5:31 PM

ಬೆಂಗಳೂರು, ಫೆ. 6: ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಫೆಬ್ರವರಿ 7 ಮತ್ತು 8ರಂದು ವಿದ್ಯುತ್‌ ವ್ಯತ್ಯಯವಾಗಲಿದೆ. ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಚಂದಾಪುರ ವಿಭಾಗದ 66/11 ಕೆ.ವಿ ಸೂರ್ಯಘರ್, 66/11 ಕೆವಿ ಸಮುದ್ರ, 66/11 ಕೆವಿ ಆನೆಕಲ್, 66/11 ಕೆವಿ ಹುಳಿಮಾವು ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಫೆ. 7ರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಇರಲ್ಲ (Bengaluru Power Cut) ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಸೂರ್ಯ ನಗರ, ಸಮಂದೂರು, 66 ಕೆವಿ ಅತ್ತಿಬೆಲೆ ಲೈನ್, 66 ಕೆವಿ ಸಮಂದೂರು ಲೈನ್, ಆನೇಕಲ್ ಟೌನ್, ಹುಲಿಮಂಗಲ, ನೀಲಾದ್ರಿ ರಸ್ತೆ, ಪೋಡು, ಮರುಗೊಂಡನಹಳ್ಳಿ, ಸಾಯಿಬಾಬಾ ದೇವಸ್ಥಾನದ ರಸ್ತೆ, ನಂಜಾಪುರ, ಹುಲ್ಲಹಳ್ಳಿ ಗೇಟ್, ತಿರುಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಇನ್ನು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸರ್ಜಾಪುರ, ಬಿಲ್ಲಾಪುರ, ಎಂ.ಸಿ.ಹಳ್ಳಿ, ಬಿದರಗುಪ್ಪೆ, ಅತ್ತಿಬೆಲೆ ಭಾಗಗಳು, ಹಂಡೇನಹಳ್ಳಿ, ಬಿ.ಹೊಸಹಳ್ಳಿ, ಬೊಮ್ಮಸಂದ್ರ, ಜಿಗಣಿ ಕೈಗಾರಿಕಾ ಪ್ರದೇಶ, ಕೊಪ್ಪ ಗ್ರಾಮ, ನಿಸರ್ಗ ಬಡಾವಣೆ, ಮದಲಿಂಗಪುರ, ವಡ್ಡರಪಾಳ್ಯ, ಕಳ್ಳಬಾಳು ಮತ್ತು ಅಂಬೇಡ್ಕರ್ ಕೈಗಾರಿಕಾ ಪ್ರದೇಶ, ಅತ್ತಿಬೆಲೆ, ಯಡವೀಳ್ಯ ಅತ್ತಿಬೆಲೆ, ಅತ್ತಿಬೆಲೆ, ಜಿಗಣಿ ಕೈಗಾರಿಕಾ ಪ್ರದೇಶ, ಹಾರಗದ್ದೆ, ಜಿಗಣಿ ಕೈಗಾರಿಕಾ ಪ್ರದೇಶಗಳಲ್ಲಿ ವಿದ್ಯುತ್‌ ಇರುವುದಿಲ್ಲ.

ವಿದ್ಯುತ್‌ ಸಮಸ್ಯೆಗಳಿಗೆ 1912 ಅಥವಾ ʼವಾಟ್ಸ್‌ ಆ್ಯಪ್‌ʼ ಸಹಾಯವಾಣಿಗೆ ದೂರು ದಾಖಲಿಸಿ: ಬೆಸ್ಕಾಂ

ಫೆ.8ರಂದು ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪೀಣ್ಯ ವಿಭಾಗದ 220/66/11 ಕೆ.ವಿ ಪ್ಲಾಟಿನಮ್ ಸಿಟಿ, 220/66/11 ಕೆವಿ ಎಸ್‌ಆರ್‌ಎಸ್ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಫೆ. 8ರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

220/66/11 ಕೆ.ವಿ ಪ್ಲಾಟಿನಮ್ ಸಿಟಿ, ರಿಲಯನ್ಸ್ ಇಂಡಸ್ಟ್ರೀಸ್, ಕರ‍್ಲೋನ್, ಸಿಕೆಎ, ಅಲಿಸ್ಡಾ, ಜೈರ‍್ತ್ ಇಂಡಸ್ಟ್ರೀಸ್ ಏರಿಯಾ, ಟಾಟಾ ಅಕೆವಲ್, ಕರ‍್ಲೆ, ಪ್ರೊಫೆಷನಲ್-ಕ್ಲೋಥಿಂಗ್, ರಾಘವೇಂದ್ರ ಲೇಔಟ್, ಆರ್‌ಎನ್ಎಸ್ ಮೋಟಾರ್, ಮುನೇಶ್ವರ ನಗರ, ವೈಷ್ಣವಿ ನಕಶ್ತ್ರ ಅಪಾರ‍್ಟ್‌ಮೆಂಟ್, ಲೆಫ್ಟಿನೆಂಟ್ ಕರ‍್ಲೆ, ಮುನೇಶ್ವರ ಎಫ್‌ಲೋಕ್ ಪೆಕ್ಟೋರಿ ರಸ್ತೆ, ರಸ್ತೆ, ಪ್ಲಾಟಿನಮ್‌ಸಿಟಿ ಅಪರ‍್ಟ್‌ಮೆಂಟ್, ಬಿಎಫ್‌ಡಬ್ಲ್ಯೂ, ಎನ್‌ಟಿಆರ್‌ಓ, ಜಲಸೌಧ ಸುತ್ತಮುತ್ತಲಿನ ಪ್ರದೇಶ.

220/66/11 ಕೆವಿ ಎಸ್‌ಆರ್‌ಎಸ್ ಎಚ್ಎಂಟಿ ರಸ್ತೆ, ಆರ್‌ಎನ್‌ಎಸ್ ಅಪಾರ್ಟ್‌ಮೆಂಟ್, ಸಿಎಂಟಿಐ, ಬೋರ್ಲಿಂಗಪ್ಪ ಗಾರ್ಡನ್, ಪೀಣ್ಯ ಪೊಲೀಸ್ ಠಾಣೆ ರಸ್ತೆ, ಟೆಲಿಫೋನ್ ಎಕ್ಸ್‌ಚೇಂಜ್, 6ನೇ ಕ್ರಾಸ್, ರಿಲಯನ್ಸ್ ಕಮ್ಯುನಿಕೇಷನ್, ಗಣಪತಿನಗರ ಮುಖ್ಯ ರಸ್ತೆ, ಪೊಲೀಸ್ ಠಾಣೆ ರಸ್ತೆ, ಚಾಮುಂಡಿಪುರ, ಮುನೇಶ್ವರ ದೇವಸ್ಥಾನ ರಸ್ತೆ, ಮೆಕ್ ಲೇಔಟ್, ಮಲಯಾಳಿ ಅತಿಥಿ ಗೃಹ ರಸ್ತೆ, ಕೆಎಚ್‌ಬಿ ಲೇಔಟ್, ರಾಜೇಶ್ವರಿನಗರ, ಆಕಾಶ್ ಥೇಟರ್ ರಸ್ತೆ, ಫ್ರೆಂಡ್ಸ್ ಸರ್ಕಲ್, ವಿಜ್ಞಾನ ಪಬ್ಲಿಕ್ ಸ್ಕೂಲ್ ರಸ್ತೆ. ಭೈರವೇಶ್ವರ ನಗರ, ಬ್ಯಾಂಕ್ ಕಾಲೋನಿ, 6ನೇ ಮುಖ್ಯ ರಸ್ತೆ, ವಿಭಾಗ ರಸ್ತೆ, 5ನೇ ಮುಖ್ಯ ರಸ್ತೆ, ಯುಕೊ ಬ್ಯಾಂಕ್ ರಸ್ತೆ, ಥರ‍್ಲಾಕ್ ರಸ್ತೆ, 7ನೇ ಮುಖ್ಯ ರಸ್ತೆ, 3ನೇ ಹಂತ, ರಾಜಗೋಪಾಲ ನಗರ, ಕಸ್ತೂರಿ ಬಡಾವಣೆ, ಜಿಕೆಡಬ್ಲ್ಯೂ ಲೇಔಟ್, ಬೈರವೇಶ್ವರ ನಗರ, ಇಎಸ್ಐಸಿ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶ.

ಜಾಲಹಳ್ಳಿ ವಿಭಾಗದ 66/11 ಕೆವಿ ಅಬ್ಬಿಗೆರೆ ಉಪಕೇಂದ್ರ ವ್ಯಾಪ್ತಿಯ ಕಮ್ಮಗೊಂಡನಹಳ್ಳಿ, ರಾಘವೇಂದ್ರ ಬಡಾವಣೆ, ಲಕ್ಷೀಪುರ, ವಡೇರಹಳ್ಳಿ, ಅಬ್ಬಿಗೆರೆ ಇಂಡಸ್ಟ್ರಿಯಲ್ ಎರಿಯ, ಸಿಂಗಾಪುರ, ಅಬ್ಬಿಗೆರೆ, ಪೈಪ್ ಲೈನ್ ರೋಡ್, ನಿಸರ್ಗ ಬಡಾವಣೆ, ಕೆಂಪೇಗೌಡ ಬಡಾವಣೆ, ಕಲಾನಗರ ಮುಖ್ಯ ರಸ್ತೆ, ಕಮ್ಮಗೊಂಡನಹಳ್ಳಿ, ವಿಶ್ವೇಶ್ವರಯ್ಯ ಬಡಾವಣೆ, ಎಚ್.ವಿ.ವಿ ಬಡಾವಣೆ, ಕುವೆಂಪು ನಗರ, ಕಾಶಿರಾಮ ನಗರ, ವಡೇರಹಳ್ಳಿ, ಸಿಂಹಾದ್ರಿ ಬಡಾವಣೆ, ಪ್ರಕೃತಿ ಬಡಾವಣೆ, ಮುನಿಸ್ವಾಮಪ್ಪ ಬಡಾವಣೆ, ಲಕ್ಕಪ್ಪ ಬಡಾವಣೆ, ಬಾಲಾಜಿ ಬಡಾವಣೆ, ವರದರಾಜಸ್ವಾಮಿ ಬಡಾವಣೆ, ಬ್ರಿಗೇಡ್ ಪಾರ್ಕ್ ಸೈಡ್ ಉತ್ತರ ಅಪಾರ್ಟ್‌ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಚಿಕ್ಕಬಳ್ಳಾಪುರದಲ್ಲೂ ವ್ಯತ್ಯಯ

ಜತೆಗೆ ಫೆ. 8ರಂದು ಚಿಕ್ಕಬಳ್ಳಾಪುರದಲ್ಲೂ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬರಲಿದೆ. ಚಿಕ್ಕಬಳ್ಳಾಪುರ ವಿಭಾಗದ 66/11 kV S/s ಸಿಬಿ ಪುರ ಐಎ, 66/11 kV S/s ಸಿಬಿ ಪುರ ಯು, 66/11 kV S/s ನಲ್ಲಿಮರದಹಳ್ಳಿ, 220/66/11kV R/s ಗೌರಿಬಿದನೂರು, 220/66/11kV R/s ಮಿಟ್ಟೆಮರಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್‌ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು

ಚಿಕ್ಕಬಳ್ಳಾಪುರ ಪಟ್ಟಣ, ಚಿಕ್ಕಬಳ್ಳಾಪುರ ಕೈಗಾರಿಕಾ ಪ್ರದೇಶ, ತೂಬಗೆರೆ ಮತ್ತು ಎಎಫ್‌ಟಿಎಲ್ ಸೋಲಾರ್ ಐಪಿಪಿ, ತೊಂಡೇಭಾವಿ, ಮಂಚೇನಹಳ್ಳಿ, ಗುಂಡ್ಲುಕೊತ್ತೂರು, ಗುಡಿಬಂಡೆ, ಡಿ ಪಾಳ್ಯ, ವಿಧುರಾಶ್ವತ (ಗ್ರೀನರ್ಜಿ ಸೋಲಾರ್ ಮತ್ತು ಎಎಫ್‌ಟಿಎಲ್ ಐಪಿಪಿ), ರಾಮಾಪುರ, ಕುಡುಮುಲಕಡಹೊಳೆ, ಕೊಡಿಗೇನಹಳ್ಳಿ, ಮಂಡಿಕಲ್, ತೇರಿಯೂರು, ಸೋಮನಾಥಪುರ, ಪೆರೇಸಂದ್ರ, ಸೋಮೇನಹಳ್ಳಿ (ಎಎಫ್‌ಟಿಎಲ್ ಐಪಿಪಿ), ಸಾದಲಿ, ಜುಲ್ಪಾಳ್ಯ, ಚೇಳೂರು (3 ಐಪಿಪಿಗಳ ಸಂಖ್ಯೆ), ಚಾಕವೇಲು, ಪಾತಪಾಳ್ಯ, ತಿಮ್ಮಂಪಲ್ಲಿ, ಬಾಗೇಪಲ್ಲಿ, ರಾಮದೇವರಗುಡಿ, ಗೂಳೂರು, ನಳ್ಳಿಮರಬಹಳ್ಳಿ.

66 kV ಶಿಡ್ಲಗಟ್ಟ- ಚಿಂತಾಮಣಿ ವಿಭಾಗದ ಮೇಲೂರು ವ್ಯಾಪ್ತಿಯಲ್ಲಿ ಫೆ.8ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮೇಲೂರು, ಜಂಗಮಕೋಟೆ ವ್ಯಾಪ್ತಿಯಲ್ಲಿಯೂ ಈ ಅವಧಿಯಲ್ಲಿ ಕರೆಂಟ್‌ ಇರಲ್ಲ.

ಕನಕಪುರ ವಿಭಾಗದ 66/11 ಕೆ.ವಿ. ಕನಕಪುರದ ಅಚ್ಚಲು, ಹೊನ್ನಿಗನಹಳ್ಳಿ ಮೆಸರ್ಸ್. ಎಂ.ಇ.ಐ.ಪಿ.ಪಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಫೆ. 8ರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.