ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bengaluru Traffic: ಬೆಂಗಳೂರು ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಹೊಸ ಪ್ಲಾನ್‌; ವಾರದಲ್ಲಿ ಒಂದು ದಿನ ವರ್ಕ್‌ ಫ್ರಂ ಹೋಮ್!

ಇತ್ತೀಚೆಗೆ ಉತ್ತರಪ್ರದೇಶದ ಸಂಸದರೊಬ್ಬರು ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡು ಸಮಯಕ್ಕೆ ಸರಿಯಾಗಿ ಏರ್‌ಪೋರ್ಟ್‌ ತಲುಪಲಾಗದೆ ಆಕ್ರೋಶ ತೋಡಿಕೊಂಡಿದ್ದರು. ಇಂಥ ಸಮಸ್ಯೆಗಳ ನಿವಾರಣೆಗೆ ಐಟಿ-ಬಿಟಿ (IT-BT) ಕಂಪನಿಗಳ ಜೊತೆ ಸಭೆ ಮಾಡುವುದಕ್ಕೆ ಸಂಚಾರಿ ವಿಭಾಗದ ಜಂಟಿ ಆಯುಕ್ತರು ನಿರ್ಧರಿಸಿದ್ದಾರೆ. ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ನಿಯಮ ಜಾರಿ ಮಾಡುವುದಕ್ಕೆ ಚಿಂತನೆ ನಡೆದಿದೆ.

ಬೆಂಗಳೂರು ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಪ್ಲಾನ್‌; ವರ್ಕ್‌ ಫ್ರಂ ಹೋಮ್!

ಬೆಂಗಳೂರು ಟ್ರಾಫಿಕ್ -

ಹರೀಶ್‌ ಕೇರ
ಹರೀಶ್‌ ಕೇರ Jan 29, 2026 8:43 AM

ಬೆಂಗಳೂರು‌, ಜ.29: ಇತ್ತೀಚೆಗೆ ನಡೆದ ಜಾಗತಿಕ ಸಮೀಕ್ಷೆಯೊಂದರಲ್ಲಿ ಬೆಂಗಳೂರಿನ ಟ್ರಾಫಿಕ್‌ಗೆ ಕಳವಳಕಾರಿ ವರದಿ ಕೊಡಲಾಗಿದೆ. ವಿಶ್ವದಲ್ಲೇ ಬೆಂಗಳೂರು ಎರಡನೇ ಟ್ರಾಫಿಕ್ ಸಿಟಿ (Bengaluru Traffic City) ಎಂಬ ಹಣೆಪಟ್ಟಿ ಪಡೆದಿದೆ. ಇದರಿಂದ ಹೊರ ಬರಲು ಬೆಂಗಳೂರು ಟ್ರಾಫಿಕ್ ಪೊಲೀಸರು (traffic police) ಮೆಗಾ ಪ್ಲ್ಯಾನ್ ಮಾಡಿದ್ದಾರೆ.

ಇತ್ತೀಚೆಗೆ ಉತ್ತರಪ್ರದೇಶದ ಸಂಸದರೊಬ್ಬರು ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡು ಸಮಯಕ್ಕೆ ಸರಿಯಾಗಿ ಏರ್‌ಪೋರ್ಟ್‌ ತಲುಪಲಾಗದೆ ಆಕ್ರೋಶ ತೋಡಿಕೊಂಡಿದ್ದರು. ಇಂಥ ಸಮಸ್ಯೆಗಳ ನಿವಾರಣೆಗೆ ಐಟಿ-ಬಿಟಿ (IT-BT) ಕಂಪನಿಗಳ ಜೊತೆ ಸಭೆ ಮಾಡುವುದಕ್ಕೆ ಸಂಚಾರಿ ವಿಭಾಗದ ಜಂಟಿ ಆಯುಕ್ತರು ನಿರ್ಧರಿಸಿದ್ದಾರೆ. ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ನಿಯಮ ಜಾರಿ ಮಾಡುವುದಕ್ಕೆ ಚಿಂತನೆ ನಡೆದಿದೆ. ಬೆಂಗಳೂರು ಸಂಚಾರಿ ವಿಭಾಗದ ಜಂಟಿ ಆಯುಕ್ತರು, ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಹಾಗೂ ಜಿಬಿಎ ಮುಖ್ಯ ಆಯುಕ್ತರು ಸೇರಿ ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ನಿಯಮಗಳನ್ನು ಜಾರಿ ಮಾಡಲು ಸಿದ್ಧತೆ ನಡೆಸಿದ್ದಾರೆ.

ಔಟರ್ ರಿಂಗ್ ರೋಡ್‌ನಲ್ಲಿ ಹೆಚ್ಚು ಟ್ರಾಫಿಕ್ ಜಾಮ್ ಆಗುತ್ತಿರುವ ಜಾಗಗಳನ್ನು ಗುರುತು ಮಾಡಲಾಗಿದೆ. ಹೀಗಾಗಿ ಔಟರ್ ರಿಂಗ್ ರೋಡ್ ಸೇರಿ ನಗರದ ಒಳಗೆ ಟ್ರಾಫಿಕ್ ಸಮಸ್ಯೆ ನಿವಾರಿಸಲು ಮುಂದಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಐಟಿ-ಬಿಟಿ ಕಂಪನಿಗಳ ಜೊತೆ ಸಭೆ ನಡೆಸುವ ಸಾಧ್ಯತೆಯಿದೆ.

Bengaluru Traffic: ಬೆಂಗಳೂರಲ್ಲಿ ‌ಇನ್ನು ಟ್ರಾಫಿಕ್‌ ನಿಯಮ ಉಲ್ಲಂಘಿಸಿದ್ರೆ ಜೋಕೆ, ಎಫ್‌ಐಆರ್‌ ಬೀಳಬಹುದು!

ಟ್ರಾಫಿಕ್ ನಿಯಂತ್ರಣಕ್ಕಿರುವ ಆಯ್ಕೆಗಳೇನು?

  1. 500ಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದರೆ ವಾಹನಗಳಿಗೆ ಕಡಿವಾಣ
  2. ವೆಹಿಕಲ್ ಓಡಾಟ ಕಡಿಮೆಯಾದರೆ ಟ್ರಾಫಿಕ್ ನಿಯಂತ್ರಣ
  3. ಐಟಿ-ಬಿಟಿ ಕಂಪನಿಗಳಿಗೆ ಮನವಿ ಮಾಡಿ ವಾರದಲ್ಲಿ 1 ದಿನ ವರ್ಕ್ ಫ್ರಂ ಹೋಂ ಜಾರಿ
  4. ಒಂದು ದಿನ ಕಾರು ಫ್ರೀ ಡೇ, ಕಾರ್‌ ಪೂಲಿಂಗ್‌ ಆರಂಭಿಸುವಂತೆ ಮನವಿ
  5. ಬಸ್ ಪೂಲಿಂಗ್ ಆರಂಭ ಮಾಡುವ ಬಗ್ಗೆ ಚಿಂತನೆ
  6. 10% ವಾಹನ ತಗ್ಗಿದರೆ 40% ಟ್ರಾಫಿಕ್ ಕಡಿಮೆ ನಿರೀಕ್ಷೆ