Drowned: ಬೆಂಗಳೂರಿನಲ್ಲಿ ಘೋರ ದುರಂತ, ಕೆರೆಯಲ್ಲಿ ಮುಳುಗಿ ಇಬ್ಬರ ಸಾವು
Bengaluru: ಮೀನಿಗೆ ಬಲೆ ಹಾಕಲು ಇಬ್ಬರು ತೆಪ್ಪದಲ್ಲಿ ಕೆರೆಯ ಮಧ್ಯೆ ತೆರಳಿದ್ದಾರೆ. ಕೆರೆಯ ಮಧ್ಯದಲ್ಲಿ ತೆಪ್ಪದ ಹುಟ್ಟು ಕೈ ತಪ್ಪಿ ಕೆರೆಗೆ ಬಿದ್ದಿತ್ತು. ಈ ವೇಳೆ ಆನಂದ ನೀರಿಗೆ ಧುಮುಕಿ ತೆಪ್ಪವನ್ನು ಹಿಡಿದುಕೊಂಡಿದ್ದ. ಆನಂದನನ್ನು ಮೇಲೆ ಎತ್ತಲು ಅನಂತ ಸಹ ನೀರಿಗೆ ಧುಮುಕಿದ್ದಾನೆ. ಈ ವೇಳೆ ಆನಂದ್ ಮತ್ತು ಅನಂತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

-

ಬೆಂಗಳೂರು : ಬೆಂಗಳೂರಿನಲ್ಲಿ (Bengaluru) ನಿನ್ನೆ ಘೋರವಾದ ದುರಂತ ಒಂದು ಸಂಭವಿಸಿದ್ದು, ಮೀನಿಗೆ ಬಲೆ ಹಾಕಲು ಹೋಗಿ ಕೆರೆಯಲ್ಲಿ (lake) ಮುಳುಗಿ (Drowned) ಇಬ್ಬರು ಸಾವನಪ್ಪಿದ್ದಾರೆ. ಬೆಂಗಳೂರು ಹೊರವಲಯದ ಹೆಸರಘಟ್ಟದ ಕೆರೆಯಲ್ಲಿ ಈ ಘಟನೆ ನಡೆದಿದೆ. ಕೆರೆಯಲ್ಲಿ ಮುಳುಗಿ ಮೃತಪಟ್ಟವರನ್ನು ಆನಂದ (32) ಹಾಗೂ ಅನಂತ (27) ಎಂದು ಗುರುತಿಸಲಾಗಿದೆ.
ಮೀನಿಗೆ ಬಲೆ ಹಾಕಲು ಇಬ್ಬರು ತೆಪ್ಪದಲ್ಲಿ ಕೆರೆಯ ಮಧ್ಯೆ ತೆರಳಿದ್ದಾರೆ. ಕೆರೆಯ ಮಧ್ಯದಲ್ಲಿ ತೆಪ್ಪದ ಹುಟ್ಟು ಕೈ ತಪ್ಪಿ ಕೆರೆಗೆ ಬಿದ್ದಿತ್ತು. ಈ ವೇಳೆ ಆನಂದ ನೀರಿಗೆ ಧುಮುಕಿ ತೆಪ್ಪವನ್ನು ಹಿಡಿದುಕೊಂಡಿದ್ದ. ಆನಂದನನ್ನು ಮೇಲೆ ಎತ್ತಲು ಅನಂತ ಸಹ ನೀರಿಗೆ ಧುಮುಕಿದ್ದಾನೆ. ಈ ವೇಳೆ ಆನಂದ್ ಮತ್ತು ಅನಂತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸೋಲದೇವನಹಳ್ಳಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ, ಮೂವರು ಸಾವು
ಹಾಸನ: ಕೆಎಸ್‌ಆರ್‌ಟಿಸಿ ಬಸ್ (KSRTC bus) ಡಿಕ್ಕಿ ಹೊಡೆದ ಪರಿಣಾಮ ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದ (Road Accident) ಮೂವರು ಯುವಕರು ಸಾವನ್ನಪ್ಪಿರುವಂತಹ (death) ಭೀಕರ ಘಟನೆಯೊಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಎಡೇಗೌಡನಹಳ್ಳಿ ಬಳಿ ಶನಿವಾರ ರಾತ್ರಿ ನಡೆದಿದೆ. ಒಂದೇ ಬೈಕ್ ನಲ್ಲಿ ಮೂವರು ಯುವಕರು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು. ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವಾಗ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಇರ್ಫಾನ್ (25), ತರುಣ್ (26) ಹಾಗೂ ರೇವಂತ್ (27) ಎಂದು ಗುರುತಿಸಲಾಗಿದೆ. ಹಳ್ಳಿಮೈಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮೃತರು ಹೊಳೆನರಸೀಪುರ ಪಟ್ಟಣದ ಹೇಮಾವತಿ ಬಡಾವಣೆಯ ನಿವಾಸಿಗಳು ಎನ್ನಲಾಗುತ್ತಿದೆ. ಕೆಎಸ್‌ಆರ್‌ಟಿಸಿ ಬಸ್ ಹಾಸನದಿಂದ ಮೈಸೂರು ಕಡೆಗೆ ಹೊರಟಿತ್ತು. ಮೈಸೂರು ಕಡೆಯಿಂದ ಒಂದೇ ದ್ವಿಚಕ್ರ ವಾಹನದಲ್ಲಿ ಮೂವರು ಯುವಕರು ಬರುತ್ತಿದ್ದರು. ಈ ವೇಳೆ ಭೀಕರ ಅಪಘಾತ ಸಂಭವಿಸಿದೆ. ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: Yedamuri Falls: ಎಡಮುರಿ ಫಾಲ್ಸ್‌ನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು