ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rachita Ram: ಬಿಕ್ಲು ಶಿವ ಕೊಲೆ ಕೇಸ್‌; ಡಿಂಪಲ್‌ ಕ್ವೀನ್‌ ರಚಿತಾಗೆ ಚಿನ್ನಾಭರಣ ಗಿಫ್ಟ್‌ ನೀಡಿದ್ದ ಆರೋಪಿ ಜಗ್ಗ!

ರೌಡಿಶೀಟರ್ ಶಿವ ಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರ ಎದುರು ಹೊಸ ಸಂಗತಿಗಳು ಬಯಲಾಗುತ್ತಿವೆ. ಬಿಕ್ಲು ಶಿವ ಕೊಲೆ ಆರೋಪಿಗೆ ಈಗ ಸಿನಿಮಾ ನಂಟಿರುವುದು ಗೊತ್ತಾಗಿದೆ. ಆರೋಪಿ ಜಗ್ಗ ನಟಿ ರಚಿತಾ ರಾಮ್‌ ಅವರಿಗೆ ಆಭರಣ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ಬೆಂಗಳೂರು: ರೌಡಿಶೀಟರ್ ಶಿವ ಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರ ಎದುರು ಹೊಸ ಸಂಗತಿಗಳು ಬಯಲಾಗುತ್ತಿವೆ. ಬಿಕ್ಲು ಶಿವ ಕೊಲೆ ಆರೋಪಿಗೆ ಈಗ ಸಿನಿಮಾ ನಂಟಿರುವುದು ಗೊತ್ತಾಗಿದೆ. ಕೊಲೆಯ ಪ್ರಮುಖ ಆರೋಪಿಯಾಗಿರುವ ಜಗ್ಗ ಅಲಿಯಾಸ್‌ ಜಗದೀಶ್‌ಗೆ ರಾಜಕಾರಣಿಗಳು, ನಟ ನಟಿಯರು ಪರಿಚಯವಿದ್ದಾರೆ ಎಂದು ತಿಳಿದು ಬಂದಿದೆ. ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಭೈರತಿ ಬಸವರಾಜ್ ಹೆಸರು ಕೇಳಿಬಂದಿತ್ತು. ಪೊಲೀಸರು ಅವರನ್ನು ವಿಚಾರಣೆಗೂ ಒಳಪಡಿಸಿದ್ದರು. ಇದೀಗ ಇಂದು ಭರತಿ ಬಸವರಾಜ್ ಸಹೋದರ ಮಗ ಅನಿಲ್ ಸೇರಿದಂತೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಸದ್ಯ ಜಗ್ಗ ಸ್ಯಾಂಡಲ್‌ವುಡ್‌ ಮಂದಿ ಜೊತೆ ಇರುವ ಫೋಟೋಗಳು ಇದೀಗ ವೈರಲ್‌ ಆಗಿವೆ. ರಚಿತಾ ರಾಮ್‌ಗೆ ಉಡುಗೊರೆ ನೀಡಿರುವ ಫೋಟೋಗಳು ವೈರಲ್ ಆಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರವಿ ಬೋಪಣ್ಣ ಸಿನಿಮಾದ ಶೂಟಿಂಗ್‌ ವೇಳೆ ಈಗ ನಟಿ ರಚಿತಾ ರಾಮ್‌ಗೆ ಸೀರೆ ಹಾಗೂ ಚಿನ್ನಾಭರಣವನ್ನು ಉಡುಗೊರೆಯಾಗಿ ನೀಡಿದ್ದ. ರಿಯಲ್‌ ಎಸ್ಟೇಟ್‌ಗಳಿಂದ ಹಣ ಮಾಡುತ್ತಿದ್ದ ಜಗ್ಗ, ರಾಜಕೀಯವಾಗಿ ಗುರುತಿಸಿಕೊಂಡಿದ್ದ. ಮಾಜಿ ರೌಡಿ ಶೀಟರ್ ಆಗಿರೋ ಜಗ್ಗನಿಗೆ ಸಿನಿಮಾ ನಂಟು ಕೂಡ ಇದೆ.

ರಚಿತಾ ಹಾಗೂ ರವಿಚಂದ್ರನ್‌ ಜೊತೆ ಜಗ್ಗ ಇರುವ ಫೋಟೋಗಳು ಕಾಣಿಸಿಕೊಂಡಿದ್ದು, ಈತ ರೇಷ್ಮೆ ಸೀರೆ, ಚಿನ್ನದ ಹಾರ, ಓಲೆಯನ್ನು ಗಿಫ್ಟ್‌ ಮಾಡಿದ್ದ. ರವಿ ಬೋಪಣ್ಣ ಸಿನಿಮಾದಲ್ಲಿ ಜಗ್ಗನ ಹೂಡಿಕೆಯಿತ್ತಾ? ಈತ ಸ್ಯಾಂಡಲ್‌ವುಡ್‌ ಜೊತೆ ಹೇಗೆ ಆಪ್ತನಾದ ಎನ್ನವ ಪ್ರಶ್ನೆ ತನಿಖೆಯಿಂದ ಹೊರ ಬೀಳಬೇಕಾಗಿದೆ.

ಈ ಸುದ್ದಿಯನ್ನೂ ಓದಿ: Byrathi Basavaraj: ರೌಡಿಶೀಟರ್‌ ಹತ್ಯೆ, ಶಾಸಕ ಬೈರತಿ ಬಸವರಾಜ್‌ಗೆ ಪೊಲೀಸ್‌ ನೋಟಿಸ್‌, ಐವರ ಬಂಧನ

ಬೈರತಿ ಬಸವರಾಜ್‌ಗೆ ಕಂಟಕ ?

ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಹಾಲಿ ಶಾಸಕ ಬೈರತಿ ಬಸವರಾಜು ಅವರಿಗೆ ಭಾರತಿ ನಗರ ಪೊಲೀಸರು ನೋಟಿಸ್ ನೀಡಿ, ಕೊಲೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದಾರೆ. ಅವರನ್ನು ಮೂರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಲಾಯಿತು. ವಿವರವಾದ ವಿಚಾರಣೆ ನಡೆಯುತ್ತಿದ್ದು, ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣದ ಸಂಬಂಧ ಪೊಲೀಸರು ಈಗಾಗಲೇ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಫ್ರೆಡ್ರಿಕ್ ಅವರನ್ನು ಬಂಧಿಸಿ ನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.