Namma Metro Pink Line: ನಮ್ಮ ಮೆಟ್ರೋ ಗುಡ್ ನ್ಯೂಸ್, ಗುಲಾಬಿ ಮಾರ್ಗದಲ್ಲಿ ಮೊದಲ ಚಾಲಕರಹಿತ ರೈಲು ಅನಾವರಣ
ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸುಮಾರು 21.25 ಕಿಮೀ ಸಂಪರ್ಕಿಸುವ ಗುಲಾಬಿ ಮಾರ್ಗ (Namma Metro Pink Line) 2026ರ ಡಿಸೆಂಬರ್ ಅಥವಾ 2027 ರಲ್ಲಿ ಕಾರ್ಯಾರಂಭವಾಗುವ ನಿರೀಕ್ಷೆಯಿದೆ. ಈ ಭಾಗದಲ್ಲಿ ಮೊದಲ ಹಂತವಾಗಿ ಐದು ಹೊಸ ʻಚಾಲಕರಹಿತʼ ರೈಲುಗಳನ್ನ ಓಡಿಸಲು ಸಿದ್ಧತೆ ನಡೆಯುತ್ತಿದೆ. ಇದರ ಅಂಗವಾಗಿ ಇಂದು ಹೊಸ ರೈಲು ಮಾದರಿಯನ್ನ ಅನಾವರಣಗೊಳಿಸಿದೆ.
ನಮ್ಮ ಮೆಟ್ರೋ ಗುಲಾಬಿ ಮಾರ್ಗ -
ಬೆಂಗಳೂರು, ಡಿ. 12 : ಬೆಂಗಳೂರಿನಲ್ಲಿ (bengaluru) ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಇದೀಗ ಬಿಎಂಆರ್‌ಸಿಎಲ್ (BMRCL) ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ನಮ್ಮ ಮೆಟ್ರೋ ಗುಲಾಬಿ ಮಾರ್ಗದ (Pink line) ಪ್ರೋಟೋಟೈಪ್ ಚಾಲಕ ರಹಿತ ರೈಲನ್ನು ಇಂದು ಬಿಎಂಆರ್‌ಸಿಎಲ್ ಅನಾವರಣಗೊಳಿಸಿದೆ. ಪಿಂಕ್ ಲೈನ್‌ನ ಮೂಲಮಾದರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಜೆ ರವಿಶಂಕರ್ ಅವರು ಬಿಇಎಂಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಾಂತನು ರಾಯ್ ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಔಪಚಾರಿಕವಾಗಿ ಅನಾವರಣಗೊಳಿಸಿದರು.
ಬಳಿಕ BEML ರೈಲು ಸಂಕೀರ್ಣದಲ್ಲಿ ರೈಲಿನ ಯಶಸ್ವಿ ಪರೀಕ್ಷಾರ್ಥ ಓಟ ನಡೆಸಿತು. ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸುಮಾರು 21.25 ಕಿಮೀ ಸಂಪರ್ಕಿಸುವ ಗುಲಾಬಿ ಮಾರ್ಗ 2026ರ ಡಿಸೆಂಬರ್ ಅಥವಾ 2027 ರಲ್ಲಿ ಕಾರ್ಯಾರಂಭವಾಗುವ ನಿರೀಕ್ಷೆಯಿದೆ. ಈ ಭಾಗದಲ್ಲಿ ಮೊದಲ ಹಂತವಾಗಿ ಐದು ಹೊಸ ʻಚಾಲಕರಹಿತʼ ರೈಲುಗಳನ್ನ ಓಡಿಸಲು ಸಿದ್ಧತೆ ನಡೆಯುತ್ತಿದೆ. ಇದರ ಅಂಗವಾಗಿ ಇಂದು ಹೊಸ ರೈಲು ಮಾದರಿಯನ್ನ ಅನಾವರಣಗೊಳಿಸಿದ್ದು, ಡಿ.15ರ ನಂತರ ರೈಲುಗಳು ಕೊತ್ತನೂರು ಡಿಪೋಗೆ ಹೋಗಿ ಹಲವು ಪರೀಕ್ಷೆಗಳನ್ನ ಎದುರಿಸಲಿವೆ.
ಹಳದಿ ಮಾರ್ಗಕ್ಕೆ ಇನ್ನೂ ಆರು ಚಾಲಕರಹಿತ ರೈಲು
ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗಕ್ಕೆ (Namma Metro Yellow Line) ಹೆಚ್ಚುವರಿ ಆರು ಚಾಲಕರಹಿತ ರೈಲು (train) ಸೆಟ್‌ಗಳನ್ನು ಪೂರೈಸಲು ಬಿಇಎಂಎಲ್ (BEML) ಜತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಒಪ್ಪಂದ ಮಾಡಿಕೊಂಡಿದೆ. ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಪ್ರಸ್ತುತ 5 ರೈಲುಗಳು ಸಂಚರಿಸುತ್ತಿದ್ದು, ಇನ್ನೊಂದು ತಿಂಗಳ ಅವಧಿಯಲ್ಲಿ ಆರನೇ ರೈಲು ಸಂಚಾರ ನಡೆಸಲಿದೆ.
Basava Samskruti Abhiyana: ನಮ್ಮ ಮೆಟ್ರೋಗೆ ʼಬಸವ ಮೆಟ್ರೋʼ ಎಂದು ಹೆಸರಿಡಲು ಕೇಂದ್ರಕ್ಕೆ ಶಿಫಾರಸು: ಸಿಎಂ
ಹಳದಿ ಮಾರ್ಗದಲ್ಲಿ(ಆರ್.ವಿ.ರಸ್ತೆ- ಬೊಮ್ಮಸಂದ್ರ) ಹೆಚ್ಚಿನ ಪ್ರಯಾಣಿಕರ ಸಂಖ್ಯೆ ಪರಿಗಣಿಸಿ, ಬಿಎಂಆರ್‌ಸಿಎಲ್ ಹೆಚ್ಚುವರಿ ಆರು ರೈಲುಗಳಿಗಾಗಿ ಬಿಇಎಂಎಲ್ ಜತೆ 414 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದೆ. ಬಿಇಎಂಎಲ್ 2027ರ ವೇಳೆಗೆ ಹೆಚ್ಚುವರಿ ಆರು ರೈಲು (36 ಬೋಗಿ) ಪೂರೈಸುವ ಸಾಧ್ಯತೆ ಇದೆ. ಹಳದಿ ಮಾರ್ಗವನ್ನು ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ವಿಸ್ತರಿಸಿದ ನಂತರ ಹೆಚ್ಚುವರಿಯಾಗಿ 10-12 ರೈಲುಗಳು ಬೇಕಾಗುತ್ತವೆ. ಈ ರೈಲುಗಳನ್ನು ಸಕಾಲದಲ್ಲಿ ಪಡೆಯುವ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ಒಪ್ಪಂದ ಮಾಡಿಕೊಂಡಿದೆ.
ಪ್ರಸ್ತುತ ಹಳದಿ ಮಾರ್ಗದಲ್ಲಿ 15 ನಿಮಿಷಕ್ಕೊಂದು ರೈಲು ಸಂಚಾರ ನಡೆಸುತ್ತಿದ್ದು, ಆರನೇ ರೈಲು ಸಂಚಾರ ಆರಂಭಿಸಿದರೆ ಪ್ರತಿ 12 ನಿಮಿಷಕ್ಕೊಂದು ರೈಲು ಪ್ರಯಾಣಿಕರಿಗೆ ಲಭ್ಯವಾಗಲಿದೆ. ಸದ್ಯ ಈ ಮಾರ್ಗಕ್ಕೆ ಅಗತ್ಯವಿರುವ ರೈಲುಗಳನ್ನು ಕೋಲ್ಕೊತ್ತಾದ ಟಿಟಾಗರ್ ಸಂಸ್ಥೆ ಪೂರೈಕೆ ಮಾಡುತ್ತಿದೆ. ಈ ಸಂಸ್ಥೆಯು ಇನ್ನೂ 9 ರೈಲುಗಳನ್ನು ಪೂರೈಸಬೇಕಿದೆ.