ಜಾಗತಿಕ ಬೇಡಿಕೆ ಪೂರೈಕೆಗೆ ಹೈ-ವಾಲ್ಯೂಮ್ ಟ್ರಾನ್ಸ್‌ಫಾರ್ಮರ್ ಕಾರ್ಖಾನೆ ಆರಂಭಿಸಿದ ಬಿಒಎಸ್
ಗೇಮ್‌ಚೇಂಜ್ ಬಿಒಎಸ್‌ಗೆ 0.5-25 ಎಮ್‌ವಿಎ ರೇಂಜ್‌ವರೆಗೆ ಮತ್ತು 69 ಕೆವಿ ವರೆಗಿನ ವೋಲ್ಟೇಜ್‌ನ ಹೈ ವೋಲ್ಟೆಜ್ ವಿಭಾಗದ ಎಐ ಚಾಲಿತ ಡೇಟಾ ಸೆಂಟರ್, ರೆನೆವೇಬಲ್ ಎನರ್ಜಿ ಉತ್ಪನ್ನಗಳು , ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟೆಮ್, ದೊಡ್ಡ ಮಟ್ಟದ ಎಲೆಕ್ಟ್ರಿಫಿಕೇಶನ್ ಮೂಲಸೌಕರ್ಯ ಉತ್ಪನ್ನಗಳನ್ನು ಸಿದ್ಧಪಡಿಸಲು ನೆರವಾಗಿದೆ.

-

ಬೆಂಗಳೂರು: ಗೇಮ್‌ಚೇಂಜ್ ಎನರ್ಜಿ ಟೆಕ್ನಾಲಜೀಸ್ ನ ಭಾಗವಾಗಿರುವ ಗೇಮ್‌ಚೇಂಜ್ ಬಿಒಎಸ್ ಭಾರತದಲ್ಲಿ ತನ್ನ ಹೆಚ್ಚಿನ ಸಾಮರ್ಥ್ಯದ ಮಧ್ಯಮ ವೋಲ್ಟೇಜ್ ಟ್ರಾನ್ಸ್‌ಫಾರ್ಮರ್ ಉತ್ಪಾದನಾ ಸೌಲಭ್ಯವ್ನನು ಆರಂಭಿಸಿದೆ. 180,000 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಕಾರ್ಖಾನೆ ಯು ವಾರ್ಷಿಕವಾಗಿ 1,800ಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮರ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿ ದ್ದು ಭಾರತ, ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಮುಖ ಮಾರುಕಟ್ಟೆಗಳ ಬೇಡಿಕೆ ಪೂರೈಸಲು ಸಿದ್ಧವಾಗಿದೆ.
ಈ ವಿಸ್ತರಣೆಯು ಗೇಮ್‌ಚೇಂಜ್ ಬಿಒಎಸ್‌ಗೆ 0.5-25 ಎಮ್‌ವಿಎ ರೇಂಜ್‌ವರೆಗೆ ಮತ್ತು 69 ಕೆವಿ ವರೆಗಿನ ವೋಲ್ಟೇಜ್‌ನ ಹೈ ವೋಲ್ಟೆಜ್ ವಿಭಾಗದ ಎಐ ಚಾಲಿತ ಡೇಟಾ ಸೆಂಟರ್, ರೆನೆವೇಬಲ್ ಎನರ್ಜಿ ಉತ್ಪನ್ನಗಳು , ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟೆಮ್, ದೊಡ್ಡಮಟ್ಟದ ಎಲೆಕ್ಟ್ರಿಫಿಕೇಶನ್ ಮೂಲಸೌಕರ್ಯ ಉತ್ಪನ್ನಗಳನ್ನು ಸಿದ್ಧಪಡಿಸಲು ನೆರವಾಗಿದೆ.

"ವೇಗದ ವಿತರಣೆ, ಉತ್ತಮ ಸೇವೆ ಮತ್ತು ಸಾಟಿಯಿಲ್ಲದ ಮೌಲ್ಯದ ಬೆಲೆಯೊಂದಿಗೆ ನಾವು ಟ್ರಾನ್ಸ್ ಫಾರ್ಮರ್ ವಲಯದಲ್ಲಿ ಗ್ರಾಹಕರ ಅನುಭವವನ್ನು ಕ್ರಾಂತಿಗೊಳಿಸುತ್ತಿದ್ದೇವೆ" ಎಂದು ಗೇಮ್ ಚೇಂಜ್ ಬಿಒಎಸ್‌ನ ಸಿಇಒ ಆಂಡ್ರ್ಯೂ ವರ್ಡ್ನ್ ಹೇಳಿದರು. "ನಮ್ಮ ಹೊಸ ಕಾರ್ಖಾನೆಯು ತುರ್ತು ಮಾರುಕಟ್ಟೆ ಅಗತ್ಯಗಳನ್ನು ಪೂರೈಸಲು ನಮಗೆ ಅನುವು ಮಾಡಿಕೊಡುತ್ತದೆ ಮತ್ತು ಜಾಗತಿಕ ವಿದ್ಯುದೀಕರಣ ಆಂದೋಲನದಲ್ಲಿ ನಮ್ಮನ್ನು ಮಹತ್ವದ ಆಟಗಾರನನ್ನಾಗಿ ಮಾಡುತ್ತದೆ" ಎಂದು ಅವರು ಹೇಳಿದರು.
ಇದನ್ನೂ ಓದಿ: Ranjith H Ashwath Column: ಇವಿಎಂ ಬದಿಗಿಟ್ಟು ಸಾಧಿಸಲು ಹೊರಟಿದ್ದೇನನ್ನು ?
ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ್ ಉಪಕ್ರಮಗಳು ಈ ಸೌಲಭ್ಯದ ದೇಶೀಯ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಇದು ನಮ್ಮ ದೇಶದ ಆಮದಿನ ಮೇಲಿನ ಅವಲಂಬನೆ ಯನ್ನು ಕಡಿಮೆ ಮಾಡಿ ಮತ್ತು ಸ್ಪರ್ಧಾತ್ಮಕ ರಫ್ತುದಾರನಾಗಿ ಭಾರತದ ಪಾತ್ರಕ್ಕೆ ಜೀವ ತುಂಬಿದೆ. ಈ ಸೌಲಭ್ಯವು ಸುಧಾರಿತ ಉತ್ಪಾದನಾ ತಂತ್ರಜ್ಞಾನ, ಗುಣಮಟ್ಟದ ಪರೀಕ್ಷೆ ಮತ್ತು ಸುವ್ಯವಸ್ಥಿತ ಉತ್ಪಾದನಾ ಪ್ರಕ್ರಿಯೆಗಳನ್ನು ಹೊಂದಿದ್ದು, ಉತ್ಪನ್ನ ಗಳು ಅತ್ಯುನ್ನತ ಅಂತರರಾಷ್ಟ್ರೀಯ ಮಾನದಂಡ ಗಳನ್ನು ಪೂರೈಸುತ್ತವೆ.
ಕೈಗಾರಿಕಾ ವಿಸ್ತರಣೆ, ಸಾರಿಗೆಯ ವಿದ್ಯುದೀಕರಣದ ಏರಿಕೆ, ದತ್ತಾಂಶ ಕೇಂದ್ರಗಳು ಮತ್ತು ನಗರ ಬಳಕೆ ಯಿಂದಾಗಿ 2035 ರ ವೇಳೆಗೆ ಭಾರತದ ವಿದ್ಯುತ್ ಬೇಡಿಕೆ ಸುಮಾರು ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆ ಯಿದೆ. ಟ್ರಾನ್ಸ್‌ಫಾರ್ಮರ್ ವಿನ್ಯಾಸ ಮತ್ತು ನಿರ್ಮಾಣ ಅನುಭವದ ಬೆಂಬಲದೊಂದಿಗೆ, ಗೇಮ್‌ಚೇಂಜ್ ಬಿಒಎಸ್ ಈ ಉದಯೋನ್ಮುಖ ಮೂಲಸೌಕರ್ಯ ಬೇಡಿಕೆ ಗಳನ್ನು ಪೂರೈಸಲು ಅಗತ್ಯ ವಿರುವ ತಂತ್ರಜ್ಞಾನ ಮತ್ತು ಸಾಮರ್ಥ್ಯದಲ್ಲಿ ಹೂಡಿಕೆ ಮಾಡಲು ಬದ್ಧವಾಗಿದೆ.