ಸಿಎಂಆರ್ ವಿಶ್ವವಿದ್ಯಾಲಯದಲ್ಲಿ 'ಸಿಇಒ ಕಾನ್‌ಕ್ಲೇವ್ 2026'; ಭವಿಷ್ಯದ ಉದ್ಯೋಗ, ಕೌಶಲ್ಯಗಳು ಮತ್ತು ತಂತ್ರಜ್ಞಾನ ಕುರಿತು ವಿಚಾರಗೋಷ್ಠಿ
ಗೋಷ್ಠಿಯಲ್ಲಿ ಮಾತನಾಡಿದ ಉದ್ಯಮ ತಜ್ಞರು, "ಮುಂದಿನ ದಿನಗಳಲ್ಲಿ ಉದ್ಯೋಗಕ್ಷೇತ್ರದಲ್ಲಿ ಹೊಂದಾಣಿಕೆಯ ಗುಣ, ವಿವಿಧ ಕ್ಷೇತ್ರಗಳ ಜ್ಞಾನ, ಸಂವಹನ ಕೌಶಲ್ಯ ಮತ್ತು ಕೃತಕ ಬುದ್ಧಿಮತ್ತೆ 'ಎಐ' ಸಾಕ್ಷರತೆ ಅತ್ಯಂತ ನಿರ್ಣಾಯಕವಾಗಲಿವೆ. ಎಐ ಮಾನವನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಯಾದರೂ, ವಿಮರ್ಶಾತ್ಮಕ ಚಿಂತನೆ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ವಿಷಯಾಧಾರಿತ ಪರಿಣತಿಯ ಸ್ಥಾನವನ್ನು ಅದು ಎಂದಿಗೂ ತಲುಪಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟರು.
-
ಬೆಂಗಳೂರು: ನಗರದ ಬಾಗಲೂರಿನಲ್ಲಿರುವ ಸಿಎಂಆರ್ ವಿಶ್ವವಿದ್ಯಾಲಯದ ಲೇಕ್‌ಸೈಡ್ ಕ್ಯಾಂಪಸ್‌ನಲ್ಲಿ ‘ಸಿಇಒ ಕಾನ್‌ಕ್ಲೇವ್ 2026’ ಯಶಸ್ವಿಯಾಗಿ ನೆರವೇರಿತು. ಉದ್ಯೋಗ ಕ್ಷೇತ್ರದ ಭವಿಷ್ಯ, ಕೌಶಲ್ಯಗಳು ಹಾಗೂ ಹೊಸ ತಂತ್ರಜ್ಞಾನಗಳ ಪ್ರಭಾವದ ಕುರಿತು ಚರ್ಚಿಸಲು ೫೨ಕ್ಕೂ ಹೆಚ್ಚು ಸಿಇಒಗಳು, ನಿರ್ದೇಶಕರು, ಹಿರಿಯ ವ್ಯವಸ್ಥಾಪಕರು ಹಾಗೂ ಪ್ರಮುಖ ಉದ್ಯಮಗಳು ಭಾಗವಹಿಸಿ ವಿಚಾರ ಗೋಷ್ಠಿ ನಡೆಸಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ "ಭವಿಷ್ಯದ ಉದ್ಯೋಗ ಕ್ಷೇತ್ರ, ಕೌಶಲ್ಯ, ತಂತ್ರಜ್ಞಾನ ಮತ್ತು ಹೊಂದಾಣಿಕೆ" ವಿಷಯ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ ಎಚ್‌ಎಐ ಸೂಟ್‌ಕೇಸ್ ಕ್ಲಿನಿಕ್ಸ್ ಸಂಸ್ಥೆಯ ಸಿಇಒ ಸತ್ಯಜೀತ್ ಪ್ರಧಾನ, ವೆಕ್ಟರ್‌ಇನ್ಫಾರ್ಮ್ಯಾಟಿಕ್ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಬ್ರಹ್ಮಾನಂದ ಪಾಟೀಲ್, ಅಲ್ಗೋಶ್ಯಾಕ್ ಟೆಕ್ನಾಲಜೀಸ್ ಸಂಸ್ಥಾಪಕ ಹಾಗೂ ಸಿಇಒ ಶ್ರೀ ವದೀಶ್ ಬುಡ್ರಮನೆ, ಸಿಸ್ಮಿಕ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಪ್ರಮೋದ್ ಅಗ್ರವಾಲ್ ಹಾಗೂ ಆರ್ಟೇರಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಹ-ಸಂಸ್ಥಾಪಕ ಹಾಗೂ ಸಿಇಒ ಶ್ರೀರಾಮ್ ಕನೂರಿ ಭಾಗವಹಿಸಿದ್ದರು.
ಇದನ್ನೂ ಓದಿ: Bangalore News: ಜಂತರ್ – ಮಂತರ್ ಯುವ ಸಂಗ್ರಾಮದಿಂದ ಮೋದಿ ಸರ್ಕಾರ ಪತನ ಸನ್ನಿಹಿತ: ಡಾ.ಆನಂದ ಕುಮಾರ್
ಗೋಷ್ಠಿಯಲ್ಲಿ ಮಾತನಾಡಿದ ಉದ್ಯಮ ತಜ್ಞರು, "ಮುಂದಿನ ದಿನಗಳಲ್ಲಿ ಉದ್ಯೋಗಕ್ಷೇತ್ರದಲ್ಲಿ ಹೊಂದಾಣಿಕೆಯ ಗುಣ, ವಿವಿಧ ಕ್ಷೇತ್ರಗಳ ಜ್ಞಾನ, ಸಂವಹನ ಕೌಶಲ್ಯ ಮತ್ತು ಕೃತಕ ಬುದ್ಧಿಮತ್ತೆ 'ಎಐ' ಸಾಕ್ಷರತೆ ಅತ್ಯಂತ ನಿರ್ಣಾಯಕವಾಗಲಿವೆ. ಎಐ ಮಾನವನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಯಾದರೂ, ವಿಮರ್ಶಾತ್ಮಕ ಚಿಂತನೆ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ವಿಷಯಾಧಾರಿತ ಪರಿಣತಿಯ ಸ್ಥಾನವನ್ನು ಅದು ಎಂದಿಗೂ ತಲುಪಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟರು.
ಅಲ್ಲದೆ, ಬಲವಾದ ಶೈಕ್ಷಣಿಕ ಅಡಿಪಾಯ, ನಿರಂತರ ಕಲಿಕೆ, ವರ್ಗಾಯಿಸಬಹುದಾದ ಕೌಶಲ್ಯ ಗಳು ಹಾಗೂ ಉದ್ಯಮ ಕ್ಷೇತ್ರದ ಅನುಭವದ ಮಹತ್ವವನ್ನು ಒತ್ತಿ ಹೇಳಿದರು.
ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ವಾಹನೋದ್ಯಮ, ಸರಬರಾಜು ಸರಪಳಿ ಹಾಗೂ ಡಿಜಿಟಲ್ ನಾವೀನ್ಯತೆ ಸೇರಿದಂತೆ ಹೊಸ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ವೃತ್ತಿಪರರು ಜೀವಮಾನಪರ್ಯಂತ ಕಲಿಕೆ, ಸ್ಥೈರ್ಯ ಹಾಗೂ ಸೃಜನಾತ್ಮಕ ಪರಿಣತಿಯನ್ನು ಅಳವಡಿಸಿಕೊಳ್ಳ ಬೇಕೆಂದು ಸಲಹೆ ನೀಡಿದರು.
ವಿಚಾರಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ರಾಜ್ಯಸಭಾ ಸದಸ್ಯರು, ಸಿಎಂಆರ್ ವಿಶ್ವವಿದ್ಯಾಲಯ ಮತ್ತು ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಡಾ. ಕೆ.ಸಿ. ರಾಮಮೂರ್ತಿ, ಐಪಿಎಸ್ (ನಿವೃತ್ತಿ) ಇವರು "ಬದಲಾವಣೆಯನ್ನು ಸ್ವೀಕರಿಸುವವರೇ ಭವಿಷ್ಯ ವನ್ನು ಮುನ್ನಡೆಸುತ್ತಾರೆ. ಕೃತಕ ಬುದ್ಧಿಮತ್ತೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹತ್ತರ ಬದಲಾವಣೆ ತರುತ್ತಿರುವ ಈ ಸಂದರ್ಭದಲ್ಲಿ, ನಾವು ಸಹ ಹೊಸದನ್ನು ಕಲಿಯಲು ಮತ್ತು ಬದಲಾವಣೆಗೆ ಹೊಂದಿಕೊಳ್ಳಲು ಸಿದ್ಧರಾಗಿರಬೇಕು.
ಕೃತಕ ಬುದ್ಧಿಮತ್ತೆ ನಮಗೆ ಹೊಸದಾಗಿದ್ದರೂ, ನಮ್ಮ ಅಧ್ಯಾಪಕರು ಹಾಗೂ ಉದ್ಯಮ ತಜ್ಞರ ಸಹಕಾರದೊಂದಿಗೆ ನಾವು ನಿರಂತರವಾಗಿ ಬೆಳೆಯುವ ವಿಶ್ವಾಸವಿದೆ. ಸ್ಥಾಪಿತ ಶಿಕ್ಷಣ ಸಂಸ್ಥೆ ಯಾಗಿದ್ದರೂ, ಸಿಎಂಆರ್‌ನಲ್ಲಿ ಸ್ಟಾರ್ಟ್ಅಪ್ ಅನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ ಹಾಗಾಗಿ ಹೊಸ ಆಲೋಚನೆಗಳನ್ನು ಸ್ವಾಗತಿಸುತ್ತಾ, ನಿರಂತರ ಕಲಿಕೆ, ಸಹಭಾಗಿತ್ವ ಮತ್ತು ನಾವೀನ್ಯತೆಯ ಮೂಲಕ ಶ್ರೇಷ್ಠತೆಯನ್ನು ಸಾಧಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದೇವೆ" ಎಂದು ಹೇಳಿದರು.
ವಿಚಾರಗೋಷ್ಠಿಯಲ್ಲಿ ಸಿಎಂಆರ್ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ಸಬಿತಾ ರಾಮಮೂರ್ತಿ, ಸಹ ಕುಲಾಧಿಪತಿ ಶ್ರೀ ಜಯದೀಪ್ ಕೆ.ಆರ್. ರೆಡ್ಡಿ, ಪ್ರೊವೋಸ್ಟ್, ಡಾ. ತ್ರಿಸ್ಥಾ ರಾಮಮೂರ್ತಿ, ಕುಲಪತಿ ಡಾ. ಹೆಚ್.ಬಿ. ರಾಘವೇಂದ್ರ, ಸಹ ಕುಲಪತಿಗಳಾದ ಡಾ. ಪ್ರವೀಣ್ ಆರ್. ಮತ್ತು ಡಾ. ದಿಲೀಪ್ ಕುಮಾರ್ ಎಂ. ಕುಲಸಚಿವ ಡಾ. ಕೆ.ಇ. ಪ್ರಕಾಶ್ ಸೇರಿದಂತೆ ಹಲವು ಉದ್ಯಮ ಪ್ರತಿನಿಧಿಗಳು ಹಾಗೂ ವಿವಿಧ ಅಧ್ಯಯನ ವಿಭಾಗಗಳ ಡೀನ್ ಗಳು, ನಿರ್ದೇಶಕರು ಉಪಸ್ಥಿತರಿದ್ದರು.